ಅಮೆರಿಕದಲ್ಲಿ ಸರಣಿ ಅಪಘಾತ: ನಾಲ್ವರು ಭಾರತೀಯರು ದುರ್ಮರಣ

ಅಮೆರಿಕದಲ್ಲಿ ಸರಣಿ ಅಪಘಾತ: ನಾಲ್ವರು ಭಾರತೀಯರು ದುರ್ಮರಣ

ಅಮೆರಿಕದ ಟೆಕ್ಸಾಸ್ ನಲ್ಲಿ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಜೀವದಹನಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.

ಹೈದರಾಬಾದ್ ನ ಆರ್ಯನ್ ರಘುನಾಥನ್, ಓರಮಪಟ್ಟಿ, ಫಾರೂಖ್ ಶೇಖ್ ಮತ್ತು ತಮಿಳುನಾಡಿನ ದರ್ಶಿನಿ ವಾಸುದೇವನ್, ಲೋಕೇಶ್ ಪರಚಾಲ ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಮೃತರ ಗುರುತು ಪತ್ತೆಗಾಗಿ ಡಿಎನ್ ಎ ಪರೀಕ್ಷೆಗೆ ರವಾನಿಸಲಾಗಿದೆ.

ಮೃತರು ಕಾರ್ ಪೋಲಿಂಗ್ ಆಪ್ ಸಂಪರ್ಕ ಹೊಂದಿದ್ದು, ಅರ್ಕಾನಸ್ ನಿಂದ ಬೊರಿವಿಲ್ಲೆಗೆ ಎಸ್ ಯುವಿನಲ್ಲಿ ಬರುತ್ತಿದ್ದಾಗ ದುರಂತ ಸಂಭವಿಸಿದೆ.

ಸ್ನೇಹಿತ ಲೋಕೇಶ್ ಅವರ ನಿವಾಸಕ್ಕೆ ಡಲ್ಲಾಸ್ ನಿವಾಸಕ್ಕೆ ಭೇಟಿ ನೀಡಿದ ನಂತರ ಡಿಗ್ರಿ ಪದವಿ ಪೂರೈಸಿದ ಸಂಭ್ರಮದಲ್ಲಿದ್ದ ದರ್ಶಿನಿ ಅವರ ಮನೆಗೆ ತೆರಳಬೇಕಿತ್ತು.

ಮನೆಗೆ ತೆರಳುವ ಮಾರ್ಗ ಮಧ್ಯದಲ್ಲಿ ನಿಯಂತ್ರಣ ತಪ್ಪಿದ ಟ್ರಕ್ 5 ವಾಹನಗಳಿಗೆ ಸರಣಿ ಅಪಘಾತ ನಡೆಸಿದ್ದು, ಕಾರಿನಲ್ಲಿದ್ದ ನಾಲ್ವರು ಬೆಂಕಿ ಹೊತ್ತಿಕೊಂಡು ಸಜೀವದಹನಗೊಂಡಿದ್ದಾರೆ.

ದರ್ಶಿನಿ ತಂದೆ ಮೂರು ದಿನಗಳ ಸತತ ಪ್ರಯತ್ನದ ನಂತರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಟ್ವಿಟ್ಚ ಮಾಡಿ ನೆರವು ಕೋರಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *