ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಗಂಭೀರ ಆಪಾದನೆ ಕೇಳಿಬಂದಿದೆ.ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ರವಾನಿಸಿದ ಹಿನ್ನಲೆಯಲ್ಲಿ ಕ್ಷುದ್ರಗೊಂಡ ದರ್ಶನ್ ಗಿರಿನಗರದ ಹುಡುಗರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆನ್ನುವ ಆಪಾದನೆ ಕೇಳಿಬಂದಿದೆ.

ಸುಮನಹಳ್ಳಿಯ ಸತ್ವ ಅಪಾರ್ಟ್ಮೆಂಟ್ ನ ಬಳಿಯ ರಾಜಕಾಲುವೆಯಲ್ಲಿ ಸಿಕ್ಕ ಶವದ ಬೆನ್ನತ್ತಿ ಹೋದ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಕೊಲೆ ಹಿಂದೆ ದರ್ಶನ್ ಕೈವಾಡವಿರುವುದು ಗೊತ್ತಾಗಿದೆ.ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೈಸೂರಿನ  ಫಾರ್ಮ್ ಹೌಸ್ ನಲ್ಲಿದ್ದ ನಟನನ್ನು ಬಂಧಿಸಿದ್ದಾರೆ.

ಚಿತ್ರದುರ್ಗದ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡ್ತಿದ್ದ ರೇಣುಕಾಸ್ವಾಮಿ ಎಂಬುವವರು ಪವಿತ್ರ ಗೌಡಗೆ ಅಶ್ಲೀಲವಾದ ಮೆಸೇಜ್ ನ್ನು ರವಾನಿಸಿದ್ದರು ಎನ್ನಲಾಗಿದೆ.ಇದರಿಂದ ವ್ಯಗ್ರಗೊಂಡ ದರ್ಶನ್ ಗಿರಿನಗರದ ಹುಡುಗರಿಗೆ ಸುಪಾರಿ ಕೊಟ್ಟಿದ್ದಾರೆನ್ನಲಾಗಿದೆ.

ಸುಪಾರಿ ಪಡೆದ ಹುಡುಗರು ರೇಣುಕಾಸ್ವಾಮಿ ಯನ್ನು ಗಂಭೀರವಾಗಿ ಥಳಿಸಿದ ಪರಿಣಾಮ ಗಾಯಗೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಶವವನ್ನು ರಾಜಕಾಲುವಗೆ ಬಿಸಾಡಿದ್ದರಿಂದ ನಾಯಿಗಳು ಶವವನ್ನು ಎಳೆದು ರಂಪಾಟ ಮಾಡಿದ್ದವು. ಮಾಹಿತಿಯ ನ್ನು ಪಡೆದ ಪೊಲೀಸರು ಶವದ ಬೆನ್ನತ್ತಿದಾಗ ನೈಜ ಘಟನೆ ಬೆಳಕಿಗೆ ಬಂದಿದೆ.

ಪ್ರಾಥಮಿಕ ಮಾಹಿತಿಗಳ ಹಿನ್ನಲೆಯಲ್ಲಿ ನಟ ದರ್ಶನ್ ನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದರ್ಶನ್ ರನ್ನು ಕರೆತರಲಾಗಿದೆ. ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರುವುದು ದೃಢಪಟ್ಟಿದ್ದೇ ಆದಲ್ಲಿ ದರ್ಶನ್ ರ ವೈಯುಕ್ತಿಕ ಹಾಗೂ ವೃತ್ತಿಬದುಕಿಗೆ ದೊಡ್ಡ ಹೊಡೆತ ಬೀಳುವುದರಲ್ಲಿ ಅನುಮಾನವೇ ಇಲ್ಲ.

ಇದೆಲ್ಲದರ ನಡುವೆ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಪತ್ರಿಕಾಗೋಷ್ಟಿ ನಡೆಸಿ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಸ್ಙಷ್ಟಪಡಿಸಿದರು.ಮೈಸೂರಿನ ಫಾರ್ಮ್ ಹೌಸ್ ನಲ್ಲಿ ದರ್ಶನ್ ಬಂಧನವಾಗಿದ್ದು ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದರು.ಘಟನೆ ಬಗ್ಗೆ ಗಂಭೀರ ಸ್ವರೂಪದ ತನಿಖೆ ನಡೆಯುತ್ತಿದೆ ಎಂದರು.

Spread the love

Leave a Reply

Your email address will not be published. Required fields are marked *

You missed