ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ಗೆ ಫೈವ್ ಸ್ಟಾರ್ ಹೊಟೇಲ್ ನ ಎಲ್ಲಾ ವೈಭೋಗ ಗಳನ್ನು ನೆನಪಿಸುವ ರೀತಿಯ ವ್ಯವಸ್ಥೆ ಗಳನ್ನು ಮಾಡಿ ಕೊಟ್ಟಿದ್ದ ಆರೋಪದ ಹಿನ್ನಲೆಯಲ್ಲಿ ಪರಪ್ಪನ ಕೇಂದ್ರ ಕಾರಾಗ್ರಹದ ಆಯಕಟ್ಟಿನ ಹುದ್ದೆಯಲ್ಲಿರುವ ಬಹುತೇಕ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ಬಯಲಿಗೆ ಬಂದ ಬೆನ್ನಲ್ಲೇ ಮುಜುಗರಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆ ಮಾಡಿದ್ದು ಕಾರಾಗೃಹ ಡಿಐಜಿ ಆಗಿದ್ದ ಸೋಮಶೇಖರ್ ಅವರನ್ನು ತಕ್ಷಣದಿಂದ ವರ್ಗಾವಣೆ ಮಾಡಲಾಗಿದೆ.ಅವರ ಸ್ಥಾನಕ್ಕೆ ಮೈಸೂರು ಕಾರಾಗೃಹ ಅಕಾಡೆಮಿಯ ಡಿಐಜಿ ಆಗಿದ್ದ ದಿವ್ಯಶ್ರೀ ಅವರನ್ನು ನೇಮಕ ಮಾಡಲಾಗಿದೆ.
ಜೈಲಿನ ಅವ್ಯವಹಾರ ಬಯಲಾಗ್ತಿದ್ದಂತೆ ಸರ್ಕಾರ ಕಾರಾ ಗೃಹ ಇಲಾಖೆಯ 9 ಅಧಿಕಾರಿಗಳನ್ನ ಅಮಾನತ್ತು ಮಾಡಿತ್ತು. ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ವಿ. ಶೇಷಮೂರ್ತಿ ಅಮಾನತು ಬೆನ್ನಲ್ಲೇ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕರಾಗಿ ಸುರೇಶ್ ಅವರನ್ನು ನೇಮಕ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳ ಹಿನ್ನಲೆಯಲ್ಲಿ ನಡೆದಿರುವ ಆಡಳಿತಯಂತ್ರದ ಮೇಜರ್ ಸರ್ಜರಿ ನಂತರವಾದ್ರೂ ವ್ಯವಸ್ಥೆ ಬದಲಾಗುತ್ತಾ ಕಾದುನೋಡಬೇಕಿದೆ.