“ಅಂಡರ್ ಪಾಸ್” ನಲ್ಲಿ ಸಿಲುಕಿದವರನ್ನು ರಕ್ಷಿಸಿದ “ಪಬ್ಲಿಕ್ ಟಿವಿ” ಡ್ರೈವರ್ “ವಿಜಯ್”-“ನ್ಯೂಸ್ ಫಸ್ಟ್” ಕ್ಯಾಮೆರಾಮನ್ “ಅವಿರಾಜ್”-ಹೇಗಿತ್ತು ಗೊತ್ತಾ ಆ 1ವರೆ ಗಂಟೆಯ ಸಿನಿಮೀಯ ರೀತಿಯ ರೋಚಕ ಕಾರ್ಯಾಚರಣೆ .?!
ನಿನ್ನೆ ನಡು ಮದ್ಯಾಹ್ನದಿಂದ ಬೆಂಗಳೂರಿನಲ್ಲಿ ಆರಂಭವಾದ ಮಳೆ ಅಬ್ಬರಿಸಲು ಆರಂಭಿಸಿದಾಗ ರಾಜಕಾಲುವೆ ಮತ್ತು ಅಂಡರ್ ಪಾಸ್ ಗಳು ತುಂಬಿ ಅಪಾಯದ ಮಟ್ಟ ತಲುಪಿದ್ದು ಎಲ್ಲರಿಗೂ ಗೊತ್ತು.ಈ ವೇಳೆ ಕೆ.ಆರ್ ಸರ್ಕಲ್ ಬಳಿ ಇರುವ ಅಂಡರ್ ಪಾಸ್ ಕೂಡ ಫುಲ್ ಆಗಿದ್ದರಿಂದ ಬಹುತೇಕ ವಾಹನ ಸವಾರರು ಆ ಮೂಲಕ ತೆರಳೋದನ್ನು ನಿಲ್ಲಿಸಿದ್ದರು.ಆದರೆ ಆ ಒಂದು ಫ್ಯಾಮಿಲಿಗೆ ಏನಾಗಿತ್ತೋ ಗೊತ್ತಿಲ್ಲ.ಸಾವು ಅಲ್ಲೇ ಕಾದು ಕೂತಿತ್ತೇನೊ ಎನ್ನುವಂತೆ ಅಂಡರ್ ಪಾಸ್ ನಲ್ಲಿ ನಿಂತ ನೀರಿನ ಮೂಲಕವೇ ಚಲಿಸಿದೆ.ಅಂಡರ್ ಪಾಸ್ ಮದ್ಯೆ ನೀರಿನ ಸೆಳೆವು ಹೆಚ್ಚಾಗಿದ್ದರಿಂದ ಕಾರು ನೀರಿನ ಮದ್ಯೆ ಸಿಲುಕಿದೆ.


ಕನ್ನಡ ಫ್ಲ್ಯಾಶ್ ನ್ಯೂಸ್ ಮೀಡಿಯಾ ಹೀರೋಗಳ ಪೈಕಿ ಒಬ್ಬರಾದ ಕ್ಯಾಮೆರಾಮನ್ ಅವಿರಾಜ್ ಅವರನ್ನು ಮಾತನಾಡಿಸಿದಾಗ ಕಾರ್ಯಾಚರಣೆಯ ಸಂಪೂರ್ಣ ಸ್ವರೂಪವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.ಆ ಒಂದೂವರೆ ಘಂಟೆಗಳ ಕಾರ್ಯಾಚರಣೆ ಕೇಳಿದಾದ ಮೈಜುಮ್ಮೆಂದಿತು.ಒಂದ್ ಮೂಮೆಂಟ್ ನಲ್ಲಿ ನಾವೇ ನೀರಿನಲ್ಲಿ ಮುಳುಗಿ ಸಾಯಬೇಕಿತ್ತು ಸಾರ್..ಅಷ್ಟೊಂದು ನೀರು ಸ್ಟೋರ್ ಆಗಿತ್ತು.ಈಜು ಬರುತ್ತಿದ್ದ ಕಾರಣದಿಂದ ಹೇಗೋ ಬಚಾವಾದೆವು.ಕಾರಿನಲ್ಲಿದದ 5 ಜನರ ಪೈಕಿ ನಾಲ್ವರನ್ನು ರಕ್ಷಿಸಿದೆವು.ಆದ್ರೆ ಯುವತಿಯ ಜೀವ ಅದಾಗಲೇ ಹೊರಟೋಗಿತ್ತು.ಬಾಯಿಂದ ನೊರೆ ಬರುತ್ತಿತ್ತು.ಯುವತಿಯ ದೇಹವನ್ನು ಎತ್ತುವಾಗ ಕಣ್ಣಿನಲ್ಲಿ ನೀರು ಬಂದ್ ಬಿಡ್ತು.ಎಲ್ಲಾ ನಾಲ್ಕು ಜನರನ್ನು ಉಳಿಸಿದ ನಮಗೆ ಆಕೆಯನ್ನು ಉಳಿಸಲಾಗಲಿಲ್ಲವಲ್ಲ ಎಂಬ ದುಃಖವಾಯ್ತು.ಆದರೂ ನಾಲ್ಕು ಪ್ರಾಣಗಳನ್ನು ಉಳಿಸಿದ ಹೆಮ್ಮೆ ನನಗಿದೆ ಎಂದು ವಿವರಿಸಿದರು.
ಆ ಮಾರ್ಗವಾಗಿ ಮಳೆಯ ವರದಿ ಮಾಡಿಕೊಂಡು ಬರುತ್ತಿದ್ದ ಪಬ್ಲಿಕ್ ಟಿವಿ ಕ್ರೈಮ್ ವರದಿಗಾರ ನಾಗೇಶ ನಾಯ್ಕ್ ಅಂಡ್ ಟೀಮ್ ಅಂಡರ್ ಪಾಸ್ ನಲ್ಲಿ ಕೇಳಿಬರುತ್ತಿದ್ದ ಅರಚಾಟ ನೋಡಿ ಕಾರು ನಿಲ್ಲಿಸಿದ್ದಾರೆ.ಡ್ರೈವರ್ ವಿಜಯ್ ಗೆ ಈಜು ಬರುತ್ತಿದ್ದುದ್ದರಿಂದ ತಕ್ಷಣವೇ ಆತನನ್ನು ಅಂಡರ್ ಪಾಸ್ ಗೆ ಇಳಿಯೊಕ್ಕೆ ತಿಳಿಸಿದ್ದಾರೆ.ತನ್ನ ಬಳಿ ಲೈವ್ ಪ್ಯಾಕ್ ಇದ್ದುದ್ದರಿಂದ ಆಳಕ್ಕೆ ಇಳಿಯಲಾಗಲಿಲ್ಲ.ಆದರೂ ರೆಸ್ಕ್ಯೂನಲ್ಲಿ ಜನರನ್ನು ಸೇರಿಸಿ ಕಾರ್ಯಾಚರಣೆ ಯಶಸ್ವಿಯಾಗೊಕ್ಕೆ ಕಾರಣವಾಗಿದ್ದು ಇದೇ ನಾಗೇಶ್.ಅಪಾಯಕ್ಕೆ ಸಿಲುಕಿದ್ದ ಒಂದಿಡೀ ಕುಟುಂಬವನ್ನು ಡ್ರೈವರ್ ವಿಜಯ್ ತಮ್ಮ ಪ್ರಾಣದ ಹಂದು ತೊರೆದು ರಕ್ಷಿಸಿದ್ದು ಮಾತ್ರ ಪ್ರಶಂಸನೀಯ.
ಮಾದ್ಯಮಗಳ ಮೇಲೆ ಮೊದಲಿಂದಲೂ ಒಂದು ಅಪವಾದವಿದೆ.ದುರಂತ ನಡುದ್ರೆ ಅದರ ವೀಡಿಯೋ ತೆಗೆಯೋದ್ರಲ್ಲಿ ಬ್ಯುಸಿ ಇರ್ತಾರೆಯೇ ಹೊರತು,ಅವರನ್ನು ರಕ್ಷಿಸುವ ಉಸಾಬರಿಗೇ ಹೋಗುವುದಿಲ್ಲ.ಅವರಿಗೆ ಕೇವಲ ಸುದ್ದಿ-ಕವರೇಜ್ ಮಾತ್ರ ಬೇಕು.ಯಾರ್ ಸಾಯ್ಲಿ ಬಿಡ್ಲಿ ಎನ್ನುವುದು ಅವರಿಗೆ ನೆಗ್ಲೆಕ್ಟ್ ಸಬ್ಜೆಕ್ಟ್ ಎಂದು ಜನ ಮಾತನಾಡಿಕೊಳ್ಳುತ್ತಾರೆ.ಆದರೆ ಸುದ್ದಿ ಜತೆಗೆ ಮಾನವೀಯತೆಯೂ ನಮ್ಮಲ್ಲಿದೆ ಎನ್ನುವುದನ್ನು ಈ ಘಟನೆ ಸಾಬೀತುಮಾಡಿದೆ.ನಾವು ಕೇವಲ ಸುದ್ದಿ ಕವರೇಜ್ ಮಾಡುವವರಲ್ಲ ಸಂದರ್ಭ ಬಂದ್ರೆ ಪ್ರಾಣ ಲೆಕ್ಕಿಸದೆ ಇನ್ನುಳಿದವರ ಪ್ರಾಣವನ್ನೂ ಉಳಿಸುತ್ತೇವೆ ಎನ್ನುವ ಸಂದೇಶವನ್ನು ತಮ್ಮ ಕೆಲಸದ ಮೂಲಕ ಮಾಡಿ ತೋರಿಸಿದ್ದಾರೆ ಕ್ಯಾಮರ್ ಮನ್ ಅವಿರಾಜ್ ಮತ್ತು ಡ್ರೈವರ್ ವಿಜಯ್.
ಇವರಿಬ್ಬರ ಕಾರ್ಯಸಾಧನೆ ಇಡೀ ಮಾದ್ಯಮ ಲೋಕದ ಹೆಮ್ಮೆ.ಕೇವಲ ಹಾಡಿ ಹೊಗಳುವುದಕ್ಕಷ್ಟೆ ಇವರ ಕಾರ್ಯಸಾಧನೆ ಸೀಮಿತಗೊಳಿಸದೆ ಅದನ್ನು ಗೌರವಿಸುವ ಕೆಲಸ ಮಾಡಬೇಕಿದೆ.ಸಮಾಜ ಗುರುತಿಸಿ ಗೌರವಿಸುವಂತೆ ಮಾಡಬೇಕಿದೆ. ಶೌರ್ಯ ಪ್ರಶಸ್ತಿಗೆ ಇವರಿಬ್ಬರ ಹೆಸರನ್ನು ನಮ್ಮ ಮಾದ್ಯಮಗಳು ಶಿಫಾರಸ್ಸು ಮಾಡಬೇಕಿದೆ.ಈಗಾಗಲೇ ಮಾದ್ಯಮ ಸ್ನೇಹಿತರು ಇವರಿಬ್ಬರಿಗೆ ಬೆಂಗಳೂರಿನ ಹೆಮ್ಮೆಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಪರಿಗಣಿಸಬೇಕೆಂದು ಬಿಬಿಎಂಪಿ ಆಯುಕ್ತ ತುಷಾರಗಿರಿನಾಥ್ ಅವರಿಗೆ ಮನವಿ ಕೂಡ ಮಾಡಿದೆ.
ಅನೇಕ ಕಾರಣಗಳಿಂದ ಮಾದ್ಯಮಗಳ ಬಗ್ಗೆ ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನೆಯಾಗುತ್ತಿರುವ ಇವತ್ತಿನ ಸನ್ನಿವೇಶದಲ್ಲಿ ವಿಜಯ್ ಹಾಗೂ ಅವಿರಾಜ್ ಅವರ ಮಾನವೀಯ ಕಳಕಳಿಯ ಕಾರ್ಯ ಮಾದ್ಯಮದ ಘನತೆ ಹಾಗೂ ಗೌರವವನ್ನು ಎತ್ತಿ ಹಿಡಿದಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.. ಇವರಿಬ್ಬರಿಗೆ ನಮ್ಮ ಮಾದ್ಯಮ ಹ್ಯಾಟ್ಸ್ ಆಫ್ ಹೇಳಲೇಬೇಕು.