ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಯಿಗಳ ಕಾಟ ಒಂದು ಕಡೆಯಾದರೆ, ನಾಯಿಗಳ ಹೆಸರಿನಲ್ಲೂ ಭ್ರಷ್ಟಾಚಾರ ಮತ್ತೊಂದು ಕಡೆ. ಇದರಿಂದ ಸಾರ್ವಜನಿಕರು ಯಾರನ್ನು ದೋಷಿಸಬೇಕು ಅಂತ ಗೊತ್ತಾಗದೇ ತಲೆ ಚಚ್ಚಿಕೊಳ್ಳುತ್ತಿದ್ದಾರೆ.ಏಕೆಂದರೆ ಬೀದಿನಾಯಿಗಳ ಉಪಟಳ ಹಾಗು ಹೆಚ್ಚುತ್ತಿರುವ ಅವುಗಳ ಸಂಖ್ಯೆಯಿಂದಾಗಿ ಜನ ಬೇಸತ್ತು ಹೋಗಿದ್ದಾರೆ.ಆದರೆ ದುರಂತ ಏನ್ ಗೊತ್ತಾ ಬೀದಿನಾಯಿಗಳ ಸಂಖ್ಯೆ ಹಾಗೂ ಉಪಟಳ ರಡಕ್ಕೂ ಬ್ರೇಕ್ ಹಾಕ್ತೇವೆನ್ನುವ ನೆವವನ್ನೇ ಮುಂದಿಟ್ಟುಕೊಂಡು ಬಿಬಿಎಂಪಿ ಪಶುಪಾಲನಾ ಇಲಾಖೆ ಅದಕ್ಕೆಂದೆ ಮೀಸಲಿಟ್ಟ ಹಣದಲ್ಲಿ ಗೋಲ್ಮಾಲ್ ನಡೆಸುತ್ತಿದೆ ಎನ್ನುವ ಆಪಾದನೆ ಕೇಳಿಬಂದಿದೆ.
ಹೌದು, ಬೆಂಗಳೂರಿನಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಗೆ ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಇಲ್ಲೂ ಭ್ರಷ್ಟಾಚಾರಕ್ಕೆ ಕೈ ಹಾಕಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.ಎಬಿಸಿ( ಸಂತಾನಹರಣ ಚಿಕಿತ್ಸೆ) ಗೆ ಕೋಟ್ಯಾಂತರ ಹಣವನ್ನು ಖರ್ಚು ಮಾಡುತ್ತಲೇ ಇರುವ ಬಿಬಿಎಂಪಿ ನಾಯಿಗಳ ಸಂಖ್ಯೆಗಾಗಲಿ,ಅವುಗಳ ಉಪಟಳಕ್ಕಾಗಲಿ ಬ್ರೇಕ್ ಹಾಕೊಕ್ಕೆ ಸಾಧ್ಯವೇ ಆಗ್ತಿಲ್ಲ. ಎಬಿಸಿ ಎನ್ನುವುದು ಪಶುಪಾಲನೆ ಇಲಾಖೆಗೆ ಹಣ ಮಾಡಿಕೊಳ್ಳೊಕ್ಕೆ ಅಸ್ತ್ರವಾಗಿಬಿಟ್ಟಿದೆ ಅಷ್ಟೆ.
ಬೆಂಗಳೂರಿನಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಕರೆದ ಟೆಂಡರ್ ನಲ್ಲೂ ಭ್ರಷ್ಟಾಚಾರ ನಡೆದಿದೆ ಎಂದಯ ಪ್ರಾಣಿ ದಯಾ ಸಂಘಗಳು ಆರೋಪಿಸಿವೆ. ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ 9 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದ್ದು, ಗ್ರೀನ್ ಸಿಗ್ನಲ್ ಕೂಡ ನೀಡಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿರುವ ಲಕ್ಷಾಂತರ ಬೀದಿ ನಾಯಿಗಳ ಪೈಕಿ ಪಶುಪಾಲನೆ ಇಲಾಖೆ ಅವರ ಲೆಕ್ಕದಲ್ಲಿ ಎಬಿಸಿ ಆಗಬೇಕಿರುವುದು ಕೇವಲ 45 ಸಾವಿರ ಬೀದಿ ನಾಯಿಗಳಿಗೆ ಅಷ್ಟೆ ಅಂತೆ.ಆ 45,000 ನಾಯಿಗಳ ಸಂತಾನ ಹರಣಕ್ಕಾಗಿ ಎಬಿಸಿ ಮಾಡಲಿದ್ದು, ಪ್ರತಿ ನಾಯಿಗೆ 2000 ರೂ. ನಿಗದಿಪಡಿಸಲಾಗಿದೆ ಎನ್ನುವುದು ಟೆಂಡರ್ ಡಾಕ್ಯುಮೆಂಟ್ ನಿಂದಲೇ ತಿಳಿದುಬಂದಿದೆ.
ದುರಂತ ಏನ್ ಗೊತ್ತಾ ಪ್ರಾಣಿ ದಯಾ ಸಂಘದ ಪ್ರಮುಖರಲ್ಲಿ ಒಬ್ಬರಾದ ಅರುಣ್ ಪ್ರಸಾದ್ ಪ್ರಕಾರ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡುವ ಪರವಾನಗಿ ಪಡೆದ ಅಥವಾ ಯಾವುದೇ ಅನುಭವ ಹೊಂದದ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆಯಂತೆ.ಇದರಿಂದೆ ಹಗರಣದ ಘಾಟು ಹೊಡೆಯುತ್ತಿದೆಯಂತೆ.
“ಎಬಿಸಿ ಪರವಾನಗಿ ಪಡೆಯದ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ.ಕೇರಳಾದ ಕೊಲ್ಲಂ, ಎರ್ನಾಕುಲಂ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಬಿಬಿಎಂಪಿ ಕೂಡ ಪರವಾನಗಿ ಪಡೆದ ಸ್ಥಳೀಯ ಸಂಸ್ಥೆಗಳಿಗೆ ಏಕೆ ಗುತ್ತಿಗೆ ನೀಡಬಾರದು.ಏಜೆನ್ಸಿಗಳಿಗೆ ಎಬಿಸಿ ಬಿಲ್ ನೀಡುವ ವಿಚಾರದಲ್ಲು ಗೋಲ್ಮಾಲ್ ನಡೆಯುತ್ತಿದ್ದು, NGO-AD-JC ಮೂಲಕ ಏಜೆನ್ಸಿಗಳಿಗೆ ಬಿಲ್ ನೀಡಲಾಗುತ್ತಿದೆ. ಆದರೆ ನ್ಯಾಯಯುತವಾಗಿಮೊದಲು ಜಿಲ್ಲಾ ಪಶುಪಾಲನಾ ಅದಿಕಾರಿಗೆ ಹೋಗಿ ಪರಿಶೀಲನೆ ಆಗಬೇಕಿದೆ. ಎಸ್ ಬಿಸಿಎ ಮೆಂಬರ್ ಸೆಕ್ರೆಟರಿ ಅಪ್ರೂವಲ್ ಮಾಡಬೇಕು. ಆದರೆ ಯಾವುದೇ ನಿಯಮ ಪಾಲನೆ ಆಗದೆ ಬೋಗಸ್ ಆಗಿದೆ.ಈ ವಿಷಯದಲ್ಲಿ ಏಕೆ ಬಿಬಿಎಂಪಿ ಆಡಳಿತ ಎನ್ ಜಿಓಗಳ ಹಿತಾಸಕ್ತಿಗಳಿಗೆ ಜೋತುಬಿದ್ದಿದೆಯೋ ನಮಗೆ ಗೊತ್ತಾಗುತ್ತಿಲ್ಲ.ಆದರೆ ಎನ್ ಜಿಓಗಳ ಕೈಗಳಿಂದ ಎಬಿಸಿ ಎನ್ನುವ ಕಾನ್ಸೆಪ್ಟನ್ನು ಕಸಿದುಕೊಂಡು ಅದನ್ನು ಬಿಬಿಎಂಪಿ ಮೂಲಕ ನಿರ್ವಹಣೆ ಮಾಡಬೇಕೆನ್ನುವ ಉದ್ದೇಶದಲ್ಲಿ ನಮ್ಮ ಹೋರಾಟ ನಡೆಯಲಿದೆ” -ಅರುಣ್ ಪ್ರಸಾದ್
ಎಬಿಸಿ ಪರವಾನಗಿ ಪಡೆಯದ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ.ಕೇರಳಾದ ಕೊಲ್ಲಂ, ಎರ್ನಾಕುಲಂ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಬಿಬಿಎಂಪಿ ಕೂಡ ಪರವಾನಗಿ ಪಡೆದ ಸ್ಥಳೀಯ ಸಂಸ್ಥೆಗಳಿಗೆ ಏಕೆ ಗುತ್ತಿಗೆ ನೀಡಬಾರದು ಎಂದು ಪ್ರಾಣಿದಯಾ ಸಂಘದ ಅರುಣ್ ಪ್ರಸಾದ್ ಪ್ರಶ್ನಿಸಿದ್ದಾರೆ.ಏಜೆನ್ಸಿಗಳಿಗೆ ಎಬಿಸಿ ಬಿಲ್ ನೀಡುವ ವಿಚಾರದಲ್ಲು ಗೋಲ್ಮಾಲ್ ನಡೆಯುತ್ತಿದ್ದು, NGO-AD-JC ಮೂಲಕ ಏಜೆನ್ಸಿಗಳಿಗೆ ಬಿಲ್ ನೀಡಲಾಗುತ್ತಿದೆ.ಆದರೆ ನ್ಯಾಯಯುತವಾಗಿಮೊದಲು ಜಿಲ್ಲಾ ಪಶುಪಾಲನಾ ಅದಿಕಾರಿಗೆ ಹೋಗಿ ಪರಿಶೀಲನೆ ಆಗಬೇಕಿದೆ. ಎಸ್ ಬಿಸಿಎ ಮೆಂಬರ್ ಸೆಕ್ರೆಟರಿ ಅಪ್ರೂವಲ್ ಮಾಡಬೇಕು. ಆದರೆ ಯಾವುದೇ ನಿಯಮ ಪಾಲನೆ ಆಗದೆ ಬೋಗಸ್ ಆಗಿದೆ ಎಂದು ಪ್ರಾಣಿದಯಾ ಸಂಘದ ಅರುಣ್ ಪ್ರಸಾದ್ ಆರೋಪಿಸಿದ್ದಾರೆ.
ಎಬಿಸಿ (ಅನಿಮಲ್ ಬರ್ತ್ ಕಂಟ್ರೋಲ್) ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿಗಳ ಸಂತತಿ ನಿಯಂತ್ರಣಕ್ಕೆ ಮಾಡಲಾದ ಯೋಜನೆ ಹೊಂದಿದೆ.ಆದ್ರೆ ಎಬಿಸಿ ಹೊರತಾಗ್ಯೂ ನಾಯಿಗಳ ಸಂಖ್ಯೆಯಲ್ಲಾಗಲಿ ಶ್ವಾನಗಳ ಉಪಟಳಕ್ಕೂ ಬ್ರೇಕ್ ಬಿದ್ದಿಲ್ಲ ಎಂದು ಆರೋಪಿಸಲಾಗಿದೆ.ಎನ್ ಜಿಓಗಳಿಗೆ ಟೆಂಡರ್ ಕೊಟ್ಟರೇನೇ ಈ ರೀತಿಯ ಅಕ್ರಮಗಳಾಗುತ್ತಿರುವುದರಿಂದ ನೇರವಾಗಿ ಬಿಬಿಎಂಪಿ ಪಶುಪಾಲನಾ ಇಲಾಖೆಗೇ ಈ ಕೆಲಸ ವಹಿಸಿಕೊಡುವುದು ಒಳ್ಳೇದು.ಆಗಲೇ ಬಹುತೇಕ ಸೋಮಾರಿಗಳಾಗಿ,ಅನೇಕ ಟೆಂಡರ್ ಗಳಲ್ಲಿ ದಲ್ಲಾಳಿಗಳಾಗಿ ಕೆಲಸ ಮಾಡುತ್ತಿರುವ ಪಶುಪಾಲನಾ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿ ಮೈಚಳಿ ಬಿಡಲು ಸಾಧ್ಯವಾಗುತ್ತದೆ ಎಂದು ಅರುಣ್ ಪ್ರಸಾದ್ ತಿಳಿಸಿದ್ದಾರೆ.ಈ ಹಿನ್ನಲೆಯಲ್ಲಿ ಪ್ರಾಣಿದಯಾ ಸಂಘಟನೆಗಳು ಇಂದು ಮುಖ್ಯ ಆಯುಕ್ತರನ್ನು ಭೇಟಿ ಕೂಡ ಮಾಡಿವೆ ಎನ್ನಲಾಗ್ತಿದೆ.