ಬೆಂಗಳೂರು: ದಾಖಲೆ ಮಟ್ಟದ ಆಕಾಂಕ್ಷಿಗಳು ಕಣದಲ್ಲಿದ್ದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಅಂತಿಮವಾಗಿ ಆಯ್ಕೆ ನಡೆದಿದ್ದು ತೀವ್ರ ರೋಚಕತೆ ಮೂಡಿಸಿದ್ದ ಫೈಟ್ ನಲ್ಲಿ ಕೆಲವು ನಿರೀಕ್ಷಿತ ಹಾಗೂ ಇನ್ನು ಕೆಲವು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.
ಹಾಲಿ ಅಧ್ಯಕ್ಷ ಶ್ರೀಧರ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.ನಿರೀಕ್ಷೆಯಂತೆ ಅವರು ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶ್ರೀಧರ್ ಆರ್ 404ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.ಅವರು ತಮ್ಮ ಪ್ರತಿಸ್ಪರ್ದಿಗಳಾದ ಧ್ಯಾನಪೂಣಚ್ಚ,ಮತ್ತು ಸುಭಾಶ್ ಹೂಗಾರ್ ಅವರನ್ನು ಮಣಿಸಿದರು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದವರ ಪೈಕಿ ವಿ.ಎನ್.ಮೋಹನ್ ಕುಮಾರ್ 417ಮತಗ ಪಡೆದು ವಿಜಯಿಶಾಲಿಯಾದರು 336 ಮತ ಪಡೆದು ಶಿವಕುಮಾರ್ ಬೆಳ್ಳಿತಟ್ಟೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಹಾಗೆಯೇ ಕ್ರೈಂ ದಿಗ್ಗಜ ಜಿ.ಗಣೇಶ್ ಅತ್ಯಧಿಕ 556 ಮತ ಪಡೆದು ಖಜಾಂಚಿಯಾಗಿ ಆಯ್ಕೆಯಾದರು.
288 ಮತ ಪಡೆದು ಜಿ.ವೈ.ಮಂಜುನಾಥ್ ಕಾರ್ಯದರ್ಶಿ, 195 ಮತ ಪಡೆದು ಧರಣೇಶ್ ಭೂಕನಕೆರೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮಹಿಳಾ ಸ್ಥಾನಕ್ಕೆ ಸ್ಪರ್ದಿಸಿದ್ದ ಮಿನಿ ತೇಜಸ್ವಿ 491 ಮತ ಪಡೆದು ಆಯ್ಕೆಯಾದರು.
ಇನ್ನು ಕಮಿಟಿ ಸದಸ್ಯತ್ವ ಸ್ಥಾನಕ್ಕೆ ಸ್ಪರ್ದಿಸಿದ್ದವರ ಪೈಕಿ ಅಂತಿಮವಾಗಿ ಶಿವಣ್ಣ-234,, ಶರಣಬಸಪ್ಪ-258 ಯಾಸ್ನಿಫ್ ಮುಸ್ತಾಕ್-259, ಮುತ್ತಾಜ್ ಅಲೀಮ್-272, ರೋಹಿಣಿ ಅಡಿಗ-306, ಮಂಜುನಾಥ್-281 ಮತ ಪಡೆದು ಆಯ್ಕೆಯಾದರು.
ಬೆಳಗ್ಗೆ 9ರಿಂದ 2ಗಂಟೆ ಮತದಾನ ಅವಕಾಶ ಮತದಾರರು ಮತಗಟ್ಟೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರಿಂದ ಮತಗಟ್ಟೆ ಅಧಿಕಾರಿ ಮತದಾನ ಹೆಚ್ಚಿನ ಸಮಯ ತೆಗೆದುಕೊಂಡು ಸರತಿ ಸಾಲಿನಲ್ಲಿ ನಿಂತ ಎಲ್ಲರಿಗೂ ಮತದಾನ ಮಾಡಲು ಅವಕಾಶ ನೀಡಿದರು. 1040ಮತದಾರರ ಪೈಕಿ 767 ಮತಗಳು ಚಲಾವಣೆಗೊಂಡವು.