ರಷ್ಯಾದಿಂದ 2 ಕ್ಷಿಪಣಿ ದಾಳಿ: ಉಕ್ರೇನ್ ನಲ್ಲಿ 41 ಮಂದಿ ಸಾವು

ರಷ್ಯಾದಿಂದ 2 ಕ್ಷಿಪಣಿ ದಾಳಿ: ಉಕ್ರೇನ್ ನಲ್ಲಿ 41 ಮಂದಿ ಸಾವು

ರಷ್ಯಾ ಸೇನೆ ನಡೆಸಿದ 2 ಕ್ಷಿಪಣಿ ದಾಳಿಯಲ್ಲಿ ಉಕ್ರೇನ್ ನ 41 ಮಂದಿ ನಾಗರಿಕರು ಅಸುನೀಗಿದ್ದು, 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಕಿ, ರಷ್ಯಾ ಸೇನೆ ಪುಲ್ಟೊವಾದಲ್ಲಿರುವ ಸೇನಾ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದರಿಂದ ಕನಿಷ್ಠ 41 ಮಂದಿ ಮೃತಪಟ್ಡಿದ್ದು, ಹಲವಾರು ಮಂದಿ ಆವಶೇಷಗಳಡಿ ಸಿಲುಕಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪುಲ್ಟೊವಾದ ಒಂದು ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ನಡೆಸಲಾಗಿದೆ. ಇದರಿಂದ ಒಂದು ಕಟ್ಟಡ ಸಂಪೂರ್ಣ ಧ್ವಂಸಗೊಂಡಿದೆ ಎಂದು ಉಕ್ರೇನ್ ಸೇನೆ ಆರೋಪಿಸಿದೆ.

ಝೆಲೆನ್ಕಿ ಎಕ್ಸ್ ನಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದು, ರಷ್ಯಾ ಪ್ರಮುಖ ಸಂಪರ್ಕ ಕಟ್ಟಡದ ಮೇಲೆ ದಾಳಿ ನಡೆಸಿದೆ. ಪ್ರಾಥಮಿಕ ವರದಿಗಳ ಪ್ರಕಾರ 41 ಮಂದಿ ಮೃತಪಟ್ಡಿದ್ದು, 180 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಹಲವಾರು ಮಂದಿ ಕಟ್ಟಡಗಳ ಆವಶೇಷಗಳಡಿ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *