ಮಿಗ್ 29 ಯುದ್ಧ ವಿಮಾನ ತಾಂತ್ರಿಕ ದೋಷದಿಂದ ರಾಜಸ್ಥಾನ್ ನಲ್ಲಿ ಪತನಗೊಂಡಿದ್ದು, ಪೈಲೆಟ್ ಪಾರಾಗಿದ್ದಾರೆ.
ದೈನಂದಿನ ಚಟುವಟಿಕೆಯಂತೆ ಸೋಮವಾರ ರಾತ್ರಿ ಪರೀಕ್ಷಾರ್ಥ ಹಾರಾಟ ನಡೆಸುವಾಗ ಮಿಗ್ 29 ಪತನಗೊಂಡಿದೆ.
ಬರ್ಮರ್ ಸೆಕ್ಟರ್ ನಲ್ಲಿ ಜನವಸತಿ ಪ್ರದೇಶದಿಂದ ದೂರದಲ್ಲಿ ವಿಮಾನ ಪತನಗೊಂಡಿದ್ದು, ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಪಾಸ್ತಿ ಹಾನಿ ಸಂಭವಿಸಿಲ್ಲ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ಸಂಕೀರ್ಣವಾದ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಆದರೆ ಪೈಲೆಟ್ ಸಮಯ ಪ್ರಜ್ಞೆ ಯಿಂದ ಇಜೆಕ್ಟ್ ಮೂಲಕ ಪಾರಾಗಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವಾಯುಪಡೆ ತಿಳಿಸಿದೆ.