6 ವರ್ಷದ ದಲಿತ ವಿದ್ಯಾರ್ಥಿಯಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು!

6 ವರ್ಷದ ದಲಿತ ವಿದ್ಯಾರ್ಥಿಯಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು!

6 ವರ್ಷದ ದಲಿತ ಬಾಲಕನಿಂದ ಬಲವಂತವಾಗಿ ಶೌಚಾಲಯ ಸ್ವಚ್ಛಗೊಳಿಸಿದ ಕೆಲವು ಶಿಕ್ಷಕರು ನಂತರ ಆತನನ್ನು ಶಾಲೆಯ ಕೊಠಡಿಯಲ್ಲಿ ಕೂಡಿಹಾಕಿ ಕ್ರೂರತನ ಮೆರೆದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಜನ್ ಸಥ್ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಪ್ರಿನ್ಸಿಪಾಲ್ ಮತ್ತು ಶಿಕ್ಷಕರ ವಿರುದ್ಧ ಪ್ರಾಥಮಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ದಲಿತ ಎಂಬ ಕಾರಣಕ್ಕೆ ಒಂದನೇ ತರಗತಿ ವಿದ್ಯಾರ್ಥಿ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಪ್ರಿನ್ಸಿಪಾಲ್ ಮತ್ತು ಶಿಕ್ಷಕರು ಆತನಿಂದ ಬಲವಂತವಾಗಿ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದರು ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಅನ್ವಯ ಪೊಲೀಸರು ಇಲಾಖೆಯ ಅಧಿಕಾರಿಗಳ ಜೊತೆ ಶಾಲೆಗೆ ಬಂದಾಗ ಬಾಲಕನನ್ನು ಶಾಲೆಯ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಿನ್ಸಿಪಾಲ್ ಸಂಧ್ಯಾ ಜೈನ್ ಮತ್ತು ಶಿಕ್ಷಕಿ ರವಿಟಾ ರಾಣಿ ಅವರನ್ನು ಬಂಧಿಸಲಾಗಿದೆ.

ಶಾಲೆಯ ಸಮಯ ಮುಗಿದು ಒಂದು ಗಂಟೆ ಕಳೆದರೂ ಮಗ ಮನೆಗೆ ವಾಪಸ್ ಬಾರದ ಕಾರಣ ಪೊಷಕರು ವಿಚಾರಿಸಿದಾಗ ಶಿಕ್ಷಕರಿಗೆ ಗೌರವ ಕೊಡುತ್ತಿಲ್ಲ ಎಂದು ಸಾಬೂಬು ಹೇಳಿದರು. ನಂತರ ವಿಚಾರಿಸಿದಾಗ ಮಗನನ್ನು ಕೂಡಿ ಹಾಕಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ.

ಆದರೆ ಶಿಕ್ಷಕರು ಶಾಲೆ ಮುಚ್ಚುವಾಗ ವಿದ್ಯಾರ್ಥಿ ಮಲಗಿರಬೇಕು. ಹಾಗಾಗಿ ನಮ್ಮ ಗಮನಕ್ಕೆ ಬಾರದೇ ಶಾಲಾ ಕೊಠಡಿ ಮುಚ್ಚಿದ್ದೆವು ಎಂದು ಸಾಬೂಬು ಹೇಳಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *