shreyanka patil

ಮಹಿಳಾ ಟಿ-20 ವಿಶ್ವಕಪ್ ಗೆ ಭಾರತ ತಂಡದಲ್ಲಿ ಶ್ರೇಯಾಂಕಾ ಪಾಟೀಲ್ ಗೆ ಸ್ಥಾನ!

ಕನ್ನಡತಿ ಶ್ರೇಯಾಂಕಾ ಪಾಟೀಲ್ ವನಿತೆಯರ ಟಿ-20 ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬಿಸಿಸಿಐ ಮಂಗಳವಾರ 15 ಸದಸ್ಯರ ಭಾರತ ವನಿತೆಯರ ತಂಡ ಪ್ರಕಟಿಸಿದ್ದು, ಕಳೆದ ಜುಲೈನಲ್ಲಿ ಫೈನಲ್ ಪ್ರವೇಶಿಸಿದ್ದ ತಂಡದಲ್ಲಿ ಬಹುತೇಕ ಆಟಗಾರ್ತಿಯನ್ನು ಉಳಿಸಿಕೊಳ್ಳಲಾಗಿದೆ.

ಏಷ್ಯಾಕಪ್ ನಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡು ತಂಡದಿಂದ ಹೊರಗೆ ಬಿದ್ದಿದ್ದ ಕರ್ನಾಟಕದ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ತಂಡದಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ. ಆದರೆ ಪ್ರಿಯಾಂಕಾ ಪಾಟೀಲ್ ಅವರ ಫಿಟ್ನೆಸ್ ಪರೀಕ್ಷೆ ನಂತರ ತಂಡದಲ್ಲಿ ಸ್ಥಾನ ಉಳಿಯುವ ಸಾಧ್ಯತೆ ಇದೆ.

ಭಾರತ ತಂಡದ ನಾಯಕಿಯಾಗಿ ಹರ್ಮನ್ ಪ್ರೀತ್ ಸಿಂಗ್ ಮುಂದುವರಿದಿದ್ದರೆ, ಸ್ಮೃತಿ ಮಂದಾನ ಉಪನಾಯಕಿ ಆಗಿದ್ದಾರೆ. ಭಾರತ ತಂಡ ಅಜೇಯವಾಗಿ ಫೈನಲ್ ತಲುಪಿದರೂ ಬಾಂಗ್ಲಾದೇಶ ವಿರುದ್ಧ ಸೋತು ಕೊನೆಯ ಹಂತದಲ್ಲಿ ಪ್ರಶಸ್ತಿ ವಂಚಿತವಾಗಿತ್ತು.

ಅಕ್ಟೋಬರ್ 3ರಿಂದ ಟಿ-20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದ್ದು, 20ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತ ತಂಡ ಎ ಗುಂಪಿನಲ್ಲಿ ಸ್ಥಾನ  ಪಡೆದಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ಜೊತೆ ಸ್ಥಾನ ಪಡೆದಿದೆ.

ವನಿತೆಯರ ಭಾರತ ಟಿ-20 ತಂಡ:

ಹರ್ಮನ್ ಪ್ರೀತ್ ಸಿಂಗ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಯಸ್ತಿಕಾ ಭಾಟಿಯಾ, ಶಫಾಲಿ ಶರ್ಮ, ದೀಪ್ತಿ ಶರ್ಮ, ಜೆಮಿಹಾ ರೋಡ್ರಿಗಜ್, ರಿಚಾ ಘೋಷ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಡಿ.ಹೇಮಲತಾ, ಆಶಾ ಶೋಭನಾ, ರಾಧಾ ಯಾಧವ್, ಶ್ರೇಯಾಂಕಾ ಪಾಟೀಲ್, ಸಂಜೀವನ್ ಸಾಜನಾ,

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *