ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೊನೆಯ ಕ್ಷಣದ 2 ಫೋಟೊ ಬಹಿರಂಗವಾಗಿದ್ದು, ವೈರಲ್ ಆಗಿದೆ.
ಬೆಂಗಳೂರಿನ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಕೊನೆ ಕ್ಷಣದ ಫೋಟೋಗಳು ಬಿಡುಗಡೆ ಆಗಿದ್ದು, ಒಂದರಲ್ಲಿ ಲಾರಿ ಮುಂದೆ ಅರೆಬೆತ್ತಲೆಯಾಗಿ ನಿಂತು ಬೇಡಿಕೊಳ್ಳುತ್ತಿರೋ ರೇಣುಕಾಸ್ವಾಮಿ ಇದೆ.
ಮತ್ತೊಂದು ಫೋಟೋದಲ್ಲಿ ಲಾರಿಯೊಂದರ ಮುಂದೆ ರೇಣುಕಾಸ್ವಾಮಿ ಅಗಾಂತವಾಗಿ ಕೆಳಗೆ ಬಿದ್ದಿರುವುದು ಆಗಿದೆ.
ನಟ ದರ್ಶನ್ ಆಂಡ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಎರಡು ಫೋಟೊಗಳು ಮಾಧ್ಯಮದ ಕೈಗೆ ಸಿಕ್ಕಿವೆ.
ಚಾರ್ಜ್ ಶೀಟ್ ಸಲ್ಲಿಸಿರುವ ಪೊಲೀಸರು ಪ್ರಕರಣದ ತ್ವರಿತ ವಿಚಾರಣೆಗೆ ಯೋಜನೆ ರೂಪಿಸಿದ್ದು, ಪ್ರತ್ಯೇಕ ಕೋರ್ಟ್ ಗೆ ಮನವಿ ಮಾಡುವ ಸಾಧ್ಯತೆ ಇದೆ.
ಸ್ಪೆಷಲ್ ಕೋರ್ಟ್ ಅಥವಾ ಪಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆಗೆ ಪೊಲೀಸರ ಪ್ರಯತ್ನ ಮಾಡಲಿದ್ದಾರೆ.
ಪೊಲೀಸ್ ಕಮೀಷನರ್ ಬಿ. ದಯಾನಂದ್ ಅವರಿಂದ ಇಂದು ಪ್ರತ್ಯೇಕ ನ್ಯಾಯಲದಿಂದ ವಿಚಾರಣೆ ನಡೆಸಿ ಆರೋಪಿಗಳಿಗೆ ಶೀಘ್ರ ಶಿಕ್ಷೆ ನಿಡುವ ಬಗ್ಗೆ ಚರ್ಚೆ ನಡೆಸಿದ್ದಾರೆ