KSRTC ಕ್ರೆಡಿಟ್ ಸೊಸೈಟಿ ಎಲೆಕ್ಷನ್: ಆಗಸ್ಟ್ 18, “ಜಡ್ಜ್ ಮೆಂಟ್” ಡೇ….

KSRTC ಕ್ರೆಡಿಟ್ ಸೊಸೈಟಿ ಎಲೆಕ್ಷನ್: ಆಗಸ್ಟ್ 18, “ಜಡ್ಜ್ ಮೆಂಟ್” ಡೇ….

ಅನಂತಸುಬ್ಬರಾವ್ ಸಿಂಡಿಕೇಟ್ ಅಧಿಕಾರ ಉಳಿಸಿಕೊಳ್ಳುತ್ತೋ..?ಅದನ್ನು ಕಸಿದುಕೊಂಡು ಸಾರಿಗೆ ಕೂಟ ಪ್ರಭುತ್ವ ಸ್ಥಾಪಿಸಿತ್ತೋ.?

ಬೆಂಗಳೂರು:ಇಡೀ ಸಾರಿಗೆ ಸಿಬ್ಬಂದಿಯ ಚಿತ್ತ ಆಗಸ್ಟ್ 18ರ ಜಡ್ಜ್ ಮೆಂಟ್ ಡೇ ನತ್ತ ನೆಟ್ಟಿದೆ.ಕೆಎಸ್ ಆರ್ ಟಿಸಿ ನೌಕರರ ಕ್ರೆಡಿಟ್ ಸೊಸೈಟಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆಗೆ ದಿನಾಂಕ ನಿಗಧಿಯಾಗಿರುವ ಹಿನ್ನಲೆಯಲ್ಲಿ ಎಲ್ಲರ ಕುತೂಹಲ ಅಂದಿನ ಪ್ರಕ್ರಿಯೆಯತ್ತ ಕೇಂದ್ರೀ ಕೃತವಾಗಿದೆ.ಏಕೆಂದರೆ ಸಾರಿಗೆ ಸಿಬ್ಬಂದಿ ಪಾಲಿಗೆ ಈ ಚುನಾವಣೆ ಅತ್ಯಂತ ನಿರ್ಣಾಯಕವ ಷ್ಟೇ ಅಲ್ಲ ಅವರ ಜೀವನಶೈಲಿಯನ್ನೇ ಬದಲಿಸಬಲ್ಲ ಟರ್ನಿಂಗ್ ಪಾಯಿಂಟ್ ಎಂದೇಳಲಾಗುತ್ತಿದೆ.

“ಸಾರಿಗೆ ಕೂಟ”ದ ಚಂದ್ರಶೇಖರ್,”ಸಮಾನಮನಸ್ಕ ಬಣ”ದ ಅನಂತ ಸುಬ್ಬರಾವ್ ನಡುವೆ ಪೈಪೋಟಿ

“ಅನೇಕ ವರ್ಷಗಳಿಂದ ಸಾರಿಗೆ ಸಮುದಾಯದ ಮೇಲೆ ತಮ್ಮ ಅನುಭವ-ಹಿರಿತನ-ಸಂಘಟನಾಶಕ್ತಿ-ಚತುರತೆಯಿಂದ ಹಿಡಿತ ಸಾಧಿಸಿದ್ದವರು ಅನಂತ ಸುಬ್ಬರಾವ್.ಇದರಲ್ಲಿ ಎರಡು ಮಾತಿಲ್ಲ.ಆದ್ರೆ ಸರ್ಕಾರಿ ನೌಕರ ಮಾನ್ಯತೆ ವಿಚಾರದಲ್ಲಿ ಸಾರಿಗೆ ಸಿಬ್ಬಂದಿ ಪರ ನಿಲ್ಲಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಅವರ ವಿರುದ್ಧ ಅದೇ ಸಾರಿಗೆ ಸಮುದಾಯ ತಿರುಗಿಬಿದ್ದಿದ್ದು ಈಗ ಇತಿಹಾಸ.ಅದು ಅವರು ಮಾಡಿದ ಜಾಗತಿಕ ಪ್ರಮಾದ ಎನ್ನುವ ರೀತಿಯಲ್ಲಿ ಬಿಂಬಿಸಿದ್ದು ವಿಪರ್ಯಾಸ.ವಾಸ್ತವದಲ್ಲಿ ಸರ್ಕಾರಿ ನೌಕರರ ಮಾನ್ಯತೆ ನೀಡಲು ಏಕೆ ಬರುವುದಿಲ್ಲ..ಅದರಿಂದ ಏನೆಲ್ಲಾ ಸಮಸ್ಯೆಆಗುತ್ತಿದೆ ಎಂದು ಸವಿವರವಾಗಿ ಹೇಳಿದ್ದನ್ನು ಬಹುತೇಕ ಮಂದಿ ಒಪ್ಪಿಕೊಳ್ಳಲೇ ಇಲ್ಲ.ಹಾಗಾಗಿ ಇವತ್ತಿಗೆ ಅವರು ಸಾರಿಗೆ ಸಮುದಾಯದಲ್ಲಿ ವಿಲನ್..ಇಂತದ್ದೊಂದು ಪರಿಸ್ಥಿತಿಯ ಲಾಭ ಪಡೆದ ಚಂದ್ರಶೇಖರ್ ಸಾರಿಗೆ ಸಿಬ್ಬಂದಿಗೆ ಅತ್ಯಗತ್ಯವಾಗಿ ಬೇಕಿದ್ದ ತುರ್ತು ನಾಯಕತ್ವ ದೊರಕಿಸಿಕೊಟ್ಟಿದ್ದು ಕೂಡ ಅಷ್ಟೇ ವಾಸ್ತವ.ಇಬ್ಬರು ಮುಖಂಡರ ಉದ್ದೇಶಗಳು ಸಾರಿಗೆ ಸಿಬ್ಬಂದಿ ಕಾಳಜಿಯೇ ಆಗಿದ್ದರೂ ಅವರ ನಡುವೆ ಅಭಿಪ್ರಾಯ ಬೇಧಗಳಿವೆ.ಈ ಚುನಾವಣೆಯಲ್ಲೂ ಕೂಡ ಇವರಿಬ್ಬರ ನಡುವೆಯೇ ಫೈಟ್ ಏರ್ಪಟ್ಟಿದೆ. ಅನಂತ ಸುಬ್ಬರಾವ್ ವರ್ಸಸ್ ಚಂದ್ರಶೇಖರ್ ಎಂದೇ ಬಿಂಬಿತವಾಗುತ್ತಿದೆ.ಒಂದ್ವೇಳೆ ಸಾರಿಗೆ ಕೂಟದ ಅಭ್ಯರ್ಥಿಗಳು ಬಹುಮತ ಸಾಧಿಸಿದ್ದೇ ಆದಲ್ಲಿ ಅದು ಅನಂತಸುಬ್ಬರಾವ್ ಅವರ ಬಣಕ್ಕಷ್ಟೇ ಅಲ್ಲ ಅನಂತಸುಬ್ಬರಾವ್ ಅವರ ಜೇಷ್ಠತೆಗೆ ಆದ ಸೋಲಾಗಬಹುದೆನ್ನಲಾಗ್ತಿದೆ.ಹಾಗಾಗಿ ಇಬ್ಬರಿಗೂ ಫಲಿತಾಂಶ ಅತ್ಯಂತ ಪ್ರತಿಷ್ಟೆಯ ವಿಷಯವಾ್ಗಿದೆ.”

07-07-2024 ರಂದು ನಡೆದ ಚುನಾವಣೆಯಲ್ಲಿ ಉಂಟಾದ ಗೊಂದಲಗಳ ಕಾರಣಕ್ಕೆ ನಿಗಧಿಯಾಗಿ ದ್ದ ದಿನದಂದು ಪಲಿತಾಂಶ ಘೋಷಣೆಯಾಗಿರಲಿಲ್ಲ.ಪ್ರಕರಣದಲ್ಲಿ ಉಂಟಾದ ಗೊಂದಲ-ವ್ಯತ್ಯಗಳನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲನ್ನು ಏರಲಾಗಿತ್ತು.ಈ ನಡುವೆ ಕೆಲವರು ಫಲಿತಾಂಶ ವನ್ನು ಆಗಸ್ಟ್ 10 ರಂದು ಪ್ರಕಟಿಸುವಂತೆ ಮನವಿ ಮಾಡಿದ್ದರು.ಆದರೆ ಕೋರ್ಟ್ ಈಗ ತನ್ನ ನಿಲುವನ್ನು ಪ್ರಕಟಿಸಿದ್ದು 10 ರ ಬದಲು ಆಗಸ್ಟ್ 18 ರಂದು ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದೆ.

ಸೊಸೈಟಿಯ ಫಲಿತಾಂಶ ಏಕೆ ಅಷ್ಟೊಂದು ಮುಖ್ಯ-ಅದರಲ್ಲಿ ಅಂತದ್ದೇನು ಅಡಗಿದೆ ಎನ್ನೋದಕ್ಕೆ ಇಲ್ಲಿದೆ ಉತ್ತರ

ಕೆಎಸ್ ಆರ್ ಟಿಸಿ ಸೊಸೈಟಿ ಎಲೆಕ್ಷನ್ ನ  ಫಲಿತಾಂಶ ನಾನಾ ಕಾರಣಗಳಿಂದ ಮುಖ್ಯ ಎನ್ನಲಾಗ್ತಿದೆ.ನೂರಾರು ಕೋಟಿ ವಹಿವಾಟು ಇರುವ ಸೊಸೈಟಿ ಸಾರಿಗೆ ಸಿಬ್ಬಂದಿಯ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಲೇ ಬಂದಿದೆ.ಸಧ್ಯಕ್ಕೆ ಯಾವುದಾದರೊಂದು ಸಂಘ-ಸೊಸೈಟಿ ಬಲಾಢ್ಯವಾಗಿದೆ ಎಂದ್ರೆ ಅದು  ಈ ಸೊಸೈಟಿ  ಮಾತ್ರ. ಹಾಗಾಗಿನೇ ಇದರ ಮೇಲೆ ಪಾರಮ್ಯ ಸ್ಥಾಪಿಸಲು ಪೈಪೋಟಿ ನಡೆದೇ ಇರುತ್ತದೆ.ಇದರಿಂದ ಯಾರಿಗೆ ಎಷ್ಟರ ಮಟ್ಟಿಗೆ ಲಾಭ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ,ಆದ್ರೆ ಪ್ರತಿಷ್ಟೆಯ ಕಾರಣಕ್ಕಾಗಿಯಾದ್ರೂ ಇದರ ಮೇಲೆ ತಮ್ಮದೇ ಪ್ರಾಬಲ್ಯ ಇರಬೇಕೆಂದು ಸಾರಿಗೆ ಸಂಘಟನೆಗಳು ಬಯಸೋದು  ಸರ್ವೇಸಾಮಾನ್ಯ.ಇದರ ಮೇಲೆ ಹಿಡಿತ ಸಾಧಿಸಿದವರೇ ಸಾರಿಗೆ ನಿಗಮಗಳ  ವಲಯದಲ್ಲಿ ನಿರ್ಣಾಯಕ-ಬಲಾಢ್ಯರೆನ್ನುವ ಭಾವನೆ ಇದೆ.ಹಾಗಾಗಿನೇ ಇದರ ಫಲಿತಾಂಶಕ್ಕಾಗಿ ಅಷ್ಟೊಂದು ದೊಡ್ಡ ಮಟ್ಟದ ಕುತೂಹಲ ಏರ್ಪಟ್ಟಿದೆ.ಸಧ್ಯ ಎಲ್ಲಾ ಮತಪತ್ರಗಳು 24 ಬಾಕ್ಸ್ ಗಳಲ್ಲಿ ಸುರಕ್ಷಿತವಾಗಿದ್ದು ಅದೆಲ್ಲವನ್ನು ಹೈಕೋರ್ಟ್  ತನ್ನ ಖಜಾನೆಯಲ್ಲಿರಿಸಿಕೊಂಡಿದೆ.ಮತಪತ್ರಗಳ ಎಣಿಕೆ ಶೀಘ್ರವಾಗಿ ನಡೆಯಬೇಕೆನ್ನುವುದು ಅನೇಕ ಸಾರಿಗೆ ಸಂಘಟನೆಗಳ ಒತ್ತಾಯ.ಆದರೆ ಮ್ಯಾಟರ್ ಕೋರ್ಟ್ ನಲ್ಲಿರುವುದರಿಂದ ಮತ ಎಣಿಕೆ ಅವಧಿಯನ್ನು ನಿರ್ದರಿಸುವುದು ಅದರ ವಿವೇಚನೆಗೆ ಬಿಟ್ಟ ವಿಚಾರ.ಅದೇನೇ ಆಗಲಿ ಇಷ್ಟು ದಿನ ಕಾತುರದಿಂದ ಕಾಯ್ತಿದ್ದ ಮತ ಎಣಿಕೆಗೆ ಕೊನೆಗೂ ಹೈ ಕೋರ್ಟ್ ಮುಹೂರ್ತವನ್ನು ಫಿಕ್ಸ್ ಮಾಡಿದೆ.ಆಗಸ್ಟ್ 18 ರಂದು ಫಲಿತಾಂಶ ಪ್ರಕಟವಾಗಲಿದೆ

ಘೋಷಣೆಗೂ ಮುನ್ನವೇ ಫಲಿತಾಂಶದ ಬಗ್ಗೆ ಲೆಕ್ಕಾಚಾರ: ಕೆಎಸ್ ಆರ್ ಟಿಸಿ ಸೊಸೈಟಿ ಎಲೆಕ್ಷನ್ ನ ಫಲಿತಾಂಶವಿನ್ನೂ ಪ್ರಕಟವಾಗಿಲ್ಲ.ಅಷ್ಟರಲ್ಲಾಗಲೇ ಯಾರ್ಯಾರು ಗೆದ್ದಿದ್ದಾರೆ ಎನ್ನುವುದನ್ನು ಅವರವರೇ ಘೋಷಿಸಿಕೊಂಡಿದ್ದು ವಿಚಿತ್ರ ಎನಿಸಿತ್ತು.ಸಾರಿಗೆ ಕೂಟದ ಸ್ಪರ್ದಾಳುಗಳೇ ಎಲ್ಲಾ ಸ್ಥಾನಗಳನ್ನು ಗೆದ್ದಿದ್ದಾರೆ.ಸೊಸೈಟಿ ಮೇಲೆ ಪ್ರಭುತ್ವ ಸ್ಥಾಪಿಸಿದ್ದಾರೆನ್ನುವ ರೀತಿಯಲ್ಲಿ ವಿಶ್ಲೇಷಿಸಲಾಗಿತ್ತು.ಈಗಲೂ ಕೂಡ ಅದೇ ನಿಲುವನ್ನು ಅವರು ತಳೆದಿದ್ದಾರೆ.ಗೆಲುವು ನಮ್ಮದೇ ಅನಂತಸುಬ್ಬರಾವ್ ಬೆಂಬಲಿತ ಸಮಾನ ಮನಸ್ಕರ ಸಂಘಟನೆಗಳು ಹೇಳ ಹೆಸರಿಲ್ಲದಂತೆ ಮಣ್ಣು ಮುಕ್ಕಿವೆ ಎಂದೇ ಬಿಂಬಿಸಲಾಗುತ್ತಿದೆ.ಆದರೆ ಅನಂತಸುಬ್ಬರಾವ್ ಬೆಂಬಲಿತ ಸಿಂಡಿಕೇಟ್ ಇದ್ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ.ಫಲಿತಾಂಶ ಪ್ರಕಟವಾಗುವವರೆಗು ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಕೆಎಸ್ ಆರ್ ಟಿಸಿ ಸೊಸೈಟಿಯ ಚುನಾವಣೆಯು ಸಾಕಷ್ಟು ಕುತೂಹಲವನ್ನು ಹಿಡಿದಿಟ್ಟುಕೊಂಡಿತ್ತು.ಈಗ ಅದರ ಫಲಿತಾಂಶ ಮತ್ತಷ್ಟು ಕುತೂಹಲ ಮೂಡಿಸಿದೆ. ಚುನಾವಣೆ ಎನ್ನುವ ಕಾರಣಕ್ಕೆ ಅಲ್ಲ. ಅನಂತ ಸುಬ್ಬರಾವ್ ಮತ್ತು ಸಾರಿಗೆ ಕೂಟದ ಚಂದ್ರಶೇಖರ್ ಅವರ ಪೈಕಿ ಯಾರು ಬಲಾಢ್ಯರು..ಯಾರಿಗೆ ಸಾರಿಗೆ ಸಿಬ್ಬಂದಿಯ ವಲಯದಲ್ಲಿ ಹೆಚ್ಚು ಜನಪ್ರಿಯತೆ ಇದೆ.ಯಾರ ಪರ ಯಾರು ಇದ್ದಾರೆ ಎನ್ನುವುದು ಪ್ರೂವ್ ಆಗಲು ಇದು ಸಹಕಾರಿಯಾಗಲಿದೆ ಎನ್ನುವ ಭಾವನೆ ಸಧ್ಯಕ್ಕಿದೆ.ಈ ಕಾರಣದಿಂದ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *