ಬೆಂಗಳೂರು ಮಹಾಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಲ್ಪೋನ್ಸ್ ಮಥಾಯಸ್ ಕ್ರಿಸ್ತೈಕ್ಯರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ಅರ್ಚ್ ಬಿಷಪ್ ಅವರ ನಿವಾಸದ ಮೂಲಗಳ ಪ್ರಕಾರ ಅಲ್ಪೋನ್ಸ್ ಮಥಾಯ್ಸ್ ಅವರು ವಯೋಸಹಜ ಸಮಸ್ಯೆಯಿಂದ ನಿಧನರಾಗಿದ್ದಾರೆ.ಅನೇಕ ದಿನಗಳಿಂದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿವೃತ್ತಿ ನಂತರ ನಿವೃತ್ತ ಬಿಷಪ್ ಗಳಿಗೆಂದೇ ಇರುವ ನಿವಾಸದಲ್ಲಿ ವಾಸವಾಗಿದ್ದರು.
1964 ರಿಂದ 1986ರ ಅವಧಿವರೆಗೆ ಅಂದರೆ ನಿರಂತರ 22 ವರ್ಷಗಳವರೆಗೆ ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ತಮ್ಮ ಸೇವಾವಧಿಯಲ್ಲಿ ಅನೇಕ ಧಾರ್ಮಿಕ ಕ್ರಾಂತಿಯ ಕಾರ್ಯಗಳನ್ನು ಮಾಡಿದ್ದರು.ಚಿಕ್ಕಮಗಳೂರು ಧರ್ಮಕ್ಷೇತ್ರವನ್ನು ಮಾದರಿ ಧರ್ಮಕ್ಷೇತ್ರವನ್ನಾಗಿ ರೂಪಿಸಿದ್ದರು.
ಅದಾದ ಬಳಿಕ ಅಂದ್ರೆ 1986 ರಿಂದ 1998 ರವರಗೆ ಅಂದರೆ 12 ವರ್ಷಗಳವರೆಗೆ ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ನಿವೃತ್ತಿ ಬಳಿಕ ಧರ್ಮಕ್ಷೇತ್ರ ಕಟ್ಟುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ರು.ಮಿತಭಾಷಿಯಾಗಿದ್ದ ಅಲ್ಪೋನ್ಸ್ ಮಥಾಯ್ಸ್ ಅವರ ಸೇವಾವಧಿಯಲ್ಲಿ ಕ್ರೈಸ್ತ ಧರ್ಮ ಹಾಗು ಧರ್ಮಕ್ಷೇತ್ರ ಅನೇಕ ಸುಧಾರಣೆಗಳನ್ನು ಕಾಣುವಂತಾಯಿತು. ಕ್ರೈಸ್ತ ಧರ್ಮದಲ್ಲಿ ಇರುವ ಪ್ರಾದೇಶಿಕ ಭಾಷಾ ಸಮಸ್ಯೆಯನ್ನು ಕೈಲಾದ ಮಟ್ಟಿಗೆ ಸರಿಪಡಿಸಿ ಎಲ್ಲಾ ಭಾಷಿಗರ ನಡುವೆ ಸಾಮರಸ್ಯ ಮೂಡಿಸುವಲ್ಲಿ ಮಥಾಯಸ್ ಅವರ ಕೆಲಸ ಸ್ಮರಣೀಯ ಎನ್ತಾರೆ ಕ್ರೈಸ್ತ ಮುಖಂಡರು.
ತಮ್ಮ ಕೊನೆ ದಿನಗಳಲ್ಲು ಪ್ರಾರ್ಥನೆಯನ್ನು ಹೆಚ್ಚಾಗಿ ಅವಲಂಭಿಸಿದ್ದ ಅಲ್ಪೋನ್ಸ್ ಮಥಾಯಸ್ ಅವರು ನಿನ್ನೆ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅವರ ಅಗಲಿಕೆ ಮೂಲಕ ಕ್ರೈಸ್ತಧರ್ಮದ ಮಹಾನ್ ಕೊಂಡಿ ಕಳಚಿದಂತಾಗಿದೆ.ಕನ್ನಡ ಫ್ಲ್ಯಾಶ್ ನ್ಯೂಸ್ ಅಲ್ಪೋನ್ಸ್ ಮಥಾಯಸ್ ಅವರ ಅಗಲಿಕೆಗೆ ಕಂಬನಿ ಮಿಡಿದಿದೆ.
ಅಲ್ಪೋನ್ಸ್ ಮಥಾಯಸ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿಎಂ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ,ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಾದಿಯಾಗಿ ಕ್ರೈಸ್ತ ಧರ್ಮದ ಮುಖಂಡರು ಅತೀವ ಶೋಕ ವ್ಯಕ್ತಪಡಿಸಿದ್ದಾರೆ.ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಅಲ್ಪೋನ್ಸ್ ಮಥಾಯ್ಸ್ ಅವರ ನಿಧನಕ್ಕೆ ಕಂಬನಿ ಮಿಡಿದಿದೆ.