ಕುಮಾರಸ್ವಾಮಿ, ತುಕಾರಂ, ಬಸವರಾಜ ಬೊಮ್ಮಾಯಿ ಗೆಲುವಿನಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ಫಿಕ್ಸ್..

ಲೋಕಸಭೆ ಎಲೆಕ್ಷನ್ ಫಲಿತಾಂಶ ಪ್ರಕಟವಾಗಿದೆ. 28 ರ ಪೈಕಿ 17 ರಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ.ಕಾಂಗ್ರೆಸ್ 9 ರಲ್ಲಿ ಗೆದ್ದರೆ ಜೆಡಿಎಸ್ 2 ಸ್ಥಾನ ಗೆದ್ದಿದೆ.ಪಲಿತಾಂಶ ಪ್ರಕಟವಾಗುತ್ತಿದ್ದ ಬೆನ್ನಲ್ಲೇ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದು ಶಾಸಕರಾಗಿದ್ದವರ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಯುವುದು ಖಚಿತವಾಗಿದೆ.

ಈ ಪೈಕಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ, ಇ.ತುಕಾರಂ ಅವರ ಸಂಡೂರು ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವ್ ಅವರ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯಲಿದೆ.ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಜೆಡಿಎಸ್ ನಿಂದ ಗೆದ್ದು ಸಂಸದರಾಗಿದ್ದಾರೆ.ಹಾಗೆಯೇ ಇ.ತುಕರಾಂ ಅವರು ಬಳ್ಳಾರಿಯಿಂದ ಸ್ಪರ್ದಿಸಿ ಗೆದ್ದಿದ್ದಾರೆ.ಅದರಂತೆಯೇ ಬಸವರಾಜ ಬೊಮ್ಮಾಯಿ ಹಾವೇರಿಯಿಂದ ಗೆದ್ದು ಸಂಸದರಾಗಿದ್ದಾರೆ. ಮೂವರು ಶಾಸಕರು ಲೋಕಸಭೆ ಚುನಾವಣೆಯಲ್ಲಿಸ್ಪರ್ದಿಸಿ ಗೆದ್ದಿರುವುದರಿಂದ ಅವರು ಪ್ರತಿನಿಧಿಸುತ್ತಿದ್ದ 3 ಕ್ಷೇತ್ರಗಳಿಗೆ 6 ತಿಂಗಳೊಳಗೆ ಬೈ ಎಲೆಕ್ಷನ್ ನಡೆಯಲಿದೆ ಎನ್ನಲಾಗುತ್ತಿದೆ.3 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

Spread the love

Leave a Reply

Your email address will not be published. Required fields are marked *

You missed