ಯಾವ್ದೇ ಪಕ್ಷಗಳ ಸರ್ಕಾರ ಬಂದ್ರೂ ಎಲ್ಲಾ ಸಚಿವ ಸ್ಥಾನಗಳಿಗಿಂತ ಬೆಂಗಳೂರು ಉಸ್ತುವಾರಿ ಸದಾ ಚರ್ಚೆಯಲ್ಲಿರುತ್ತೆ ಹಾಗೆಯೇ ಅದಕ್ಕೆ ಪೈಪೋಟಿ ಕೂಡ ಸೃಷ್ಟಿಯಾಗುತ್ತಲೇ ಬಂದಿದೆ.ಈ ಬಾರಿಯೂ ಅದೇ ಸ್ಥಿತಿಯಿದೆ.ಬೆಂಗಳೂರು ನಗರದ ಉಸ್ತುವಾರಿ ಅಂತಿಮವಾಗಿ ಯಾರಿಗೆ ದಕ್ಕುತ್ತೆ ಎನ್ನುವುದು ಕುತೂಹಲ ಮೂಡಿಸಿದ್ದು ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ ಮತ್ತು ಕೆ.ಜೆ ಜಾರ್ಜ್ ನಡುವೆ ಬಿರುಸಿನ ಪೈಪೋಟಿ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.
ಏಕೆಂದರೆ ಮೊದಲೇ ಹೈಕಮಾಂಡ್ ಮುಂದೆ ತಾನು ಹೇಳಿದವರಿಗೇನೆ 10-15 ಖಾತೆ ನೀಡಬೇಕೆನ್ನುವ ಬೇಡಿಕೆ ಇಟ್ಟಿರುವ ಡಿಕೆಶಿಯ ಒತ್ತಾಯಗಳಲ್ಲಿ ಬೆಂಗಳೂರು ಉಸ್ತುವಾರಿ ತಾನು ಹೇಳಿದವರಿಗೇನೆ ದಕ್ಕಬೇಕೆನ್ನುವುದು ಕೂಡ ಇರಬಹುದೇನೋ..? ಒಂದ್ವೇಳೆ ಡಿಕೆಶಿ ಕಡೆಯವರಿಗೇನೆ ಬೆಂಗಳೂರು ಉಸ್ತುವಾರಿ ಸಿಗುತ್ತದೆ ಎನ್ನುವುದಾದ್ರೆ ಮೊದಲ ಹೆಸರಿರುವುದು ಅವರ ಪರಮಾಪ್ತ ರಾಮಲಿಂಗಾರೆಡ್ಡಿ ಅವರಿಗೆ.
ಇದೆಲ್ಲದರ ನಡುವೆ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಹೆಸರು ಕೂಡ ಕೇಳಿಬರುತ್ತಿದೆ.ಅವರಿಬ್ಬರಿಗೆ ಪೈಪೋ ಟಿ ನೀಡಿ ದಿನೇಶ್ ಗುಂಡೂರಾವ್ ಕೂಡ ಬೆಂಗಳೂರು ಉಸ್ತುವಾರಿ ಪಡೆದರೂ ಆಶ್ಚರ್ಯಪಡಬೇಕಿ ಲ್ಲವೇನೋ..?ಇದೆಲ್ಲವನ್ನೂ ಮೀರಿ ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿಗೇನೆ ಇಟ್ಟು ಕೊಂಡರೂ ಆಶ್ಚರ್ಯವಿಲ್ಲ..ಹಾಗಾಗಿ ಬೆಂಗಳೂರು ಉಸ್ತುವಾರಿ ಅಂತಿಮವಾಗಿ ಯಾರಿಗೆ ದಕ್ಕುತ್ತದೆ ಎನ್ನುವುದು ಕುತೂಹಲದ ಪ್ರಶ್ನೆಯಾಗಿ ಕಾಡುತ್ತಿದೆ.