ಬೆಂಗಳೂರು: ಲೋಕಸಭಾ ಚುನಾವಣೆ ಮತದಾನಕ್ಕೆ ಇನ್ನೂ ಕೆಲ ಗಂಟೆಗಳಷ್ಟೇ  ಬಾಕಿ ಇದೆ,ನಾಳೆ ಇಷ್ಟೊತ್ತಿಗಾಗ್ಲೇ ಮತದಾನ ಪ್ರಕ್ರಿಯೆ ಮುಗಿದು ಮತದಾರರ ತೀರ್ಪು ಇವಿಎಂ ಮೆಷಿನ್‌ ನಲ್ಲಿ ಭದ್ರವಾಗಿರಲಿದೆ.ಇನ್ನು ನಾಳೆ 3 ಲೋಕಸಭಾ ಕ್ಷೇತ್ರಗಳಿಗೆ ಹೇಗೆ ಮತದಾನದ  ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುವುದರ ಬುಲೆಟ್‌ ಪಾಯಿಂಟ್ಸ್‌ ಇಲ್ಲಿದೆ

ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ..

ಬೆಂಗಳೂರು ನಗರ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ..

ಕೊನೆ ಕ್ಷಣದ ಸಿದ್ದತೆ ಈಗಾಗಲೇ ಮಾಡಲಾಗಿದ್ದು.ಮತದಾನದ ಪ್ರಕ್ರೀಯೆಗೆ ಅಯೋಗ ಸರ್ವ ಸನ್ನದ್ದವಾಗಿದೆ…

ನಗರದ ೨೮ ವಿಧಾನಸಭಾ ಕ್ಷೇತ್ರದಲ್ಲಿ ಮಸ್ಟರಿಂಗ್ ಕೇಂದ್ರ ತೆರೆಯಲಾಗಿದೆ..

ಬಿಬಿಎಂಪಿ ವ್ಯಾಪ್ತಿಯಲ್ಲಿ 8984 ಮತಗಟ್ಟಿಗಳು ಇವೆ..

2003 ಮತಗಟ್ಟಿಗಳು ಸೂಕ್ಷ್ಮ .

256 ಅತಿಸೂಕ್ಷ್ಮ ಮತಗಟ್ಟಿಗಳು .

ಇನ್ನೂ ಈ ಮತಗಟ್ಟಿಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತೆ..

ಒಟ್ಟು 305 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಕ..

ನಗರದಲ್ಲಿ ಒಟ್ಟು 10127869 ಮತದಾರರು..!

ಚುನಾವಣೆಗೆ ಕಾರ್ಯಕ್ಕೆ 52 ಸಾವಿರ ಸಿಬ್ಬಂದಿ ನೇಮಕ..!

ಇನ್ನೂ ಈ ಮತಗಟ್ಟಿಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ..

ಒಟ್ಟು 305 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ..

ಇನ್ನೂ ನಗರದ ಮೂರು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿ ನೋಡೋದದ್ರೆ..

ಒಟ್ಟು ಮತದಾರರ ಸಂಖ್ಯೆ – 10,127,869.

ಮಹಿಳಾ ಮತದಾರರು – 4.909.958..

ಪುರುಷ ಮತದಾರರು – 5.216.091.

ವಿಶೇಷ ಚೇತನರ ಸಂಖ್ಯೆ – 31173

ಒಟ್ಟು ಯುವ ಮತದಾರರ ಸಂಖ್ಯೆ – 160232

ಸೇವಾ ಮತದಾರರು – 1665

ಎನ್ ಆರ್ ಐ ಮತದಾರರು ಸಂಖ್ಯೆ- 2158.

ಇನ್ನೂ ಮತದಾನಕ್ಕೆ ಬೇಕದ ಭದ್ರತೆ ಬಗ್ಗೆ ಮಾಹಿತಿ ನೋಡೋದದ್ರೆ..

ಈಗಾಗಲೇ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟಿಗಳ ಪಟ್ಟಿ ಮಾಡಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ..

ನಾಳೆ ಸಂಜೆ 6  ಗಂಟೆಯಿಂದ ಏಪ್ರಿಲ್ 26 ರ ಮಧ್ಯರಾತ್ರಿ 12 ಗಂಟೆಯವರೆಗೆ ನಗರದಲ್ಲಿ ಮದ್ಯ ಮಾರಾಟ ನಿಷೇಧ ಹೇರಲಾಗಿದೆ. .

ನಗರದ ಎಲ್ಲಾ ಕಡೆ ಇರೋ ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆ ನಡೆಸಲಾಗುತ್ತೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ..

ಇನ್ನೂ  ಪೊಲೀಸ್ ಭದ್ರತೆ ನೋಡೋದದ್ರೆ..

ಚುನಾವಣೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು….

ನಗರ ಪೊಲೀಸ್ ಕಮಿಷನರ್ -1.

ಹೆಚ್ಚುವರಿ ಪೊಲೀಸ್ ಆಯುಕ್ತರು – 3.

ಜಂಟಿ ಪೊಲೀಸ್ ಆಯುಕ್ತರು-1.

ಡಿಸಿಪಿ – 24.

ಎಸಿಪಿ – 52.

ಇನ್ಸ್ ಪೆಕ್ಟರ್‌ – 118.

ಪಿಎಸ್ ಐ/ ಎಎಸ್ ಐ – 687.

ಹೆಡ್ ಕಾನ್ಸ್ ಟೇಬಲ್/ ಪಿಸಿ-;8511.

ಹೋಂ ಗಾರ್ಡ್- 3919.

ಕೇಂದ್ರೀಯ ಪೊಲೀಸ್ ಪಡೆ – 11.

ಕೆಎಸ್ ಆರ್ ಪಿ/ ಸಿಎಆರ್ – 54 ತುಕಡಿಗಳು.

Spread the love

Leave a Reply

Your email address will not be published. Required fields are marked *