ಕೇಂದ್ರ ಘೋಷಿಸಿದ 24,657 ಕೋಟಿಯ 8 ರೈಲ್ವೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ಒಂದೂ ಇಲ್ಲ!

ಕೇಂದ್ರ ಘೋಷಿಸಿದ 24,657 ಕೋಟಿಯ 8 ರೈಲ್ವೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ಒಂದೂ ಇಲ್ಲ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 8 ಬೃಹತ್ ರೈಲ್ವೆ ಯೋಜನೆಗಳಿಗೆ ಅನಮೋದನೆ ನೀಡಲಾಗಿದೆ. ದಕ್ಷಿಣ ಭಾರತಕ್ಕೆ ಕೇವಲ ಯೋಜನೆ ನೀಡಿದ್ದು, ಕರ್ನಾಟಕಕ್ಕೆ ಯಾವುದೇ ಯೋಜನೆ ನೀಡದೇ ಮತ್ತೆ ಕಡೆಗಣಿಸಲಾಗಿದೆ.

ದಕ್ಷಿಣ ಭಾರತದಲ್ಲಿ ಮೈತ್ರಿ ಸರ್ಕಾರ ಇರುವ ಆಂಧ್ರಪ್ರದೇಶ-ತೆಲಂಗಾಣ, ಮಹಾರಾಷ್ಟ್ರ ಮತ್ತು ಬಿಹಾರಕ್ಕೆ ತಲಾ ಒಂದು ರೈಲ್ವೆ ಯೋಜನೆ ನೀಡಿದರೆ, ಕಾಂಗ್ರೆಸ್ ಬೆಂಬಲಿತ ಜಾರ್ಖಂಡ್ ನಲ್ಲಿ ಒಂದು ರೈಲ್ವೆ ಯೋಜನೆ ನೀಡಿದ್ದು, ಕರ್ನಾಟಕ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. 7 ರಾಜ್ಯ 14 ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈಲ್ವೆ ಯೋಜನೆ ಜಾರಿಗೆ ಬರಲಿದೆ.

ಸಚಿವ ಸಂಪುಟ ಸಭೆಯ ನಂತರ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಭವ್ ಈ ವಿಷಯ ತಿಳಿಸಿದ್ದು, 900ಕಿ.ಮೀ. ಹೊಸ  ಹೊಸ ರೈಲ್ವೆ ಯೋಜನೆಗಳಲ್ಲಿ 767 ಕಿ.ಮೀ. ದೂರ ಕಡಿತ ಮಾಡಲಾಗಿದೆ. ಈ ಯೋಜನೆಗಳು ಪೂರ್ಣಗೊಂಡಾಗ 143 ದಶಲಕ್ಷ ಕೆಜಿ ಕಾರ್ಬನ್ ಡೈಯಕ್ಸಿಡ್ ಉತ್ಪಾದನೆ ಆಗಲಿದ್ದು, ಮಾರ್ಗ ಕಡಿತದಿಂದ 767 ಕೋಟಿ ಟನ್ ಕಾರ್ಬನ್ ಡೈಯಾಕ್ಸಿಡ್ ಉತ್ಪನ್ನ ಮಾರಾಟ ಕಡಿಮೆ ಆಗಲಿದೆ. ಇದು 30 ಕೋಟಿ ಮರಗಳಿಗೆ ಸಮಾನ ಎಂದು ತಿಳಿಸಿದರು.

8 ಯೋಜನೆಗಳ ಪೈಕಿ 3 ರೈಲ್ವೆ ಯೋಜನೆಗಳು ಒಡಿಶಾ ಉತ್ತರ ಮತ್ತು ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸಲಿದೆ. 3 ಯೋಜನೆಗಳು ಜಾರ್ಖಂಡ್, ಚಂಡೀಗಢ ಮತ್ತು ಒಡಿಶಾ, ಒಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ, ಜಾರ್ಖಂಡ್ ಮತ್ತು ಬಿಹಾರ ನಡುವೆ ಮತ್ತು ಮಹಾರಾಷ್ಟ್ರಕ್ಕೆ ಒಂದು ಯೋಜನೆ ಸೇರಿವೆ.

ಈ 8 ರೈಲ್ವೆ ಯೋಜನೆಗಳಿಂದ ಪ್ರವಾಸೋದ್ಯಮ, ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಅವಕಾಶಗಳನ್ನು ಗಮನಿಸಿ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಜಲ್ಗಾಂನ್-ಜಲ್ನಾ ನಡುವೆ 174 ಕಿ.ಮೀ. ದೂರದ ಹೊಸ ರೈಲು ಮಾರ್ಗವಾಗಿದ್ದು, ಇದಕ್ಕಾಗಿ 7100 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಿದರು.

ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸುವ ಗುಣಪುರ್-ತರುಬಲೈ ಹೊಸ ಯೋಜನೆ (73 ಕಿ.ಮೀ.), ಜುನಾಘಡ್-ನಾಬರಗಂಗ್ ಪುರ್ ಹೊಸ ಯೋಜನೆ (116 ಕಿ.ಮೀ.), ಮಲ್ಕನ್ ಗಿರಿ ವಯಾ ಭದ್ರಾಚಲಂ- ಪಾಂಡುರಂಗಪುರಂ ಹೊಸ ಮಾರ್ಗ (173 ಕಿ.ಮೀ.). ಆರಂಭಿಸಲಾಗಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *