ಬೆಂಗಳೂರು:ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಯುವತಿಯೋರ್ವಳನ್ನು  ಬಲಿ ತೆಗೆದುಕೊಂಡಿದೆ. ಸಂಜೆಯಿಂದ ಆರಂಭವಾದ ಮಳೆಯಿಂದ ಎಲ್ಲಾ ಅಂಡರ್ ಪಾಸ್ ಗಳು ಜಲಾವೃತ್ತವಾಗಿದ್ವು.ಕೆ.ಆರ್ ಸರ್ಕಲ್ ನಲ್ಲಿರುವ ಅಂಡರ್ ಪಾಸ್ ನಲ್ಲಿಯೂ ನೀರು ತುಂಬಿಕೊಂಡಿತ್ತು.

ಇದೇ ಮಾರ್ಗವಾಗಿ ಬಂದ ಆ ಕಾರು ಅಂಡರ್‌ ಪಾಸ್‌ ನಲ್ಲಿ ನೀರು ಸಿಲುಕಿದ್ದನ್ನು ಗಮನಿಸಿದೆ.ಒಂದ್ವೇಳೆ ಕೆಳಗೆ ಬಾರದೆ ಮೇಲಿನ ರಸ್ತೆಯಲ್ಲಿ ಹೋಗಿದ್ರೆ ಈ ದುರಂತವೇ ಸಂಭವಿಸುತ್ತಿರಲಿಲ್ಲ.ಆದರೆ ಅಂಡರ್‌ ಪಾಸ್‌ ನಲ್ಲಿ ನೀರು ಕಡಿಮೆ ಇರಬಹುದೆನ್ನುವ ಲೆಕ್ಕಾಚಾರದಲ್ಲಿ ಕಾರನ್ನು ಚಲಾಯಿಸಲಾಗಿದೆ.ಕಾರು ಚಲಿಸುತ್ತಿದ್ದಂತೆ ನೀರಿನ ಮಟ್ಟ ಹೆಚ್ಚಾಗಿದೆ.ಕಾರನ್ನು ಸ್ಪೀಡಾಗಿ ಚಾಲನೆ ಮಾಡಲು ಯತ್ನಿಸಿದರೂ ಸಾಧ್ಯವಾಗದೆ ಕೆಟ್ಟು ನಿಂತಿದೆ.

ಗಾಬರಿಗೊಂಡ ಕಾರಿನ ಚಾಲಕ ಮಿರರ್‌ ತೆಗೆಯುತ್ತಿದ್ದಂತೆ ಕಾರಿನೊಳಗೆ ನೀರು ನುಗ್ಗಿದೆ.ಸಹಾಯಕ್ಕೆ ಕೂಗಿ ಕೊಂಡಾಗ ಸ್ತಳೀಯರು ಬಂದಿದ್ದಾರೆ.ಹರಸಾಹಸ ಮಾಡಿ ಕಾರನ್ನು ಹೊರ ತೆಗೆದಿದ್ದಾರೆ.ಕಾರಿನೊಳಗೆ ಇದ್ದವರ ಪೈಕಿ  22 ವಯಸ್ಸಿನ ಭಾನುರೇಖಾ ಉಸಿರಾಟದ ತೊಂದರೆಗೆ ಸಿಲುಕಿದ್ದಳು.

ತಡಮಾಡದೆ ತಕ್ಷಣಕ್ಕೆ ಹತ್ತಿರದ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಕೆಲವು ಮೂಲಗಳ ಪ್ರಕಾರ ಆಸ್ಪತ್ರೆಗೆ ತಂದಾಗ ಯುವತಿ ಉಸಿರಾಡುತ್ತಿದ್ದಳಂತೆ.ವೈದ್ಯರು ಚಿಕಿತೆ ಕೊಡುವಲ್ಲಿ ತಡಮಾಡಿದ್ದರಿಂದಾಗಿ ಆಕೆ ಕೊನೆಯುಸಿರೆಳೆದಳು.

ಘಟನೆ ಬಗ್ಗೆ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.ತಕ್ಷಣಕ್ಕೆ ಯುವತಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಅಪಾಯಕಾರಿ ಅಂಡರ್‌ ಪಾಸ್‌ ಗಳನ್ನು ತಕ್ಷಣಕ್ಕೆ ಅಪಾಯಮುಕ್ತಗೊಳಿಸಬೇಕೆಂದು ಸೂಚನೆ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

You missed

Flash News