-“ಪಕ್ಷ”ದ ಕಳಪೆ ಪ್ರದರ್ಶನಕ್ಕೆ ಚಾನೆಲ್‌” ಮುಚ್ಚೋದು ಸರಿನಾ..?

-“ಬೀದಿ”ಗೆ ಬಿದ್ರೆ ಆ  100 ಕ್ಕೂ ಹೆಚ್ಚು “ಉದ್ಯೋಗಿ”ಗಳ ಬದುಕಿನ ಪಾಡೇನು..?!  

-“ಮುಚ್ಚುವ”  ನಿರ್ಧಾರದ ಪುನರ್‌ “ಪರಿಶೀಲನೆ”ಗೆ ಅವಕಾಶವೇ ಇಲ್ವಾ..?! 

ಬೆಂಗಳೂರು: ಕನ್ನಡದ ಮತ್ತೊಂದು ಸುದ್ದಿ ವಾಹಿನಿ ಇತಿಹಾಸದ ಪುಟ ಸೇರಲಿದೆಯಾ…? ಪರಭಾಷಿಗರಿಗೆ ತೊಡೆ ತಟ್ಟಿ  ಕನ್ನಡಿಗರೇ ಕಟ್ಟಿ ಬೆಳೆಸಿದ ಚಾನೆಲ್‌  ಶಾಶ್ವತವಾಗಿ ತನ್ನ ಕಾರ್ಯಚಟು ವಟಿಕೆ ಸ್ಥಗಿತಗೊಳಿಸಲಿದೆಯಾ..? ಚಾನೆಲ್‌ ನ್ನು ನಂಬಿ ಕೊಂಡಿದ್ದ ನೂರಾರು ಕುಟುಂಬಗಳು “ಅತಂತ್ರ”ಗೊಳ್ಳಲಿವೆಯೇ..? ಕನ್ನಡ ಪ್ಲ್ಯಾಶ್‌ ನ್ಯೂಸ್‌ ನ ಆಶಯ ಖಂಡಿತಾ ಹಾಗಾಗದಿರಲಿ..ಆದ್ರೆ ಒಂದು ಚಾನೆಲ್‌ ನ ಅಸ್ಥಿತ್ವದ ಬಗ್ಗೆ ಅನುಮಾನಾಸ್ಪದವಾಗಿ ಮಾತನಾಡು ತ್ತಿರುವಂಥ ಸುದ್ದಿ ಸಾಕಷ್ಟು ದಿನಗಳಿಂದಲೂ ಮಾದ್ಯಮ ಕ್ಷೇತ್ರದಲ್ಲಿ ಗಂಭೀರವಾಗಿ  ಹರಿದಾಡುತ್ತಿದೆ.

ಹೌದು..ಅನುಮಾನವೇ ಬೇಡಂತೆ..ಈ ನೆಲದ ಸೊಗಡಿನ ಪ್ರತೀಕದಂತಿದ್ದ ಆ ಚಾನೆಲ್‌ ಗೆ ಇದೀದ ಅಸ್ಥಿತ್ವದ ದೊ ಡ್ಡ  ಆತಂಕ ಎದುರಾಗಿದೆಯಂತೆ.ಅದು ಕೂಡ ಕನ್ನಡಿಗರೇ ಕಟ್ಟಿ ಬೆಳೆಸಿದ ಮೊದಲ ಸುದ್ದಿವಾಹಿನಿ ಎನ್ನುವುದು ಗಮನಾರ್ಹ. ಅಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಲೆಕ್ಕಾಚಾರದಂತೆ ನಡುದ್ರೆ, ಅದರ ಅಸ್ಥಿತ್ವ ಈ ತಿಂಗಳೇ ಕೊನೆಯಾಗಬಹುದೆನ್ನಲಾಗುತ್ತಿದೆ. ಒಂದ್ವೇಳೆ  ಹಾಗಾದರೆ, ಆ ಚಾನೆಲ್‌ ನಂಬಿ ಕೊಂಡಿರುವ ನೂರಾರು ಉದ್ಯೋಗಿಗಳ ಕಥೆ ಏನಾಗ ಬೇಡ..?ಅವರ ಬದುಕುಗಳಿಗೆ ಯಾರು ದಿಕ್ಕು..? ಅವರ ಜೀವನಿರ್ವಹಣೆಯ ಕಥೆಯೇನು..? ಚಾನೆಲ್‌ ನ ಉದ್ಯೋಗಿ ಗಳ ಪಾಲಿಗೆ ಇದು ಉತ್ತರ ಸಿಗದ ಪ್ರಶ್ನೆಯಾಗೋಗಿದೆ.

ನಿಮ್‌ ದಾರಿ ನೀವ್‌ ನೋಡಿಕೊಳ್ಳಿ…ಅವಕಾಶ ಸಿಕ್ಕರೆ ಬಿಡಬೇಡಿ..: ಮಾದ್ಯಮ ಲೋಕದಲ್ಲಿ ಚಾನೆಲ್‌ ಮುಚ್ಚುವಂತ ಸುದ್ದಿಗಳು ಗಾಸಿಪ್‌ ರೂಪದಲ್ಲಿ ಹರಿದಾಡೋದು ಕಡಿಮೆ.ಅಲ್ಲಿನ ಉದ್ಯೋಗಿಗಳ ಮೂಲಕವೇ ಪಸರ್‌ ಆಗ್ತಿದೆ. ಅಲ್ಲಿನ ಉದ್ಯೋಗಿಗಳು ಹೇಳುವಂತೆ,ಕೆಲವು ಜಿಲ್ಲಾ ವರದಿಗಾರರು ಅಭಿಪ್ರಾಯಿಸುವಂತೆ, ಉದ್ಯೋಗಿಗಳಿಗೆ ಮೌಖಿಕವಾಗಿ “ನಿಮ್‌ ದಾರಿ ನೀವ್‌ ನೋಡಿಕೊಳ್ಳಿ..” ಎಂದು ಹೇಳಲಾಗಿದೆಯಂತೆ.ಹಾಗಾಗಿನೇ ಬಹುತೇಕ ಉದ್ಯೋಗಿಗಳು ಚಾನೆಲ್‌ ಮುಚ್ಚಕ್ಕೆ ಮುನ್ನವೇ ಬೇರೆಡೆ ಅಸ್ಥಿತ್ವ ಕಂಡುಕೊಳ್ಳೊಕ್ಕೆ ಶುರು ಮಾಡಿದ್ದಾ ರಂತೆ.ಇನ್ನು ಕೆಲವರು ಪರಿಸ್ಥಿತಿ ಸುಧಾರಿಸಬಹುದೇನೋ..? ಸಂಕಷ್ಟಗಳು ದೂರವಾಗಬಹುದೇನೋ  ಆಶಾಭಾವನೆಯಲ್ಲಿ ಒಳ್ಳೆ ಸುದ್ದಿ ಬರುವ  ನಿರೀಕ್ಷೆಯಲ್ಲಿದ್ದಾರಂತೆ.(ಅವರ ನಿರೀಕ್ಷೆ-ಆಶಾಭಾವನೆಯಂತೆಯೇ ಆ ಚಾನೆಲ್‌ ಮುಚ್ಚದಿರಲಿ)

ಚಾನೆಲ್‌ ಮುಚ್ಚುವುದೆಂದರೆ  ಕೇವಲ ಅದರ ಚಟುವಟಿಕೆಗಳು “ಸ್ಥಗಿತ”ವಾಗೋದು ಎಂದಲ್ಲ…?!  ಪತ್ರಿಕೋದ್ಯಮದ ಮಟ್ಟಿಗೆ ಇದು ನಿಜಕ್ಕೂ ಒಳ್ಳೆಯ ಘಟನೆ ಅಲ್ಲ.ಏಕಂದ್ರೆ ಒಂದು ಸುದ್ದಿ ಸಂಸ್ಥೆ ಅದು ಪತ್ರಿಕೆ ಯಾಗಲಿ ಅಥವಾ ಸುದ್ದಿ ವಾಹಿನಿಯಾಗಲಿ ಕಾರ್ಯ ಸ್ಥಗಿತವಾಗುವುದೆಂದರೆ ಅದು ಕೇವಲ ಭೌತಿಕವಾಗಿ ಬಾಗಿಲು ಹಾಕಿಕೊಳ್ಳುವುದ ಲ್ಲ.ಅದರೊಂದಿಗೆ ಬೆಸೆದುಕೊಂಡಿರುವ ಉದ್ಯೋಗಿಗಳ ಬದುಕೇ ಅತಂತ್ರವಾಗು ವುದು ಎಂದರ್ಥ. ಅವರನ್ನೆಲ್ಲಾ ನಿರುದ್ಯೋಗಕ್ಕೆ ದೂಡಲ್ಪಡುವುದು ಎಂದರ್ಥ..

ಸೀಮಿತವಾಗಿರುವ ಉದ್ಯೋಗವಕಾಶಕ್ಕೆ ಸಂಘರ್ಷಕ್ಕಿಳಿಯುವುದು ಎಂದರ್ಥ. ಕೆಲಸಕ್ಕಾಗಿ ಸಂಸ್ಥೆಗಳಿಗೆ ತಡಕಾಡುವ,ಅನಿವಾರ್ಯವಾದ ಜೀವನ ನಿರ್ವಹಣೆಗೆ ಕಡಿಮೆ ಸಂಬಳಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಸಹಾಯಕತೆ ಯನ್ನು ಸೃಷ್ಟಿಸುವುದು ಎಂದರ್ಥ..ಎಲ್ಲಕ್ಕಿಂತ ಅ ಸಂಸ್ಥೆ ತನ್ನ ಉದ್ಯೋಗಿಗಳಷ್ಟೇ ಅಲ್ಲ ಅವರ ಅವಲಂಭಿತರನ್ನು ಬೀದಿಗೆ ತಂದು ನಿಲ್ಲಿಸುವ ಕ್ರೌರ್ಯ ಎಂದರ್ಥ. ಮಾಲಿಕರೆನಿಸಿಕೊಂಡವರಿಗೆ ಉದ್ಯೋಗಿಗಳು ಅನುಭವಿಸಬೇಕಾಗಿ ಬರುವ ಸಂಕಷ್ಟ ಹೇಗೆ ಅರ್ಥವಾದೀತು ಹೇಳಿ..

ಕನ್ನಡಿಗರ ಹೆಮ್ಮೆಯ “ಕಸ್ತೂರಿ ನ್ಯೂಸ್” ಮುಚ್ಚುವ ಭೀತಿಯಲ್ಲಿ…?! ಸಧ್ಯ ಉದ್ಯೋಗಿಗಳ ಮುಂದೆ ಅಂತ‌ ದ್ದೊಂದು ಅನಿಶ್ಷಿತತೆಯನ್ನು ಸೃಷ್ಟಿ ಮಾಡಿದೆ ಎನ್ನಲಾಗುತ್ತಿರುವ ಸುದ್ದಿ ವಾಹಿನಿಯೇ ಕಸ್ತೂರಿ ನ್ಯೂಸ್ ಎನ್ನಲಾ ಗುತ್ತಿದೆ.ಬೇರೆ ನೆಲದ ಬಂಡವಾಳಶಾಹಿಗಳು ಕರ್ನಾಟಕದಲ್ಲಿ ಚಾನೆಲ್‌ ಗಳನ್ನು ಮಾಡಿ ಮೆರೆಯುತ್ತಿದ್ದ ಕಾಲಘಟ್ಟದಲ್ಲಿ ಸ್ವಾಭಿಮಾನಿ ಕನ್ನಡಿಗರ ಅಸ್ಮಿತೆ ಎತ್ತಿಹಿಡಿಯಲಿಕ್ಕೆಂದೇ ಅಸ್ಥಿತ್ವ ಕ್ಕೆ ಬಂದ ಚಾನೆಲ್‌ ಕಸ್ತೂರಿ. ಅಚ್ಚರಿ ಎಂದ್ರೆ  ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ಇದಕ್ಕೆ ಬಂಡವಾಳ ಹಾಕ್ತು.

ಮೊದಲು ಮನರಂಜನೆ ಜತೆಗೆ ಒಂದಷ್ಟು ಸ್ಲಾಟ್‌ ಗಳಲ್ಲಿ ಸುದ್ದಿ ನೀಡ್ತಿತ್ತು.ಇದರ ಉಸ್ತುವಾರಿ ನೋಡಿಕೊಳ್ಳುತ್ತಿರು ವವರು ಅವರ ಪತ್ನಿ ಅನಿತಾ. ನಂತರ ಮಗ ನಿಖಿಲ್‌ ಕೂಡ ಕೈ ಜೋಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ.ಒಂದಷ್ಟು ದಿನವಾದ ಬಳಿಕ ನ್ಯೂಸ್-‌೨೪ ಸುದ್ದಿವಾಹಿನಿಯಾಗಿ ಪೂರ್ಣಪ್ರಮಾಣದಲ್ಲಿ ರೂಪುಗೊಳ್ತು.ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ ಸಾಕಷ್ಟು ಅನುಭವಿಗಳು ಈ ಚಾನೆಲ್‌ ನಲ್ಲಿ ಕೆಲಸ ಮಾಡಿದ್ದು ವಿಶೇಷ.ಈ ಚಾನೆಲ್‌ ನಲ್ಲಿ ಕೆಲಸ ಮಾಡಿದ್ದ ಸಾಕಷ್ಟು ವರದಿಗಾರರು ಇವತ್ತಿಗೂ ಸುದ್ದಿ ಮಾದ್ಯಮದಲ್ಲಿ ಸಕ್ರೀಯರಾಗಿ,ಉತ್ತಮ ಸ್ಥಾನಗಳಲ್ಲಿ ಕೆಲಸ ಮಾಡುತ್ತಿರುವುದನ್ನು ಒಪ್ಪಲೇಬೇಕು.

ಪಕ್ಷದ ಕಳಪೆ ಪ್ರದರ್ಶನಕ್ಕೆ ಚಾನೆಲ್‌ ಮಚ್ಚೋದೆಷ್ಟು ಸೂಕ್ತ..? ಮಾದ್ಯಮ ಲೋಕದಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿರುವ ಕಸ್ತೂರಿ ಕಾರ್ಯ ಸ್ಥಗಿತದ ಬಗ್ಗೆ ಮಾದ್ಯಮ ದಿಗ್ಗಜರು ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯ ಮಂತ್ರಿಯಾಗಿ ಅನೇಕ ತಿಂಗಳು ರಾಜ್ಯವನ್ನುಆಳಿರುವ  ಕುಮಾರಸ್ವಾಮಿ ಕುಟುಂಬಕ್ಕೆ 110 ಉದ್ಯೋಗಿಗಳಿರುವ ಸಂಸ್ಥೆ ನಿಭಾವಣೆ ಮಾಡೋದು ಅಷ್ಟೊಂ ದು ಕಷ್ಟವಾಗುತ್ತಿದೆಯಾ..? ನಂಬೊಕ್ಕೆ ಆಗುತ್ತಿಲ್ಲ. ಅಷ್ಟೊಂದು ವರ್ಷ ನಡೆಸಿ ಕೊಂಡು ಬಂದ ಚಾನೆಲ್‌ ನ್ನು ದಿಢೀರ್‌ ಒಂದು ಕಾರಣವೊಡ್ಡಿ ಸ್ಥಗಿತ ಮಾಡು ವುದು ನಿಜಕ್ಕೂ ಸೂಕ್ತವೇ..? ಸಂಸ್ಥೆಯ ನಿಭಾವಣೆ ಮಾಡೋ ಹೊಣೆಯನ್ನು ಬೇರೆಯವರಿಗೆ ವಹಿಸಿ ಚಾನೆಲ್‌ ನ್ನು ಉಳಿಸಬಹುದಲ್ವಾ..? ಚಾನೆಲ್‌ ನ್ನು ಮುಚ್ಚುವುದರಿಂದ ಉದ್ಯೋಗಿಗಳನ್ನು ಬೀದಿಗೆ ತಂದ ಕಳಂಕ ಕುಮಾರಸ್ವಾಮಿ ಅವರಿಗೆ ತಟ್ಟುವುದಿಲ್ಲವೇ..?

ಆರಂಭದಿಂದಲೂ ಒಂದಲ್ಲ ಒಂದು ವಿಘ್ನ..!? : ಕಸ್ತೂರಬಾ ರಸ್ತೆಯಲ್ಲಿ ಕಾರ್ಯಾರಂಭ ಮಾಡಿ ನಂತರ ಕಾರಣಾಂತರಗಳಿಂದ ನಷ್ಟಕ್ಕೆ ಸಿಲುಕಿ, ಇನ್ನೇನು ಮುಚ್ಚೇ ಬಿಡ್ತು ಎನ್ನುವ ಸನ್ನಿವೇಶದಲ್ಲಿ ಶಾಂತಿನಗರ ದ ಟಿಟಿಎಂಸಿಗೆ ಕಚೇರಿ ಸ್ಥಳಾಂತರವಾದದ್ದು ಈಗ ಇತಿಹಾಸ.ಕೋಟ್ಯಾಂತರ ಖರ್ಚು ಮಾಡಿ ಹೊಸ ವಿನ್ಯಾಸ-ಆಯಾಮದಲ್ಲಿ ಕೆಲಸ ಶುರುವಾಯಿತಾದರೂ ಚಾನೆಲ್‌ ಜನಮಾನಸದಲ್ಲಿ ನಿಲ್ಲೊಕ್ಕೆ ತಿಣುಕಾಡಬೇಕಾಯ್ತು ಎನ್ನುವ ಮಾತುಗಳಿವೆ.ಉದ್ಯೋಗಿಗಳೆಲ್ಲಾ ಚಾನೆಲ್‌ ಬಿಟ್ಟು ಹೋಗಲಾರಂಭಿಸಿದಾಗ ವೃತ್ತಿಪರತೆಯ ಕೊರತೆ ಕಾಡಲಾರಂಭಿಸಿತಂತೆ.ಬಂಡವಾಳ ಹಾಕಿ ಹಾಕಿ ಸುಸ್ತಾದ ಎಚ್ಡಿಕೆ ಕುಟುಂಬ ಆಗಾಗ ನಮ್ಮಿಂದಾಗು ತ್ತಿಲ್ಲ..ಮುಚ್ಚಬೇಕಾಗುತ್ತದೇನೋ ಎಂಬ ಆತಂಕದ ಡೋಸನ್ನು ಆಗಾಗ ಕೊಡುತ್ತಿತ್ತಂತೆ.ಅದು ತುಂಬಾ ಗಂಭೀರ ಸ್ವರೂಪ ಪಡೆದಿದ್ದು ಈ ಬಾರಿಯ ಚುನಾವಣೆ ವೇಳೆ.

ಪಕ್ಷ ಅಧಿಕಾರಕ್ಕೆ ಬಂದ್ರೆ ಚಾನೆಲ್‌ ಇರುತ್ತೆ..ಇಲ್ಲಾಂದ್ರೆ ಮುಚ್ಚಬೇಕಾಗುತ್ತೆ..?!  :  ಮಾದ್ಯಮ ಲೋಕದಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ,ಇಂತದ್ದೊಂದು ಎಚ್ಚರಿಕೆಯನ್ನು ಮ್ಯಾನೇಜ್ಮೆಂಟ್‌ ಮೊದಲೇ ನೀಡಿತ್ತಂತೆ.?ಅಲ್ಲದೇ ಸಾಕಷ್ಟು ಸನ್ನಿವೇಶಗಳಲ್ಲಿಯೂ ಮ್ಯಾನೇಜ್ಮೆಂಟ್‌ ಚಾನೆಲ್‌ ಮುಚ್ಚುವ ಮಾತನ್ನಾಡಿತ್ತಂತೆ.ಇದಕ್ಕೆ ರೆವಿನ್ಯೂ ಕೊರತೆ ಕೂಡ ಕಾರಣವಾಗಿತ್ತಂತೆ.ತಿಂಗಳಿಗೆ ಲಕ್ಷಾಂತರ ಹೂಡಿಕೆ ಮಾಡಿದ್ರೂ ಲಾಭ ಹಾಗೂ ಪ್ರಯೋಜನ ಶೂನ್ಯ ಎನಿಸಿದಾಗ ಇರೋಕ್ಕಿಂತ ಮುಚ್ಚುವುದೇ ಲೇಸು ಎಂಬ ತೀರ್ಮಾನಕ್ಕೆ ಬಂದಿತೆನ್ನುವುದು ಮಾದ್ಯಮಕ್ಷೇತ್ರದಲ್ಲಿ ಹರಿದಾಡುತ್ತಿರುವ ಸುದ್ದಿ.

‌ಚಾನೆಲ್‌ ಗೆ ಯಾವುದೇ ಲಾಭ ಬರುತ್ತಿಲ್ಲ. ಚಾನೆಲ್‌ ಮುಚ್ಚಬೇಕಾಗುತ್ತದೆ ಎಂದು ಆಗಾಗ ನೀಡುತ್ತಿದ್ದರೆನ್ನಲಾದ ಎಚ್ಚರಿಕೆಯನ್ನು ಚಾನೆಲ್‌ ನಲ್ಲಿರುವ “ದೊಡ್ಡವರು” ಎಚ್ಚರಿಕೆ ಕರೆಗಂಟೆಯಾಗಿ ಪರಿಗಣಿಸಬೇಕಿತ್ತೇನೋ.? .ಮಾರ್ಕೆಟಿಂಗ್‌ ವಿಭಾಗವನ್ನು ಆದಾಯ ತರುವ ಮಟ್ಟದಲ್ಲಿ ಸಜ್ಜುಗೊಳಿಸಬೇಕಿತ್ತೇನೋ..? .ಅದನ್ನು ಮಾಡುತ್ತಿ ಲ್ಲ ಎನ್ನುವುದನ್ನು  ಖಾತ್ರಿ ಮಾಡಿಕೊಂಡ ಮೇಲೆಯೇ ಬಹುಷಃ  ಮ್ಯಾನೇಜ್ಮೆಂಟ್‌ ಚಾನೆಲ್‌ ಇಟ್ಕೊಂಡು ಪ್ರಯೋ ಜನವಿಲ್ಲ ಎನ್ನುವ ನಿರ್ದಾರಕ್ಕೆ ಬಂತು ಎನಿಸುತ್ತೆ.(ಏಕೆಂದರೆ ಲಾಭವಿಲ್ಲದೆ ಕೇವಲ ಹೂಡಿಕೆ ಮಾಡುತ್ತಲೇ ಇರಲು ಸಹಜವಾಗೇ ಯಾವುದೇ ಮಾಲೀಕ-ಮ್ಯಾನೇಜ್ಮೆಂಟ್‌ ಒಪ್ಪೋದು ಕಷ್ಟ).

ಚಾನೆಲ್‌ ಮುಚ್ಚಿದ್ರೆ ನಾವೆಲ್ಲಾ ಬೀದಿಗೆ ಬೀಳ್ತೇವೆ ಸಾರ್…‌

“ಈ ಬಗ್ಗೆ ಕನ್ನಡ ಫ್ಲ್ಯಾಶ್‌ ನ್ಯೂಸ್‌, ಕಸ್ತೂರಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾ ಡುವ ಒಂದಷ್ಟು ಉದ್ಯೋಗಿಗಳನ್ನು ಮಾತನಾಡಿಸಿತು. ಚುನಾವಣೆ ಮುನ್ನವೇ ನಮಗೆಲ್ಲಾ ಚಾನೆಲ್‌ ಮುಚ್ಚುವ ಸಾಧ್ಯತೆಗಳಿರುವ ಬಗ್ಗೆ ಹೇಳಲಾಗಿತ್ತು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.ಆದರೆ ಚುನಾವಣೆ ಮುಗಿದ ಮೇಲೆ ಅದರ  ಬಗ್ಗೆ ಗಂಭೀರ ಪ್ರಯತ್ನಗಳಾಗುತ್ತಿವೆ ಎನ್ನಿಸುತ್ತೆ.ಪರಿಸ್ತಿತಿ ವಿಷಮ ವಾಗೋ ಲಕ್ಷಣ ಗೋಚರಿಸುತ್ತಿದೆ.ಕೆಲವರು ಈ  ತಿಂಗಳೇ ಚಾನೆಲ್‌ ಕೊನೆಯಾ ಗಬಹುದು ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ.ಇದರ ನಡುವೆಯೇ ಚಾನೆಲ್‌ ನ್ನು ಬೇರೆಯವರಿಗೆ ವಹಿಸಿಕೊಟ್ಟರೆ ಹೇಗೆ ಎನ್ನುವ ರೀತಿಯಲ್ಲಿಯೂ ಚರ್ಚೆಗಳಾಗುತ್ತಿವೆ.ಚಾನೆಲ್‌ ಮುಚ್ಚದೆ ಬೇರೆಯವ ರಿಗೆ ವಹಿಸಿಕೊಟ್ಟರೆ 110 ಉದ್ಯೋಗಿಗಳ ಬದುಕು ಉಳಿಯುತ್ತದೆ.ಇಲ್ಲವಾದಲ್ಲಿ ನಾವೆಲ್ಲಾ ಬೀದಿಗೆ ಬಂದ್‌ ಬಿಡ್ತೇವೆ ಸಾರ್‌ ಎಂದು ಅಳಲು ತೋಡಿಕೊಂಡ್ರು.

ಎಷ್ಟೇ ತಿಣುಕಾಡಿದ್ರೂ ಲಾಭ ಕಾಣದ ಚಾನೆಲ್‌ ಬಗ್ಗೆ ಅಸಮಾಧಾನ  ಹೊಂದಿದ್ದ ಮ್ಯಾನೇಜ್ಮೆಂಟ್‌ ,ಈ ವಿಚಾರ ವನ್ನು ಚುನಾವಣೆ ವೇಳೆ ಮತ್ತೆ ಮುನ್ನಲೆಗೆ ತಂದಿರಬಹುದೇನೋ..? ಹಾಗಾಗಿ, ಮ್ಯಾನೇಜ್ಮೆಂಟ್‌ ಮುಖ್ಯಸ್ಥರೇ , ಚಾನೆಲ್‌ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರನ್ನು ಕರೆದು,ಈ ಚುನಾವಣೆ ಪಕ್ಷದ ಅಸ್ಥಿತ್ವಕ್ಕೆ ಅಷ್ಟೇ ಅಲ್ಲ, ಚಾನೆಲ್‌ ಉಳಿವು-ಅಳಿವಿನ ಕಾರಣದಿಂದಲೂ “ಮಾಡು ಇಲ್ಲವೇ ಮಡಿ” ಸಿಚುವೇಷನ್.ಪಕ್ಷ ಒಳ್ಳೆಯ ಫರ್ಫಾಮೆನ್ಸ್‌ ಮಾಡಿದ್ರೆ ನಾವೂ ಉಳಿತೀವಿ,ನೀವೂ ಉಳಿತಿರಿ.. ಎಂದು ಸೂಚ್ಯವಾಗಿ ಭವಿಷ್ಯ ನುಡಿದಿದ್ದರೆನ್ನಲಾಗುತ್ತಿದೆ. ಆದರೆ ಚುನಾವಣೆ “ಫಲಿತಾಂಶ” ಏನಾಯ್ತು ಎಂದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್‌ ನ ಹೀನಾಯ ಪ್ರದರ್ಶನದಿಂದ ಕಂಗಾಲಾದ ವರಿಷ್ಟರು ಅಂತಿಮವಾಗಿ ನಖಶಿಖಾಂತ ಉರಿದು ಆ ಅವಸರದಲ್ಲಿ ತೆಗೆದುಕೊಂಡರೆನ್ನಲಾದ ನಿರ್ದಾರವೇ  ಕಸ್ತೂರಿ ನ್ಯೂಸ್‌ ಚಾನೆಲ್‌ ಕಾರ್ಯಸ್ಥಗಿತನಾ..? ಇರಬಹುದೇನೋ..?


ಬುಧವಾರ ಅಥವಾ ಈ ವಾರದಲ್ಲಿ ಈ ಬಗ್ಗೆ ನಿರ್ಣಾಯಕ ಸಭೆ ಇದೆ ಎಂದು ಹೇಳಿದ್ದಾರೆ.ಅವತ್ತು ಚಾನೆಲ್‌ ನ ಭವಿಷ್ಯ ನಿರ್ದಾರವಾಗಬಹುದು.ದೊಡ್ಡವರೆಲ್ಲಾ ಚಾನೆಲ್‌ ಮುಚ್ಚುವುದ ರಿಂದ ಆಗುವಂಥ ಎಲ್ಲಾ ನಷ್ಟ-ತೊಂದ ರೆ ಗಳನ್ನು ಮ್ಯಾನೇಜ್ಮೆಂಟ್‌ ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.ಅವರಿಂದಲೂ ಸಕಾರಾತ್ಮಕವಾದ ಸ್ಪಂದನೆ ಸಿಕ್ಕಿದೆ ಎಂದಿದ್ದಾರೆ.ಚಾನೆಲ್‌ ಮುಚ್ಚದೆ ಬೇರೆಯವರಿಗೆ ವಹಿಸಿಕೊಟ್ಟರೆ ಹೇಗೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲಕ್ಕೂ ಬುಧವಾರದವರೆಗೂ ಕಾದು ನೋಡ ಬೇಕಿದೆ ಸರ್..ಚಾನೆಲ್‌ ಉಳಿಬೇಕು..ಎಂದು ಹೇಳುವಾಗ ನಿಜಕ್ಕೂ ಬೇಸರವಾಯ್ತು.ಆಡಳಿತ ಮಂಡಳಿಗೇಕೆ ಚಾನೆಲ್‌ ಮುಚ್ಚುವ ಆಲೋಚನೆ ಬಂತೋ ಎಂಬ ಪ್ರಶ್ನೆ ಮೂಡಿತು.

ಕನ್ನಡ ಫ್ಲ್ಯಾಶ್‌ ನ್ಯೂಸ್‌ ನ ಆಶಯವೂ ಅದೇ..: ಕೇವಲ ಕಸ್ತೂರಿ ನ್ಯೂಸ್‌ ಚಾನೆಲ್‌ ಅಲ್ಲ.ಯಾವುದೇ ಸುದ್ದಿ ಸಂಸ್ಥೆಗಳು ಬಾಗಿಲು ಹಾಕಿಕೊಳ್ಳಬಾರದು. ಅದನ್ನೇ ನಂಬಿ ಬದುಕು ಕಟ್ಟಿಕೊಂಡಿ ರುವ ಉದ್ಯೋಗಿಗಳು ಕೆಲಸ ಕಳೆದುಕೊಂಡು ಬೀದಿಗೆ ಬೀಳಬಾರದು..ಯಾಕಂದ್ರೆ ಅತಂತ್ರಗೊಂಡು ಪಡಬಾರದ ಕಷ್ಟ ಪಡೋರು ನಮ್ಮ ವೃತ್ತಿಬಾಂಧವರಲ್ವೇ.. ಅವರು ಸುರಿಸೋ ಕಣ್ಣೀರು..ಅನುಭವಿಸುವ ನರಕಯಾತನೆ..ಬೀದಿ ಪಾಲು ಮಾಡಿದವರಿಗೆ ಹಾಕೋ ಹಿಡಿಶಾಪದ ಸನ್ನಿವೇಶ ಎಷ್ಟು ಹೃದಯಹಿಂಡುವಂತದ್ದು ಎನ್ನುವುದನ್ನು ಕಲ್ಪಿಸಿಕೊಳ್ಳಬಲ್ಲೆವು.ಅಷ್ಟೇ ಅಲ್ಲ, ಸಂಸ್ಥೆಯ ಬೆಳವಣಿಗೆ ಮತ್ತು ಅದರ ಉನ್ನತಿಗಾಗಿ ಬೆವರನ್ನು ಸುರಿಸಿದವರು ಅದೇ ಸಂಸ್ಥೆಗೆ ಹಿಡಿಶಾಪ ಹಾಕುವುದು ಕೂಡ ಶ್ರೇಯಸ್ಸುಕರವಲ್ಲ…

ಅಂದ್ಹಾಗೆ ಚಾನೆಲ್‌ ನ ಮಾಲೀಕರಾದ ಕುಮಾರಸ್ವಾಮಿ ಮನಸು ಮಾಡಿದ್ರೆ ಚಾನೆಲ್‌ ಉಳಿಸಿ ಬೆಳೆಸಿಕೊಂಡು ಹೋಗುವುದು ಕಷ್ಟದ ವಿಷಯವೇ ಅಲ್ಲ.. ಅಂತ ದ್ದೊಂದು ಮನಸು ಮಾಡಬೇಕಿದೆ ಅಷ್ಟೇ..ಏಕಂದ್ರೆ ಕಸ್ತೂರಿ ಚಾನೆಲ್‌ ಮುಚ್ಚುವುದೆಂದರೆ ಅದು ಕೇವಲ ಸಂಸ್ಥೆಯನ್ನು ಸ್ಥಗಿತಗೊಳಿಸಿ ಅಲ್ಲಿರುವ ಉದ್ಯೋಗಿಗಳನ್ನು ಬೀದಿ ಪಾಲು ಮಾಡುವುದು ಎನ್ನುವುದಕ್ಕಿಂತ ಕನ್ನಡಿಗರ ಸ್ವಾಭಿಮಾನ-ಅಸ್ಮಿತೆ, ಈ ನೆಲದ ಸೊಗಡು,ಭಾಷೆಯ ಸ್ವಂತಿಕೆಯನ್ನು ಶಾಶ್ವತವಾಗಿ ಸ್ಮಶಾಣ ಮಾಡಿದಂತೆ..ಇದನ್ನು ಮ್ಯಾನೇಜ್ಮೆಂಟ್‌ ಅರ್ಥ ಮಾಡಿಕೊಳ್ಳಬೇಕು..

Spread the love

Leave a Reply

Your email address will not be published. Required fields are marked *

You missed

Flash News