ದೇಶದ ಅತೀ ದೊಡ್ಡ ಪ್ರಜಾಪ್ರಭುತ್ವದ ಹಬ್ಬ ಬಂದಿದೆ.ಲೋಕಸಭಾ ಚುನಾವಣೆ ಮೂಲಕ ಸರ್ಕಾರವನ್ಜು ಆಯ್ಕೆ ಮಾಡುವ ಅವಕಾಶ ದೊರೆತಿದೆ.ಕರ್ನಾಟಕದಲ್ಲಿಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.ಏಪ್ರಿಲ್‌ ೨೬ ರಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ.ಮೇ.೭ ರಂದು ಎರಡನೇ ಹಂತದ ಮತದಾನ ನಡೆಯಲಿದೆ.ಅಂದ್ಹಾಗೆ ಎರಡು ಹಂತಗಳಲ್ಲಿ ಚುನಾವಣೆ ಕ್ರಮವಾಗಿ ೧೪ ಕ್ಷೇತ್ರಗಳಿಗೆ ನಡೆಯುತ್ತಿದೆ.

ಲೋಕಸಭಾ ಚುನಾವಣೆಗೆ ಕರ್ನಾಟಕ ಸಿದ್ದವಾಗಿದೆ.ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ  ಇದೇ ತಿಂಗಳ 26 ರಂದು 14  ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಮೊದಲ ಹಂತದ ಚುನಾವಣೆಯಲ್ಲಿ 2 ಕೋಟಿ 88 ಲಕ್ಷದ 19 ಸಾವಿರದ 342 ಜನರು ಹಕ್ಕನ್ನು ಚಲಾಯಿಸಲಿದ್ದಾರೆ.ಚುನಾವಣೆಯ ನ್ನು ಶಾಂತಯುತ ಹಾಗೂ ಪಾರದರ್ಶಕವಾಗಿ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ಮನವಿ ಮಾಡಿದ್ದಾರೆ.

ವಿಶ್ವದ ಅತೀ ದೊಡ್ಡ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾರತದಲ್ಲಿ ಎರಡನೇ ಹಂತದ ಚುನಾವಣೆ ಭಾಗವಾಗಿ ಇದೇ 26 ರಂದು ಕರ್ನಾಟಕದ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.ಅತ್ಯಂತ ಕ್ಲಿಷ್ಟ ಹಾಗೂ ಜಠಿಲವಾದ ಸವಾಲನ್ನು ಸಮರ್ಥವಾಗಿ ಎದುರಿಸ್ಲಿಕ್ಕೆ ಆಯೋಗ ಸರ್ವಸನ್ನದ್ಧವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.2 ಕೋಟಿ 88 ಲಕ್ಷದಷ್ಟು ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ವ್ಗವಸ್ಥೆ ಮಾಡಲಾಗಿದೆ.ಮತದಾನದ ಪ್ರಮಾಣ ಹೆಚ್ಚಳಕ್ಕೆ ಅಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದರು.

ರಾಜ್ಯದ ಅತೀ ದೊಡ್ಡ ಲೋಕಸಭಾ ಕ್ಷೇತ್ರ ಎನ್ನುವ ಹೆಗ್ಗಳಿಕೆ ಹೊಂದಿರುವ ಹಾಗೆಯೇ ಅತೀ ಹೆಚ್ಚಿನ ಮತದಾರರು ಅಂದ್ರೆ 32 ಲಕ್ಷದ 15 ಸಾವಿರದ, 261 ಮತದಾರರನ್ನು ಒಳಗೊಂಡಿರುವ ಬೆಂಗಳೂರು ಗ್ರಾಮಾಂತರವು ಸೇರಿದಂತೆ ಬೆಂಗಳೂರು ಕೇಂದ್ರ,ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ಹಾಸನ,ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು,ಚಾಮರಾಜನಗರ,ಚಿಕ್ಕಾಬಳ್ಳಾಪುರ ಹಾಗೂ ಕೋಲಾರಗಳಲ್ಲಿ ಚುನಾವಣೆ ನಡೆಯಲಿದೆ.30, 602 ಮತಗಟ್ಟೆಗಳನ್ನು ಇದಕ್ಕಾಗಿ ಸ್ಥಾಪಿಸಲಾಗಿದ್ದು ಜನರು ನಿರಾತಂಕ ಹಾಗೂ ಅನಾಯಸವಾಗಿ ಮತದಾನ ಮಾಡ್ಲಿಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದ್ರು.’

ಮತದಾನಕ್ಕೆ 48 ಗಂಟೆಗಳಿರುವಂತೆಯೇ ಎಲ್ಲಾ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ.ಇಂದು ಸಂಜೆ 6 ಗಂಟೆಯಿಂದಲೇ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ.ಹೊರ ಊರುಗಳಿಂದ ಬಂದವರಿಗೆ ತೆರಳಲು ಸೂಚಿಸಲಾಗಿದೆ.ಅಭ್ಯರ್ಥಿಗಳು 5 ಜನರೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿಕ್ಕೆಷ್ಟೇ ಅವಕಾಶವಿದೆ.ಅದನ್ನು ಮೀರಿ ಏನೇ ನಡೆದರೂ ಅದನ್ನು ನೀತಿ ಸಂಹಿತೆ ಉಲ್ಲಂಘನೆ ಎಂದು ನಿರ್ದರಿಸಲಾಗುವುದು.48 ಗಂಟೆ ಮದ್ಯ ನಿಷೇಧ ಮಾಡಲಾಗಿದೆ. ಅಕ್ರಮಗಳು ನಡೆಯುವ ಸಾಧ್ಯತೆಗಳ ಹಿನ್ನಲೆಯಲ್ಲಿ ಕಲ್ಯಾಣ ಮಂಟಪ,ಲಾಡ್ಜ್ ಗಳ ತಪಾಸಣೆ ನಡೆಯಲಿದೆ ಎಂದ ಆಯುಕ್ತ ಮನೋಜ್ ಕುಮಾರ್ ಈವರೆಗೂ ನೀತಿ ಸಂಹಿತೆ ಉಲ್ಲಂಘನೆ ಅಡಿ 189 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.430 ಕೋಟಿ ಹಣ-ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದರು.

ಮೊದಲ ಹಂತದ ಚುನಾವಣೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿ ಇದ್ರೂ,2ನೇ ಹಂತದ 14 ಕ್ಷೇತ್ರಗಳಲ್ಲಿ ಪಕ್ಷ ಹಾಗೂ ಅಭ್ಯರ್ಥಿಗಳ ಮತಯಾಚನೆಗೆ ಅವಕಾಶ ನೀಡಲಾಗಿದೆ.ಮತದಾರರ ಮೇಲೆ ಪ್ರಭಾವ ಬೀರಬಹುದಾದ ಆತಂಕವಿರುವುದರಿಂದ ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾವಣೆಗೆ ಸಂಬಂಧಿಸಿದಂತೆ ಮತದಾರರನ್ನು ಪ್ರಚೋದಿಸಲು ನಿರ್ಬಂಧ ವಿಧಿಸಲಾಗಿದೆ.ಆಯೋಗ ಪ್ರತಿ ಪಕ್ಷದ ಹಾಗೂ ಅಭ್ಯರ್ಥಿಗಳ ನಡುವಳಿಕೆ ಹಾಗೂ ಮಾತಿನ ಮೇಲೆ ಹದ್ದುಗಣ್ಣಿನ ನಿಗಾ ಇಟ್ಟಿರುತ್ತದೆ ಎಂದರು.ಮೊದಲ ಹಂತದ ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯಲು ಜನರು ಸಹಕರಿಸಬೇಕೆಂದು ಮನವಿ ಮಾಡಿದರು.

1 ಕೋಟಿ 43 ಲಕ್ಷದಷ್ಟು ಪುರುಷರು, 1 ಕೋಟಿ 43 ಲಕ್ಷದಷ್ಟು ಮಹಿಳೆಯರ ಜತೆ 3,067 ತೃತೀಯ ಲಿಂಗಿಗಳು  ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.ಮತಗಟ್ಟೆ ಕೇಂದ್ರಗಳ ಸಮಗ್ರ ಮಾಹಿತಿ ಅನಾಯಾಸವಾಗಿ ದೊರೆಯುವಂತಾಗಲು ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ. ಅಂಗೈಯಲ್ಲೇ ಮಾಹಿತಿ ದೊರೆಯುವಂತಾಗಲು ಮೊಬೈಲ್ ಅಪ್ಲಿಕೇಷನ್ ರೂಪಿಸಲಾಗಿದೆ.ಮತದಾನದ ಪ್ರಮಾಣ ಹೆಚ್ಚಲು ಜಾಗೃತಿ ಮೂಡಿಸಲಾಗುತ್ತಿದೆ.

Spread the love

Leave a Reply

Your email address will not be published. Required fields are marked *

You missed