siddaramiah

64 ಅಂಗಾಂಗ ದಾನಿಗಳ ಕುಟುಂಬಗಳಿಗೆ ಸನ್ಮಾನಿಸಲಿರುವ ಸಿಎಂ ಸಿದ್ದರಾಮಯ್ಯ!

ಸ್ವಾತಂತ್ರ್ಯ ದಿನಚಾರಣೆಯ ಸಮಾರಂಭದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪಘಾತದಲ್ಲಿ ಜೀವ ಕಳೆದುಕೊಂಡ ಕುಟುಂಬದ ಸದಸ್ಯರ ಅಂಗಾಂಗ ದಾನ ಮಾಡಿದ 64 ಕುಟುಂಬಗಳಿಗೆ ಪ್ರಶಾಂಸ ಪತ್ರ ನೀಡಿ ಸನ್ಮಾನಿಸಲಿದ್ದಾರೆ.

ಆಗಸ್ಟ್ 15ರಂದು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ದಿನಾಚರಣೆಯ ವೇಳೆ ರಾಜ್ಯಾದ್ಯಂತ ಅಂಗಾಂಗ ದಾನ ಮಾಡಿ ಹಲವರಿಗೆ ಮರು ಜೀವ ನೀಡಿ ಔದಾರ್ಯ ಮೆರೆದ ಕುಟುಂಬಗಳನ್ನು ಸನ್ಮಾನಿಸಲಿದ್ದಾರೆ.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗುರುವಾರ ಬೆಳಗ್ಗೆ 8.58ಕ್ಕೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದು, ನಂತರ ತೆರೆದ ಜೀಪ್ ನಲ್ಲಿ ಪೆರೇಡ್ ಪರಿವೀಕ್ಷಣೆ ನಡೆಸಲಿದ್ದಾರೆ.

7 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ತಿಳಿಸುವ ವಿಶೇಷ ಕಾರ್ಯಕ್ರಮ, ಮಲ್ಲಕಂಬ, ಪ್ಯಾರಾ ಮೋಟರ್ ಹಾಗೂ ಮೋಟಾರು ಸೈಕಲ್ ಪ್ರದರ್ಶನ ನಡೆಯಲಿದೆ.

ಕೆಎಸ್ ಆರ್ ಪಿ, ಸಿಆರ್ ಪಿಎಫ್, ಬಿಎಸ್ ಎಫ್, ಟ್ರಾಫಿಕ್ ಪೊಲೀಸ್, ಎನ್ ಸಿಸಿ NCC,NSS,  ಮಹಿಳಾ ಪೊಲೀಸ್, ಡಾಗ್ ಸ್ಕ್ವಾಡ್ , ಹೋಂಗಾರ್ಡ್ ಸೇರಿದಂತೆ 35 ತುಕಡಿ ಸೇರಿದಂತೆ 1150 ಜನರು ಪರೇಡ್ ನಲ್ಲಿ ಭಾಗಿಯಾಗಲಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *