ಬೆಂಗಳೂರು: ಅದೊಂದು ರೀತಿ ಸಿನಿಮೀಯ ಸ್ಟೈಲ್ ನ ಚೇಸಿಂಗ್..ನಮ್ಮಲ್ಲೇ ಮೊದಲು ದೃಶ್ಯಗಳನ್ನು ತೋರಿಸಬೇಕೆನ್ನುವ ಹಠಕ್ಕೆ ಬಿದ್ದ ಚಾನೆಲ್ ಗಳು ಪೈಪೋಟಿಗೆ ಬಿದ್ದು ಪ್ರಜ್ವಲ್ ರೇವಣ್ಣನನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯೊಕ್ಕೆ ಪಡುತ್ತಿದ್ದ ಪಾಡು ಅಪಾಯದಷ್ಟೇ ಥ್ರಿಲ್ಲಿಂಗ್ ಎನಿಸ್ತಿತ್ತು.ಏರ್ ಪೋರ್ಟ್ ಗೆ ಬಂದಿಳಿದ ಪ್ರಜ್ವಲ್ ನ್ನು ಎಸ್ ಐಟಿ ಕಚೇರಿಗೆ ಕರೆತರುವ ಸಂದರ್ಭದಲ್ಲಿ ಪೊಲೀಸರು ತಮ್ಮನ್ನು ಯಾಮಾರಿಸಿದ್ದಕ್ಕೆ ಪ್ರತಿಕಾರ ಎನ್ನುವಂತಿತ್ತು ಮಾದ್ಯಮಗಳು ಪೊಲೀಸ್ ಜೀಪ್ ಗಳನ್ನು ಚೇಸ್ ಮಾಡುತ್ತಿದ್ದ ದೃಶ್ಯಗಳು.
ಟಿವಿ ಚಾನೆಲ್ ಗಳಿಗೆ ಇತ್ತೀಚೆಗೆ ಚೇಸಿಂಗ್ ಎನ್ನುವುದು ಮಾಮೂಲಾಗಿ ಹೋಗಿದೆ.ಹಿಂದೆಲ್ಲಾ ವರ್ಷಕ್ಕೆ ಒಂದೋ ಎರಡೋ ಘಟನೆಗಳಲ್ಲಿ ಚೇಸಿಂಗ್ ಎನ್ನುವುದಿರುತ್ತಿತ್ತು.ಆದರೆ ಇವತ್ತಿಗೆ ಅದು ಮಾಮೂಲಾಗಿ ಹೋಗಿದೆ.ಚಾನೆಲ್ ಗಳಲ್ಲೆ ಪೈಪೋಟಿ ಶುರುವಾಗಿಬಿಡ್ತದೆ.ಒಬ್ಬರು ಇನ್ನೊಬ್ಬರನ್ನು ಯಾಮಾರಿಸುತ್ತಲೇ ವಿಷ್ಯುಯೆಲ್ ನ್ನು ಸೆರೆ ಹಿಡಿಯುವುದು ಕಾಮನ್ ಆಗಿದೆ. ದೃಶ್ಯಾವಳಿಗಳ ಒಂದೇ ಒಂದು ಫ್ರೇಮ್ ಕೂಡ ಮಿಸ್ ಆಗಬಾರದೆನ್ನುವ ಉದ್ದೇಶದಲ್ಲಿ ಹಠಕ್ಕೆ ಬಿದ್ದು ಚೇಸಿಂಗ್ ಮಾಡುವುದು ಚಾನೆಲ್ ಗಳಿಗೆ ಪ್ರತಿಷ್ಟೆ ವಿಷಯವೂ ಹೌದು.
ಸಂಸದ ಪ್ರಜ್ವಲ್ ರೇವಣ್ಣನ ವಿಚಾರದಲ್ಲಿ ಆಗಿದ್ದೂ ಅದೇ ಚೇಸಿಂಗ್. ಪ್ರಜ್ವಲ್ ರೇವಣ್ಣ ಬರೋದು ಪಕ್ಕಾ ಆಗ್ತಿದ್ದಂಗೆ ಮೂರ್ನಾಲ್ಕು ದಿನಗಳಿಂದಲೂ ಪ್ರತಿ ಚಾನೆಲ್ ಗಳಲ್ಲೂ ಅದೇ ಚರ್ಚೆ. ಪ್ರಜ್ವಲ್ ರೇವಣ್ಣ ಏರ್ ಪೋರ್ಟ್ ನಿಂದ ಇಳಿದು ಎಸ್ ಐಟಿ ವಶಕ್ಕೆ ಪಡೆಯುತ್ತಿದ್ದಂತೆ ಮದ್ಯರಾತ್ರಿ ಶರವೇಗದಲ್ಲಿ ಎಸ್ ಐಟಿಗೆ ಕರೆ ತರುವ ದೃಶ್ಯಗಳನ್ನು ಹೇಗೆಲ್ಲಾ ತೆಗೆಯಬೇಕೆನ್ನುವ ಲೆಕ್ಕಾಚಾರ ಕ್ಯಾಮೆರಾಮನ್ ಗಳಲ್ಲಿ ನಡೆಯುತ್ತಿದ್ದರೆ ಯಾವ್ ರೇಂಜ್ನಲ್ಲಿ ಎಸ್ ಐಟಿ ವಾಹನಗಳನ್ನು ಚೇಸ್ ಮಾಡಬೇಕೆನ್ನುವ ಚರ್ಚೆ ಡ್ರೈವರ್ಸ್ ಗಳಲ್ಲಿ ನಡೆದೇ ಇತ್ತು.
ಪ್ರತಿ ಚೇಸಿಂಗ್ ನಲ್ಲಿ ಪ್ರಾಣ ಒತ್ತೆಯಿಡುವ “ಡ್ರೈವರ್ಸ್-ಕ್ಯಾಮೆರಾಮನ್ಸ್”..
“ಇಲ್ಲಿ ನಾವು ಈ ಇಬ್ಬರು ವ್ಯಕ್ತಿಗಳು ಹಾಗೂ ಅವರ ಕಾರ್ಯವೈಖರಿಯನ್ನು ತಿಳಿಸಲೇಬೇಕಾಗುತ್ತದೆ. ಚೇಸಿಂಗ್ ವೇಳೆ ತಮ್ಮ ಪ್ರಾಣಕ್ಕಿಟ್ಟು ನಿರ್ದಿಷ್ಟ ವ್ಯಕ್ತಿ ಹಾಗು ಸಂದರ್ಭವನ್ನು ಸೆರೆ ಹಿಡಿವ ಕ್ಯಾಮೆರಾಮನ್ಸ್ ಹಾಗೂ ಯಾವ ಫ್ರೇಮ್ ನಲ್ಲೂ ವಿಷ್ಯುಯೆಲ್ಸ್ ಮಿಸ್ ಆಗದಂತೆ ಕ್ಯಾಮೆರಾವರ್ಕ್ ಮಾಡುವ ಕ್ಯಾಮೆರಾಮನ್ಸ್.ಇವರಿಬ್ಬರಿಲ್ಲದೆ ಯಾವುದೇ ಚೇಸಿಂಗ್ ಪೂರ್ಣಗೊಳ್ಳಲ್ಲ.ಹಾಗೆಯೇ ಪರಿಣಾಮಕಾರಿ ಎನಿಸುವ ದೃಶ್ಯಗಳು ಕೂಡ ಸಿಗೊಲ್ಲ.ಈವರೆಗೆ ನಡೆದ ಚೇಸಿಂಗ್ ಗಳಲ್ಲಿ 100 ಕಿಮಿನಿಂದ 150-160 ಕಿಲೋಮೀಟರ್ ಸ್ಪೀಡ್ ನಲ್ಲಿ ವಾಹನಗಳನ್ನು ಚಲಾಯಿಸುವ ಡ್ರೈವರ್ಸ್ ಗಳ ಕೆಲಸ ‘ಮೈ ಝುಮ್ಮೆನ್ನಿಸುತ್ತದೆ. ಹೊರಗೆ ನಿಂತು ನೋಡುವವರಿಗೆ ಇದೇನು ಸಿನೆಮಾ ಶೂಟಿಂಗ್ ನಡೆಯುತ್ತಿದೆಯಾ ಎನಿಸುವಷ್ಟು ರಣರೋಚಕವಾಗಿರುತ್ತದೆ.ಇನ್ನು ಕ್ಯಾಮೆರಾಮನ್ ಗಳು ವಾಹನಗಳ ಹೊರಗೆ ತಮ್ಮ ದೇಹವನ್ನೇ ಹೊರತಂದು ವಿವಿಧ ಭಾವಭಂಗಿಗಳಲ್ಲಿ ನಿಂತು ಕ್ಯಾಮೆರಾ ಆಪರೇಟ್ ಮಾಡುವುದು ಒಂದು ಕ್ಷಣ ಜೀವವನ್ನೇ ಬಾಯಿಗೆ ತರಿಸಿಬಿಡುತ್ತದೆ. ತನ್ನ ಸ್ಪೀಡ್ ಗೆ ತಕ್ಕಂತೆ ವಾಹನ ಚಲಾಯಿಸುವಂತೆ ಡ್ರೈವರ್ ಗೆ ಸೂಚನೆ ಕೊಡ್ತಾ ಕೆಲಸ ಮಾಡುವುದನ್ನು ನೋಡುವುದೇ ಒಂದು ವಿಭಿನ್ನ ಅನುಭವ. ಟಿವಿ ಪರದೆಗಳ ಮುಂದ ಕೂತು ನೋಡುವವರನ್ನೇ ಮೈ ಝುಮ್ಮೆನ್ನುವಂತೆ ಮಾಡುವ ಆ ದೃಶ್ಯಗಳ ಹಿಂದೆ ಪ್ರಾಣ ಪಣಕ್ಕಿಟ್ಟ ಡ್ರೈವರ್ಸ್-ಕ್ಯಾಮೆರಾಮನ್ಸ್ ಗಳ ಕಾರ್ಯವೈಖರಿ ಹಾಗೂ ಬೆವರಿನ ಶ್ರಮ ಇರುತ್ತದೆ.ಹಾಗೆ ನೋಡಿದ್ರೆ ಚೇಸಿಂಗ್ ನಂಥ ಅಪಾಯಕಾರಿ ಹಾಗೂ ರಣರೋಚಕ ಕೆಲಸದ ವೇಳೆ ರಿಪೋರ್ಟರ್ಸ್ ಗೆ ಕೆಲಸವೇ ಇರೊಲ್ಲ.ಆ ಚೇಸಿಂಗ್ ಎನ್ನೋದೇನಿದ್ರೂ ಡ್ರೈವರ್ಸ್-ಕ್ಯಾಮೆರಾಮನ್ಸ್ ಗಳ ನಡುವಿನ ಝುಗಲ್ ಬಂಧಿ.ಅವರ ನಡುವಿನ ತಾಳಮೇಳ-ಸಮನ್ವಯ..ಅದೇನಾದ್ರು ಹಳಿ ತಪ್ಪಿದ್ರೆ ಕೆಲಸವೂ ಹಾಳು..ಕೆಲವೊಮ್ಮೆ ಲೈಫೂ ಬರ್ಬಾದ್ ಆಗುವ ಸಾಧ್ಯೆಗಳಿರುತ್ವೆ.. ಹಾಗಾಗಿ ಲೈಫನ್ನೇ ರಿಸ್ಕ್ ನಲ್ಲಿ ಹಾಕ್ಕೊಂಡು ಕೆಲಸ ಮಾಡುವ ಇಂಥಾ ಸನ್ನಿವೇಶಗಳಲ್ಲಿ ಪ್ರಾಣದ ಬಗ್ಗೆ ಕಾಳಜಿ, ಮೈ ಮೇಲೆ ಒಂದಷ್ಟು ವಿವೇಚನೆ ಇಟ್ಟುಕೊಳ್ಳೋದು ಒಳ್ಳೇದು ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಕಾಳಜಿ-ಕಳಕಳಿ”
ಆ ದಿನ ನಿನ್ನೆ ಅಂದರೆ 30-05-2024 ರಂದು ಬಂದೇ ಬಿಡ್ತು.ಸಂಜೆ ಹೊತ್ತಿಗಾಗ್ಲೇ ಎಲ್ಲಾ ಚಾನೆಲ್ ಗಳು ತಮ್ಮ ಕ್ರೂ ಅನ್ನು ಅಲ್ಲಿಗೆ ಶಿಫ್ಟ್ ಮಾಡಿಬಿಟ್ವು.ಒಂದೊಂದು ಚಾನೆಲ್ ನಿಂದ ಆರೇಳು ಪ್ರತಿನಿಧಿಗಳು,ಹತ್ತಾರು ಚಾನೆಲ್ ಗಳು, ಬ್ಯಾಕ್ ಪ್ಯಾಕ್, ಓಬಿ ಎಲ್ಲವೂ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲ್ಪಟ್ಟವು. ಪ್ರಜ್ವಲ್ ಬಂದಿಳಿಯುತ್ತಿದ್ದಂತೆ ಹೇಗೆ ಕವರೇಜ್ ಶುರುವಾಗ್ಬೇಕು..ಪ್ರಜ್ವಲ್ ಇರುವ ಎಸ್ ಐಟಿ ವಾಹನವನ್ನು ಹೇಗೆ ಚೇಸ್ ಮಾಡಿ ವಿಷ್ಯುಯೆಲ್ ಸೆರೆಹಿಡಿಯಬೇಕೆನ್ನುವ ಸಲಹೆ-ಮಾರ್ಗದರ್ಶನವನ್ನು ನೀಡಿಯಾಗಿತ್ತು.ಅದರ ಆಧಾರದ ಮೇಲೆಯೇ ಎಲ್ಲರೂ ಪ್ರಜ್ವಲ್ ಆಗಮನಕ್ಕೆ ಚಾತಕಪಕ್ಷಿಗಳಂತೆ ಕಾದಿದ್ರು. ಪ್ರಜ್ವಲ್ ಫ್ಲೈಟ್ ಲ್ಯಾಂಡ್ ಆಗಿ ಇಮ್ಮಿಗ್ರೇಷನ್ ಎಲ್ಲಾ ಮುಗಿದು ಇನ್ನೇನು ಎಕ್ಸಿಟ್ ಆಗ್ತಿದಾನೆ ಎನ್ನುವ ಮಾಹಿತಿ ಪಕ್ಕಾ ಆಗ್ತಿದ್ದಂಗೆ ಎಲ್ಲಾ ಚಾನೆಲ್ ಗಳ ಕ್ಯಾಮೆರಾಗಳು ಆನ್ ಆಗಿ ಕ್ಯಾಬ್ ನೊಳಗೆ ಶಿಫ್ಟ್ ಆಗಿಬಿಟ್ವು.ಎಸ್ ಐಟಿ ವಾಹನ ಹೊರಡ್ತಿದ್ದಂಗೆ ಬುರ್ ಎನ್ನುತ್ತಾ ಕ್ಯಾಬ್ ಗಳು ಒಂದರ ಹಿಂದೆ ಮತ್ತೊಂದರಂತೆ ಪರಸ್ಪರರನ್ನು ಚೇಸ್ ಮಾಡಿ ಹೊರಟೇಬಿಟ್ವು..
ಆದರೆ ಹಾಗೆ ಹೊರಟವ್ರಿಗೆ ಎಸ್ ಐಟಿ ಅವ್ರು ಎಂಥಾ ಶಾಕ್ ಕೊಟ್ರು ಎಂದ್ರೆ,ಪ್ರಜ್ವಲ್ ರೇವಣ್ಣರನ್ನು ಕೂರಿಸಿಕೊಂಡು ಹೊರಟಂತೆ ಫೋಸ್ ಕೊಟ್ಟಿದ್ದ ವಾಹನ ಆರ್ ಟಿ ನಗರದ ಬಳಿ ಬರ್ತಿದ್ದಂಗೆ ವೇಗ ಕಡಿಮೆ ಮಾಡಿಕೊಳ್ತು.3 ವಾಹನಗಳು ಒಂದು ರಸ್ತೆಯಲ್ಲಿ ಡೈವರ್ಷನ್ ಪಡೆದುಬಿಟ್ಟವು.ಅಚ್ಚರಿ ವಿಷಯ ಏನಂದ್ರೆ ತೀವ್ರಗತಿಯಲ್ಲಿ ಬರುತ್ತಿದ್ದ ವಾಹನಗಳು ಗತಿಯನ್ನು ಕಡಿಮೆ ಮಾಡಿಕೊಂಡು ಮೂರು ರಸ್ತೆಗಳಲ್ಲಿ ಡೈವರ್ಷನ್ ಪಡೆಯೋವರೆಗೂ ಮೀಡಿಯಾಗಳಿಗೆ ನಾವು ಮೋಸ ಹೋದವೆನ್ನೋದು ಗೊತ್ತಾಗಲೇ ಇಲ್ಲ.ಅಸಲಿಗೆ ಆ ವಾಹನದಲ್ಲಿ ಪ್ರಜ್ವಲ್ ಇರಲೇ ಇಲ್ಲ. ಮೀಡಿಯಾಗಳನ್ನು ಯಾಮಾರಿಸಲು ಎಸ್ ಐಟಿ ಅವ್ರೇ ಆಡಿದ ವ್ಯವಸ್ತಿತ ನಾಟಕ ಅದಾಗಿತ್ತು ಅಷ್ಟೇ.ಆದರೂ ಪಟ್ಟುಬಿಡದೆ ಮಾದ್ಯಮಗಳು ತಮ್ಮ ವಾಹನಗಳನ್ನು ತಿರುಗಿಸಿಕೊಂಡು ಏರ್ ಪೋರ್ಟ್ ಕಡೆಗೆ ಹೋದವು.
ಅಷ್ಟರಲ್ಲಾಗಲೇ ಎಸ್ ಐಟಿ ನವ್ರು ಪ್ರಜ್ವಲ್ ರೇವಣ್ಣನನ್ನು ಕರೆದುಕೊಂಡು ಬಂದಿಯಾಗಿತ್ತು.ಹಾಗಾಗಿ ನಿನ್ನೆಯ ಚೇಸಿಂಗ್ ಹೊರತಾಗ್ಯೂ ಮಾದ್ಯಮಗಳಿಗೆ ಏರ್ ಪೋರ್ಟ್ ಟು ಎಸ್ ಐಟಿ ಕಚೇರಿಗೆ ಸಾಗಿ ಬರುವ ಮಾರ್ಗಮದ್ಯದಲ್ಲಿ ಪ್ರಜ್ವಲ್ ನನ್ನು ಸೆರೆ ಹಿಡಿಯಲು ಆಗಲೇ ಇಲ್ಲ..ಆದರೆ ಎಸ್ ಐಟಿ ಕಚೇರಿ ಬಳಿ ಪ್ರಜ್ವಲ್ ಕ್ಯಾಮೆರಾಕ್ಕೆ ಸಿಕ್ಕಾಕೊಂಡ್ರು. ಮಾದ್ಯಮಗಳನ್ನು ಅಲ್ಲಿಯೂ ಯಾಮಾರಿಸುವ ಎಸ್ ಐಟಿ ಯತ್ನ ಸಫಲವಾಗಲಿಲ್ಲ.
ರಾತ್ರಿ ಹೊತ್ತಿನಲ್ಲಿ ತಮ್ಮನ್ನು ಯಾಮಾರಿಸಿದ ಎಸ್ ಐಟಿ ಬಗ್ಗೆ ಕೆಂಡಕಾರುತ್ತಿದ್ದ ಮಾದ್ಯಮಗಳು ಪ್ರತೀಕಾರ ಎನ್ನುವಂತೆ ಬೆಳಗ್ಗಿನಿಂದಲೂ ಪ್ರಜ್ವಲ್ ಒಂದೇ ಒಂದು ಫ್ರೇಮ್ ನಲ್ಲೂ ಮಿಸ್ ಆಗದಂತೆ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.ಎಸ್ ಐಟಿ ಕಚೇರಿಗೆ ಬಂದಿದ್ದು, ಅಲ್ಲಿಂದ ಬೌರಿಂಗ್ ಗೆ ತೆರಳಿದ್ದು, ಅಲ್ಲಿಂದ ಕೋರ್ಟ್ ಗೆ ಹಾಜರಾಗಿದ್ದು..ಹೀಗೆ ನಾನಾ ಹಂತಗಳಲ್ಲಿನ ವಿಚಾರಣೆ-ತಪಾಸಣೆಯನ್ನು ಮಿಸ್ ಮಾಡದೆ ಕವರ್ ಮಾಡಿದ್ರು.ಆದ್ರೆ ಪ್ರಜ್ವಲ್ ನನ್ನು ಏರ್ ಪೋರ್ಟ್ ನಿಂದ ಎಸ್ ಐಟಿ ಕಚೇರಿಗೆ ಕರೆತರುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಬೇಕೆನ್ನುವ ಮಾದ್ಯಮಗಳ ಆಸೆಗೆ ಎಸ್ ಐಟಿ ತನ್ನ ಪ್ಲ್ಯಾನ್ ಮೂಲಕ ತಣ್ಣೀರೆರಚಿದ್ದು ಮಾತ್ರ ವಿಪರ್ಯಾಸ.ಒಂದು ರಣರೋಚಕ ಹಾಗು ಸಿನಿಮೀಯ ಸ್ಟೈಲ್ ನ ಚೇಸಿಂಗ್ ಮಿಸ್ ಆಗೋಯ್ತು.