ಅನಿಲ್ ಅಂಬಾನಿಗೆ 5 ವರ್ಷ ನಿಷೇಧ ವಿಧಿಸಿದ ಸೆಬಿ!

ಅನಿಲ್ ಅಂಬಾನಿಗೆ 5 ವರ್ಷ ನಿಷೇಧ ವಿಧಿಸಿದ ಸೆಬಿ!

ಉದ್ಯಮದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉದ್ಯಮಿ ಅನಿಲ್ ಅಂಬಾನಿ ಸೇರಿ 24 ಮಂದಿಯನ್ನು ಸೆಬಿ 5 ವರ್ಷ ನಿಷೇಧಿಸಿದೆ.

ರಿಲಾಯನ್ಸ್ ಹೋಂ ಫೈನಾನ್ಸ್ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ ಕಾರಣ ಅನಿಲ್ ಅಂಬಾನಿ ಹಾಗೂ ಇತರೆ 24 ಮಂದಿಯನ್ನು ವಹಿವಾಟಿನಿಂದ 5 ವರ್ಷ ನಿಷೇಧಿಸಲಾಗಿದೆ.

ಅನಿಲ್ ಅಂಬಾನಿಗೆ 25 ಕೋಟಿ ರೂ. ದಂಡ ವಿಧಿಸಿರುವ ಸೆಬಿ, ರಿಲಾಯನ್ಸ್ ಹೋಂ ಫೈನಾನ್ಸ್ ಕಂಪನಿ ಗೆ 6 ತಿಂಗಳ ನಿಷೇಧ ಹಾಗೂ 6 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸುದೀರ್ಘ ವಿಚಾರಣೆ ನಂತರ ಸೆಬಿ 224 ಪುಟಗಳ ತೀರ್ಪು ಪ್ರಕಟಿಸಿದ್ದು, ಅಕ್ರಮವಾಗಿ ಹಣ ವರ್ಗಾವಣೆ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದೆ. ಕಾರ್ಪೊರೇಟ್ ಕಂಪನಿಗಳಿಗೆ ಬೇಕಾಬಿಟ್ಟಿ ಸಾಲ ನೀಡಲು ಅನುಸರಿಸುತ್ತಿರುವ ಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *