“ಸಾರಿಗೆ ಕೂಟ” ಸೊಸೈಟಿ ಎಲೆಕ್ಷನ್‌  ಗೆದ್ದಾಯ್ತು, ಮುಂದೇನು..? ಉಳಿದ “ಸಂಘಟನೆ”ಗಳ ಕಥೆ ಮುಗಿದಂಗಾ..?!

“ಸಾರಿಗೆ ಕೂಟ” ಸೊಸೈಟಿ ಎಲೆಕ್ಷನ್‌ ಗೆದ್ದಾಯ್ತು, ಮುಂದೇನು..? ಉಳಿದ “ಸಂಘಟನೆ”ಗಳ ಕಥೆ ಮುಗಿದಂಗಾ..?!

ಬೆಂಗಳೂರು: ನಿರೀಕ್ಷೆಯಂತೆಯೇ ಚಂದ್ರಶೇಖರ್‌ ನೇತೃತ್ವದ ರಾಜ್ಯ ಸಾರಿಗೆ ಕೂಟ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಎಲೆಕ್ಷನ್‌ ನಲ್ಲಿ 19ರ ಪೈಕಿ 18 ಸ್ಥಾನಗಳನ್ನು ಗೆದ್ದು ಪಾರಮ್ಯ ಮೆರೆದಿದ್ದಾಗಿದೆ. ಒಂದು ಸಂಘಟನೆ ಬೆಳವಣಿಗೆ ದೃಷ್ಟಿಯಿಂದ ಇಂಥಾ ಗೆಲುವುಗಳು ಆನೆಬಲವನ್ನೇ ನೀಡುತ್ತವೆ. ಹಾಗಾಗಿ ಕೂಟ ಯಾವೊಂದು ಗೆಲುವನ್ನು ಬಯಸುತ್ತಿತ್ತೋ ಆ ಒಂದು ಗೆಲುವನ್ನು ಸಾರಿಗೆ ಸಿಬ್ಬಂದಿ ತಂದುಕೊಟ್ಟಿದ್ದಾರೆ.ಕೂಟ, ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ತನ್ನ ಕೆಪಾಸಿಟಿ ಏನನ್ನುವುದನ್ನು ಪ್ರೂವ್‌ ಮಾಡಿರೋದ್ರಿಂದ ಆಡಳಿತ ಮಂಡಳಿ ಕೂಡ ಕೂಟವನ್ನು ಗಂಭೀರವಾಗಿ ಪರಿಗಣಿಸದೆ ವಿಧಿಯಿಲ್ಲ..

ಚಂದ್ರಶೇಖರ್‌ ಅವರ ನೇತೃತ್ವದ ಸಾರಿಗೆ ಕೂಟದ ಸಿಂಡಿಕೇಟ್‌ 19 ಸ್ಥಾನಗಳಲ್ಲಿ 18ನ್ನು ಗೆದ್ದು ಬೀಗಿರುವುದು ಸಾಮಾನ್ಯವಾದ ಮಾತಲ್ಲ..ಕ್ರೆಡಿಟ್‌ ಸೊಸೈಟಿ ಇತಿಹಾಸದಲ್ಲಿ ಇಂತದೊಂದು ಪ್ರಚಂಡ ಗೆಲುವು ಯಾರೊಬ್ಬರಿಗೂ ದಕ್ಕಿರಲಿಲ್ಲವೇನೋ..ಅಂತದ್ದೊಂದು ಗೆಲುವನ್ನು ದಾಖಲಿಸಿರುವ ಸಾರಿಗೆ ಕೂಟ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ತನ್ನನ್ನು ಲಘುವಾಗಿ ಪರಿಗಣಿಸಿದರೆ ಹುಷಾರ್..? ಎನ್ನುವ ಸಂದೇಶವೊಂದನ್ನು ಸಾರಿರುವುದಂತೂ ಸತ್ಯ. ತನ್ನ ವಿರೋಧಿಗಳಿಗೂ ಕೂಡ ತನ್ನನ್ನು ಹಗುರವಾಗಿ ತೆಗೆದುಕೊಂಡ್ರೆ ಏನಾಗಬಹುದೆನ್ನುವ ಎಚ್ಚರಿಕೆ ಸಂದೇಶವನ್ನು ರವಾನಿಸಿದಂತಿದೆ.

ಕ್ರೆಡಿಟ್‌ ಸೊಸೈಟಿ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲೇ ಅತೀ ದೊಡ್ಡ ಸಂಘವಾಗಿರುವುದರಿಂದ ಇದರ ಮೇಲೆ ಪ್ರಭುತ್ವ ಸಾಧಿಸಿರುವುದು ಅತೀ ದೊಡ್ಡ ಪ್ಲಸ್‌ ಪಾಯಿಂಟ್.‌ ಕೂಟದವರೇನು ಮಾಡ್ತಾರೆ..ಅವರಿಂದೇನು ಸಾಧ್ಯ.. ಅವರಿಗೆ ಸಾರಿಗೆ ಸಿಬ್ಬಂದಿಯ ಬೆಂಬಲವೇ ಇಲ್ಲ..ಚಂದ್ರಶೇಖರ್‌ ಅವನೊಬ್ಬ ಮಹಾನ್‌ ಯಡಬಿಡಂಗಿ ಎಂದೆಲ್ಲಾ ಕಿಚಾಯಿಸಿಕೊಂಡು ಮಾತನಾಡುತ್ತಿದ್ದವರಿಗೆ ಕೂಟದ ಗೆಲುವು ಸರಿಯಾದ ಪಾಠ ಎನ್ನಲಾಗುತ್ತಿದೆ. ಯಾರನ್ನೂ ಹಗುರವಾಗಿ ಪರಿಗಣಿಸಬಾರದು..ಪ್ರತಿಯೊಬ್ಬನಿಗೂ ಅವನದೇ ಆದ ಕೆಪಾಸಿಟಿ ಇರುತ್ತದೆ ಎನ್ನುವ ಗಾದೆ ಮಾತಿನಂತೆ ಸಾರಿಗೆ ಕೂಟ ಹಾಗೂ ಅದರ ಸದಸ್ಯರ ಗೆಲುವು ಪ್ರೂವ್‌ ಮಾಡಿದೆ.

ಸಾರಿಗೆ ಕೂಟದ ಪ್ರಚಂಡ ಗೆಲವು ಭವಿಷ್ಯದಲ್ಲಿ ಅತೀ ದೊಡ್ಡ ಸಂಘಟನಾತ್ಮಕ ಶಕ್ತಿ ಹಾಗೂ ಬೆಂಬಲ ದೊರಕಿ ಸಿಕೊಡಲಿದೆ ಎಂದೇ ಹೇಳಲಾಗುತ್ತಿದೆ.ಅತೀ ಕಡಿಮೆ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಸಂಘಟನೆ ಎನ್ನುವ ಹೆಗ್ಗಳಿಕೆ ಪಡೆಯಲಿದೆ ಎನ್ನಲಾಗುತ್ತಿದೆ.ಸಾರಿಗೆ ಸಿಬ್ಬಂದಿಗೆ ರಾಜ್ಯಾದ್ಯಂತ ಆಗುತ್ತಿರುವ ಸಾಕಷ್ಟು ದೌರ್ಜನ್ಯ-ಕಿರುಕುಳವನ್ನು ತಡೆಗಟ್ಟುವ ಶಕ್ತಿ ದೊರಕಿಸಿಕೊಡಲಿದೆ ಎನ್ನಲಾಗುತ್ತಿದೆ.ಎಲ್ಲಕ್ಕಿಂತ ಹೆಚ್ಚಾಗಿ ಸಾರಿಗೆ ಸಿಬ್ಬಂದಿ ಎಂತದೊಂದು ಬ್ಯಾಕಪ್‌ ಇವತ್ತು ಬೇಕಿತ್ತೆಂದು ಅಪೇಕ್ಷಿಸುತ್ತಿತ್ತೋ ಅದನ್ನು ನೀಡುವಲ್ಲಿ ಯಶಸ್ವಿಯಾಗಲಿದೆ ಎಂದೆಲ್ಲಾ ಹೇಳಲಾಗುತ್ತಿದೆ.

ಸಾರಿಗೆ ಕೂಟ ಬೆಳೆದಾಕ್ಷಣ ಉಳಿದಿರುವ ಸಂಘಟನೆಗಳ ಅಸ್ಥಿತ್ವದ ಪಾಡೇನು..? ಅವು ನಾಶದ ಹಂತಕ್ಕೆ ತಲುಪಿಬಿಡ್ತವಾ ..? ಅವುಗಳು ಸಾರಿಗೆ ಸಿಬ್ಬಂದಿಯ ಒಲವನ್ನು ಕಳೆದುಕೊಂಡುಬಿಡ್ತವಾ..? ಅಲ್ಲಿರೋರೆಲ್ಲಾ ಸಾರಿಗೆ ಕೂಟಕ್ಕೆ ಸೇರ್ಪಡೆಗೊಂಡುಬಿಡ್ತಾರಾ..? ಕೂಟ ಸಾರಿಗೆ ಸಂಘಟನೆಗಳಲ್ಲೆಲ್ಲಾ ಮುಂಚೂಣಿಯ ಸಂಘಟನೆಯಾಗಿ ಗುರುತಿಸಿಕೊಂಡು ಬಿಡ್ತದಾ..? ಈ ರೀತಿಯ ಪ್ರಶ್ನೆಗಳು ಕೂಡ ಸಾರಿಗೆ ವಲಯದಲ್ಲಿ ಕಾಡುತ್ತಿದೆ..ಆದರೆ ಈ ರೀತಿಯಲ್ಲೇ ಆಗುತ್ತೆ ಎಂದು ಅಂದಾಜಿಸುವುದು ಸಧ್ಯದ ಮಟ್ಟಿಗೆ ಬಾಲಿಶವೆನಿಸಬಹುದು.ಏಕೆಂದರೆ ಆಯಾ ಸಂಘಟನೆಗಳಿಗೆ ಅದರದೇ ಆದ ನೆಲೆ-ಅಸ್ಥಿತ್ವ-ಜನಪರತೆ ಇದ್ದೇ ಇರುತ್ತೆ.ಹಾಗಾಗಿ ಈ ಒಂದು ಗೆಲುವಿನಿಂದ ಕೂಟದ ಕೈ ಮೇಲಾಗಿ ಉಳಿದವರು ಮೂಲೆಗುಂಪಾಗುತ್ತಾರೆ ಎಂದು ಹೇಳೊಕ್ಕೆ ಆಗೋದಿಲ್ಲ.

ಇನ್ನು  ಸಾರಿಗೆ ಕೂಟದ ಅಧ್ಯಕ್ಷ ಚಂದ್ರಶೇಖರ್‌ ಅಲಿಯಾಸ್‌ ಚಂದ್ರುಗೊಂದು ಕಿವಿ ಮಾತು. ಸಾರಿಗೆ ಸಿಬ್ಬಂದಿ ನೀಡಿರುವ ಈ ಪ್ರಚಂಡ ಗೆಲುವನ್ನು ಸಂಭ್ರಮಿಸುವ ಭರಾಟೆಯಲ್ಲಿ,ಆತುರದಲ್ಲಿ ಜವಾಬ್ದಾರಿ ಮರೆತರೆ ಕಷ್ಟ.ಸಾರಿಗೆ ಸಿಬ್ಬಂದಿ ಕೊಟ್ಟಿರುವ ಗೆಲುವಿಗೆ ನೀವು ಶೇಕಡಾ 100 ರಷ್ಟು ಭಾಜನ-ಅರ್ಹ.ಹಾಗಂತ ಸಾರಿಗೆ ಸಿಬ್ಬಂದಿ ಹಿತಾಸಕ್ತಿ ಮರೆತು ಆಡಳಿತ ವ್ಯವಸ್ಥೆ ಜತೆಗೆ ಬೆರೆತು ಹೋದರೆ ಸಿಡಿದೇಳುವ ಸಾರಿಗೆ ಸಿಬ್ಬಂದಿ ನಿಮ್ಮನ್ನು ಯಾವ ಹಂತಕ್ಕೂ ಬೇಕಾದ್ರೂ ಕೊಂಡೊಯ್ಯಬಹುದು..ಆ ಒಂದು ವಿವೇಚನೆ ಇಟ್ಟುಕೊಂಡು ಕೂಟವನ್ನು ಮುನ್ನಡೆಸುವುದು ಸೂಕ್ತವಾದೀತೇನು..?

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *