39 ಹುದ್ದೆಗಳಿಗೆ ಅಪ್ಲಿಕೇಷನ್ ಹಾಕಿದ ಉದ್ಯೋಗಾಕಾಂಕ್ಷಿಗಳು ಹತ್ತಿರತ್ತಿರ 4,000.
ಪ್ರತಿ ಅಪ್ಲಿಕೇಷನ್ ಗೂ 500 ರೂ ಫಿಕ್ಸ್.
ನೌಕರಿ ನಿರೀಕ್ಷೆಯಲ್ಲಿ ಎಲ್ಲಾ ಹುದ್ದೆಗಳಿಗೂ ಅರ್ಜಿ ಹಾಕಿ ಪರೀಕ್ಷೆ ಬರೆದ ಉದ್ಯೊಗಾಕಾಂಕ್ಷಿಗಳು.
ಪರೀಕ್ಷೆ ಬರೆದರೂ ಕಟಾಫ್ ಮಾರ್ಕ್ಸ್ ಪ್ರಕಟಿಸದ ಆಡಳಿತ ಮಂಡಳಿ-ಫಲಿತಾಂಶವನ್ನು ಕತ್ತಲಲ್ಲಿಟ್ಟ ಸೊಸೈಟಿ .
ನೇಮಕಾತಿ ಹೇಗೆ ನಡೆಯುತ್ತಿದೆ ಎಂದು ತಿಳಿಯದೆ ಗೊಂದಲ: ಸಹಕಾರ ಸಂಘಗಳ (ವಿಜಿಲೆನ್ಸ್ ) ಮುಖ್ಯಸ್ಥರಿಗೆ ದೂರು ನೀಡಲು ನಿರ್ದಾರ.
ಪ್ರತಿ ಹುದ್ದೆಯನ್ನೂ ಮಾರಿಕೊಳ್ಳಲು ಆಡಳಿತ ಮಂಡಳಿ ಹುನ್ನಾರ.?! ಉದ್ಯೋಗಾಕಾಂಕ್ಷಿಗಳ ಗಂಭೀರ ಆರೋಪ
ಸ್ಪಷ್ಟನೆ ನೀಡದೆ ತಲೆ ಮರೆಸಿಕೊಂಡು ಅಡ್ಡಾಡುತ್ತಿರುವ ಸೊಸೈಟಿ ಪದಾಧಿಕಾರಿಗಳು.
ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ( ಕೆಎಸ್ ಆರ್ ಟಿಸಿ) ಬೇಡದ ಕಾರಣಗಳಿಗೆ ಸುದ್ದಿಯಾಗುತ್ತಿತ್ತು. ಆದರೆ ಅದರ ಕಾಂಪೌಂಡ್ ನಲ್ಲಿ ಸಾರಿಗೆ ಸಿಬ್ಬಂದಿಯ ಕಲ್ಯಾಣ-ಶ್ರಯೋಭಿವೃದ್ದಿಗೆಂದೇ ಅಸ್ತಿತ್ವಕ್ಕೆ ಬಂದು ಅದರ ಆಶಯಗಳನ್ನು ಗಾಳಿಗೆ ತೂರುವಂತ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಪತ್ತಿನ( ಸಾಲ) ಸಹಕಾರ ಸಂಘಅಕ್ರಮ-ಅನ್ಯಾಯ-ಲೂಟಿ ಕಾರಣಕ್ಕೆ ಭಾರೀ ಸದ್ದು ಮಾಡುತ್ತಿದೆ.ಕನ್ನಡ ಫ್ಲ್ಯಾಶ್ ನ್ಯೂಸ್ ನೌಕರಿ ಆಸೆಯಲ್ಲಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳ ಬದುಕು-ಭಾವನೆಗಳ ಜತೆ ಚೆಲ್ಲಾಟವಾಡೊಕ್ಕೆ ಹೊರಟಿರುವ ಸಂಘದ ಆಡಳಿತ ಮಂಡಳಿಯ ಬೃಹತ್ ಗೋಲ್ಮಾಲ್ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ.
39 ಹುದ್ದೆಗಳ ನೇಮಕಾತಿಗಾಗಿ 25-01-2023 ರಂದು ಸೊಸೈಟಿ ಹೊರಡಿಸಿದ್ದ ಪ್ರಕಟಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ದೇಶದ ಅತ್ಯುತ್ತಮ ಸಾರಿಗೆ ಸೇವೆ ನೀಡುತ್ತಿರುವ ಸಂಸ್ಥೆ ಎನ್ನುವ ಹೆಗ್ಗಳಿಕೆ ಇದೆ.ಆದರೆ ಅಂತದ್ದೊಂದು ಸೇವೆ ಕೊಡುತ್ತಿರುವ ಕಾರ್ಮಿಕ ಸಿಬ್ಬಂದಿಯ ಬದುಕುಗಳ್ಹೇಗೆ ಮೂರಾಮಟ್ಟೆಯಾಗಿವೆ ಎನ್ನುವುದನ್ನು ಹೇಳಬೇಕಿಲ್ಲ. ಇದರ ನಡುವೆ, ಕಾರ್ಮಿಕ ಸಿಬ್ಬಂದಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಲ್ಲಿ ಅಸ್ಥಿತ್ವಕ್ಕೆ ಬಂದಿದ್ದೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಪತ್ತಿನ( ಸಾಲ) ಸಹಕಾರ ಸಂಘ. ಎಸ್.ಶ್ರೀಕಂಠಯ್ಯ ಇದರ ಸಂಸ್ಥಾಪಕ ಅಧ್ಯಕ್ಷರು.ಆ ಮಹಾನುಭಾವನ ಕಾಲದಲ್ಲಿ ಸಂಸ್ಥೆ ಕಾರ್ಮಿಕ ಸಿಬ್ಬಂದಿಗೆ ನಿರೀಕ್ಷೆಗೂ ಮೀರಿದ ಆರ್ಥಿಕ ನೆರವು ಈ ಸಂಘದ ಮೂಲಕ ಸಿಗುತ್ತಿತ್ತು.ಇವತ್ತಿಗೂ ಆ ಮಹಾಪುರುಷನನ್ನು ಸಾವಿರಾರು ಕಾರ್ಮಿಕರು ನೆನೆಯುತ್ತಾರೆ.ಸಂಘವನ್ನು ಕಾರ್ಮಿಕ ಸಿಬ್ಬಂದಿಯ ಶ್ರೇಯಸ್ಸಿಗೆ ಆ ಪರಿ ಸದ್ವಿನಿಯೋಗ ಮಾಡಿಕೊಂಡಿದ್ದರು ಶ್ರೀಕಂಠಯ್ಯ ಹಾಗೂ ಅವರ ಜತೆಗಿದ್ದ ಸಮಾನಮನಸ್ಕರ ತಂಡ.
ಆದ್ರೆ ಹಣ ಮಾಡೊಕ್ಕಂತನೇ,ಶ್ರಮಿಕ ಕಾರ್ಮಿಕರ ಬೆವರಿನ ಹಣವನ್ನೇ ತಮ್ಮ ಉದ್ದಾರಕ್ಕೆ ಮಿಸ್ಯೂಸ್ ಮಾಡಿಕೊಳ್ಳೋ ಭ್ರಷ್ಟ ಮನಸ್ಥಿತಿಯವರು ಯಾವಾಗ ಆಡಳಿತ ಮಂಡಳಿಯ ಮೇಲೆ ಪ್ರಭುತ್ವ ಸ್ಥಾಪಿಸಿದರೋ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡ್ಲಿಕ್ಕೆ ಶುರುಮಾಡಿದ್ರೋ ಅವತ್ತಿನಿಂದ್ಲೆ ಸಂಘ ಧನದಾಹಿಗಳ ಮೇಯ್ದಾಟಕ್ಕೆ ಫಲವತ್ತಾದ ಹುಲ್ಲುಗಾವಲಿನಂತಾಗಿಬಿಡ್ತು.ಇವತ್ತಿಗೂ ಆ ಮನಸ್ತಿತಿಯಯ ಕೆಲವರಿಂದಾಗಿ ಈ ಸಂಘ ಇನ್ನಷ್ಟು ಭ್ರಷ್ಟರ ಕೂಪ-ಅಕ್ರಮಗಳ ಕೊಂಪೆಯಾಗಿದೆ ಎನ್ನೋದು ದುರಂತದ ವಿಚಾರ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಪತ್ತಿನ( ಸಾಲ) ಸಹಕಾರ ಸಂಘವನ್ನು ದಂಧೆಯ ಅಡ್ಡೆಯನ್ನಾಗಿ ಮಾಡಿಕೊಳ್ಳೊ ಕ್ಕೆ ಕೆಲವರು ಹೊರಟಂತಿದೆ.ಅಂತದ್ದೊಂದು ಅಕ್ರಮದ ಘಾಟು ಹೊಡೆಯೊಕ್ಕೆ ಕಾರಣವಾಗಿರೋದೇ ಕಾನೂನುಬಾಹಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ.ಸಂಘಕ್ಕೆ ಅಗತ್ಯವಿರುವ ಸಾಕಷ್ಟು ಹುದ್ದೆಗಳ ನೇಮಕಾತಿ ಸಂಬಂಧ ಆಡಳಿತ ಮಂಡಳಿ ಸಭೆ ನಡೆಸಿ ತೀರ್ಮಾನ ಕೈಗೊಂಡಿತ್ತು.ಅದರ ಪ್ರಕಾರ 25-01-2023ರಂದು ನೇಮಕಾತಿ ಪ್ರಕಟಣೆ ಹೊರಡಿಸಿತ್ತು.
ಇದರಲ್ಲಿ 2 ಸಿಬ್ಬಂದಿ ಮೇಲ್ವಿಚಾರಕರು,1-ಲೆಕ್ಕಪತ್ರ ಮೇಲ್ವಿಚಾರಕರು,07-ಪ್ರಥಮ ದರ್ಜೆ ಸಹಾಯಕರು,18 ದ್ವಿತೀಯ ದರ್ಜೆ ಸಹಾಯಕರು,11- ಕಚೇರಿ ಸಹಾಯಕರು ಹೀಗೆ ಒಟ್ಟು 39 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಆ ಪ್ರಕಟಣೆ ಹೊರ ಬೀಳುತ್ತಿದ್ದಂತೆ ರಾಜ್ಯಾದ್ಯಂತ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅರ್ಜಿ ಹಾಕಿದ್ರು.ಒಂದು ಅಂದಾಜಿನ ಪ್ರಕಾರ 4333 ಉದ್ಯೋಗಾಕಾಂಕ್ಷಿಗಳು ಅರ್ಜಿ ಹಾಕಿದ್ರು.ಒಂದು ಕೈ ಕೊಟ್ಟರೆ ಇನ್ನೊಂದು ಕೈ ಹಿಡಿಯಬಹುದೆನ್ನುವ ಆಸೆಯಲ್ಲಿ ಬಹುತೇಕರು ಎಲ್ಲಾ ಹುದ್ದೆಗಳಿಗೂ ಅರ್ಜಿ ಹಾಕಿದ್ದಾರೆ.
500 ರೂ ಶುಲ್ಕ ನಿಗಧಿ ಮಾಡಿ ಅಪ್ಲಿಕೇಷನ್ ಪಡೆದ ಸೊಸೈಟಿಯ ಆಡಳಿತ ಮಂಡಳಿ ಪರೀಕ್ಷೆ ಯನ್ನು ನಡೆಸಿದ ಮೇಲೆ ಅದರ ಫಲಿತಾಂಶವನ್ನು ತಾವೇ ಹೇಳಿಕೊಂಡ ರೀತಿಯಲ್ಲಿ ಪಾರದರ್ಶಕವಾಗಿ ಪ್ರಕಟಿಸಬೇಕಿತ್ತಲ್ವಾ..? ಉದ್ಯೋಗಾಕಾಂಕ್ಷಿಗಳಿಗೆ ಅವರು ಬರೆದ ಪರೀಕ್ಷೆಯ ಫಲಿತಾಂಶವನ್ನು ನೀಡುವುದರ ಜತೆಗೆ ನೇಮಕಾತಿ ಪ್ರಕ್ರಿಯೆಗೆ ಪೂರಕವಾಗಿ ಕಟಾಫ್ ಅಂಕಗಳು ಎಷ್ಟಕ್ಕೆ ನಿಂತಿವೆ ಎನ್ನುವುದನ್ನಾದ್ರೂ ತಿಳಿಸಬೇಕಿತ್ತಲ್ವಾ..? ಆದರೆ ನೊಂದ ಉದ್ಯೋಗಾಕಾಂಕ್ಷಿಗಳ ಪ್ರಕಾರ ಅದ್ಯಾವುದನ್ನು ಮಾಡದೆ ತಮ್ಮನ್ನು ಕತ್ತಲಲ್ಲಿ ಇರಿಸಲಾಗಿದೆ ಎಂದು ಆಪಾದಿಸಿದ್ದಾರೆ.
ತಾವು ಬರೆದ ಪ್ರಶ್ನೆಪತ್ರಿಕೆಗಳ ಅಂಕಗಳನ್ನು ಹೇಗೆ ತಿಳಿದುಕೊಳ್ಳಬೇಕೆಂದು ಗೊತ್ತಾಗದೆ ಪಟ್ಟು ಹಿಡಿದಾಗ ಕೀ ಆನ್ಸರ್ ಮಾದರಿಯನ್ನು ಹೋಲಿಸಿ ನೋಡಿ ಎಂಬ ಉಡಾಫೆ ಉತ್ತರ ಕೊಟ್ಟಿದ್ದಾರಂತೆ ಆಡಳಿತ ಮಂಡಳಿ.ಅದರ ಪ್ರಕಾರವೇ ಪರಿಶೀಲಿಸಿದ ಉದ್ಯೋಗಾಕಾಂಕ್ಷಿಗಳು ತಾವು ಮುಂದಿನ ಹಂತದ ಸಂದರ್ಶನಕ್ಕೆ ಅರ್ಹರೋ. ಅಲ್ಲವೋ ಎಂದು ಖಾತ್ರಿಪಡಿಸಿಕೊಳ್ಳಲಾಗದೆ ಗೊಂದಲಕ್ಕೆ ಸಿಲುಕಿದ್ದಾರೆ.ಯಾಕಂದ್ರೆ ಕಟಾಫ್ ಅಂಕಗಳೇ ಎಷ್ಟಕ್ಕೆ ಕೊನೆಯಾ ಗಿವೆ ಎನ್ನುವುದನ್ನೇ ಈವರೆಗೂ ಸ್ಪಷ್ಟಪಡಿಸದೆ ನಾಟಕ ಮಾಡುತ್ತಿದೆಯಂತೆ ಆಡಳಿತ ಮಂಡಳಿ.
ಆದರೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತ ಮಾಹಿತಿ ಹಾಗೂ ಉದ್ಯೊಗಾಕಾಂಕ್ಷಿಗಳು ಅನುಮಾನಿಸುವಂತೆ 39 ಹುದ್ದೆಗಳ ನೇಮಕಾತಿಯನ್ನು ಗೌಪ್ಯವಾಗಿ ಮಾಡಿ ಮುಗಿಸುವ ಹುನ್ನಾರ ಮಾಡಿದೆಯಂತೆ ಆಡಳಿತ ಮಂಡಳಿ. ಕಾಟಾಚಾರಕ್ಕೆ ಕೆಲವರನ್ನು ಸಂದರ್ಶಿಸಿದಂತೆ ಮಾಡಿ ತಮಗೆ ಬೇಕಾದವರನ್ನು ನೇಮಕಾತಿ ಮಾಡಿಕೊಳ್ಳುವ ಪ್ರಯತ್ನದಲ್ಲಿದೆಯಂತೆ.ಒಂದು ಹಂತ ಮುಂದುವರೆದು 39 ಹುದ್ದೆಗಳನ್ನು ಮಂಡಳಿಯಲ್ಲಿರುವ ಬಹುತೇಕ ಪದಾಧಿಕಾರಿಗಳ ಸಂಬಂಧಿಗಳಿಗೆ ಮೀಸಲಿಟ್ಟು ನೇಮಕಾತಿ ಮಾಡಿಕೊಳ್ಳುವ ಬೃಹತ್ ಷಡ್ಯಂತ್ರವನ್ನೂ ಮಾಡಿ ದ್ದಾರೆನ್ನುವ ಮಾತುಗಳಿವೆ.ಅವರು ಹೀಗೆ ಮಾಡಿಕೊಳ್ಳಬೇಕೆನ್ನುವುದಿದ್ದರೆ ಪರೀಕ್ಷೆಯನ್ನೇಕೆ ನಡೆಸಬೇಕಿತ್ತು..? ಪ್ರತಿ ಅಪ್ಲಿಕೇಷನ್ ಗೂ 500 ರೂ ಕಲೆಕ್ಟ್ ಯಾಕೆ ಮಾಡಬೇಕಿತ್ತು..? ಎಂದು ನೊಂದ ಉದ್ಯೋಗಾಕಾಂಕ್ಷಿಗಳು ಪ್ರಶ್ನಿಸ್ತಾರೆ.
ಪ್ರತಿ ಹುದ್ದೆ 15 ಲಕ್ಷಕ್ಕೆ ಡೀಲ್..!!?? :ಇದು ಇನ್ನೂ ಅಘಾತಕಾರಿಯಾದಂತ ವಿಚಾರ,ಬಿಕರಿಯಾಗಲಿವೆ ಎನ್ನಲಾಗುತ್ತಿ ರುವ ಎಲ್ಲಾ 39 ಹುದ್ದೆಗಳಿಗೂ ಅದರ ಯೋಗ್ಯತೆ-ಡಿಮ್ಯಾಂಡ್ ಮೇರೆಗೆ ಲಕ್ಷ ಲಕ್ಷ ಫಿಕ್ಸ್ ಮಾಡಲಾಗಿದೆಯಂತೆ. ಒಂದು ಅಂದಾಜಿನ ಪ್ರಕಾರ 5 ಲಕ್ಷದಿಂದ ಹಿಡಿದು 15 ಲಕ್ಷದವರೆಗೂ ಒಂದೊಂದು ಹುದ್ದೆಯನ್ನು ಆಡಳಿತ ಮಂಡಳಿ ಡೀಲ್ ಮಾಡೋ ಷಡ್ಯಂತ್ರ ನಡೆಸಿದೆ ಎನ್ನುವುದು ಆಡಳಿತ ಮಂಡಳಿಯ ನಡುವಳಿಕೆಯನ್ನು ಆರಂಭ ದಿಂದಲೂ ಗಮನಿಸುತ್ತಾ ಬಂದಿರುವ ಸಾಕಷ್ಟು ಮಾಜಿ ಪದಾಧಿಕಾರಿಗಳ ಆಪಾದನೆ. ಆಡಳಿತ ಮಂಡಳಿಯಲ್ಲಿರುವ ಕೆಲವು ಅಯೋಗ್ಯರು-ನಾಲಾಯಕ್ ಗಳು ಈ ಹಣದಲ್ಲಿ ಪರ್ಸಂಟೇಜ್ ಪಡೆದಿದ್ದಾರೆನ್ನುವ ಮಾತು ಗಂಭೀರವಾಗಿ ಕೇಳಿಬರಲಾರಂಭಿಸಿದೆ.
ನಮ್ಮ ಬದುಕು-ಭಾವನೆಗಳ ಜತೆ ಚೆಲ್ಲಾಟವಾಡಿದ್ದೇಕೆ..?ಎಲ್ಲಾ 39 ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಆಡಳಿತ ಮಂಡಳಿ ನಡೆದುಕೊಂಡಿರುವ,ನಡೆದುಕೊಳ್ಳುತ್ತಿರುವ ರೀತಿ ಗಮನಿಸಿದಾಗ ಅವ್ಯವಹಾರ- ಗೋಲ್ಮಾಲ್ ನಡೆದಂತೆ ಕಾಣುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿ ಪರೀಕ್ಷೆ ಬರೆದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಕಣ್ಣೀರಿಡುತ್ತಿದ್ದಾರೆ.ಗೋಳಾಡುತ್ತಿದ್ದಾರೆ.ಪರೀಕ್ಷೆಗಾಗಿ ಸಾಕಷ್ಟು ಶ್ರಮ ಪಟ್ಟಿದ್ದೆ..ಚೆನ್ನಾಗಿಯೂ ಬರೆದಿದ್ದೆ..ಕೀ ಆನ್ಸರ್ ನೋಡಿದಾಗಲೂ ದಿ ಬೆಸ್ಟ್ ಎನಿಸಿತ್ತು.ಆದ್ರೆ ಈವರೆಗೂ ನೇಮಕಾತಿ ಸಂಬಂಧ ಒಂದೇ ಒಂದು ಕರೆ ಬಂದಿಲ್ಲ..ನಾನೇನು ಮಾಡ್ಬೇಕು ಎಂದು ಉತ್ತರ ಕರ್ನಾಟಕ ಮೂಲದ ಉದ್ಯೋಗಾಕಾಂಕ್ಷಿ ಪ್ರಶ್ನಿಸ್ತಾನೆ.
ಸಾರ್.ಈ ಕೆಲಸ ಸಿಕ್ಕರೆ ನನ್ನ ಕಷ್ಟಗಳೆಲ್ಲಾ ದೂರವಾಗುತ್ತವೆ ಎಂದುಕೊಂಡಿದ್ದೆ.ಈ ಪರೀಕ್ಷೆಗೆ ಸಿದ್ದವಾಗ್ಲಿಕ್ಕೆ ಸಣ್ನಪುಟ್ಟ ಸಂಬಳದ ಕೆಲಸವನ್ನೂ ಬಿಟ್ಟಿದ್ದೆ.ಮೂರ್ನಾಲ್ಕು ತಿಂಗಳು ಕಷ್ಟಪಟ್ಟು ಓದಿದ್ದೆ.ಸ್ಟಡಿ ಮೆಟಿರಿಯಲ್ ಗಾಗಿ ಸಾಲ ಮಾಡಿದ್ದೆ.ಪರೀಕ್ಷೆಯನ್ನೂ ಚೆನ್ನಾಗಿ ಬರೆದಿದ್ದೆ.ಆದರೆ ಈಗ ನೋಡಿದ್ರೆ ಪರೀಕ್ಷೆ ಏನಾಗಿದೆ..ರಿಸಲ್ಟ್ ಬಗ್ಗೆ ಮಾಹಿತಿಯನ್ನೇ ಕೊಡುತ್ತಿಲ್ಲ..500 ಕಿಲೋ ಮೀಟರ್ ದೂರದಿಂದ ಬಂದು ವಾರವಾಯ್ತು.ದಿನನಿತ್ಯ ಎಲ್ಲಾ ಕೆಲಸ ಬಿಟ್ಟು ಸೊಸೈಟಿಗೆ ಬರ್ತಿದ್ದೇನೆ..ಯಾರೊಬ್ಬರೂ ಏನಾಗಿದೆ ಎಂದು ಹೇಳುತ್ತಿಲ್ಲ..ನಾನೇನು ಮಾಡಲಿ..ಯಾವ್ ಮುಳ ಹೊತ್ತು ಊರಿಗೆ ಹೋಗಲಿ ಎಂದು ಕಣ್ಣೀರಾಕುವ ಆ ಯುವತಿ ಮಾತು ಹೃದಯ ಹಿಂಡುವಂತಿತ್ತು.ಅಲ್ಲದೇ ಇವರೆಲ್ಲರ ಶಾಪ ಆಡಳಿತ ಮಂಡಳಿಗೆ ತಟ್ಟದೆ ಬಿಡೊಲ್ಲ ಎನ್ನಿಸುತ್ತಿತ್ತು.
ಕನ್ನಡ ಫ್ಲ್ಯಾಶ್ ನ್ಯೂಸ್ ದಾಳಿ ಇಡುತ್ತಿದ್ದಂತೆ ಎಸ್ಕೇಪ್-ಮೊಬೈಲ್ ಸ್ವಿಚಾಫ್:ಆಡಳಿತ ಮಂಡಳಿ ನೇಮಕಾತಿ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆಸಿರುವುದು ಸ್ಪಷ್ಟವಾಗೊಕ್ಕೆ ನಮಗೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೆಂದೆನಿ ಸಲಿಲ್ಲ..ಈ ಬಗ್ಗೆ ಸ್ಪಷ್ಟನೆ ಕೇಳೊಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ಶಾಂತಿನಗರದ ಕೇಂದ್ರ ಕಚೇರಿ ಪಕ್ಕದಲ್ಲಿರುವ ಸೊಸೈಟಿ ಕಚೇರಿಗೆ ಹೋಗಿ ವಿಚಾರಿಸುತ್ತಿದ್ದಂತೆ ಅಲ್ಲಿದ್ದ ಕೆಲವರಿಂದ ತತ್ ಕ್ಷಣಕ್ಕೆ ಜನರಲ್ ಮ್ಯಾನೇಜರ್ ಹುಚ್ಚಪ್ಪ, ಅಧ್ಯಕ್ಷ ಗಂಗಾಧರ್ ಗೆ ಮಾಹಿತಿ ಹೋಗಿದೆ. ಹುಚ್ಚಪ್ಪರ ಮೊಬೈಲ್ 6366911242, 9141920026 ಗೆ ಕರೆ ಮಾಡಿದ್ರೆ ರಿಂಗ್ ಆಗುತ್ತಿದ್ದ ಮೊಬೈಲ್ ಮರುಕ್ಷಣದಲ್ಲೇ ಸ್ವಿಚಾಫ್ ಆಯ್ತು.
“ಸೊಸೈಟಿಯಲ್ಲಿರುವವರ ಮೇಲೆ ಕೇಸ್ ಗಳಿವೆ..ಅದೊಂದು ಅಕ್ರಮದ ಅಡ್ಡೆಯಾಗ್ಹೋಗಿದೆ”
ಆಡಳಿತ ಮಂಡಳಿ ಉದ್ಯೋಗಾಕಾಂಕ್ಷಿಗಳ ವಿಚಾರದಲ್ಲಿ ನಡೆದುಕೊಳ್ಳುತ್ತಿರು ರೀತಿ ಗಮನಿಸಿದ್ರೆ ಅಕ್ರಮ ನಡೆದಿದೆ ಎನ್ನುವುದು ಮೆಲ್ನೋಟಕ್ಕೆ ಗೊತ್ತಾಗುತ್ತೆ.ಸಾಚಾಗಳಾಗಿದ್ದರೆ ಉದ್ಯೋಗಾಕಾಂಕ್ಷಿಗಳಿಗೆ ಎಲ್ಲವನ್ನೂ ಪಾರದರ್ಶಕವಾಗಿ ಪ್ರದರ್ಶಿಸಬೇಕಿತ್ತು.ಕದ್ದುಮುಚ್ಚಿ ಓಡಾಡೋ ಅವಶ್ಯಕತೆ ಏನಿತ್ತು..ಸೊಸೈಟಿ ಆಡಳಿತ ಮಂಡಳಿಯಲ್ಲಿ ಸಾಕಷ್ಟು ವಂಚಕರಿದ್ದಾರೆ.ಅವರ ವಿರುದ್ದ ಸಾಕಷ್ಟುಆಪಾದನೆಗಳಿವೆ.ನನಗೆ ತಿಳಿದಂತೆ ಕೆಲವರ ಮೇಲೆ ಪೊಲೀಸ್ ಠಾಣೆ ಮತ್ತು ಇಲಾಖೆ ಮಟ್ಟದಲ್ಲೂ ದೂರುಗಳಿವೆ.ಇದನ್ನು ಸಹಕಾರ ಸಂಘಗಳ ಮುಖ್ಯಸ್ಥರು ಗಂಭೀರವಾಗಿ ಪರಿಗಣಿಸಬೇಕು.ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು.ಉದ್ಯೊಗಾಂಕ್ಷಿಗಳಿಗೆ ನ್ಯಾಯ ದೊರಕಿಸಿಕೊಡಬೇಕು..ಇಲ್ಲದಿದ್ದಲ್ಲಿ ಸೊಸೈಟಿ ಮುಂದೆ ಹೋರಾಟ ಅನಿವಾರ್ಯ. -ಆನಂದ್-ಸಾರಿಗೆ ಕಾರ್ಮಿಕರ ಸಂಘಟನೆಗಳ ಮುಖಂಡ
ಅಷ್ಟಕ್ಕೆ ಸುಮ್ಮನಾಗದ ನಾವು ಸೊಸೈಟಿಯ ಘನತವೆತ್ತ ಅಧ್ಯಕ್ಷ ಗಂಗಾಧರ್ ಅವರನ್ನು 7892657220 ಗೆ ಕರೆ ಮಾಡಿದ್ರೂ ಅವರದು ನಾಟ್ ರೀಚಬಲ್ ಬರ್ತಿತ್ತು.ಅಲ್ಲದೇ ಸೊಸೈಟಿಯಲ್ಲೇ ಇದ್ದರೂ ಇಲ್ಲ ಎಂದ್ಹೇಳಿಸಿದ್ದು ಕೂಡ ನಮ್ಮ ಗಮನಕ್ಕೆ ಬಂತು.ನೇಮಕಾತಿ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿ ಪ್ರಾಮಾಣಿಕವಾಗಿ, ಪಾರದರ್ಶಕ ವಾಗಿ ಕೆಲಸ ಮಾಡಿದ್ದೇ ಆದಲ್ಲಿ ಈ ಪಲಾಯನವಾದ ಏಕೆ ಮಾಡಬೇಕು..ಇದಕ್ಕೆ ಹುಚ್ಚಪ್ಪ ಅಂಡ್ ಗಂಗಾಧರ್ ಉತ್ತರಿಸ್ತಾರಾ..? ಉತ್ತರಿಸೊಕ್ಕೆ ಮುಖ ಎಲ್ಲಿರ್ಬೇಕು ಹೇಳಿ..(ಗಮನಿಸಿ: ಇವರಿಬ್ಬರಲ್ಲ ದೆ ಸೊಸೈಟಿಯಲ್ಲಿರುವ ಕೆಲವರು ನಡೆಸಿರುವ ಕರ್ಮಕಾಂಡ-ಭ್ರಷ್ಟಾಚಾರದ ರೋಚಕ ಕಥೆಯನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಮುಂದೆ ಹೇಳಲಿದೆ.ಇದಕ್ಕಾಗಿ ಸಾಕ್ಷ್ಯಗಳ ಕ್ರೋಢೀಕರಣ ನಡೆಯುತ್ತಿದೆ.)
ನೇಮಕಾತಿ ಪ್ರಕ್ರಿಯೆಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮತ್ತು ಆಡಳಿತ ಮಂಡಳಿ ಅದಕ್ಕೆ ಪೂರಕ ಎನ್ನುವಂತೆ ನಡೆದುಕೊಳ್ಳುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಈಗಾಗಲೇ ಸಹಕಾರ ಸಂಘಗಳ ವಿಜಿಲೆನ್ಸ್ ಮುಖ್ಯಸ್ಥರಿಗೆ ದೂರು ನೀಡುವ ಪ್ರಕ್ರಿಯೆ ಕೂಡ ನಡೆಯುತ್ತಿದೆ.ಪರೀಕ್ಷೆ ಬರೆದ ಉದ್ಯೋಗಾಕಾಂಕ್ಷಿಗಳಿಗೂ ಆಡಳಿತ ಮಂಡಳಿ ನಮ್ಮನ್ನು ವಂಚಿಸ್ತಿದೆ..ಮೋಸ ಮಾಡ್ತಿದೆ.ಹುದ್ದೆಗಳನ್ನು ಮಾರಿಕೊಳ್ಳೊಕ್ಕೆ ಯತ್ನಿಸ್ತಿದೆ..ಮಂಡಳಿಯಲ್ಲೇ ಇರುವ ಕೆಲವು ಪದಾಧಿಕಾರಿಗಳ ಸಂಬಂಧಿಗಳಲ್ಲೇ ಡೀಲ್ ಕುದುರುತ್ತಿದೆ ಎನ್ನುವ ಅನುಮಾನ ಬಲವಾಗಿ ಕಾಡುತ್ತಿರುವುದ ರಿಂದ ಮುಂದಿನ ವಾರವೇ ಬೃಹತ್ ಪ್ರತಿಭಟನೆ ನಡೆಸೊಕ್ಕೆ ನಿರ್ದರಿಸಿದಂತಿದೆ.ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಸಹಕಾರ ಸಂಘಗಳ ಮುಖ್ಯಸ್ಥರು ತತ್ ಕ್ಷಣಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಬೇಕಿದೆ.. ಅಲ್ಲದೇ ಆಡಳಿತ ಮಂಡಳಿ ವಿರುದ್ದ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕಿದೆ..