shikhar dhavan
shikhar dhavan

ಶಿಖರ್ ಧವನ್ ಕ್ರಿಕೆಟ್ ನಿಂದ ನಿವೃತ್ತಿ

ಭಾರತ ಕ್ರಿಕೆಟ್ ತಂಡದಲ್ಲಿ ಗಬ್ಬರ್ ಎಂದೇ ಖ್ಯಾತಿ ಪಡೆದಿದ್ದ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವೀಡಿಯೊ ಪೋಸ್ಟ್ ಮಾಡಿರುವ ಶಿಖರ್ ಧವನ್ ವೃತ್ತಿಪರ ಕ್ರಿಕೆಟ್ ಗೆ ತೆರೆ ಎಳೆದಿದ್ದಾರೆ.

2022ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಏಕದಿನ ಪಂದ್ಯ ಆಡಿದ ನಂತರ ಶಿಖರ್ ಧವನ್ ಭಾರತ ತಂಡದಲ್ಲಿ ಸ್ಥಾನ ಗಳಿಸಲು ವಿಫಲರಾಗಿದ್ದರು. ಆರಂಭಿಕ ಸ್ಥಾನಕ್ಕೆ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಯುವ ಆಟಗಾರರಿಗೆ ಬಿಸಿಸಿಐ ಮಣೆ ಹಾಕಿದ್ದರಿಂದ ಧವನ್ ಅವರನ್ನು ಕಡೆಗಣಿಸಲಾಗಿತ್ತು.

ಕ್ರಿಕೆಟ್ ಜೀವನದ ಕುರಿತು ನಾನು ಈಗ ನಿಂತಿರುವ ಜಾಗದಿಂದ ಹಿಂತಿರುಗಿ ನೋಡಿದರೆ ಕೇವಲ ನೆನಪುಗಳು ಮತ್ತು ಮುಂದಿನ ಜೀವನ ಮಾತ್ರ ಕಾಣಿಸುತ್ತಿವೆ. ಭಾರತದ ಪರ ಕ್ರಿಕೆಟ್ ಆಡುವುದು ನನ್ನ ಕನಸಾಗಿತ್ತು. ಆ ಕನಸಲ್ಲಿ ಜೀವಿಸಿ ಬಂದಿರುವು ತೃಪ್ತಿ ಇದೆ ಎಂದು ಅವರು ಹೇಳಿದ್ದಾರೆ.

ನನಗೆ ಬೆಂಬಲವಾಗಿ ನಿಂತ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ಗಳು, ನನ್ನ ಸಹಪಾಠಿಗಳು ಸೇರಿದಂತೆ ಹೊಸ ಕುಟುಂಬವನ್ನೇ ನಾನು ಪಡೆದಿದ್ದೆ. ಇವರಿಗೆಲ್ಲಾ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಜೀವನದಲ್ಲಿ ಹೊಸ ಪುಟ ತೆರೆಯುವ ಸಮಯ ಬಂದಿದೆ. ನಾನು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದೇನೆ. ತಂಡದಲ್ಲಿ ಜಾಗ ಸಿಗುತ್ತಿಲ್ಲ ಎಂಬ ನೋವಿಗಿಂತ ಬೇರೆಯವರಿಗೆ ಅವಕಾಶ ಸಿಗುತ್ತಿದೆ ಎಂಬ ಖುಷಿಯಿಂದ ಈ ನಿರ್ಧಾರ ಪ್ರಕಟಿಸುತ್ತಿದ್ದೇನೆ ಎಂದು ಧವನ್ ಹೇಳಿಕೊಂಡಿದ್ದಾರೆ.

ಶಿಖರ್ ಧವನ್ 34 ಟೆಸ್ಟ್, 167 ಏಕದಿನ, 68 ಟಿ-20 ಪಂದ್ಯಗಳಲ್ಲಿ ಆಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಧವನ್ 17 ಶತಕ ಹಾಗೂ 34 ಅರ್ಧಶತಕ ಸೇರಿದಂತೆ 44.11ರ ಸರಾಸರಿಯಲ್ಲಿ 6793 ರನ್ ಗಳಿಸಿದ್ದರೆ, ಟೆಸ್ಟ್ ನಲ್ಲಿ 7 ಶತಕ ಸೇರಿದಂತೆ 40.61ರ ಸರಾಸರಿಯಲ್ಲಿ 2315 ರನ್ ಬಾರಿಸಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *