ಭಾರೀ “ನಷ್ಟ”ದಲ್ಲಿರುವ “ಸಾರಿಗೆ” ನಿಗಮಗಳನ್ನು “ದಿವಾಳಿ”ಯಂಚಿಗೆ ಕೊಂಡೊಯ್ಯುತ್ತಾ “ಫ್ರೀ ಪ್ರಯಾಣ”ದ ಸ್ಕಿಂ..

ಬೆಂಗಳೂರು: ನಿಜಕ್ಕು ಇಂತದ್ದೊಂದು ಆತಂಕ-ಅನುಮಾನ ಕಾಡುತ್ತಿರೋದಂತೂ ನಿಜ..ಬರಬೇಕಿರುವ ಸಾವಿರಾರು ಕೋಟಿ ಬಾಕಿ ಅನುದಾನಕ್ಕೆ ಸರ್ಕಾರದ ಮುಂದೆ ಕೈ ಒಡ್ಡಿ ನಿಂತಿರುವ ಸಾರಿಗೆ ನಿಗಮಗಳನ್ನು ಯಾವ್ ರೀತಿ ನಿರ್ಲಕ್ಷ್ಯಿಸಿದೆ ಎನ್ನುವುದು ಗೊತ್ತಿದೆ. ಕಾಡಿ ಬೇಡಿದ್ರೂ ಸಿಗ್ತಾ ಬಂದಿರುವುದು ಹಸಿದ ಹೊಟ್ಟಗೆ ಅರೆಕಾಸಿನ ಮಜ್ಜಿಗೆ ಎನ್ನಬಹುದಾದ ಅನುದಾನ.ಸಾರಿಗೆ ನಿಗಮಗಳ ಪರಿಸ್ಥಿತಿ ಇಷ್ಟೊಂದು ದಯನೀಯವಾಗಿರುವಾಗ,ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿರುವ ಉಚಿತ ಬಸ್ ಪಾಸ್ ನಿಂದ ಹೊರೆಯಾಗಬಹುದಾದ ನೂರಾರು ಕೋಟಿ ಭಾರವನ್ನು ಹೇಗೆ ಸಹಿಸಿಕೊಳ್ಳುತ್ತೆ..ನಿಜಕ್ಕೂ ಸರ್ಕಾರ ಸಾರಿಗೆ ನಿಗಮಗಳ ನೆರವಿಗೆ ಮುಂದಾಗುತ್ತಾ..? ಇವೆಲ್ಲಾ ಸಧ್ಯಕ್ಕೆ ಸೃಷ್ಟಿಯಾಗಿರುವ ಪ್ರಶ್ನೆಗಳು.

“ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ನಾಲ್ಕೂ ನಿಗಮಗಳಲ್ಲಿ ನಿತ್ಯ  22ರಿಂದ 23 ಸಾವಿರ ಬಸ್‌ಗಳು ಕಾರ್ಯಾಚರಣೆಗೊಳ್ಳು ತ್ತವೆ. ಹತ್ತಿರತ್ತಿರ 1ಕೋಟಿಯಷ್ಟು ಜನ ನಿತ್ಯ ಬಸ್ ಗಳನ್ನು ಅವಲಂಭಿಸಿದ್ದಾರೆ. ನಿತ್ಯ 4 ನಿಗಮಗಳ ಗಳಿಕೆ 25  ಕೋಟಿ ಎನ್ನಲಾಗುತ್ತಿದೆ.ಮಹಿಳೆಯರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ ಮಾಡುವುದರಿಂದ ಅರ್ದಕ್ಕರ್ದ ಗಳಿಕೆ ಖೋತಾ ಆಗಲಿದೆ ಅಂದ್ರೆ 25 ಕೋಟಿಯಲ್ಲಿ 12-15 ಕೋಟಿ ಗಳಿಕೆ  ಕಡಿತವಾಗಲಿದೆ”

ನಮ್ಮದು ದೇಶದಲ್ಲೇ ಮಾದರಿಯಾಗಬಲ್ಲ ಸಾರಿಗೆ ವ್ಯವಸ್ಥೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಇಡೀ ದೇಶವನ್ನು ಸುತ್ತಿ ಅಲ್ಲಿರುವ ಸಾರಿಗೆ ವ್ಯವಸ್ಥೆಯ ಅನುಭವ ಮಾಡಿದವರಿಗೆ ನಮ್ಮ ರಾಜ್ಯದ ಸಾರಿಗೆ ಸಾವಿರ..ಸಾವಿರ ಪಾಲು ಬೆಟರ್ ಎನಿಸದೆ ಇರೊಲ್ಲ ಎನ್ನುವುದು ಕೂಡ ಅಷ್ಟೆ ಸತ್ಯ.ಆದರೆ ಇಂಥಾ ಭವ್ಯ ಹಾಗೂ ಅದ್ಭುತವಾದ ಸಾರಿಗೆ ವ್ಯವಸ್ಥೆಯ ಇತಿಹಾಸವನ್ನು ಹಾಳು ಮಾಡುವ ಕೆಲಸ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತದಿಂದ ವ್ಯವಸ್ಥಿತವಾಗಿ ನಡೆಯುತ್ತಾ ಬಂದಿದೆ ಎನ್ನುವುದು ಕೂಡ ಅಷ್ಟೇ ಸತ್ಯ.

ಕೆಲ ವರ್ಷಗಳವರೆಗೆ ಲಾಭದಲ್ಲಿದ್ದ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ  ಇವತ್ತು ಯಾವ್ ಮಟ್ಟದಲ್ಲಿ ಶೋಚನೀಯವಾಗಿದೆ ಎಲ್ಲರಿಗೂ ಗೊತ್ತಿರುವ ವಿಚಾರವೆ.ಆಳುವ ಸರ್ಕಾರಗಳು ಸಾರಿಗೆ ನಿಗಮಗಳಿಗೆ ಭರವಸೆ ನೀಡಿದಷ್ಟು ಅನುದಾನ ಕೊಟ್ಟಿದಿದ್ದರೆ ಇವತ್ತು ಪರಿಸ್ಥಿತಿ ಸಹನೀಯವಾಗುತ್ತಿತ್ತೇನೋ..? ಅದರ ಜತೆಗೆ ಆಡಳಿತ ಮಂಡಳಿಯ ದುರಾಡಳಿತವು ಸಾರಿಗೆ ನಿಗಮಗಳ ವ್ಯವಸ್ಥೆ ಎಕ್ಕುಟ್ಟೋಗಲು ಕಾರಣವಾಯ್ತೇನೋ..? ಅದೆಲ್ಲದರ ದುಷ್ಪರಿಣಾಮ ಇವತ್ತು ಸಾರಿಗೆ ನಿಗಮಗಳು ದಿವಾಳಿಯಂಚಿಗೆ ತಲುಪುವಂತೆ ಮಾಡಿದೆ ಎನ್ನುವುದು ಸಾರಿಗೆ ನಿಗಮಗಳ ವ್ಯವಸ್ಥೆಯನ್ನು ಅನೇಕ ದಶಕಗಳಿಂದ ನೋಡುತ್ತಾ ಬಂದಿರುವ ಹಿರಿಯರ ಮಾತು.

“ಡೀಸೆಲ್ ಗೆ 12-15 ಕೋಟಿ. ಇನ್ನು ಈ ಹಣದಲ್ಲಿ ಡೀಸೆಲ್ ಗೇನೆ 10ರಿಂದ 12 ಕೋಟಿ ರೂ. ಖರ್ಚಾಗುತ್ತಿದೆಯಂತೆ. ಗಳಿಕೆಯಾಗುವುದೆಲ್ಲಾ ಬಹುತೇಕ ಡೀಸೆಲ್ ಗೇ ಖರ್ಚಾದ್ರೆ ಕಾರ್ಮಿಕ ಸಿಬ್ಬಂದಿ ವೇತನವನ್ನೇಗೆ ನೀಡುವುದು,ಇತರೆ ಖರ್ಚುಗಳನ್ನೇಗೆ ನಿಭಾಯಿಸುವುದು ಎಂದು ಈಗಾಗಲೇ ಸಾರಿಗೆ ನಿಗಮಗಳ ಆಡಳಿತವೇ ಚಿಂತಾಕ್ರಾಂತವಾಗಿದೆಯಂತೆ.ಒಂದು ಅಂದಾಜಿನ ಪ್ರಕಾರ 4 ಸಾರಿಗೆ ನಿಗಮಗಳಿಗೆ ಈ ಫ್ರೀ ಬಸ್ ಪ್ರಯಾಣದ ಸ್ಕೀಂನಿಂದ ವಾರ್ಷಿಕ 2ವರೆಯಿಂದ 3 ಸಾವಿರ ಕೋಟಿಯಷ್ಟು ಆರ್ಥಿಕ ಹೊರೆಯಾಗಲಿದೆಯಂತೆ”

ಇದೆಲ್ಲವನ್ನು ಒತ್ತಟ್ಟಿಗಿಟ್ಟು ಪ್ರಸ್ತುತ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಆಗಬಹುದಾದ  ಸಾಧಕ ಬಾಧಕಗಳ ಬಗ್ಗೆ ಆಲೋಚಿಸುವುದಾದ್ರೆ ಸರ್ಕಾರ ಸಾರಿಗೆ ನಿಗಮಗಳಿಗೆ ನಿರೀಕ್ಷೆಯಷ್ಟು ಸಹಾಯಧನ-ಅನುದಾನ ನೀಡಿದ್ರೆ ಈ ಸ್ಕೀಂ ಯಶಸ್ವಿಯಾಗ್ಬೋದು..ಇಲ್ಲದಿದ್ದರೆ ತಿಂಗಳೊಳಗೆ ವಿಫಲವಾಗೋದ್ರಲ್ಲಿ ಅನುಮಾನವೇ ಇಲ್ಲ ಎನ್ನುತ್ವೆ ಸಾರಿಗೆ ನಿಗಮಗಳ ಕೆಲ ವಿಶ್ವಾಸನೀಯ ಅಧಿಕಾರಿಗಳ ಮೂಲ.

ಇದಕ್ಕೆ ಕಾರಣವೂ ಇದೆ.ಸಾರಿಗೆ ನಿಗಮಗಳ ಇವತ್ತು ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿದೆ ಎನ್ನುವುದಾದ್ರೆ ಅದಕ್ಕೆ ಮುಖ್ಯ ಕಾರಣವೇ ಸರ್ಕಾರಗಳ ನಿರ್ಲಕ್ಷ್ಯ.ಸಾರಿಗೆ ನಿಗಮಗಳು ಪ್ರತಿ ವರ್ಷ  ಕೇಳುವ ಅನುದಾನದಲ್ಲಿ ಸರ್ಕಾರ ಕೊಡುವುದು ಅಲ್ಪವನ್ನು ಮಾತ್ರ.1000 ಕೋಟಿ ಕೇಳಿದ್ರೆ 150-200 ಕೋಟಿ ಸಿಕ್ಕರೂ ಹೆಚ್ಚೇ..ಸರ್ಕಾರಗಳೇ ನಿಗಮಗಳನ್ನು ವ್ಯವಸ್ತಿತವಾಗಿ ನಿರ್ಲಕ್ಷ್ಯಿಸುತ್ತಿರುವುದರಿಂದಲೇ ಸಾರಿಗೆ ನಿಗಮಗಳ ಆರ್ಥಿಕ ಸ್ತಿತಿ ವರ್ಷದಿಂದ ವರ್ಷಕ್ಕೆ ಶೋಚನೀಯವಾಗುತ್ತಾ ಬಂದಿದೆ.ಇವತ್ತು ಸಾರಿಗೆ ನಿಗಮಗಳು ದಂಡಿ ಸಮಸ್ಯೆಗಳನ್ನು ಎದುರಿಸುತ್ತಿದೆ.ಸಾರಿಗೆ ಸಿಬ್ಬಂದಿಗೆ ಸಂಬಳ ಕೊಡ್ಲಿಕ್ಕೂ ಆಗದಷ್ಟು ಹಣದ ಕೊರತೆಯನ್ನು ಸಾರಿಗೆ ನಿಗಮಗಳು ಎದುರಿಸುತ್ತಿವೆ.ಅನುದಾನ ಮತ್ತು ಸಹಾಯಧನಕ್ಕೆ ಸಂಪೂರ್ಣ ಸರ್ಕಾರದ ಮೇಲೆಯೇ ಅವಲಂಬನೆ ಆಗಬೇಕಾದ ಸ್ತಿತಿಯಿದೆ.ಆದರೆ ನೆರವು ಕೊಡಬೇಕಾದ ಸರ್ಕಾರ ಮೂಗಿಗೆ ತುಪ್ಪ ಸವರಿ ಸಮಾಧಾನ ಮಾಡುತ್ತಾ ಬಂದಿದೆ.

“ಸಾಲ ಮಾಡುವುದು ಅನಿವಾರ್ಯವಾಗುತ್ತಾ..?ಹೌದು ಸಾರಿಗೆ ನಿಗಮಗಳ ಮುಂದೆ ಬೃಹದಾಕಾರವಾಗಿ ಬೆಳೆದುನಿಂತಿರುವ ಪ್ರಶ್ನೆಯೇ ಇದು.ಸರ್ಕಾರ ನಿರೀಕ್ಷೆಯಷ್ಟನ್ನು ಕೊಡಲಾಗಲ್ಲ ಎಂದ್ರೆ ನಿರ್ವಹಣೆಗೆ ಏನ್ ಮಾಡೋದು,,? ಸಾಲ ಮಾಡೋದು ಅಥವಾ ಇರುವ ಆಸ್ತಿಗಳನ್ನು ಮಾರುವುದು ಅಥವಾ ಅಡಮಾನ ಇಡುವುದು..ಖಾಸಗಿ ಸಂಸ್ಥೆಗಳ ಸೇವೆಯನ್ನು ಪಡೆಯೋದು ಅನಿವಾರ್ಯವಾಗುತ್ತಾ..? ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಜತೆಗೆ ಸಾರಿಗೆ ಸಿಬ್ಬಂದಿಯ ಸೇವಾ ಕಡಿತ ಅನಿವಾರ್ಯವಾಗಲಿದೆಯೇ ಎನ್ನುವ ಪ್ರಶ್ನೆಗಳ ಬಗ್ಗೆ ಚರ್ಚೆ ನಡೆಯುತ್ತಿದೆಯಂತೆ”

ಸ್ಕೂಲ್ ಮಕ್ಕಳು,.ವಿಕಲಚೇತನರು, ಹಿರಿಯ ನಾಗರಿಕರು,ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ಬಸ್ ಪಾಸ್ ಗಳ ಹಣವನ್ನು ಸರ್ಕಾರ ಸರಿಯಾಗಿ ಪಾವತಿಸುತ್ತಿಲ್ಲ ಎನ್ನುವ ಮಾಹಿತಿಯಿದೆ.ಸರ್ಕಾರಿ ಕಾರ್ಯಕ್ರಮಗಳಿಗೆ ಬಾಡಿಗೆ/ಒಪ್ಪಂದದ ಮೇಲೆ ಪಡೆದ ಬಸ್ ಗಳಿಗೆ ಕೊಡಬೇಕಾದ ಕೋಟ್ಯಾಂತರ ಹಣವೂ ಬಾಕಿಯಿದೆ.  ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರ ಅದರ ಹಣವನ್ನು ಕೊಟ್ಟಿಲ್ಲ. ಈಗ ಬರುತ್ತಿರುವ ಗಳಿಕೆಯಲ್ಲಿ ಸಂಬಳ ಮತ್ತು ಡೀಸೆಲ್ ಗೇನೇ ಖರ್ಚಾಗುತ್ತಿದೆ. ಎಲೆಕ್ಟ್ರಿಕ್ ಬಸ್ ಗಳಿಂದ ಬರುತ್ತಿರುವ ಆದಾಯವೂ ಅಷ್ಟಕ್ಕಷ್ಟೇ ಇದೆ.ಇಷ್ಟೆಲ್ಲಾ ಸಮಸ್ಯೆಗಳ ನಡುವೆ ನಲುಗುತ್ತಿರುವ ಸಾರಿಗೆ ನಿಗಮಗಳು ಪ್ರೀ ಬಸ್ ಸಂಚಾರದ ಸ್ಕೀಂನಿಂದ ಮತ್ತಷ್ಟು ಬಸವಳಿಯುವ ಸಾಧ್ಯತೆಗಳಿವೆ ಎನ್ನುತ್ತಾರೆ ಸಾರಿಗೆ ಸಿಬ್ಬಂದಿ.

“ಬೇಕಾಬಿಟ್ಟಿ ಸಂಚರಿಸುವಂತಿಲ್ವೇ.?ಇಂತಿಷ್ಟೇ ಕಿಮೀಗೆ ಸೀಮಿತವಾಗಲಿದೆಯೇ ಸಂಚಾರ:ಇಂತದ್ದೊಂದು ಚಿಂತನೆ ನಡೆಯುತ್ತಿರುವ ಬಗ್ಗೆಯೂ ಚರ್ಚೆಯಿದೆ.ಫ್ರೀ ಬಸ್ ಪ್ರಯಾಣ ಎಂದಾಕ್ಷಣ ಮನಸೋಇಚ್ಛೆ,ಬೇಕಾಬಿಟ್ಟಿ ಎಲ್ಲೆಂದರಲ್ಲಿ,.ಎಷ್ಟು ದೂರಬೇಕಾದರೂ ಪ್ರಯಾಣಿಸಬಹುದೆಂದು ಮಹಿಳೆ ಯರು ಆಲೋಚನೆ ಮಾಡುತ್ತಿದ್ದರೆ ಅದಕ್ಕೆ ಶಾಕ್ ನೀಡಲಿದೆಯಂತೆ.ಏಕೆಂದ್ರೆ ಪ್ರತಿ ಮಹಿಳೆಗೆ 100 ಕಿಲೋಮೀಟರ್ ವರೆಗೆ ಮಾತ್ರ ಸಂಚರಿಸ್ಲಿಕ್ಕೆ ಅವಕಾಶವಿದೆಯಂತೆ. ವೋಲ್ವೋ, ಸ್ಲೀಪರ್‌ ಸೇರಿ ಪ್ರೀಮಿಯಂ ಬಿಟ್ಟು  ಸಾಮಾನ್ಯ ಬಸ್‌ಗಳಿಗೆ ಮಾತ್ರ  ಈ ಉಚಿತ ಸೌಲಭ್ಯ ಸೀಮಿತವಾಗಲಿದೆ ಯಂತೆ.ಈ ಎಲ್ಲಾ ಷರತ್ತುಗಳನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎನ್ನುತ್ತಾರೆ ಕೆಎಸ್ ಆರ್ ಟಿಸಿ ಹಿರಿಯ ಅಧಿಕಾರಿ”

ಸರ್ಕಾರ ಕೈ ಹಿಡಿದರಷ್ಟೇ ಸ್ಕೀಂ ಯಶಸ್ವಿ-ಸಾರಿಗೆ ನಿಗಮಗಳಿಗೂ ಉಳಿವು:ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಕಾರಣವಾದ ಪ್ರಮುಖ ಆಶ್ವಾಸನೆಗಳಲ್ಲಿ ಒಂದಾದ ಮಹಿಳೆರಿಗೆ ಉಚಿತ ಬಸ್ ಪ್ರಯಾಣ ಸರ್ಕಾರಕ್ಕೆ ಮಾಡು ಇಲ್ಲವೇ ಮಡಿ ಎನ್ನುವ ಸವಾಲನ್ನು ಸೃಷ್ಟಿಸಿದೆ. ಈ ಘೋಷಿತ ಸ್ಕೀಂನ್ನು ಕೆಲ ತಿಂಗಳುವರೆಗಾದ್ರೂ ಯಶಸ್ವಿಯಾಗಿ ಮುನ್ನಡೆಸುವುದು ಸರ್ಕಾರದ ಸಧ್ಯದ ಆಧ್ಯತೆ ಹಾಗೂ ಅನಿವಾರ್ಯತೆ ಕೂಡ.ಹಾಗಾಗಿ ಇಷ್ಟ್ ವರ್ಷ ಸಾರಿಗೆ ನಿಗಮಗಳ ಬಗ್ಗೆ ತೋರುತ್ತಿದ್ದ ಅಸಡ್ಡೆ ಹಾಗೂ ತಾತ್ಸಾರವನ್ನು ಪ್ರತಿಷ್ಟೆಗಾದ್ರೂ ಬಿಡಬೇಕಾದ ಪರಿಸ್ತಿತಿಯಿದೆ.

ಹಾಗಾಗಿ ಸಾರಿಗೆ ನಿಗಮಗಳಿಗೆ ಆಯಾ ತಿಂಗಳು ಬೇಕಿರುವ ಸಹಾಯಧನ ಅಥವಾ ಅನುದಾನವನ್ನು ಚಾಚೂತಪ್ಪದೇ ಬಿಡುಗಡೆ ಮಾಡಬೇಕಾಗಿ ಬಂದಿದೆ.ಸರ್ಕಾರ ಈ ಬಗ್ಗೆ ಒತ್ತು ನೀಡುವ ಸಾಧ್ಯತೆಗಳು ದಟ್ಟವಾಗಿವೆ.ಒಂದ್ ಹಂತದಲ್ಲಿ ಸಾರಿಗೆ ನಿಗಮಗಳಿಗೆ ಬೇಕಿರುವುದು ಕೂಡ ಅದೇ.ಸಹನೀಯ ರೀತಿಯ ಸಹಾಯಧನ/ ಅನುದಾನ ಕೇಳಿದ್ರೆ ನಿರ್ಲಕ್ಷ್ಯದ ಮಾದರಿಯಲ್ಲಿ ನೀಡುತ್ತಿದ್ದ ವ್ಯವಸ್ಥೆ ಇನ್ನು ಮುಂದಾದ್ರು ಬದಲಾಗುತ್ತಲ್ಲ ಎನ್ನುವ ಸಮಾಧಾನ ಸಾರಿಗೆ ನಿಗಮಗಳ ಆಡಳಿತದ್ದು. ಆದರೆ ಇದೆಲ್ಲವೂ ಸರ್ಕಾರ ಮಾತು ತಪ್ಪದೇ ಭರವಸೆ ಈಡೇರಿಸಿಕೊಂಡು ಹೋದಲ್ಲಿ ಮಾತ್ರ ಸಾಧ್ಯ.

ದಿನನಿತ್ಯವೂ ಬಸ್‌ ಗಳು  ರಷ್ಷೋ ರಷ್: ಮಹಿಳಾ ದಿನಾಚರಣೆಯಂದು ಸರ್ಕಾರ ಮಹಿಳೆಯರಿಗೆ  ಉಚಿತ ಪ್ರಯಾಣದ ವ್ಯವಸ್ಥೆ ಮಾಡಿತ್ತು.ಅಂದು ಬಸ್ ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದ್ದವು.ಚಿತ ಬಸ್ ಸಂಚಾರ ಸ್ಕೀಂ ಅಧೀಕೃತವಾಗಿ ಜಾರಿಯಾದ್ರೆ ಆ ಸನ್ನಿವೇಶ ಕಾಣಸಿಗಬಹುದು.ಡ್ರೈವರ್ಸ್-ಕಂಡಕ್ಟರ್ಸ್ ಅಭಿಪ್ರಾಯಿಸುವಂತೆ ಬಸ್ ಗಳು ಮಹಿಳೆಯರಿಂದ ತುಂಬಿ ಹೋಗೋದ್ತಲ್ಲಿ ಅನುಮಾನವಿಲ್ಲ.ಬೆಂಗಳೂರಿನ ಶೇಕಡಾ 50-60 ರಷ್ಟು ಮಹಿಳಾ ಪ್ರಯಾಣಿಕರು ಬಸ್ ಗಳತ್ತ ಆಕರ್ಷಿತರಾಗುತ್ತಾರೆ.ಆದರೆ ಬಸ್ ಗಳಲ್ಲಿ ದುಡ್ಡು ಕೊಟ್ಟು ಸಂಚರಿಸುವ ಪುರುಷ ಪ್ರಯಾಣಿಕರಿಂದ ನಿರೀಕ್ಷಿತ ಪ್ರಮಾಣದ ಗಳಿಕೆ ಆಗೋದು ಮಾತ್ರ ಡೌಟ್ ಅಂತೆ..

“ಬಿಎಂಟಿಸಿ ವ್ಯಾಪ್ತಿಯಲ್ಲಿ ಒಟ್ಟು 50 ಡಿಪೋಗಳಿವೆ,.ಪ್ರತಿ ಡಿಪೋಗಳಿಂದ ನಿತ್ಯ ಸರಾಸರಿ 250 ಬಸ್ ಗಳು ಕಾರ್ಯಾಚರಣೆಗೊಳ್ಳುತ್ತವೆ.ತೂಗಿ ಅಳೆದರೂ ಪ್ರತಿ ಡಿಪೋದ ಗಳಿಕೆ ಸರಾಸರಿ 2ವರೆಯಿಂದ 3 ಲಕ್ಷ. ಇದನ್ನು ಲೆಕ್ಕ ಹಾಕಿದ್ರೆ ಬಿಎಂಟಿಸಿಯ ದಿನದ ಗಳಿಕೆ 1ವರೆಯಿಂದ 2 ಕೋಟಿ ಆಗಬಹುದೇನೋ..? ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲಿಕ್ಕೆ ಶುರುಮಾಡಿದ್ರೆ ಈ ಆದಾಯದಲ್ಲಿ ಶೇಕಡಾ 50 ರಿಂದ 60 ರಷ್ಟು ಗಳಿಕೆ ಇಳಿಮುಖವಾಗುತ್ತದೆ.ಆಗ ಇಂಧನ ಮತ್ತು ಸಿಬ್ಬಂದಿ ವೇತನಕ್ಕೆ ದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು. ಸರ್ಕಾರಕ್ಕೆ ಈ ಸಮಸ್ಯೆಯ ಅರಿವಿಲ್ಲ ಎಂದೇನಲ್ಲ.ಈ ನಿಟ್ಟಿನಲ್ಲಿ ಸರ್ಕಾರ ಸಾರಿಗೆ ನಿಗಮಗಳ ನೆರವಿಗೆ ನಿಲ್ಲಲೇಬೇಕಾಗುತ್ತದೆ.ಅನುದಾನ ಅಥವಾ ಸಹಾಯಧನವನ್ನು ಕೊಡೋದ್ರಲ್ಲಿ ನಿರ್ಲಕ್ಷ್ಯ ವಹಿಸಿದ್ರೆ ಸಾರಿಗೆ ನಿಗಮಗಳು ನಷ್ಟದ ಕೂಪಕ್ಕೆ ತಳ್ಳಲ್ಪಡುವುದಷ್ಟೇ ಅಲ್ಲ,ಘೋಷಿತ ಸ್ಕೀಂ ಕೂಡ ಹಳ್ಳ ಹಿಡಿಯೋ ಆತಂಕವಿದೆ.ಎಲ್ಲಕ್ಕಿಂತ ಹೆಚ್ಚಾಗಿ ಬೇರೆ ಬೇಡಿಕೆಗಳಿಗೆ ಹೋರಾಟ ಮಾಡುತ್ತಿದ್ದ ಸಾರಿಗೆ ಸಿಬ್ಬಂದಿ ತಿಂಗಳ ವೇತನಕ್ಕೆ ಮುಷ್ಕರ ನಡೆಸಬೇಕಾದ ಸ್ತಿತಿ ನಿರ್ಮಾಣವಾಗಬಹುದೇನೋ ಎಂಬ ಆತಂಕ ವ್ಯಕ್ತಪಡಿಸ್ತಾರೆ ಡಿಪೋ 7 ರ ಮಹಿಳಾ ಸಿಬ್ಬಂದಿ”

ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಘೋಷಣೆ ಮಾಡಿದೆ.ಇದು ಮಹಿಳಾ ಪ್ರಯಾಣಿಕರಿಗೆ ಹೆಚ್ಚೆಚ್ಚು ಅನುಕೂಲವಾಗುತ್ತೆನ್ನುವುದರಲ್ಲಿ ಅನುಮಾನವಿಲ್ಲ.ಆದರೆ ಸರ್ಕಾರ ಕೂಡ ಘೋಷಿತ ಯೋಜನೆ ಜಾರಿಗೊಳಿಸುವ ಬದ್ಧತೆ ಪ್ರದರ್ಶಿಸಬೇಕಲ್ಲವೇ..? ಅದರಲ್ಲಿ ವಿಫಲವಾಗುವುದೆಂದರೆ ವಚನಭ್ರಷ್ಟರಾಗೋದಷ್ಟೇ ಅಲ್ಲ,.ಸಾರಿಗೆ ನಿಗಮಗಳನ್ನು ಸಂಪೂರ್ಣ ಮುಳುಗಿಸುವುದು ಎಂದರ್ಥ ಕೂಡ.

Spread the love

Leave a Reply

Your email address will not be published. Required fields are marked *

You missed

Flash News