jail food
jail food

ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೆ ಉಟೋಪಚಾರಕ್ಕೆ ಎಷ್ಟು ಖರ್ಚು ಗೊತ್ತಾ?

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳ ಮೂರು ಹೊತ್ತಿನ ಊಟೋಪಚಾರಕ್ಕೆ 85 ರೂ. ಖರ್ಚು ಮಾಡಲಾಗುತ್ತದೆ.

ಹೌದು, ಜೈಲಿನಲ್ಲಿರುವ ಕೈದಿಗಳಿಗೆ ಬೆಳಿಗ್ಗೆ ತಿಂಡಿ, ಕಾಫಿ, ಸ್ನ್ಯಾಕ್ಸ್ ಮತ್ತು ಎರಡು ಹೊತ್ತಿನ ಊಟಕ್ಕಾಗಿ ಕೇವಲ 85 ರೂ. ಖರ್ಚು ಮಾಡಲಾಗುತ್ತದೆ.

ನಟ ದರ್ಶನ್ ಜೈಲಿನ ಊಟ ಸರಿ ಹೋಗುತ್ತಿಲ್ಲ ಎಂದು ಪದೇಪದೆ ನ್ಯಾಯಾಲಯಕ್ಕೆ ಮೊರೆ ಹೋಗಿ ಮನೆ ಊಟಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದರಿಂದ ಜೈಲಿನ ಊಟದ ಗುಣಮಟ್ಟದ ಬಗ್ಗೆ ಅನುಮಾನಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ ಆರ್ ಟಿಐನಲ್ಲಿ ಉತ್ತರ ಲಭ್ಯವಾಗಿದೆ.

ಜೈಲಿನ ವಿಚಾರಣಾಧೀನ ಕೈದಿಗಳ ಊಟೋಪಚಾರಕ್ಕೆ ಖರ್ಚು ಮಾಡುವ ವಿವರ ಲಭ್ಯವಾಗಿದ್ದು, ಮೂರು ಹೊತ್ತಿನ ಊಟಕ್ಕಾಗಿ 85 ರೂ. ಖರ್ಚು ಮಾಡಲಾಗಿದೆ. ಎಂದು ಸಾಮಾಜಿಕ‌ ಕಾರ್ಯಕರ್ತ ನರಸಿಂಹಮೂರ್ತಿ ಅವರಿಗೆ ಆರ್ ಟಿಐನಲ್ಲಿ ಮಾಹಿತಿ ಲಭಿಸಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *