ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು 17 ಮಂದಿ ಸಹಚರರಿಗೆ ಸಂಬಂಧಿಸಿದ 30 ಆಡಿಯೊ- ವೀಡಿಯೊ ಸಾಕ್ಷ್ಯಗಳನ್ನು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದಕ್ಕೆ ಪೂರಕವಾಗಿ ಸಾಕ್ಷಿಗಳನ್ನು ಮಂಡಿಸಿದೆ.
ಚಾರ್ಜ್ ಹೀಟ್ ನಲ್ಲಿ ಉಲ್ಲೇಖಿಸಿರುವ 30 ಆಡಿಯೋ ವಿಡಿಯೋ ಸಾಕ್ಷ್ಯಗಳ ವಿವರ ಇಲ್ಲಿದೆ.
- ಆರೋಪಿಗಳು ಟ್ರೆಂಡ್ಸ್ ಶೋನಲ್ಲಿ ಬಟ್ಟೆ ಖರೀದಿಸಿದ ಸಿಸಿಟಿವಿ ಫೂಟೇಜ್
- ಶವ ಬಿಸಾಡಿದ ಸ್ಥಳದಲ್ಲಿ ಸತ್ವ ಅಪಾರ್ಟ್ಮೆಂಟ್ ನ ಸಿಸಿಟಿವಿ ದೃಶ್ಯ
- ತುಮಕೂರಿನ ದುರ್ಗಾ ಬಾರ್ನಲ್ಲಿ ಎಣ್ಣೆ ಖರೀದಿಸಿದ ಸಿಸಿಟಿವಿ
- ಚಿತ್ರದುರ್ಗದಿಂದ ಬೆಂಗಳೂರು ಟೋಲ್ ಗಳ ಸಿಸಿಟಿವಿ ಫೂಟೇಜ್.
- ಚಿತ್ರದುರ್ಗದ ಬಾಲಾಜಿ ಬಾರ್ನ ಸಿಸಿಟಿವಿ ವಿಡಿಯೋ.
ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ನ ಸಿಸಿಟಿವಿ. - ಆರೋಪಿಗಳು ಶರಣಾಗತಿಗೆ ಬಂದ ವೇಳೆ ಸಿಸಿಟಿವಿ.
- ರೇಣುಕಾಸ್ವಾಮಿ ಫೋಟೋ ಇರುವ ಪೆನ್ ಡ್ರೈವ್.
- ಎ1 ಪವಿತ್ರಾ ಗೌಡ & ದರ್ಶನ್ಗೆ ಸಂಬಂಧಿಸಿದ ಫೋಟೋ.
- ಇತರೆ 15 ಜನ ಆರೋಪಿಗಳಿಗೆ ಸಂಬಂಧಿಸಿದ ಫೋಟೋಗಳು.
- ಸಾಕ್ಷಿದಾರರ ಫೋಟೋಗಳು ಕೂಡ ರಿಟ್ರೀವ್ನಲ್ಲಿ ಪತ್ತೆ.
ದರ್ಶನ್ ಮನೆಯ ಡಿವಿಆರ್. - ಸ್ಟೋನಿ ಬ್ರೂಕ್ ರೆಸ್ಟೋರೆಂಟ್ & ಪಟ್ಟಣಗೆರೆ ಶೆಡ್ನ ಸಿಸಿಟಿವಿ.
- ಆರೋಪಿಗಳ ವಾಹನಗಳು ಮಾತೇಶ್ವರಿ ಸ್ಟೋರ್ ಬಳಿಯ ಸಿಸಿಟಿವಿ.
- ಮಾರಮ್ಮ ಟೆಂಪಲ್ ಬಳಿಯ ಸಿಸಿಟಿವಿ ವಿಡಿಯೋ.
- ಪವಿತ್ರಾ ಗೌಡ ಮನೆಯ ಸಿಸಿಟಿವಿ ಫೂಟೇಜ್.
- ಬಾಡಿ ಬಿಸಾಡಲು ಹೋದ ವೇಳೆ ಸೆರೆಸಿಕ್ಕ ಸಿಸಿಟಿವಿ ವಿಡಿಯೋ.
- ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಸಿಸಿಟಿವಿ.