ಬೆಂಗಳೂರು: ಇದು ವಿಚಿತ್ರ ಕಥೆ..ಅವರಿಬ್ಬರೂ ಸರ್ಕಾರದ ಉನ್ನತ ಹುದ್ದೆಗಳಲ್ಲಿರುವವರು..ಅಳಿಯ ಐಎಎಸ್..ಮಾವ ನಿವೃತ್ತ ಐಪಿಎಸ್.ಆದರೂ ಅವರಿಬ್ಬರ ನಡುವಿನ ಸಂಘರ್ಷ ಪೊಲೀಸ್ ಠಾಣೆ ಮೆಟ್ಟಿಲೇರಿದೆ.ಐಎಸ್ ಅಳಿಯ ನಿವೃತ್ತ ಐಪಿಎಸ್ ಮಾವನ ವಿರುದ್ಧ ಗೂಢಾಚಾರಿಕೆ ಆಪಾದನೆ ಮಾಡಿ ಎಫ್ ಐ ಆರ್ ದಾಖಲಿಸೊಕ್ಕೆ ಕಾರಣವಾಗಿದ್ದಾರೆ.
ಅಂದ್ಹಾಗೆ IAS ಅಧಿಕಾರಿ ಆಕಾಶ್ ಅವರೇ ತಮ್ಮ ಮಾವ ನಿವೃತ್ತ IPS ಸುರೇಶ್ ಅವರ ವಿರುದ್ಧ ದೂರು ನೀಡಿ ಎಫ್ ಐಆರ್ ಆಗೊಕ್ಕೆ ಕಾರಣವಾಗಿದ್ದಾರೆ.ಕಾರಣ,ತಮ್ಮ ಮೊಬೈಲ್ ಕಾಲ್ ಡಿಟೈಲ್ಸ್ ನ್ನು ಅಕ್ರಮವಾಗಿ ತೆಗೆಸಿದ ಆಪಾದನೆ..ಈ ಪ್ರಕರಣದಲ್ಲಿ ಮಾವ ಸುರೇಶ್ ಅವರಿಗೆ ಸಹಾಯ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ.ಮಾವ-ಅಳಿಯನ ಜಗಳದಲ್ಲಿ ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ಐಯ್ಯಣ್ಣ ರೆಡ್ಡಿ ಈಗ ಕೈ ಕೈ ಹಿಸುಕಿಕೊಳ್ತಿದಾರೆ.
ಮದುವೆ ಮಾಡಿಕೊಂಡ ಸ್ವಲ್ಪ ದಿನಗಳವರೆಗಷ್ಟೇ ಚೆನ್ನಾಗಿದ್ದ ಸತಿಪತಿಗಳು ಕೆಲವೇ ತಿಂಗಳಲ್ಲಿ ದೂರವಾದ್ರು.ಹಾಲು ಜೇನಿನಂತಿದ್ದ ಸಂಸಾರದಲ್ಲಿನ ಸರಿಗಮ ಶೃತಿ ತಪ್ಪಿತು.ಪತಿ ತಮಗೆ ಕಿರುಕುಳ ನೀಡುತ್ತಿರುವುದಾಗಿ ಅಪ್ಪನ ಬಳಿ ಮಗಳು ದೂರು ಹೇಳಿಕೊಂಡಿದ್ದಾರೆ.ಅವರಿವರಿಂದ ಹೇಳಿಸುವ ಕೆಲಸವನ್ನೂ ಸುರೇಶ್ ಮಾಡಿದ್ದಾರೆನ್ನಲಾಗಿದೆ.ಆದರೆ ಪರಿಸ್ತಿತಿ ಸುಧಾರಿಸುವುದಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಕಾನೂನಾತ್ಮಕವಾಗಿ ಮುಂದುವರೆಯುವ ನಿರ್ದಾರ ಕೈಗೊಂಡಿದ್ದಾರೆ.
ಅವರು ಅಂದುಕೊಂಡಂತೆ ಮಾಡಿದಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲವೇನೋ..? ಆದರೆ ಅದನ್ನು ಬಿಟ್ಟು ಸುರೇಶ್ ಅವರು ಮಾಡಿದ ಕೆಲಸ ಇವತ್ತು ಅವರಿಗೆ ಸಮಾಜದಲ್ಲಿ ಇದ್ದ ನಂಬಿಕೆ-ವಿಶ್ವಾಸ-ಘನತೆಯನ್ನೇ ಹಾಳು ಮಾಡಿದೆ.ಕೌಟುಂಬಿಕ ಜಗಳದ ಹಿನ್ನಲೆಯಲ್ಲಿ ಎರಡು ವರ್ಷದ ಹಿಂದೆ ಆಕಾಶ್ ವಿರುದ್ದ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದ ಸುರೇಶ್ ಅವರು, ತನ್ನ ಅಳಿಯನ ಮಾಹಿತಿ ತಿಳಿಯಲು ಮುಂದಾದ್ರು.ಇದಕ್ಕಾಗಿ ತಮ್ಮ ಇಲಾಖೆಯ ಇನ್ಸ್ ಪೆಕ್ಟರ್ ಐಯ್ಯಣ್ಣ ರೆಡ್ಡಿ ನೆರವು ಪಡೆಯಲು ಮುಂದಾದ್ರು.ಅವರಿಗೆ ಹೇಳಿ ಕಾಲ್ ಡಿಟೈಲ್ಸ್ ತೆಗೆಸಿದ್ರು..
ಇದು ಐಎಎಸ್ ಅಧಿಕಾರಿ ಸುರೇಶ್ ಅವರಿಗೆ ಹೇಗೋ ತಿಳಿದಿದೆ.ಕೆಂಡಾಮಂಡಲವಾದ ಆಕಾಶ್ ಅವರು ಕಾನೂನಾತ್ಮಕವಾಗಿ ಮಾವನ ವಿರುದ್ದ ಸಮರ ಸಾರೊಕ್ಕೆ ಮುಂದಾದ್ರು.ಇದರ ಭಾಗವಾಗಿ ತಮ್ಮ ವೈಯುಕ್ತಿಕ ಹಾಗು ಗೌಪ್ಯ ಮಾಹಿತಿಯನ್ನು ಕಾನೂನು ಬಾಹಿರವಾಗಿ ತೆಗಿಸಿದ ಕಾರಣದ ಹಿನ್ನಲೆಯಲ್ಲಿ ನಿವೃತ್ತ IPS ಅಧಿಕಾರಿ ಸುರೇಶ್ ಹಾಗು ಕುಟುಂಬ, ಇನ್ಸ್ ಪೆಕ್ಟರ್ ಐಯ್ಯಣ್ಣರೆಡ್ಡಿ ವಿರುದ್ದ ದೂರು ನೀಡಿದ್ರು.ಈ ದೂರಿನ ಆಧಾರದ ಮೇಲೆ ಸೆನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೀಣ್ಯ ಠಾಣೆ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಕಾಲ್ ಡಿಟೈಲ್ಸ್ ತೆಗೆದಿದ್ದ ಐಯ್ಯಣ್ಣ ರೆಡ್ಡಿ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ. ಕೇಸ್ ದಾಖಲಾದ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಅಯ್ಯಣ್ಣ ರೆಡ್ಡಿ ಹಾಗು ನಿವೃತ್ತ IPS ಅಧಿಕಾರಿ ಸುರೇಶ್ ಗೆ ಸಂಕಷ್ಟ ಎದುರಾಗಿದ್ದು ಸುರೇಶ್ ಅವರ ಘನತೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ.ಕಾನೂನುಬಾಹಿರ ಕೆಲಸಕ್ಕೆ ಸಾಥ್ ಕೊಟ್ಟ ಹಿನ್ನಲೆಯಲ್ಲಿ ಐಯ್ಯಣ್ಣ ರೆಡ್ಡಿ ಸಸ್ಪೆಂಡ್ ಆಗೋ ಸಾಧ್ಯತೆಯಿದೆ ಎನ್ನಲಾಗಿದೆ.