ಹಾಸನ: ದೊಡ್ಡಗೌಡ್ರ ಕುಟುಂಬಕ್ಕೆ ಸೆಡ್ಡು ಹೊಡೆದಿದ್ದ ಬಿಜೆಪಿಯ ಪ್ರೀತಂ ಗೌಡ ಸೋಲಿನ ಕಹಿ ಅನುಭವಿಸಿದ್ದಾರೆ.ಟಿಕೆಟ್ ನೀಡುವ ವಿಚಾರದಲ್ಲಿ ಇಡೀ ಕುಟುಂಬವನ್ನು ಎದುರಾಕಿಕೊಂಡು ಸಾಮಾನ್ಯ ಕಾರ್ಯಕರ್ತನಿಗೆ ಅದು ದಕ್ಕುವಂತೆ ಮಾಡಿದ ಕುಮಾರಸ್ವಾಮಿ ತನ್ನ ಹಠದಲ್ಲಿ ಗೆದ್ದಿದ್ದಾರೆ.ಎಚ್ ಡಿ ರೇವಣ್ಣನಿಗೆ ಹಾಕಿದ್ದ ಸವಾಲಿನಲ್ಲಿ ಗೆದ್ದಿದ್ದಾರೆ.ಏಕಂದ್ರೆ ಹಾಸನದಲ್ಲಿ ಜೆಡಿಎಸ್ ನ ಸ್ವರೂಪ್ ಪ್ರಕಾಶ್ ಗೆಲುವಿನ ನಗೆ ಬೀರಿದ್ದಾರೆ.
ಎಲ್ಲಾ ಸುತ್ತುಗಳ ಮತ ಎಣಿಕೆ ಮುಗಿದ ಮೇಲೆ ಜೆಡಿಎಸ್ ನ ಸ್ವರೂಪ ಪ್ರಕಾಶ್ ತನ್ನ ಎದುರಾಳಿ ಪ್ರೀತಮ್ ಗೌಡ ವಿರುದ್ಧ ಗೆಲುವು ದಾಖಲಿಸಿದ್ದಾರೆ.ಅಂದ್ಹಾಗೆ ಇವರಿಬ್ಬರ ನಡುವಿನ ಗೆಲುವಿನ ಅಂತರ ೮ ಸಾವಿರ.ಅದೇನೇ ಆಗಲಿ ಹಾಸನದ ಟಿಕೆಟ್ ವಿಚಾರದಲ್ಲಿ ಕುಟುಂಬ ಹಾಗೂ ಜೆಡಿಎಸ್ ಕಾರ್ಯಕರ್ತರ ವಿರೋಧ ಕಟ್ಟಿಕೊಂಡಿದ್ದ ಕುಮಾರಸ್ವಾಮಿ ಕೊನೆಗೂ ಸ್ವರೂಪ್ ಅವರನ್ನು ಗೆಲ್ಲಿಸಿಕೊಂಡು ಬರುವುದರಲ್ಲಿ ಯಶಸ್ವಿಯಾಗಿರುವುದು ಸಮಾಧಾನಕರ ಸಂಗತಿ.