ತೆರಿಗೆ ಪಾವತಿಯಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಕೊಹ್ಲಿಗಿಂತ ಹೆಚ್ಚು ತೆರಿಗೆ ಪಾವತಿದಾರರಾಗಿದ್ದಾರೆ.
ತೆರಿಗೆ ಪಾವತಿದಾರರ ಬಾಲಿವುಡ್ ಸ್ಟಾರ್ ಗಳ ಪಟ್ಟಿಯಲ್ಲಿ ಶಾರೂಖ್ ಖಾನ್ ಮೊದಲ ಸ್ಥಾನದಲ್ಲಿದ್ದರೆ, ತಮಿಳು ನಟ ವಿಜಯ್ ಎರಡನೇ ಸ್ಥಾನ ಗಳಿಸಿದ್ದಾರೆ.
ಶಾರೂಖ್ ಖಾನ್ ಕಳೆದ ವರ್ಷದಲ್ಲಿ 92 ಕೋಟಿ ರೂ. ತೆರಿಗೆ ಪಾವತಿಸಿದ್ದರೆ, ವಿಜಯ್ 80 ಕೋಟಿ ರೂ. ತೆರಿಗೆ ಪಾವತಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಸಲ್ಮಾನ್ ಖಾನ್ 75 ಕೋಟಿ ತೆರಿಗೆ ಪಾವತಿಸಿ ಮೂರನೇ ಸ್ಥಾನದಲ್ಲಿದ್ದರೆ, ಅಮಿತಾಬ್ ಬಚ್ಚನ್ 71 ಕೋಟಿ ರೂ., ಅಜಯ್ ದೇವಗನ್ 42 ಕೋಟಿ, ರಣಭೀರ್ ಕಪೂರ್ 36 ಕೋಟಿ, ಹೃತಿಕ್ ರೋಷನ್ 28 ಕೋಟಿ ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
ಟಿವಿ ಶೋ ನಡೆಸಿಕೊಡುವ ಕಪಿಲ್ ಶರ್ಮ (24 ಕೋಟಿ), ನಟಿ ಕರಿನಾ ಕಪೂರ್ (20 ಕೋಟಿ), ಶಾಹಿದ್ ಕಪೂರ್ವ(16 ಕೋಟಿ) ಕ್ರಮವಾಗಿ ನಂತರದ ಸ್ಥಾನ ಗಳಿಸಿದ್ದಾರೆ.
ತೆರಿಗೆ ಪಾವತಿ ಮಾಡಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ (66 ಕೋಟಿ) ಮೊದಲ ಸ್ಥಾನದಲ್ಲಿದ್ದರೆ, ಧೋನಿ (38) ಮತ್ತು ಸಚಿನ್ ತೆಂಡೂಲ್ಕರ್ (28) ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿದ್ದರು. ಆದರೆ ಕ್ರೀಡಾಪಟುಗಳನ್ನು ಸಿನಿಮಾ ನಟರು ಹಿಂದಿಕ್ಕಿದ್ದಾರೆ.
ಶಾರೂಖ್ ಕಲೆದ ವರ್ಷ ಮೂರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. ಪಠಾಣ್ ಮತ್ತು ಜವಾನ್ ಸಾವಿರ ಕೋಟಿ ಕ್ಲಬ್ ಸೇರಿತ್ತು.