KAS ಪತ್ನಿ ಚೈತ್ರಾಗೌಡಳೇ “ಆತ್ಮಹತ್ಯೆ” ಮಾಡಿಕೊಂಡ್ಲಾ..?ಅಥವಾ ಆಕೆಯನ್ನು “ಕೊಂದ್ರಾ”..?!

KAS ಪತ್ನಿ ಚೈತ್ರಾಗೌಡಳೇ “ಆತ್ಮಹತ್ಯೆ” ಮಾಡಿಕೊಂಡ್ಲಾ..?ಅಥವಾ ಆಕೆಯನ್ನು “ಕೊಂದ್ರಾ”..?!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಿರಿಯ ಕೆಎಎಸ್‌ ಅಧಿಕಾರಿ ಅವರ ಪತ್ನಿ ಅನುಮಾನಾಸ್ಪದ ವಾಗಿ ಸಾವನ್ನಪ್ಪಿರುವುದು ಸಾಕಷ್ಟು ಕೋಲಾಹಲಕ್ಕೆ ಎಡೆಮಾಡಿಕೊಟ್ಟಿದೆ. ಹಾಲು ಜೇನಿನಂತಿದ್ದ  ಸುಖಸಂಸಾರದಲ್ಲಿ ಏನಾದ್ರೂ ಸಮಸ್ಯೆಗಳಿದ್ದವಾ ಎನ್ನು ಗೊಂದಲ ಕಾಡಲಾರಂಭಿಸಿದೆ.

2016ರ ಬ್ಯಾಚ್‌ ನ KAS ಅಧಿಕಾರಿ ಶಿವಕುಮಾರ್‌ ಅವರ ಧರ್ಮಪತ್ನಿ ಚೈತ್ರಾಗೌಡ ಅವರೇ ತಮ್ಮ 35ನೇ ವಯಸ್ಸಿನಲ್ಲಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ಮಹತ್ಯೆಗೆ ನೈಜ ಕಾರಣವೇನು ಎನ್ನುವುದು ಸಧ್ಯಕ್ಕೆ ತಿಳಿದುಬಂದಿಲ್ಲ.ಆದ್ರೆ ವಯಸ್ಸಲ್ಲದ ವಯಸ್ಸಿನಲ್ಲಿ ಹೀಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟಾಕಿದೆ.

ಶಿವಕುಮಾರ್‌ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದ ಚೈತ್ರಾಗೌಡ ನೋಡಲು ಸುಂದರವಾಗಿದ್ದರು. ಕಾಲೇಜ್‌ ದಿನಗಳಿಂದಲೂ ಅವರನ್ನು ಕಾಲೇಜ್‌ ಬ್ಯೂಟಿ ಎಂದೇ ಕರೆಯಲಾಗುತ್ತಿತ್ತೆನ್ನಲಾಗಿದೆ. ಆಗಿನಿಂದಲೇ ಚೈತ್ರಾ ಮಾಡೆಲಿಂಗ್‌ ಕ್ಷೇತ್ರದ ಬಗ್ಗೆ ಸಾಕಷ್ಟು ಆಸಕ್ತಿ ಮೂಡಿಸಿಕೊಂಡು ಅದರಲ್ಲೇ ಹೆಚ್ಚಿನ ಇನ್ವಾಲ್ವ್‌ ಮೆಂಟ್ ತೋರಿಸುತ್ತಿದ್ದರು ಎನ್ನಲಾಗಿದೆ.ಇದು ಶಿವಕುಮಾರ್‌ ಗೆ ಇಷ್ಟವಿರಲಿಲ್ಲ ಎನ್ನುವ ಮಾತುಗಳಿವೆ,ಇದೇ ಕಾರಣಕ್ಕೆ ಅವರಿಬ್ಬರ ನಡುವೆ ಆಗಾಗ ಸಣ್ಣಪುಟ್ಟ ವಾಗ್ವಾದಗಳು ನಡೆಯುತ್ತಿದ್ದವು ಎನ್ನುವವರಿದ್ದಾರೆ.

ಮಾಡೆಲಿಂಗ್‌ ಜತೆಗೆ ಕ್ರೀಡೆಯಲ್ಲೂ ಒಳ್ಳೆಯ ಆಸಕ್ತಿ ಹೊಂದಿದ್ದ ಚೈತ್ರಾಗೌಡ ತಮ್ಮ ಸಂಜಯ್‌ ನಗರದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಹೊರಬೀಳುತ್ತಿದ್ದಂತೆ ಎರಡು ಕುಟುಂಬಗಳು ಗಾಬರಿಗೊಂಡಿವೆ.ಪತಿಯ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ.ಆದರೆ ಇಲಾಖೆ ವಲಯದಲ್ಲಿ ಸಂಭಾವಿತ ಅಧಿಕಾರಿ ಎನಿಸಿಕೊಂಡಿರುವ ಶಿವಕುಮಾರ್‌ ಮೇಲೆ ಅನುಮಾನ ಮೂಡಿಸಿಕೊಳ್ಳುವಂತ ದ್ದೇನೂ ಆಗಿಲ್ಲ ಎಂದು ಕುಟುಂಬದ ಮೂಲಗಳು ಹೇಳಿವೆ.

ಅದರೂ ಇಂಥಾ ಘಟನೆಗಳು ನಡೆದಾಗ ಸಹಜವಾಗಿ ಅನುಮಾನ ಮೂಡೋದು ಸಹಜ.ಅಲ್ಲದೇ ಮೇಲ್ನೋಟಕ್ಕೆ ಇಬ್ಬರು ಚೆನ್ನಾಗಿದ್ಗರು..ಅವರ ದಾಂಪತ್ಯ ಹಾಲುಜೇನಿನಂತಿತ್ತು.ಅವರಿಬ್ಬರ ನಡುವೆ ಯಾವುದೇ ವ್ಯತ್ಯಾಸಗಳಿರಲಿಲ್ಲ ಎನ್ನುವ ಭಾವನೆ ಮೂಡಬಹುದಾದ್ರೂ ಅದೇ ವಾಸ್ತವಾಗಿರಲು ಸಾಧ್ಯ ವಿಲ್ಲ..ಹಾಗಾಗಿ ಪೊಲೀಸರು ಪ್ರಕರಣವನ್ನು ನಾಲ್ಕೂ ಆಯಾಮಗಳಲ್ಲೂ ಪರಿಶೀಲಿಸಲಾ ರಂಭಿಸಿದ್ದಾರೆ.

ಶಿವಕುಮಾರ್‌ ಮೇಲೆ ಚೈತ್ರಾ ಕುಟುಂಬಸ್ಥರು ಕೂಡ ಅನುಮಾನ ವ್ಯಕ್ತಪಡಿಸಿದ್ದಾರಂತೆ.ಅವರ ನಡುವೆ ಸಂಬಂಧ ಸರಿಯಾಗಿರಲಿಲ್ಲ.ಮಗಳು ಆಗಾಗ ಈ ಬಗ್ಗೆ ದೂರಿದ್ದಳು.ನನ್ನ ಬೆಳವಣಿಗೆ ಬಗ್ಗೆ ಅವರಿಗೆ ಸಮಾಧಾನವಿದ್ದಂತಿಲ್ಲ.ಇದೇ ಕಾರಣಕ್ಕೆ ಆಗಾಗ ಗಲಾಟೆಗಳಾಗುತ್ತಿದ್ದವು ಎಂದೆಲ್ಲಾ ಹೇಳಿದ್ದಳಂತೆ. ಆಗಾಗಿ ಪೊಲೀಸರು ಶಿವಕುಮಾರ್‌ ಮೇಲೆ ದೊಡ್ಡ ಅನುಮಾನದ ಕಣ್ಣನ್ನಿಟ್ಟು ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ.

ಅದೇನೇ ಇರಲಿ, ಜಗತ್ತಿನಲ್ಲಿ ಬಗೆಹರಿಯದೆ ಇರುವ ಯಾವುದೇ ಸಮಸ್ಯೆಗಳು ಇಲ್ಲ.ಇದು ಚೆನ್ನಾಗಿ ಓದಿಕೊಂಡಿದ್ದ ಚೈತ್ರಾಗೂ ಗೊತ್ತಿತ್ತು.ಅದಕ್ಕೆ ಬೇರೆಯದೇ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು.ಆದರೆ ಅದನ್ನು ಬಿಟ್ಟು ಏನಾದ್ರೂ ಆತ್ಮಹತ್ಯೆ ದಾರಿ ಹಿಡಿದುಬಿಟ್ಲಾ ಗೊತ್ತಾಗ್ತಿಲ್ಲ..ಅಥವಾ ಗಂಡ ಶಿವಕುಮಾರ್‌ ಅವರೇ ಏನಾದ್ರೂ ಆಕೆಯನ್ನು ಕೊಂದ್‌ ಬಿಟ್ರಾ..ಸತ್ಯ ಗೊತ್ತಿರೋದು ಇವರಿಬ್ಬರಿಗೆ.ಆದ್ರೆ ಸತ್ಯ ಹೇಳಬೇಕಾದ ಚೈತ್ರಾಗೌಡಳೇ ಈಗ ಇಲ್ಲ..ಗಂಡ ಹೇಳುವ ಹೇಳಿಕೆಯನ್ನೇ ನೆಚ್ಚಿಕೊಂಡು ಕೂರದ ಪೊಲೀಸರು ತಮ್ಮದೇ ಆಂಗಲ್‌ ನಲ್ಲಿ ತನಿಖೆ ನಡೆಸಿ ಸತ್ಯವನ್ನು ಇಂದಲ್ಲ ನಾಳೆ ಬಯಲು ಮಾಡಿಯೇ ತೀರ್ತಾರೆ..ಅಲ್ಲಿಯವರೆಗೂ ಕಾಯಬೇಕು ಅಷ್ಟೆ. 

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *