ದೆಹಲಿ ಡಿಸಿಎಂ ಮನೀಶ್ ಸಿಸೊಡಿಯಾಗೆ 18 ತಿಂಗಳ ನಂತರ ಸಿಕ್ಕಿತು ಮಂಜೂರು!

ದೆಹಲಿ ಡಿಸಿಎಂ ಮನೀಶ್ ಸಿಸೊಡಿಯಾಗೆ 18 ತಿಂಗಳ ನಂತರ ಸಿಕ್ಕಿತು ಮಂಜೂರು!

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಅವರಿಗೆ ಕೊನೆಗೂ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮಧ್ಯ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮನೀಶ್ ಸಿಸೊಡಿಯಾ ಅವರಿಗೆ 17 ತಿಂಗಳ ನಂತರ ಜಾಮೀನು ದೊರೆತಿದೆ.

2023 ಫೆಬ್ರವರಿ 23ರಂದು ಮನೀಶ್ ಸಿಸೊಡಿಯಾ ಅವರನ್ನು ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು. ಎರಡು ವಾರಗಳ ಅಂತರದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಇದೀಗ ಎರಡೂ ಪ್ರಕರಣಗಳಲ್ಲಿ ಸಿಸೊಡಿಯಾ ಅವರಿಗೆ ಜಾಮೀನು ಲಭಿಸಿದ್ದು, ಕೊನೆಗೂ ಜೈಲಿನಿಂದ ಹೊರಗೆ ಬರಲಿದ್ದಾರೆ.

ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಸಿಸೊಡಿಯಾ ಅವರಿಗೆ ಕ್ಷಿಪ್ರ ವಿಚಾರಣೆ ಪಡೆಯುವ ಹಕ್ಕು ಇದೆ. ಒಬ್ಬ ವ್ಯಕ್ತಿ ವಿಚಾರಣೆ ನೆಪದಲ್ಲಿ ಅನಿರ್ದಿಷ್ಟಕಾಲ ಜೈಲಿನಲ್ಲಿ ಇಡುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ಕೆಳ ಹಂತದ ನ್ಯಾಯಾಲಯಗಳಿಗೆ ಚಾಟಿ ಬೀಸಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *