• ಸಂಪೂರ್ಣ “ತುಕ್ಕು” ಹಿಡಿದಿರುವ “ಸಾರಿಗೆ ಇಲಾಖೆಗೆ ಸಾಣೆ ಹಿಡಿತಾರಾ   ನೂತನ ಸಚಿವರು.
  • ಅಪಾರ “ನಷ್ಟ”ಕ್ಕೆ ಸಿಲುಕಿ ತತ್ತರಿಸುತ್ತಿರುವ ಸಾರಿಗೆ ನಿಗಮಗಳ “ಕಾಯಕಲ್ಪ”ಕ್ಕೆ ನೀಡಬೇಕಿದೆ ಒತ್ತು
  • ಮಹಿಳೆಯರಿಗೆ “ಉಚಿತ ಬಸ್‌ ಪ್ರಯಾಣ”ದಿಂದ ಆಗುವ ಆರ್ಥಿಕ “ಹೊರೆ” ಇಳಿಸ್ಲಿಕ್ಕೆ ಏನಿದೆ “ಪ್ಲ್ಯಾನ್”..?‌
  • “ನೊಂದು” ಬೆಂದಿರುವ ಸಾರಿಗೆ “ಸಿಬ್ಬಂದಿ” ಸಮೂಹದ “ಗಾಯ”ಕ್ಕೆ “ಮುಲಾಮು” ಹಚ್ಚುತ್ತಾರಾ..?
  • “ದರ್ಪ-ದೌರ್ಜನ್ಯ-ಕ್ರೌರ್ಯ-ಸರ್ವಾಧಿಕಾರಿ”ಗಳಾಗಿರುವ “ಅಧಿಕಾರಶಾಹಿ”ಗೆ “ಚಾಟಿ” ಬೀಸ್ತಾರಾ..?

ಬೆಂಗಳೂರು: ಮೊದಲಿಗೆ ನೂತನ ಸಾರಿಗೆ ಸಚಿವರಾಗಿ ಯಾರೇ ಅಧಿಕಾರ ವಹಿಸಿಕೊಂಡರು ಅವರಿಗೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಬಳಗ ಅಭಿನಂದನೆ ಸಲ್ಲಿಸುತ್ತೆ.ಪೂರ್ಣಾವಧಿಗೂ ಅವರೇ ಸಚಿವರಾಗಿ ಸಾರಿಗೆ ಇಲಾಖೆಯ ಪುನಶ್ಚೇತನ-ಕಾಯಕಲ್ಪಕ್ಕೆ ಅಗತ್ಯವಿರುವ ಎಲ್ಲಾ ಅವಕಾಶಗಳು ನಿಮ್ಮದಾಗಲಿ ಎಂದು ಹಾರೈಸುತ್ತೇವೆ.

ಈಗ ವಿಷಯಕ್ಕೆ ಬರೋಣ,ಸಾರಿಗೆಗೆ ಸಚಿವರು ಯಾರೇ ಆಗಲಿ ಅವರಿಗೆ ಬಹುತೇಕ  ಸಾರಿಗೆ ಇಲಾಖೆ ಪರಿಚಯ ಇದ್ದೇ ಇರುತ್ತೆ. ಅಲ್ಲಿನ  ಸೂಕ್ಷ್ಮಗಳು ಅವರ ಅನುಭವಕ್ಕೆ ಬಂದೇ ಇರುತ್ವೆ. ಇಲಾಖೆ ಎದುರಿಸು ತ್ತಿರುವ ಸಮಸ್ಯೆ ಗಳಿಂದ ಹಿಡಿದು,ಏನ್‌ ಮಾಡಿದ್ರೆ ಏನ್‌ ಆಗುತ್ತೆ ಎನ್ನುವ ಮಾಹಿತಿಯೂ ಅವರಿಗಿರುತ್ತೆ ಸಾರಿಗೆ ಇಲಾಖೆಯನ್ನು ಕಪಿಮುಷ್ಟಿ ಯಲ್ಲಿಟ್ಟುಕೊಂಡಿರುವ ಇಲಾಖೆಯಲ್ಲಿನ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಮಾಹಿತಿಯೂ ಇದ್ದೇ ಇರುತ್ತೆ.

ಪ್ರಮುಖವಾಗಿ 4  ಸಾರಿಗೆ ನಿಗಮಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಸವಾಲುಗಳು ನೂತನ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವ ವರಿಗೆ  ಮುಖಾಮುಖಿಯಾಗಲಿದೆ.ವ್ಯತ್ಯಾಸ ಇಷ್ಟೇ.. ಕಳೆದ ಬಾರಿ ಅವು ಸಹನೀಯವಾಗಿದ್ವು..ಆದ್ರೆ ಈ ಬಾರಿ ವಿಷಮಕರವಾಗಿವೆ..ಪರಿಹಾರ ಸಿಗಲಿಕ್ಕೂ ಸಾಧ್ಯವಾಗದಷ್ಟು ಕೈ ಮೀರಿ ಹೋಗಿವೆ.ಆದ್ರೆ ಹಾಗಂತ ಅವು ಬಗೆಹರಿ ಯುವುದೇ ಇಲ್ಲವೆಂದೇನಲ್ಲ..ಸಚಿವರಾದವರು ತಮ್ಮ ಸೌಮ್ಯ-ಮೃದುತ್ವದ ಧೋರಣೆ ಬಿಟ್ಟು ಖಡಕ್‌ ಆಗಿ ನಡೆದುಕೊಂಡ್ರೆ ಎಲ್ಲವೂ ಸರಿದಾರಿಗೆ ಬರಬಹುದೇನೋ..? ಆ ನಿಟ್ಟಿನಲ್ಲಿ ಯಾರೇ ಆಗಲಿ ಅವರು ತಮ್ಮನ್ನು ತಾವೇ ಬದಲಾಯಿಸಿಕೊಳ್ಳಬೇಕಿದೆ.

6 ಸಾವಿರ ಕೋಟಿ ನಷ್ಟಕ್ಕೆ ಸೆಲ್ಯೂಷನ್‌ ಹುಡುಕಿ.. ಕೆಎಸ್‌ ಅರ್‌ ಟಿಸಿ ಯೂನಿಯನ್‌ ಮುಖಂಡ ಅನಂತ ಸುಬ್ಬರಾವ್‌ ಸಲಹೆಯಂತೆ  ಪ್ರಸ್ತುತ 6 ಸಾವಿರ ಕೋಟಿ ನಷ್ಟದಲ್ಲಿರುವ ಸಾರಿಗೆ ನಿಗಮಗಳ ನಷ್ಟ ತಗ್ಗಿಸ್ಲಿಕ್ಕೆ ಮೊದಲ ಆಧ್ಯತೆ ನೀಡಬೇಕು.ನಷ್ಟಕ್ಕೆ ಕಾರಣವಾದ ಅನಗತ್ಯ ಹೊರೆಗಳನ್ನು ತಗ್ಗಿಸಬೇಕು.ಅದರಲ್ಲಿ ಪ್ರಮುಖವಾಗಿ ಸರ್ಕಾರಕ್ಕೆ ಪ್ರತಿ ವರ್ಷ 2 ಸಾವಿರ ಹೆಚ್ಚುವರಿ ಹೊರೆ ಉಂಟುಮಾಡುತ್ತಿರುವ ನಾಲ್ಕು ನಿಗಮಗಳನ್ನು ಕ್ಯಾನ್ಸಲ್‌ ಮಾಡಿ ಒಂದೇ ನಿಗಮ ಮಾಡೋದು ಹೆಚ್ಚು ಸೂಕ್ತ ಎನ್ನುತ್ತಾರೆ.ನಾಲ್ಕು ನಿಗಮಗಳಿಗೆ ಪ್ರತ್ಯೆಕ ಅಧ್ಯಕ್ಷರು,ಉಪಾಧ್ಯಕ್ಷರು,ನಿರ್ದೇಶಕರು,4 ಐಎಎಸ್‌ ಗಳು,ಐಪಿಎಸ್‌ ಗಳು,ಅಧಿಕಾರಿ ಸಿಬ್ಬಂದಿ..ಇದೆಲ್ಲವೂ ಹೊರೆಗೆ ಕಾರಣವಾಗುತ್ತಿದೆ.ಇದೆಲ್ಲವನ್ನು ಕ್ಯಾನ್ಸಲ್‌ ಮಾಡೋದು ಸೂಕ್ತ.ಈ ನಿಟ್ಟಿನಲ್ಲಿ ಸಚಿವರು  ಕ್ರಮ ವಹಿಸಬೇಕಿದೆಯಂತೆ.

ಸಹನೀಯ ಪ್ರಮಾಣದಲ್ಲಿ ಟಿಕೆಟ್‌ ದರ ಏರಿಕೆ ಮಾಡಿದ್ರೂ ತೊಂದರೆಯಿ ಲ್ವೇನೋ..?! ಎಲ್ಲಾ ಇಲಾಖೆಗಳಲ್ಲೂ ಆಗಾಗ ಪ್ರಯಾಣ ದರ ಏರಿಕೆಯಾಗುತ್ತಲೇ ಇರುತ್ತೆ.ಆದರೆ ಬಸ್‌ ಪ್ರಯಾಣ ದರ ನಾಲ್ಕು ವರ್ಷಗಳಿಗೊಮ್ಮೆ ಹೆಚ್ಚಳವಾಗುತ್ತಿರುವುದರಿಂದ ಗಳಿಕೆ ಮೇಲೆ ವ್ಯತ್ಯಾಸ ಉಂಟಾಗುತ್ತಿದೆ.ಜನರಿಗೆ ಹೊರೆಯಾಗದ ರೀತಿಯಲ್ಲಿ ನಿರ್ದಿಷ್ಟ ಅವಧಿಗೆ ಅನ್ವಯವಾಗುವಂತೆ ಪ್ರಯಾಣ ದರ ಏರಿಕೆ ಮಾಡುವುದು ಗಳಿಕೆ ಕಡಿಮೆಯಾಗುವುದಕ್ಕೆ ಪರಿಹಾರ ಆಗಬಹುದು.

ಸಾರಿಗೆ ಸಿಬ್ಬಂದಿಗೆ ಇತರೆ ಇಲಾಖೆಗಳಂತೆ ಸರ್ಕಾರವೇ ಸಂಬಳ ಕೊಡಲಿ.. ಸರ್ಕಾರ ಪ್ರತಿ ವರ್ಷ ಬಜೆಟ್‌ ನಲ್ಲಿ ಸಾರಿಗೆ ನಿಗಮಗಳಿಗೆಂದೇ ಪ್ರತ್ಯೇಕವಾಗಿ ಮೀಸಲಿಡಲಿ.ಅದನ್ನು ಪ್ರತಿ ತಿಂಗಳು ಬಿಡುಗಡೆ ಮಾಡಲಿ, ಬೇರೆ ಇಲಾಖೆಗಳಲ್ಲಿರುವಂತೆ ಸಾರಿಗೆ ನಿಗಮಗಳಲ್ಲೂ ನೌಕರರ ಸಂಬಳ-ಭತ್ಯೆಯನ್ನು ನೇರವಾಗಿ ಸರ್ಕಾರವೇ ನೀಡಲಿ.ಆಗ ಎಲ್ಲರಂತೆ ಸಾರಿಗೆ ಸಿಬ್ಬಂದಿಗೂ ಸಂಬಳದ ಕಿರಿಕಿರಿ ಇರುವುದಿಲ್ಲ. ಬೇರೆ ಯಾವ ಇಲಾಖೆಗಳಲ್ಲಿ ಇಲ್ಲದಷ್ಟು ಆಸ್ತಿ ನಮ್ಮ ಸಾರಿಗೆ ನಿಗಮಗಳಲ್ಲಿದೆ.ಅವು ಪ್ರಯೋಜನಕ್ಕೆ ಬಾರದೆ ಹಾಳು ಸುರಿಯುತ್ತಿವೆ.ಅಗತ್ಯ ಬಿದ್ದಾಗ ಅವುಗಳ ಪ್ರಯೋಜನ ಪಡೆದುಕೊಳ್ಳುವುದು ಸೂಕ್ತ.ಆ ನಿಟ್ಟಿನಲ್ಲೂ ಪ್ರಯತ್ನ ನಡೆದರೆ ಸಾರಿಗೆ ನಿಗಮಗಳಿಗೆ ತಟ್ಟಿರುವ ನಷ್ಟದ ಕಳಂಕ ದೂರವಾಗಬಹುದೇನೋ..? ಎನ್ನುತ್ತಾರೆ ಸುಬ್ಬರಾವ್.

ಸಾರಿಗೆ ನಿಗಮಗಳ ಅಭಿವೃದ್ದಿಗೆ ಪೂರಕವಾದ ಪಾಲಿಸಿ ರೂಪಿಸಿ.. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ಕಲ್ಪಿಸುವುದರಿಂದ ಸಾರಿಗೆ ನಿಗಮಗಳು ಬರ್ಬಾದ್‌ ಆಗ್ತವೆನ್ನುವುದು ಸುಳ್ಳು ಎನ್ನುವ ಸುಬ್ಬರಾವ್‌, ಪ್ಲ್ಯಾನ್‌ ನ್ನು ಸರಿಯಾಗಿ ಕಾರ್ಯಗತಗೊಳಿಸಿದ್ರೆ ಇದು ಸಮಸ್ಯೆಯೇ ಅಲ್ಲ.ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶ ನೀಡುವುದು ಸರ್ಕಾರದ ಸುವರ್ಣಾವಕಾಶ.ಆದರೆ ಸರಿಯಾದ ಪಾಲಿಸಿಗಳು ಅನುಷ್ಠಾನಕ್ಕೆ ಬಂದ್ರೆ ಮಾತ್ರ ಇದು ಯಶಸ್ವಿಯಾಗುತ್ತದೆ.ಆ ಪಾಲಿಸಿಗಳ ಅನುಷ್ಠಾನಕ್ಕೆ ಸಚಿವರು  ಒತ್ತು ಕೊಡಬೇಕಿದೆ ಎನ್ತಾರೆ ಮುಖಂಡ ಸುಬ್ಬರಾವ್.‌

ಮಹಿಳಾ ಪ್ರಯಾಣಿಕರಿಂದ ಆಗಬಹುದಾದ 4 ಸಾವಿರ ಕೋಟಿಯನ್ನು ಸರ್ಕಾರವೆ ನೀಡಲಿ.. ಇನ್ನು ಸಾರಿಗೆ ಕೂಟದ ಮುಖಂಡ ಚಂದ್ರಶೇಖರ್‌ ಸರ್ಕಾರ ಚುನಾವಣೆ ಮುನ್ನ ನೀಡಿದ್ದ ಭರವಸೆಗಳ ಈಡೇರಿಸ ಬೇಕೆಂದು ಮನವಿ ಮಾಡಿದ್ದಾರೆ.ಆ ಪೈಕಿ ಸಮಾನ ಕೆಲಸಕ್ಕೆ ಸಮಾನ ವೇತನ, ಮುಷ್ಕರ ವೇಳೆಯಲ್ಲಿ ವರ್ಗಾವಣೆ-ವಜಾಗೊಂಡ ಕಾರ್ಮಿಕರಿಗೆ ನ್ಯಾಯ ನೀಡಬೇಕೆಂದು ಮನವಿ ಮಾಡಿದ್ದಾರೆ.

ಕಾರ್ಮಿಕ ಸಂಘಟನೆಗಳ ಚುನಾವಣೆಗೆ ಸರ್ಕಾರ ಒತ್ತು ನೀಡಬೇಕು.ಇದೆಲ್ಲದರ ಜತೆಗೆ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 44 ರಷ್ಟು ಮಹಿಳೆಯರು ಸಂಚರಿಸುವ ಸಾರಿಗೆ ಬಸ್‌ ಗಳಲ್ಲಿ ಸಂಚರಿಸುತ್ತಿರುವುದರಿಂದ ಆಗುತ್ತಿರುವ 3,500-4,000 ಕೋಟಿ ಆರ್ಥಿಕ ಹೊರೆಯನ್ನು ಸರ್ಕಾರವೇ ಭರಿಸಬೇಕು.ನಷ್ಟದ ಕಾರಣಕ್ಕೆ ಸಾರಿಗೆ ಸಿಬ್ಬಂದಿಗೆ  2 ಕಂತುಗಳಲ್ಲಿ ಸಂಬಳ ಕೊಡಬೇ ಕಾದ ಸಮಸ್ಯೆಗೆ ಸೆಲ್ಯೂಷನ್‌ ಕೊಡಲಿ. ಹಿಂದಿನ ಸರ್ಕಾರಗಳಂತೂ ನಮ್ಮನ್ನು ಕೈ ಹಿಡಿಯಲಿಲ್ಲ.ಕಾಂಗ್ರೆಸ್‌ ನಂಬಿಕೊಂಡು ಮತ ಹಾಕಿದ್ದೇವೆ..ನಮ್ಮನ್ನು ಕೈ ಬಿಡಬೇಡಿ ಎಂದು ಮನವಿ ಮಾಡಿದ್ದಾರೆ.

ಅಧಿಕಾರಿಗಳ ಆಟಾಟೋಪ-ಅಂದಾದರ್ಬಾರ್‌, ಸಾರಿಗೆ ಸಿಬ್ಬಂದಿ ಆತ್ಮಹತ್ಯೆ ತಡೆಯಿರಿ.. ಇದೆಲ್ಲದರ ಜತೆಗೆ ಸಾರಿಗೆ ಸಿಬ್ಬಂದಿಗಳು ನಿಗಮಗಳಲ್ಲಿ ಅನುಭವಿಸುತ್ತಿರುವ ಕಿರುಕುಳ ಇನ್ನೂ ತಪ್ಪಿಲ್ಲ. ಮೇಲಾಧಿ ಕಾರಿಗಳ ಕಿರುಕುಳ ದಿಂದ ಅನೇಕರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ.ಮೊದಲೆಲ್ಲಾ ಎಂಡಿ ಆದಿಯಾಗಿ ಎಲ್ಲಾ ಅಧಿಕಾರಿಗಳ ಕಚೇರಿಗಳು ಸಿಬ್ಬಂದಿಯ ಕಷ್ಟ-ಸಂಕಷ್ಟ-ಅಹವಾಲು ಕೇಳೊಕ್ಕೆ ಸದಾ ತೆರೆದಿರುತ್ತಿತ್ತು.

ಆದರೆ ಇತ್ತೀಚಿನ ವರ್ಷಗಳಲ್ಲಿ ನಿಗಮಗಳ ಕೇಂದ್ರ ಕಚೇರಿಯನ್ನೇ ಪ್ರವೇಶಿಸಲಾಗದ ಸ್ತಿತಿ ಇದೆ.ದೂರು-ಅಹವಾಲುಗ ಳನ್ನು ನೀಡಲಾಗದಂಥ ಸ್ಥಿತಿ ಇದೆ.ಸಿಬ್ಬಂದಿ ಮತ್ತು ಅಧಿಕಾರಿಗಳ ನಡುವೆ ಇರಬೇಕಾದ ಸೌಹಾರ್ದಯುತ ಹಾಗೂ ಸಾಮರಸ್ಯಕರ ಸಂಬಂಧವೇ ಇಲ್ಲವಾಗಿದೆ.ಬಹುಷಃ ಈ ಒಂದು ಸಮಸ್ಯೆಗೆ ನೂತನ ಸಚಿವರು ಪರಿಹಾರ ನೀಡಿದ್ದಲ್ಲಿ ಇಡೀ ಸಾರಿಗೆ ಸಿಬ್ಬಂದಿ ಸಮೂಹ ನಿಮಗೆ ಸದಾ ಅಭಾರಿಯಾಗಿರುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ಸಾರಿಗೆ ಮುಖಂಡ ಆನಂದ್.

ಅಂದ್ಹಾಗೆ ಇವೆಲ್ಲಾ ಸಚಿವರಾಗುವವರಿಗೆ  ಗೊತ್ತಿಲ್ಲ ಎಂದೇನಿಲ್ಲ.ಸಾರಿಗೆ ನಿಗಮಗಳಲ್ಲಿ ನಡೆಯುತ್ತಿ ರುವ ಅಂದಾದರ್ಬಾರ್‌,ಅವ್ಯವಹಾರ-ಅಕ್ರಮ-ಅನ್ಯಾಯ ಹಿಟ್ಲರ್‌ ಸಾಮ್ರಾಜ್ಯದ ದಿನಗಳನ್ನು ನೆನಪಿಸುವ ಸರ್ವಾಧಿಕಾರಿ ಧೋರಣೆಯ ಸಂಪೂರ್ಣ ಮಾಹಿತಿ ಕಣ್ಣಿಗೆ ಕಟ್ಟಿದಂತಿದೆ.ಸ್ವಲ್ಪ ಖಡಕ್‌ ಆಗಿ ಅಧಿಕಾರ ಚಲಾಯಿಸಿದರೆ ವಾತಾವರಣ ಬದಲಾಗಬಹುದು..ಅಮೂಲಾಗ್ರ ಬದಲಾವಣೆ ಸಾಧ್ಯವಾಗಬಹುದೇನೋ.?!

Spread the love

Leave a Reply

Your email address will not be published. Required fields are marked *

You missed

Flash News