ರಫಾಯಲ್ ರಾಜ್ ಅವರಿಗೆ ಬದುಕಿದ್ದಾಗಲಂತೂ ಬೆಲೆ ಕೊಡಲಿಲ್ಲ..ಸತ್ತ ಮೇಲೆ ಕನಿಷ್ಟ ಸೌಜನ್ಯಕ್ಕೂ ನೆನಪು ಮಾಡಿಕೊಳ್ಳಲಿಲ್ಲ..
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಅಷ್ಟೇ ಅಲ್ಲ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಯಾವುದೇ ಸುತ್ತೋಲೆ,ಅಧಿಸೂಚನೆ,ಪ್ರಕಟಣೆಗಳು ಕನ್ನಡದಲ್ಲಿಯೇ ಪ್ರಕಟವಾಗುತ್ತಿವೆ.ಕನ್ನಡ ಜೀವಂತವಾಗಿದೆ. ಕನ್ನಡಿಗರಿಗೆ ಬೆಲೆ-ನೆಲೆ ಸಿಗುತ್ತಿದೆ.ಬಸ್ ಗಳ ಹಿಂದೆ ಮುಂದೆ ಕನ್ನಡವೇ ರಾರಾಜಿಸುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣಕರ್ತರೇ ರಫಾಯಲ್ ರಾಜ್..ಆದರೆ ಅಂಥಾ ಒಬ್ಬ ಅಪ್ರತಿಮ ಹೋರಾಟಗಾರ ಕೊನೆಯುಸಿರೆಳೆದಾಗ ಬಿಎಂಟಿಸಿ ಆಡಳಿತವಾಗಲಿ, ರಫಾಯಲ್ ಕೃಪೆಯ ಅನುಕೂಲಗಳನ್ನು ಪಡೆದ ಕಾರ್ಮಿಕರನ್ನು ಪ್ರತಿನಿಧಿಸುವ ಸಂಘಟನೆಗಳಾಗಲಿ ಸೌಜನ್ಯಕ್ಕೂ ಪಾರ್ಥಿವ ಶರೀರ ವೀಕ್ಷಿಸಿ ಸಂತಾಪ ಸೂಚಿಸುವ ಗೋಜಿಗೆ ಹೋಗಲಿಲ್ಲ.ಕನ್ನಡ ಎಂದರೆ ಕನ್ನಡದ ಹೋರಾಟಗಳೆಂದರೆ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದ ರಫಾಲ್ ರಾಜ್ ಅವರಿಗೆ ಇಡೀ ಸಾರಿಗೆ ಸಂಸ್ಥೆ ಮಾಡಿದ ದೊಡ್ಡ ಅಪಮಾನ ಇದು ಎನ್ನೋದರಲ್ಲಿ ಡೌಟೇ ಬೇಡ.
65 ವರ್ಷದ ರಫಾಯಲ್ ರಾಜ್ ಬಿಎಂಟಿಸಿಯಲ್ಲಿ ಸಾಮಾನ್ಯ ಕಂಡಕ್ಟರ್ ಆಗಿ ಕೆಲಸ ಮಾಡಿದವರಲ್ಲ.ಅವರು ಓರ್ವ ಕಾರ್ಮಿಕನಾಗಿ ಕೆಲಸ ಮಾಡಿದ್ದಕ್ಕಿಂತ ಸಾರಿಗೆ ನಿಗಮಗಳಲ್ಲಿ ಕನ್ನಡದ ಅನುಷ್ಟಾನಕ್ಕೆ ಟೊಂಕ ಕಟ್ಟಿ ನಿಂತವರು. ಕಂಗ್ಲೀಷ್ ಮಯವಾಗಿದ್ದ ಸುತ್ತೋಲೆ-ಅಧಿಸೂಚನೆ-ಪ್ರಕಟಣೆಗಳನ್ನು ಕನ್ನಡದಲ್ಲೇ ಪ್ರಕಟ ಮಾಡಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಮಾಡಿದವರು.ಸಾರಿಗೆ ನಿಗಮಗಳಲ್ಲಿರುವ ಕನ್ನಡದ ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ಸಿಗಬೇಕಾದ ಸೌಲಭ್ಯ-ಸವಲತ್ತುಗಳು ದೊರೆಯುವಂತೆ ಮಾಡಿದ್ದರಲ್ಲಿ ರಫಾಯಲ್ ರಾಜ್ ಕೊಡುಗೆ ಅಗ್ರಗಣ್ಯ.ಕನ್ನಡಿಗರಿಗೆ ನಿಗಮಗಳಲ್ಲಿ ಅನ್ಯಾಯವಾದ್ರೆ ಆಡಳಿತಶಾಹಿ ಗಳಿಂದ ಅಪಮಾನವಾದ್ರೆ ಅಲ್ಲಿ ಕಾರ್ಮಿಕರ ಪರ ದ್ವನಿಯಾಗಿ ನಿಂತು ಕೆಲಸ ಮಾಡಿದವರು. ಕಾರ್ಮಿಕರ ಸಮಸ್ಯೆಳೇನೆ ಇದ್ದರೂ ಮ್ಯಾನೇಜ್ಮೆಂಟ್ ಗಳ ವಿರುದ್ದ ತೊಡೆತಟ್ಟಿನಿಂತು ಪ್ರಶ್ನಿಸಿದವರು.ಅದಕ್ಕಾಗಿ ಹೋರಾಟ ಮಾಡಬೇಕಾಗಿ ಬಂದರೂ ತಲೆಕೆಡಿಸಿಕೊಳ್ಳದವರು..ಸಾರಿಗೆ ನಿಗಮಗಳಲ್ಲಿನ ಕಾರ್ಮಿಕರ ದ್ವನಿಯಾಗಿ ನಿಂತು ಇಷ್ಟೆಲ್ಲಾ ಕೆಲಸ ಮಾಡಿದ ರಫಾಯಲ್ ರಾಜ್ ಅವರಿಗೆ ಕನಿಷ್ಟ ಗೌರವವನ್ನೂ ಸಲ್ಲಿಸಲಿಲ್ಲ ಎಂದರೆ ಇದು ಅಕ್ಷಮ್ಯವಲ್ಲವೇ..?
ಇವತ್ತಿಗೆ ನೌಕರರ ಸಂಘಟನೆಗಳು ಮಾಡುವ ರಾಜಕೀಯವನ್ನಾಗಲಿ, ಸ್ವಹಿತಾಸಕ್ತಿಯ ಕೆಲಸಗಳನ್ನಾಗಲಿ ರಫಾಯಲ್ ರಾಜ್ ಜೀವನದುದ್ದಕ್ಕೂ ಮಾಡಲೇ ಇಲ್ಲ.ಅವರು ಸ್ಥಾಪಿಸಿ ಮುನ್ನಡೆಸುತ್ತಿದ್ದ ಸಂಘಟನೆಯನ್ನು ಅಡವಿಟ್ಟು ಬದುಕಲಿಲ್ಲ.ವೈಯುಕ್ತಿಕ ಬದುಕನ್ನೇ ಮರೆತು ಕನ್ನಡ..ಕನ್ನಡಪರ ಹೋರಾಟಗಳು, ಬಿಎಂಟಿಸಿಯಲ್ಲಿ ಕನ್ನಡದ ಅನುಷ್ಟಾನ..ಕನ್ನಡಮನಸುಗಳಿಗೆ ಅನ್ಯಾಯವಾಗದಂತೆ ಆಡಳಿತ ಮಂಡಳಿ ಜತೆಗೆ ಸಂಘ ರ್ಷಕ್ಕಿಳಿಯುವುದರಲ್ಲೇ ತಮ್ಮ ಬದುಕಿನ ಬಹುಪಾಲು ಅವಧಿಯನ್ನು ಕಳೆದುಬಿಟ್ರು..ಕುಟುಂಬ..ಹೆಂಡತಿ,ಮನೆ ಮಕ್ಕಳೊಂದಿಗಿನ ಖಾಸಗಿ ಕ್ಷಣಗಳನ್ನೇ ಕಳೆದುಕೊಂಡುಬಿಟ್ರು.ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ.
“ರಫಾಯಲ್ ರಾಜ್ ಅವರ ಬಗ್ಗೆ ತುಂಬಾ ಜನಕ್ಕೆ ಗೊತ್ತಿಲ್ಲ..ರಫಾಯಲ್ ಮಾಡಿದ ಕೆಲಸದಿಂದಲೇ ಇವತ್ತು ಬಿಎಂಟಿಸಿ,ಕೆಎಸ್ ಆರ್ ಟಿಸಿಯಲ್ಲಿ ಕನ್ನಡ ಉಸಿರಾಡುತ್ತಿದೆ.ಅವರೊಬ್ಬರಿಲ್ಲದಿದ್ದರೆ ಅಧಿಕಾರಿಗಳ ದರ್ಬಾರ್ ಗೆ ಕಡಿವಾಣ ಹಾಕೊಕ್ಕೆ ಸಾಧ್ಯವೇ ಆಗುತ್ತಿರಲಿಲ್ಲವೇನೋ,..ಅವರು ಧ್ವನಿ ಎತ್ತಿದ ಮೇಲೆಯೇ ಕನ್ನಡಿಗರಾದವರಿಗೆ ಸರಿಯಾದ ಬೆಲೆ ಸಿಗುವಂತಾಯಿತು.ಕನ್ನಡಕ್ಕೆ ಅಪಮಾನವಾದ್ರೆ ಅವರು ಹೋರಾಡುತ್ತಿದ್ದ ದಿನಗಳು ಇವತ್ತಿಗೂ ನಮ್ಮ ಕಣ್ಮುಂದೆ ಹಸಿರಾಗಿದೆ.ಅಧಿಕಾರಿಗಳ ಜತೆಗೆ ಸಂಘರ್ಷಕ್ಕಿಳಿಯುತ್ತಿದ್ದದನ್ನು ನೋಡಿದ್ದೇನೆ.ಅವರು ಹೋರಾಟ ಮಾಡಿದ್ದರಿಂದಲೇ ಬಿಎಂಟಿಸಿಯಲ್ಲಿ ಸುತ್ತೋಲೆಗಳು ಕನ್ನಡದಲ್ಲಿ ಬರಲಾರಂಭಿಸಿದವು,ನಮ್ಮ ಸಾರಿಗೆ ಸಂಸ್ಥೆಯಲ್ಲಿ ಕನ್ನಡ ಉಳಿದು-ಬೆಳೆಯಬೇಕಾದರೆ ಅದಕ್ಕೆ ರಫಾಯಲ್ ಪ್ರಮುಖ ಕಾರಣ.ಅವರು ನಿಧನರಾದ ಸುದ್ದಿ ತಿಳಿದರೂ ನಮ್ಮಲ್ಲಿರುವವರು ಹೋ್ಗಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಲಿಲ್ಲ ಎನ್ನುವುದು ಬೇಸರ ತರಿಸಿದೆ.ಇಂಥಾ ಹೋರಾಟಗಾರನನ್ನು ಹೀಗೆ ಅಪಮಾನಿಸಿದ್ದು ದುರಂತ. ಯೋಗೇಶ್ ಗೌಡ-ಸಾರಿಗೆ ಸಿಬ್ಬಂದಿ.
ಕನ್ನಡವನ್ನೇ ಉಸಿರಾಡುತ್ತಿದ್ದ ರಫಾಯಲ್ ರಾಜ್ ಅವರಂಥ ಅಪ್ರತಿಮ ಭಾಷಾಪ್ರೇಮಿ, ಹೋರಾಟಗಾರ ನಮ್ಮ ಬಿಎಂಟಿಸಿಯಲ್ಲಿದ್ದಾನೆ ಎನ್ನುವುದನ್ನೇ ಆಡಳಿತ ಮಂಡಳಿ ಹೆಮ್ಮೆ-ಅಭಿಮಾನದ ವಿಷಯವಾಗಿ ಪರಿಗಣಿಸಬಹುದಿತ್ತು.ಆದ್ರೆ ತಮ್ಮ ವಿರುದ್ಧವೇ ತೊಡೆತಟ್ಟಿ ನಿಂತಿದ್ದಾರೆನ್ನುವುದನ್ನೆ ಮನಸಿನಲ್ಲಿಟ್ಟುಕೊಂಡು ಸಾಯೋವರೆಗೂ ಆ ದ್ವೇಷದ ಭಾವನೆಯನ್ನೇ ಮುಂದುವರೆಸಿಕೊಂಡು ಹೋಗುವ ಮನಸ್ತಿತಿಯವರೇ ಆಡಳಿತ ವರ್ಗದಲ್ಲಿ ಹೆಚ್ಚಾಗಿರುವುದರಿಂದ ರಫಾಯಲ್ ಅಜ್ನಾತರಾಗಿಯೇ ಉಳಿದುಬಿಟ್ಟರು.ಇಂದಿನ ಸಾರಿಗೆ ಸಂಘಟನೆಗಳ ಮುಖಂಡರು-ನಾಯಕರಂತೆ ಪ್ರಚಾರದ ಹಿಂದೆ ಬೀಳದೇ ತೆರೆಮರೆಗೆ ಸರಿದುಬಿಟ್ಟರು. ಅವರಿಗಿದ್ದ ಸಂಪರ್ಕ-ಮಾದ್ಯಮಗಳ ಜತೆಗಿನ ಉತ್ತಮ ಒಡನಾಟವನ್ನೇ ಮಿಸ್ಯೂಸ್ ಮಾಡಿಕೊಂಡಿದ್ದರೂ ದೊಡ್ಡ ನಾಯಕರಾಗಿ ಬೆಳೆದುಬಿಡ್ತಿದ್ರು.ಆದ್ರೆ ಅದ್ಯಾವುದಕ್ಕೂ ಇಚ್ಛೆ ಪಡದೆ ರಫಾಯಲ್ ತಾವಾಯ್ತು ತಮ್ಮ ಕೆಲಸವಾಯ್ತೆಂದುಕೊಂಡು ನಿರ್ಲಿಪ್ತರಾಗುಳಿದುಬಿಟ್ಟರು.
“ರಫಾಯಲ್ ರಾಜ್ ಅವರಂಥ ಲೀಡರ್ ಬೇರೆ ಯಾವುದೆ ಇಲಾಖೆಲ್ಲಿದ್ದಿದ್ದೇ ಆದರೆ ಅದರ ಕತೆಯೇ ಬೇರೆ ಇರುತ್ತಿತ್ತೇನೋ..? ರಫಾಯಲ್ ರಾಜ್ ಅವರು ಮಾಡಿದ ಅಪ್ರತಿಮ ಹೋರಾಟಗಳಿಂದಲೇ ಅವರನ್ನು ಮೇಲಕ್ಕೆ ಎತ್ತಿಬಿಡುತ್ತಿದ್ದರು.ಆದರೆ ..ತ್ತೆಗೇನು ಗೊತ್ತು..ಸ್ತೂರಿ ಪರಿಮಳ ಎನ್ನುವ ಗಾಧೆಯಂತೆ ರಫಾಯಲ್ ರಾಜ್ ವ್ಯಕ್ತಿತ್ವದ ಘನತೆಯನ್ನೇ ಮರೆತಿದ್ದಾರೆ.ತಮ್ಮ ಕೊನೆ ಉಸಿರು ಇರುವವರೆಗೂ ಕನ್ನಡಕ್ಕಾಗಿಯೇ ದುಡಿದ ಜೀವ ಅದು.ಆ ಜೀವ ದೇಹ ತೊರೆದಾಗ ಯಾವ್ ರೀತಿಯ ಬೀಳ್ಕೊಡುಗೆ ಕೊಡಬಹುದಿತ್ತು.ಆದರೆ ಅದನ್ನು ಮಾಡದೆ ತುಂಬಾ ನಿಕೃಷ್ಟವಾಗಿ ನಡೆಸಿಕೊಂಡಿದ್ದು ದುಃಖ ತಂದಿದೆ.ಅವರ ಜತೆ ಕೆಲಸ ಮಾಡಿದ ನಮಗೆ ರಫಾಯಲ್ ಅವರ ವ್ಯಕ್ತಿತ್ವ ಹಾಗೂ ಸಾಧನೆ ಏನನ್ನೋದ ಗೊತ್ತು.ಅವರ ವ್ಯಕ್ತಿತ್ವದ ಘನತೆಯನ್ನು ಬಿಎಂಟಿಸಿ ಆಡಳಿತ ಅಪಮಾನಿಸಿದೆ” – ರಫಾಯಲ್ ರಾಜ್ ಸಹದ್ಯೋಗಿ
ಬಿಎಂಟಿಸಿ ಕಾರ್ಮಿಕರ ಸಂಘಗಳಲ್ಲಿಯೂ ಕೆಲಸ ಮಾಡಿದ್ದ ರಫಾಯಲ್ ಅವರು ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ದಿನಸಿ ಸೇರಿದಂತೆ ಜೀವನೋಪಯೋಗಿ ವಸ್ತುಗಳು ಸಿಗುವಂತೆ ಮಾಡುವುದರಲ್ಲಿ ದೊಡ್ಡ ಕೊಡುಗೆ ನೀಡಿದ್ದರು.ಕಾರ್ಮಿಕರ ಕಲ್ಯಾಣ-ಕ್ಷೇಮಾಭಿವೃದ್ಧಿ-ಶ್ರಯೋಭಿವೃದ್ದಿಗಾಗಿ ದುಡಿದು ಸವಲತ್ತು ಸಿಗುವಂತೆ ಮಾಡಿದ್ರು.ಇದನ್ನು ಸಾಕಷ್ಟು ಕುಟುಂಬಗಳು ಮರೆತೇ ಬಿಟ್ಟಿವೆ.ನೀವು ನಂಬಲಿಕ್ಕಿಲ್ಲ ಕೊನೇ ದಿನಗಳಲ್ಲಿ ಅವರಿಗೆ ತಮ್ಮ ಸಂಘದ ಮೀಟಿಂಗ್ ಮಾಡಿಕೊಳ್ಳಲಿಕ್ಕೂ ಸ್ಥಳಾವಕಾಶ ನೀಡಿರಲಿಲ್ಲವಂತೆ ಬಿಎಂಟಿಸಿ ಆಡಳಿತ.ಮೊನ್ನೆ ಮೊನ್ನೆ ಸುರಿಯೋ ಮಳೆಯಲ್ಲೇ ಸಂಘದ ಹೊರಗೆ ನಿಂತು ಮೀಟಿಂಗ್ ಮಾಡಿದ್ದ ರಂತೆ ರಫಾಯಲ್ ಎನ್ನುವುದನ್ನು ಅನೇಕರು ಇವತ್ತು ಭಾವುಕರಾಗಿ ನೆನಪು ಮಾಡಿಕೊಳ್ಳುತ್ತಾರೆ.ರಫಾಯಲ್ ತಮ್ಮ ಸಂಘ-ಸಂಘಟನೆ-ಅಧಿಕಾರ-ಹುದ್ದೆಯ ದುರುಪಯೋಗಪಡಿಸಿಕೊಂಡಿದ್ದರೆ ಹೀಗೆಲ್ಲಾ ಇರಲಿಕ್ಕೆ ಸಾಧ್ಯವಾಗುತ್ತಿತ್ತಾ..?
ಕೊನೆ ಕ್ಷಣಗಳವರೆಗೂ ತನಗಾಗಿ ಎಂದು ಬದುಕದ ರಫಾಯಲ್ ರಾಜ್ ತಮ್ಮ ಕುಟುಂಬಕ್ಕೂ ಏನೂ ಮಾಡಲಿಲ್ಲವಂತೆ.ಈ ವಿಷಯದಲ್ಲಿ ಮನೆಯಲ್ಲಿ ಸದಾ ಒಂದು ಪುಟ್ಟ-ಸಾತ್ವಿಕ ಸಂಘರ್ಷ ಇದ್ದೇ ಇರುತ್ತಿತ್ತಂತೆ.ಆದ್ರೆ ಮನೆಯ ಯಜಮಾನ ಮಾಡುತ್ತಿರುವುದು ಒಳ್ಳೆಯ ಕೆಲಸವನ್ನಲ್ವೆ ಎನ್ನುವ ಕಾರಣಕ್ಕೆ ಈ ವಿಷಯವಾಗಿ ಹೆಚ್ಚೇನೂ ತಲೆಕಡಿಸಿಕೊಳ್ಳುತ್ತಿರಲಿಲ್ಲವಂತೆ.ರಫಾಯಲ್ ಒಬ್ಬ ಹೋರಾಟಗಾರನಾಗಿ ರೂಪುಗೊಳ್ಳೊಕ್ಕೆ ಮನೆಯವರು ಕೊಟ್ಟ ಸ್ವಾತಂತ್ರ್ಯ ಹಾಗೂ ಅವಕಾಶ ಸಹಕಾರಿಯಾಗಿತ್ತು.ಸಂಸ್ಥೆಯ ಕಾರ್ಮಿಕರಿಗಾಗಿ ದುಡಿದ-ಹೋರಾಡಿದ ರಫಾಯಲ್ ರಾಜ್ ಅವರು ಅಗಲಿದಾಗ ಅವರಿಗೆ ಪುಟ್ಟ ಶೃದ್ಧಾಂಜಲಿಯನ್ನು ಸಲ್ಲಿಸದ ಷ್ಟು ಅಮಾನವೀಯವಾಯ್ತಲ್ಲ ಆಡಳಿತ ವರ್ಗ ಎನ್ನುವುದು ದುರಾದೃಷ್ಟಕರ.
ರಫಾಯಲ್ ರಾಜ್ ಎನ್ನೊ ನಿವೃತ್ತ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿಯಾದ್ರೂ ಆಡಳಿತವರ್ಗದ ಗಮನಕ್ಕೆ ಬಂತಾ ಎಂದು ಕೇಳಿದ್ರೆ..ಆ ಸುದ್ದಿಯೇ ನಮಗೆ ಗೊತ್ತಾಗಲಿಲ್ಲ ಎನ್ನುವ ಉತ್ತರಕೊಟ್ಟಿದೆ ಯಂತೆ ಆಡಳಿತ ವರ್ಗ,ಮಾದ್ಯಮಗಳಲ್ಲಿ ರಫಾಯಲ್ ನಿಧನದ ಸುದ್ದಿ ಪ್ರಕಟವಾಗಿ ರಾಜಕೀಯ ಮುಖಂಡರಾದಿಯಾಗಿ ಅನೇಕ ಗಣ್ಯರು ರಫಾಯಲ್ ಪಾರ್ಥಿವ ಶರೀರದ ಅಂತಿ ದರ್ಶನ ಪಡೆದುಕೊಳ್ಳುತ್ತಿದ್ದರೆ ಬಿಎಂಟಿಸಿ ಆಡಳಿತವರ್ಗ ಕನಿಷ್ಟಕ್ಕೂ ತನ್ನ ಒಬ್ಬನೇ ಒಬ್ಬ ಪ್ರತಿನಿಧಿಯನ್ನು ಕಳುಹಿಸಿ ತನ್ನ ಶೃದ್ಧಾಂಜಲಿ,ಸಂತಾಪ,ಕೊನೆ ನಮನ ಸಲ್ಲಿಸಲೇ ಇಲ್ಲ ಎಂದ್ರೆ ಆಡಳಿತವರ್ಗದ ಮನಸ್ಥಿತಿ ಹೇಗಿದೆ ಎನ್ನುವುದು ಗೊತ್ತಾ ಗುತ್ತದೆ.ಕಾರ್ಮಿಕರ ಶೃಯೋಭಿವೃದ್ಧಿ-ಕ್ಷೇಮಾಭಿವೃದ್ದಿಗಾಗಿಯೇ ದುಡಿದ ಒಬ್ಬ ಹೋರಾಟಗಾರನನ್ನು ಸಾವಿನ ಬಳಿಕವೂ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತದೆ ಎಂದ್ರೆ ಇದು ರಫಾಯಲ್ ಗಲ್ಲ, ಅವರ ವ್ಯಕ್ತಿತ್ವ ಹಾ್ಗು ಅದರ ಘನತೆಗೆ ಮಾಡಿದ ಬಹುದೊಡ್ಡ ಅಪಮಾನವಲ್ವಾ..?