ಪತ್ನಿಯ  ಖರ್ಚಿನಿಂದ ಬೇಸತ್ತು ಸ್ನೇಹಿತರಿಂದ ಕೊಲೆ ಮಾಡಿದ ಪತಿ!

ಪತ್ನಿಯ  ಖರ್ಚಿನಿಂದ ಬೇಸತ್ತು ಸ್ನೇಹಿತರಿಂದ ಕೊಲೆ ಮಾಡಿದ ಪತಿ!

ಪತ್ನಿ ಮಾಡುತ್ತಿದ್ದ ಖರ್ಚು ಗಳಿಂದ ಬೇಸತ್ತ ಪತಿ ಸ್ನೇಹಿತರ ಜೊತೆಗೂಡಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

ಹೇಮಂತ್ ಶರ್ಮಾ ತನ್ನ ಮೂವರು ಸ್ನೇಹಿತರಿಗೆ 2.5 ಲಕ್ಷ ರೂ. ಸುಪಾರಿ ನೀಡಿ ಪತ್ನಿ ದುರ್ಗಾವತಿಯನ್ನು ಕೊಲೆ ಮಾಡಿಸಿ ನಂತರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆಗಸ್ಟ್ 13ರಂದು ಮಹಿಳೆಯ ಹತ್ಯೆ ಆಗಿದ್ದು, ಪೊಲೀಸರು 10 ದಿನಗಳ ನಂತರ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೇಮಂತ್ ಶರ್ಮಾಗೆ ದುರ್ಗಾವತಿ ಎರಡನೇ ಪತ್ನಿಯಾಗಿದ್ದು, ಈಕೆ ವಿಪರೀತ ಖರ್ಚು ಮಾಡಿಸುತ್ತಿದ್ದಳು. ಇದರಿಂದ ಬೇಸತ್ತ ಹೇಮಂತ್, ದುರ್ಗಾವತಿ ಮತ್ತು ಆಕೆಯ ಸೋದರ ಸಂದೇಶ್ ನನ್ನು ದೇವಸ್ಥಾನಕ್ಕೆ ಕರೆದೊಯ್ದಿದ್ದ. ಬೈಕ್ ನಲ್ಲಿ ಬರುತ್ತಿದ್ದ ಇಬ್ಬರಿಗೂ ಕಾರು ಡಿಕ್ಕಿ ಹೊಡೆದಿತ್ತು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದುರ್ಗಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಸಂದೇಶ್ ಗಂಭೀರವಾಗಿ ಗಾಯಗೊಂಡಿದ್ದ.

ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಾರು ಸ್ವಲ್ಪ ಮಾತ್ರವೇ ಬೈಕ್ ಗೆ ಗುದ್ದಿತ್ತು. ಅಲ್ಲದೇ ಇದು ಉದ್ದೇಶಪೂರ್ವಕವಾಗಿ ನಡೆದಿದೆ ಎಂದು ತಿಳಿಯಿತು. ವಿಚಾರಣೆ ನಡೆಸಿದಾಗ ಸಂಪೂರ್ಣ ವಿಷಯ ಬೆಳಕಿಗೆ ಬಂದಿದೆ.

ಹೇಮಂತ್ ಗೆ ದುರ್ಗಾಮತಿ ಎರಡನೇ ಪತ್ನಿಯಾಗಿದ್ದು, ಮದುವೆಗೂ ಮೊದಲೇ ಇಬ್ಬರಿಗೂ ದೈಹಿಕ ಸಂಬಂಧ ಇತ್ತು.  ದುರ್ಗಾಮತಿ 2021ರಲ್ಲಿ ಮದುವೆ ಆದರೆ, ಹೇಮಂತ್ 2022ರಲ್ಲಿ ವಿವಾಹವಾಗಿದ್ದ. ಹೇಮಂತ್ ಮದುವೆ ಆದ ಸುದ್ದಿ ಕೇಳಿದ ಕೆಲವೇ ಸಮಯದ ನಂತರ ದುರ್ಗಾಮತಿ ಪತಿಗೆ ವಿಚ್ಛೇದನ ನೀಡಿ ತವರು ಮನೆಗೆ ಮರಳಿದ್ದಳು.

ವಿಷಯ ತಿಳಿದ ಹೇಮಂತ್ ಕೂಡ ವಿಚ್ಛೇದನ ನೀಡಿ ದುರ್ಗಾಮತಿಯನ್ನು ಮದುವೆ ಆಗಿದ್ದ. ಆದರೆ ದುರ್ಗಾಮತಿ ವಿಪರೀತ ಖರ್ಚು ಮಾಡಿಸುತ್ತಿದ್ದಳು. ಇದರಿಂದ ಬೇಸತ್ತ ಹೇಮಂತ್ ಸ್ನೇಹಿತರಿಗೆ 2.5 ಲಕ್ಷ ರೂ. ನೀಡಿ ಅಪಘಾತದಲ್ಲಿ ಸತ್ತಿರುವಂತೆ ಬಿಂಬಿಸಿದ್ದ. ಪೊಲೀಸರು ಈಗ ಹೇಮಂತ್ ಹಾಗೂ ಸ್ನೇಹಿತರನ್ನು ಬಂಧಿಸಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *