ದರ್ಶನ್ ಪಟಾಲಂನಿಂದ ಪೈಶಾಚಿಕ ಕೃತ್ಯ…ರೇಣುಕಾಸ್ವಾಮಿ ಕೊನೆಯುಸಿರೆಳೆಯುವಾಗಲೂ ವಿಕೃತಿಯಿಂದ ಎಂಜಾಯ್ ಮಾಡಿದ ಕೊಲೆಗಡುಕರು
ಬೆಂಗಳೂರು: ನಟ ದರ್ಶನ್ ಹಾಗೂ ಪಟಾಲಂ ನಿಷ್ಪಾಪಿ ರೇಣುಕಾಸ್ವಾಮಿಯನ್ನು ಕೊಂದ ರೀತಿ ಯಾವುದೇ ಸಿನಿಮೀಯ ಶೈಲಿಗೂ ಕಡಿಮೆಯಿಲ್ಲ ಎನ್ನುವಂತಿತ್ತು.ಶೆಡ್ ನಲ್ಲಿ ಕೂಡಿ ಹಾಕಿ ಮನಸೋಇಚ್ಛೆ ಥಳಿಸಿದ್ದೇ ಅಲ್ಲದೇ ಮರ್ಮಾಂಗಕ್ಕೆ ಒದ್ದು, ಕಬ್ಬಿಣದ ರಾಡನ್ನು ಕಾಸಿ ಬರೆ ಎಳೆದು ಕೊಲೆ ಮಾಡಲಾಗಿದೆ. ಹತ್ತಾರು ದಾಂಡಿಗರು ಕೊಟ್ಟ ಚಿತ್ರಹಿಂಸೆಗೆ ಆ ಜೀವ ಹೇಗೆಲ್ಲಾ ನರಳಿ ಸಾವನ್ನಪ್ಪಿರಬಹುದು ಎಂದು ಊಹಿಸಿದ್ರು ಹೃದಯ ಹಿಂಡಿದಂತಾಗುತ್ತದೆ.
ತನ್ನ ಸ್ನೇಹಿತೆ ಪವಿತ್ರಾ ಗೌಡಳಿಗೆ ಅಸಹ್ಯಕರವಾಗಿ ಮೆಸೇಜ್ ಮಾಡಿದ ಎನ್ನುವ ಕಾರಣಕ್ಕೆ ಚಿತ್ರದುರ್ಗದಲ್ಲಿದ್ದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದ ತನ್ನ ಅಭಿಮಾನಿ ಸಂಘದ ಅಧ್ಯಕ್ಷನ ಮೂಲಕ ಬೆಂಗಳೂರಿಗೆ ಕರೆಯಿಸಿಕೊಂಡ ದರ್ಶನ್ ಆರ್ ಆರ್ ನಗರದಲ್ಲಿರುವ ಪಟ್ಟಣಗೆರೆ ಜಯಣ್ಣ ಮಾಲೀಕತ್ವದ ವೆಹಿಕಲ್ ಸೀಜಿಂಗ್ ಅಡ್ಡಾಕ್ಕೆ ಕರೆದೊಯ್ದು ಎರಡು ದಿನ ಚಿತ್ರಹಿಂಸೆ ನೀಡಿದ್ದರಂತೆ.
ದರ್ಶನ್ ಕರೆಯುತ್ತಿದ್ದಾರೆ ಎಂದಾಕ್ಷಣ ಸ್ವತಃ ಅವರ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಕುಣಿದುಕುಪ್ಪಳಿಸಿದ್ದನಂತೆ.ಅಲ್ಲಿಯೇ ತನ್ನಿಂದಾದ ತಪ್ಪಿಗೆ ಕ್ಷಮೆ ಕೋರಿದ್ದನಂತೆ.ಆದರೆ ಅಧ್ಯಕ್ಷ ರಘು ಯಾವುದನ್ನೂ ಬಹಿರಂಗಪಡಿಸದೆ ದರ್ಶನ್ ಸರ್ ಕರೆಯುತ್ತಿದ್ದಾರೆ.ಬೆಂಗಳೂರಿಗೆ ಕರೆಯಿಸಿಕೊಂಡು ಬುದ್ದಿ ಹೇಳಿ ವಾಪಸ್ ಕಳುಹಿಸ್ತಾರೆ..ಜತೆಗೆ ಬರೋಣ ಎಂದು ಪುಸಲಾಯಿಸಿ ಕರೆದುಕೊಂಡು ಬಂದಿದ್ದಾನೆ.
ಮುಂದೆ ಕಾದಿದ್ದ ಸಾವಿನ ಸಣ್ಣ ಮುನ್ಸೂಚನೆಯನ್ನೂ ಅರಿಯದ ರೇಣುಕಾಸ್ವಾಮಿ ಓಡೋಡಿ ರಘು ಜತೆ ಬೆಂಗಳೂರಿಗೆ ಬಂದಿದ್ದಾನೆ.ದರ್ಶನ್ ಸೂಚನೆ ಮೇರೆಗೆ ಆತನನ್ನು ವೆಹಿಕಲ್ ಸೀಜಿಂಗ್ ಅಡ್ಡಾಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದಾನೆ.
ದಾಂಡಿಗರನ್ನು ನೋಡಿ ಬೆಚ್ಚಿಬಿದ್ದ ರೇಣುಕಾಸ್ವಾಮಿ: ಸ್ಸಾರಿ ಕೇಳೊಕ್ಕಂತ ಬಂದ ತನ್ನನ್ನು ಮನೆಗೆ ಕರೆದುಕೊಂಡು ಹೋಗೋದು ಬಿಟ್ಟು ಅಡ್ಡಾಕ್ಕೆ ಕರೆದುಕೊಂಡು ಬಂದಿದ್ದರ ಬಗ್ಗೆ ಆತ ರಘುನನ್ನು ಪ್ರಶ್ನಿಸಿದ್ದಾನೆ.ಅದಕ್ಕೆ ಹಾರಿಕೆ ಉತ್ತರ ಕೊಟ್ಟು ದರ್ಶನ್ ಸರ್ ಅವರೇ ಇಲ್ಲಿಗೆ ಬಂದು ಮಾತಾಡ್ತಾರೆ ಎಂದಿದ್ದಾನೆ.ಆದ್ರೆ ಅಲ್ಲಿನ ವಾತಾವರಣ ಕಂಡು ಸ್ವಲ್ಪ ಆತಂಕ-ಅನುಮಾನಗೊಂಡು ಮರುಪ್ರಶ್ನಿಸಿದ್ದಾನೆ.ಮಾತನಾಡುತ್ತಿರುವಾಗಲೇ ಅಲ್ಲಿದ್ದ ದಾಂಡಿಗರೆಲ್ಲಾ ಮನಸೋಇಚ್ಛೆ ಥಳಿಸಲಾರಂಭಿಸಿದ್ದಾರೆ. ಏನೊ ಕಾದಿದೆ ಎಂದುಕೊಂಡ ಆತ ಅಳಲು ಶುರುಮಾಡಿದ್ದಾನೆ.
ಪವಿತ್ರಾ ಜತೆ ಅಡ್ಡಾಗೆ ಬಂದ ದರ್ಶನ್: ಅಷ್ಟೊತ್ತಿಗೆ ದರ್ಶನ್ ತನ್ನ ಸ್ನೇಹಿತೆ ಪವಿತ್ರಾ ಜತೆ ಅಡ್ಡಾಕ್ಕೆ ಬಂದಿದ್ದಾನೆ.ತನ್ನ ನೆಚ್ಚಿನ ನಟನನ್ನು ನೋಡು ಒಮ್ಮೆ ಭಾವುಕನಾಗಿ ಬಾಸ್ ಎಂದು ಕೂಗಬೇಕೆಂದುಕೊಂಡಾಗಲೇ ಬೆಂಕಿ ಉಂಡೆಯಂತಾಗಿದ್ದ ದರ್ಶನ್ ಜೋರಾಗಿ ಬಿಗಿದಿದ್ದಾನೆ.ಆ ಹೊಡೆತಕ್ಕೆ ಪಕ್ಕದಲ್ಲೇ ನಿಲ್ಲಿಸಿದ್ದ ಲಾರಿಗೆ ಆತ ತಲೆ ಒಡೆದಿದೆ.ಪ್ರಜ್ನಾಶೂನ್ಯನಾಗಿ ನೆಲಕ್ಕೆ ಉರುಳಿದ್ದಾನೆ.
ನೆಲಕ್ಕೆ ಬಿದ್ದ ಆತನನ್ನು ಮೇಲಕ್ಕೆ ನಿಲ್ಲಿಸಿ ಅವಾಚ್ಯವಾಗಿ ನಿಂದಿಸಲಾರಂಭಿಸಿದ ದರ್ಶನ್ ಗೆ ರೇಣುಕಾಸ್ವಾಮಿ ಸ್ಸಾರಿ ಕೇಳಿದ್ದಾನೆ.ನಿಜಕ್ಕೂ ಮನುಷ್ಯನಾಗಿದ್ದರೆ ಆತನನ್ನು ಕ್ಷಮಿಸಿ ಬಿಡಬಹುದಿತ್ತು.ಆದ್ರೆ ತನ್ನ ಡವ್..ಲವ್ವರ್ ಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದರಿಂದ ಉರಿದು ಹೋಗಿದ್ದ ದರ್ಶನ್ ಮನಸೋಇಚ್ಛೆ ಥಳಿಸಲಾರಂಭಿಸಿದ್ದಾನೆ.ಜತೆಗೆ ಪವಿತ್ರಾಳಿಂದಲೂ ಹೊಡೆಸಿದ್ದಾನೆ. ಅಲ್ಲೇ ಇದ್ದ ಕಬ್ಬಿಣದ ಸರಳನ್ನು ಕಾಯಿಸಿ ದೇಹವನ್ನು ಸುಟ್ಟಿದ್ದಾನೆ.ಕಪಾಳ ಮೋಕ್ಷ ಮಾಡಿದ್ದಾನೆ.ಅಲ್ಲಿದ್ದವರಿಂದ ಮಾಡಿಸಿದ್ದಾನೆ ಕೂಡ. ಇದರ ನಡುವೆ ದರ್ಶನ್ ಗೆ ವಿವೇಚನೆ ಎಲ್ಲಿ ಹಾಳಾಗಿತ್ತೊ ಏನೋ..ಮೊಣಕಾಲಿನಿಂದ ಮರ್ಮಾಂಗಕ್ಕೆ ಹೊಡೆದ ಹೊಡೆತ ರೇಣುಕಾಸ್ವಾಮಿಯನ್ನು ನೆಲಕ್ಕುರುಳಿಸಿಬಿಟ್ಟಿತು.ಅಮ್ಮ ಎನ್ನುತ್ತಾ ನೆಲಕ್ಕುರುಳಿದ ರೇಣುಕಾಸ್ವಾಮಿ ಮತ್ತೆ ಮೇಲೇಳಲೇ ಇಲ್ಲ.
ಕುಡಿದ ಅಮಲಿನಲ್ಲಿದ್ದ ದರ್ಶನ್ ಗೆ ಏನ್ ಮಾಡಬೇಕೆಂದು ಗೊತ್ತಾಗಿಲ್ಲ.ತನ್ನ ಹುಡುಗರಿಗೆ ಇದನ್ನೇಗಾದ್ರು ಮಾಡಿ ಸಾಗಾಕುವಂತೆ ಆರ್ಡರ್ ಮಾಡಿದ್ದಾನೆ,ಮೊದ್ಲೇ ಬಾಸಲ್ವೇ, ತಕ್ಷಣ ಆತನ ದೇಹವನ್ನು ತಂದು ರಾಜಕಾಲುವೆಗೆ ಬಿಸಾಕಿದ್ದಾರೆ.ಅವರೆಲ್ಲಾ ಮಳೆಗಾಲವಲ್ವೇ..ಜೋರಾಗಿ ಮಳೆ ಬಂದರೆ ದೇಹ ಕೊಚ್ಚಿ ಹೋಗುತ್ತೆ..ಯಾರಿಗೂ ಸಿಗೊಲ್ಲ ಎಂದುಕೊಂಡಿದ್ರು.ಆದ್ರೆ ದರ್ಶನ್ ಹಾಗೂ ಟೀಂನ ಗ್ರಹಚಾರ ಕೆಟ್ಟಿತ್ತು ಎನ್ಸುತ್ತೆ.ರೇಣುಕಸ್ವಾಮಿ ಶವ ಸುಮ್ಮನಹಳ್ಳಿಯ ಅಪಾರ್ಟ್ಮೆಂಟ್ ನ ಬಳಿಯ ರಾಜಕಾಲುವೆಯಲ್ಲಿ ಸಿಕ್ಕಿದೆ. ಸೆಕ್ಯೂರಿಟಿ ಕೊಟ್ಟ ಮೆಸೇಜ್ ಮೇಲೆ ಪ್ರಕರಣ ದಾಖಲಿಸಿಕೊಂಡು ಟ್ರೇಸ್ ಮಾಡಿದ ಮೇಲೆ ಪ್ರಕರಣ ಬಟಾಬಯಲಾಗಿದೆ.