malyalam actress

ನಟಿಯರ ಮೇಲೆ ಲೈಂಗಿಕ ದೌರ್ಜನ್ಯದ 17 ಪ್ರಕರಣ ದಾಖಲು: ಮಲಯಾಳಂ ಚಿತ್ರರಂಗ ತತ್ತರ

ನಟಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಮೀಟೂ ಪ್ರಕರಣದಿಂದ ಮಲಯಾಳಂ ಚಿತ್ರರಂಗ ತತ್ತರಿಸಿದ್ದು, 17 ಪ್ರಕರಣಗಳ ತನಿಖೆ ನಡೆಯಲಿದ್ದು, ಸ್ಟಾರ್ ನಟರಿಂದ ಹಿಡಿದು ನಿರ್ಮಾಪಕ ಮತ್ತು ನಿರ್ದೇಶಕರು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

ಮೀಟೂ ಪ್ರಕರಣ ಸಂಚಲ ಮೂಡಿಸುತ್ತಿದ್ದಂತೆ ಮಲಯಾಳಂ ಸಿನಿಮಾ ಕಲಾವಿದರ ಸಂಘದ ಆಡಳಿತ ಮಂಡಳಿಯನ್ನು ವಿಸರ್ಜಿಸಲಾಗಿದ್ದು, ಸ್ಟಾರ್ ನಟ ಮೋಹನ್ ಲಾಲ್ ಸೇರಿದಂತೆ 17 ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.

ಸೋನಿಯಾ ಮಲ್ಹಾರ್ ಎಂಬ ನಟಿ ಇತ್ತೀಚೆಗೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದು, 2013ರಲ್ಲಿ ಚಿತ್ರೀಕರಣದ ವೇಳೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಗಂಭೀರ ಆರೋಪ ಮಾಡಿದ್ದರು. ದೂರು ಆಧರಿಸಿ ಕೇರಳದ ಸರ್ಕಾರ ವಿಶೇಷ ತನಿಖೆಗೆ ತಂಡ ರಚಿಸಿತ್ತು.

ಇದಕ್ಕೂ ಮುನ್ನ ನಟಿ ಮಿನು ಮುನೀರ್ ಇದಕ್ಕೂ ಮುನ್ನ ದೂರು ನೀಡಿದ್ದು, ಎಂ. ಮುಖೇಶ್, ಜಯಸೂರ್ಯ, ಮುನಿಯಪ್ಪಿಲ್ಲಾ ರಾಜು ಮತ್ತು ಇಡವೆಲ್ಲಾ ಬಾಬು ಸಿನಿಮಾ ಶೂಟಿಂಗ್ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಇದೀಗ ಬೆದರಿಕೆ ಮೆಸೇಜ್ ಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *