ಸರ್ಕಾರಿ ಭೂಮಿಯಲ್ಲಿ ಗುಂಡಿ ತೋಡುತ್ತಿದ್ದುದ್ದನ್ನು ಪ್ರಶ್ನಿಸಿದ “ದಲಿತ”ರ ಮೇಲೆ “ಮಂಜೇಶ್,ಆಸಿಡ್ ರಾಜಾ”ನಿಂದ ದೌರ್ಜನ್ಯ-ಹಲ್ಲೆ..!?
ಬೆಂಗಳೂರು/ಮಂಡ್ಯ: ದಲಿತರಿಗೆ ಜಾತಿನಿಂದನೆ ಮಾಡಿದ್ದಲ್ಲದೇ ಹಲ್ಲೆ ನಡೆಸಿದ ಆಪಾದನೆ ಹಿನ್ನಲೆಯಲ್ಲಿ ಬಿಬಿಎಂಪಿ ಮಾಜಿ ನಗರಯೋಜನಾಧಿಕಾರಿ ಮತ್ತು ಹಾಲಿ ಆನೇಕಲ್ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಯಾಗಿರುವ ಮಂಜೇಶ್ ಅವರ ವಿರುದ್ಧ ಜಾತಿನಿಂದನೆ ಕೇಸ್ ದಾಖಲಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಜೋಗಿಪುರ ಗ್ರಾಮದ ಸರ್ವೆ ನಂಬರ್ 52ರ ಸರ್ಕಾರಿ ಭೂಮಿಯಲ್ಲಿ ಮಂಜೇಶ್ ಅಲಿಯಾಸ್ ಮಂಜು ಮತ್ತು ರಾಜಾ ಅಲಿಯಾಸ್ ಆಸಿಡ್ ರಾಜಾ ಎನ್ನುವವರು ಗುಂಡಿ ಹೊಡೆಯುತ್ತಿದ್ದರಂತೆ.ಅಲ್ಲಿಂದ ಹಾದು ಹೋಗುತ್ತಿದ್ದ ಸೋಮಣ್ಣ ಭೋವಿ ಹಾಗೂ ಸಂಗಡಿಗರು ಅದನ್ನು ಪ್ರಶ್ನಿಸಿದ್ದಾರೆ.ಅಷ್ಟೇ..ಕೋಪಗೊಂಡ ಮಂಜೇಶ್ ಹಾಗೂ ರಾಜಾ, ಸೋಮಣ್ಣ ಭೋವಿ ಹಾಗೂ ಸಂಗಡಿಗರನ್ನು ಅವರ ಜಾತಿ ಹಿಡಿದು ನಿಂದಿಸಲಾರಂಭಿಸಿದ್ದಾರಂತೆ.ಅದನ್ನು ಪ್ರಶ್ನಿಸಿದ್ದಕ್ಕೆ ದೊಣ್ಣೆ ಹಾಗು ಕಲ್ಲುಗಳಿಂದಲೂ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಸೋಮಣ್ಣ ಹಾಗು ಸಂಗಡಿಗರು ಹಲಗೂರು ಠಾಣೆಗೆ ನೀಡಿದ ದೂರಿನ ಹಿನ್ನಲೆಯಲ್ಲಿ ಮಂಜೇಶ್ ಹಾಗು ರಾಜಾ ಅವರ ಮೇಲೆ ಜಾತಿನಿಂದನೆ ಕೇಸ್ ಹಾಕಲಾಗಿದೆ.ಎಫ್ ಐ ಆರ್ ದಾಖಲಿಸಲಾಗಿದ್ದು ಹೆಚ್ಚಿನ ವಿಚಾರಣೆಗೆ ಹಲಗೂರು ಠಾಣೆಗೆ ಕರೆದೊಯ್ಯಲಾಗಿದೆಯಂತೆ.
ದಿನಾಂಕ 26-06-2024 ರಂದೇ ಸೋಮಣ್ಣ ಭೋವಿ ದೂರು ನೀಡಿದ್ದಾರೆ.ಈ ಸಂಬಂಧ ಮಂಜೇಶ್ ಗೆ ನೊಟೀಸ್ ಜಾರಿ ಉತ್ತರ ಬಯಸಲಾಗಿತ್ತು.ಆದ್ರೆ ಉತ್ತರಿಸಿದ್ದಕ್ಕೆ ಪೊಲೀಸರು ಸ್ಟೇಷನ್ ಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಕಲಂ 323,324,504,506,34 ಐಪಿಸಿ,ಎಸ್ ಸಿ ಎಸ್ಟಿ ಅಟ್ರಾಸಿಟಿ ಕೇಸ್ ಗಳನ್ನು ಹಾಕಲಾಗಿದೆ.ಸಧ್ಯ ಮಂಜೇಶ್ ಪೊಲೀಸರ ವಶದಲ್ಲಿದ್ದಾರೆ ಎನ್ನಲಾಗ್ತಿದೆ.
ಬಂಧನವಾದ್ರೆ ಅಮಾನತು ಸಾಧ್ಯತೆ: ಮಂಜೇಶ್ ವಿರುದ್ದ ಜಾತಿನಿಂದನೆಯಂಥ ಗಂಭೀರ ಆಪಾದನೆ ಇರುವುದರಿಂದ ಬಂಧನವಾಗುವ ಸಾಧ್ಯತೆಯಿದೆ. ಜಾತಿನಿಂದನೆ ನಾನ್ ಬೇಲಬಲ್ ಕೃತ್ಯವಾಗಿರುವುದರಿಂದ ಒಂದಷ್ಟು ದಿನ ಜೈಲಿನಲ್ಲಿರಬೇಕಾಗಬಹುದು.ಹಾಗೇನಾದ್ರೂ ಆಗಿದ್ದಲ್ಲಿ ಸರ್ಕಾರಿ ನೌಕರರ ಸೇವಾನಿಯಮಾವಳಿ ಪ್ರಕಾರ ಮಂಜೇಶ್ ಅಮಾನತ್ತುಗೊಳ್ಳುವ ಸಾಧ್ಯತೆಗಳಿವೆಯಂತೆ.
ಮಂಜೇಶ್ ಬಂಧನದ ಹಿನ್ನಲೆಯಲ್ಲಿ ಸ್ಥಳೀಯರಿಂದ ಮಂಜೇಶ್ ಅಕ್ರಮ ಹಾಗೂ ಬೇನಾಮಿ ಸಂಪತ್ತಿನ ಬಗ್ಗೆ ತನಿಖೆ ನಡೆಸುವಂತೆಯೂ ಕೋರಿದ್ದಾರೆ.ಸ್ಥಳೀಯರ ಪ್ರಕಾರ ಮಂಜೇಶ್ ತನ್ನ ಬೇನಾಮಿ ಸಂಪಾದನೆಯನ್ನೆಲ್ಲಾ ಮಂಡ್ಯ ಹಾಗೂ ಸುತ್ತಮುತ್ತಲಲ್ಲಿ ಇನ್ವೆಸ್ಟ್ ಮಾಡಿದ್ದಾರೆ.ಒಂದು ಸಮಗ್ರ ತನಿಖೆಯಾದ್ರೆ ಅದೆಲ್ಲವೂ ಹೊರಬರಲಿದೆ ಎಂದು ಒತ್ತಾಯಿಸಿದ್ದಾರೆ.