ದೇಶದ ಅತ್ಯುನ್ನತ ಸರ್ಕಾರಿ ಸೇವಾ ಪರೀಕ್ಷೆ ಎಂದ್ರೆ ಅದು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)ನ ಪರೀಕ್ಷೆ.ಅದರಲ್ಲಿ ರ್ಯಾಂಕ್‌ ಬರುವುದು ಪ್ರತಿಯೋರ್ವರ ಕನಸು.ಆದರೆ ಪರೀಕ್ಷೆ ಬರೆಯುವ ಎಲ್ಲರಿಗೂ ರ್ಯಾಂಕ್‌ ಗಳಿಸೋದು ಸಾಧ್ಯವಾಗೊಲ್ಲ.ಆದರೆ ಪರಿಶ್ರಮದ ಮುಂದೆ ಯಾವುದು ಅಸಾಧ್ಯವಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.ಇಂದು  2022ರ ಬಹು ನಿರೀಕ್ಷಿತ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದೆ. ಮಹಿಳೆಯರೇ ಅಗ್ರಗಣ್ಯರೆನಿಸಿದ್ದಾರೆ.ಏಕೆಂದರೆ ಮೊದಲ ನಾಲ್ಕು ರ್ಯಾಂಕ್‌ ಗಳಷ್ಟೇ ಅಲ್ಲ ಟಾಪ್‌ 10 ರಲ್ಲಿ 6 ರ್ಯಾಂಕ್‌ ಗಳನ್ನೂ ಮಹಿಳೆಯರು ಪಡೆದಿದ್ದಾರೆ.

ಅಂದ್ಹಾಗೆ ಫಲತಾಂಶದಲ್ಲಿ ದೆಹಲಿ ಮೂಲದ 26  ವರ್ಷದ   ಇಶಿತಾ ಕಿಶೋರ್ ಮೊದಲ ಸ್ಥಾನ ಪಡೆದಿದ್ದಾರೆ.ಅಂದ್ಹಾಗೆ ತಮ್ಮ ಮೂರನೇ ಪ್ರಯತ್ನದಲ್ಲಿ ಇಶಿತಾ ಈ ಸಾಧನೆ ಮಾಡಿದ್ದಾರೆ. ಬಿಹಾರದ  ಗರಿಮಾ ಲೋಹಿಯಾ ಎರಡನೇ ಸ್ಥಾನ,ಉಮಾ ಹರತಿ ಎನ್. ಮೂರನೇ ಶ್ರೇಣಿ ಪಡೆದಿದ್ದು, ಟಾಪ್ 10 ಪಟ್ಟಿಯಲ್ಲಿ, ಸ್ಮೃತಿ ಮಿಶ್ರಾ, ಮಯೂರ್ ಹಜಾರಿಕಾ, ಗಹನಾ ನವ್ಯಾ ಜೇಮ್ಸ್, ವಸೀಮ್ ಅಹ್ಮದ್ ಭಟ್, ಅನಿರುದ್ಧ್ ಯಾದವ್, ಕನಿಕಾ ಗೋಯಲ್ ಮತ್ತು ರಾಹುಲ್ ಶ್ರೀವಾಸ್ತವ್‌  ಸ್ಥಾನ  ಪಡೆದಿದ್ದಾರೆ.  ನಾಗರಿಕ ಸೇವಾ ಪರೀಕ್ಷೆಯಲ್ಲಿ 933 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಅರ್ಹತೆ ಪಡೆದವರ ವರ್ಗವನ್ನು ಗಮನಿಸಿದಾಗ,ಸಾಮಾನ್ಯ ವರ್ಗದಿಂದ 345 ಅಭ್ಯರ್ಥಿಗಳು, ಇಡಬ್ಲ್ಯೂಎಸ್ ವರ್ಗದಿಂದ 99 ಅಭ್ಯರ್ಥಿಗಳು, ಒಬಿಸಿ ವರ್ಗದಿಂದ 263 ಅಭ್ಯರ್ಥಿಗಳು, ಎಸ್‌ಸಿ ವರ್ಗದಿಂದ 154 ಅಭ್ಯರ್ಥಿಗಳು ಮತ್ತು ಎಸ್‌ಟಿ ವರ್ಗದಿಂದ 72 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.  UPSC ಅಂತಿಮ ಫಲಿತಾಂಶದ ಅನ್ವಯ ವಿವಿಧ ಸೇವೆಗಳಲ್ಲಿ ಒಟ್ಟು 1022 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಈ ಹುದ್ದೆಗಳನ್ನು ಸಾಮಾನ್ಯ 434, EWS ಗೆ 99, OBC 263, SC 154 ಮತ್ತು ST ಅಭ್ಯರ್ಥಿಗಳಿಗೆ 72ಗಳಂತೆ ವಿವಿಧ ವರ್ಗಗಳಲ್ಲಿ ವಿತರಿಸಲಾಗುವುದು. ಅಲ್ಲದೆ, IAS, IFS, IPS, ಕೇಂದ್ರ ಸೇವೆಗಳ ಗುಂಪು ‘A’ ಮತ್ತು ಗುಂಪು ‘B’ ಸೇವೆಗಳು ಸೇರಿರುತ್ತವೆ ಎನ್ನುವುದು ಗಮನಾರ್ಹ.

ಅಂದ್ಹಾಗೆ  UPSC ಸಿವಿಲ್ ಸರ್ವೀಸಸ್ ಪರೀಕ್ಷೆಯು ವಿಶ್ವದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ.ಇದರಲ್ಲಿ  ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಪೊಲೀಸ್ ಸೇವೆ (IPS)ಗೆ ಆಯ್ಕೆ ನಡೆಸಲಾಗುತ್ತದೆ.ಅಷ್ಟೇ ಅಲ್ಲ, ಇತರ ಗುಂಪು A ಮತ್ತು B ನಾಗರಿಕ ಸೇವೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು

ಕರ್ನಾಟಕದಿಂದಲೂ ಸಾಧನೆ: 25ಕ್ಕೂ ಹೆಚ್ಚು ಅಭ್ಯರ್ಥಿಗಳ ಆಯ್ಕೆ: ಅಂದ್ಹಾಗೆ ಯುಪಿಎಸ್‌ ಸಿ ಪರೀಕ್ಷೆಯಲ್ಲಿ ಕರ್ನಾಟಕದ ಸಾಧನೆಯೂ ಕಳೆಪೆಯಾಗೇನೂ ಇಲ್ಲ.ಆ ಅಭ್ಯರ್ಥಿಗಳ ಹೆಸರುಗಳು ಪ್ರಕಟವಾಗಬೇಕಿದ್ದು ನಾಳೆಯೊಳಗೆ ಆ ಸಾಧಕರ ಪಟ್ಟಿ ಪ್ರಕಟವಾಗಲಿದೆ.

ಟಾಪ್‌ 20 ರ್ಯಾಂಕ್‌ ಪಡೆದ ಸಾಧಕರು
  1. ಇಶಿತಾ ಕಿಶೋರ್
  2. ಗರಿಮಾ ಲೋಹಿಯಾ
  3. ಉಮಾ ಹರತಿ ಎನ್​
  4. ಸ್ಮೃತಿ ಮಿಶ್ರಾ
  5. ಮಯೂರ್ ಜಜಾರಿಕ
  6. ಗಹನಾ ನವ್ಯಾ ಜೇಮ್ಸ್
  7. ವಾಸೀಂ ಅಹ್ಮದ್ ಭಟ್
  8. ಅನಿರುದ್ಧ್ ಯಾದವ್
  9. ಕನಿಕಾ ಗೋಯಲ್
  10. ರಾಹುಲ್ ಶ್ರೀವತ್ಸವ್
  11. ಪ್ರಸಂಜೀತ್ ಕೌರ್
  12. ಅಭಿನವ್ ಸಿವಚ್
  13. ವಿದುಸಿ ಸಿಂಗ್
  14. ಕೃತಿಕಾ ಗೋಯಲ್
  15. ಸ್ವಾತಿ ಶರ್ಮಾ
  16. ಶಿಶಿರ್ ಕುಮಾರ್ ಸಿಂಗ್
  17. ಅವಿನಾಶ್ ಕುಮಾರ್
  18. ಸಿದ್ದಾರ್ಥ್ ಶುಕ್ಲಾ
  19. ಲಘಿಮಾ ತಿವಾರಿ
  20. ಅನೌಷ್ಕಾ ಶರ್ಮಾ
Spread the love

Leave a Reply

Your email address will not be published. Required fields are marked *

You missed

Flash News