ರೈತರ ಹೋರಾಟದ ನಿಟ್ಟುಸಿರಿನಲ್ಲಿ ಮಾನವೀಯತೆ ಮರೆತ್ರಾ ಸಾರಿಗೆ ನೌಕರರು..ಅನ್ನವಿಟ್ಟ ಸಂಸ್ಥೆ ವಾಹನಗಳಿಗೆ ಕಲ್ಲು ಹೊಡೆದು, ಜಖಂ ಮಾಡಿದ್ದು ತಪ್ಪಲ್ಲವೇ?

0

ಬೆಂಗಳೂರು: ರೈತರ ಬೆಂಬಲ ಬೆಲೆ, ಮಧ್ಯವರ್ತಿಗಳ ಹಾವಳಿಗೆ ಅನ್ನದಾತ ಇನ್ನಿಲ್ಲದೆ ಕಂಗಾಲಾಗಿ ಕೇಂದ್ರ ರಾಜಧಾನಿ ದೆಹಲಿಯಲ್ಲಿ ಬಿಸಿಲು, ಮಳೆ, ಚಳಿ ಎನ್ನದೆ ಹೋರಾಟ ಮಾಡಿದ್ದು ಕೇಂದ್ರ ಸರ್ಕಾರವೇ ಥರಗುಟ್ಟಿ ಹೋಗಿದ್ದು ಗೊತ್ತಲ್ಲ. ಅದರ ಬೆನ್ನಲ್ಲೇ ರಾಜ್ಯ ರೈತ ನಿಯೋಗ ಸರ್ಕಾರದ ನಡೆ ಹಾಗೂ ಭೂ ಕಾಯಿದೆಯ ವಿರುದ್ಧ ರೊಚ್ಚಿಗೆದ್ದು ಹೋರಾಟಕ್ಕೆ ಇಳಿದಿದ್ದು ಸುಳ್ಳಲ್ಲ. ಆರಂಭದಲ್ಲಿ ಠುಸ್ ಪಟಾಕಿಯಂತಿದ್ದ ಹೋರಾಟ ಬಂದ್‌ಗಳು ನಿಧಾನವಾಗಿ ಸರ್ಕಾರವನ್ನು ಅಡಕತ್ತರಿಯಲ್ಲಿ ಸಿಕ್ಕಿಸಿ, ಒತ್ತಡ ಹೇರುವಲ್ಲಿ ಯಶಸ್ವಿಯೂ ಆದವು.

ಆದರೆ ಅದರ ಬೆನ್ನಲ್ಲೇ ರೈತರ ಹೋರಾಟದ ನಿಟ್ಟುಸಿರಿನಲ್ಲೇ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರು ಅವರ ಕುಟುಂಬ ಮತ್ತು ಮಕ್ಕಳು ತಮ್ಮ ಹಕ್ಕುಗಳಿಗಾಗಿ ಬೀದಿಗೆ ಇಳಿದಿದ್ದು, ತಮ್ಮ ಬೇಡಿಕೆಗಳು ಹಾಗೂ ತಮಗಾಗುತ್ತಿರುವ ಅನ್ಯಾಯಗಳ ವಿರುದ್ಧ ಸರ್ಕಾರದ ಗಮನಕ್ಕೆ ತಂದದ್ದು ಸುಳ್ಳಲ್ಲ. ಆದರೆ ತಮ್ಮ ಬೇಡಿಕೆಗಳಿಗಾಗಿ ತಮಗೆ ಅನ್ನವಿಟ್ಟ ಸಂಸ್ಥೆಯ ವಾಹನಗಳಿಗೆ ಕಲ್ಲು ಹೊಡೆದು, ಜಖಂ ಮಾಡಿ ತಮ್ಮ ನೈತಿಕತೆಯನ್ನು ಮರೆತದ್ದು ತಪ್ಪಲ್ಲವೇ?

ಅರೆಕಾಲಿಕ ಹುದ್ದೆಯಿಂದ ಸರ್ಕಾರಿ ನೇಮಕಕ್ಕೆ ಒತ್ತಡ ತರಲಿ ತಪ್ಪಿಲ್ಲ, ಆದರೆ ತಾವು ಅನ್ನ ಉಂಡ ಸಂಸ್ಥೆಗೆ ಅದರ ಆಸ್ತಿಗಳಿಗೆ ಧಕ್ಕೆ ತರುವುದು ಮನುಷ್ಯತ್ವವಾ…? ತಾವೇ ಪೂಜೆ ಮಾಡಿ ಸಾವಿರಾರು ಜನರ ಜೀವರಕ್ಷಣೆ ಮಾಡುವ ವಾಹನಗಳಿಗೆ ಕಲ್ಲು ಹೊಡೆದು, ವಿಕೃತಿ ಮೆರೆಯುತ್ತಾರಲ್ಲ ಅದು ಮಾನವೀಯತೆಯಾ…? ತಮ್ಮ ಕುಟುಂಬದವರಂತೆಯೇ ಬಸ್ ಬಂದ್ ಕಾಣದೆ ವಯೋವೃದ್ಧರು, ರೋಗಿಗಳು, ಊರಿಂದ ಊರಿಗೆ ತೆರಳಲುಇನ್ನಿಲ್ಲದ ಸಮಸ್ಯೆ ಎದುರಿಸುತ್ತಿರುವ ಅಮಾಯಕರನ್ನು ದಡ ಸೇರಿಸಲು ಒಂದಷ್ಟು ಸಂಸ್ಥೆಯ ಮಾನವೀಯತೆಯುಳ್ಳ ಚಾಲಕ, ನಿರ್ವಾಹಕರು ಸೇವೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ ತಮ್ಮ ಸಹೋದ್ಯೋಗಿಗಳಿಗೆ ಹಲ್ಲೆ ಮಾಡಿದ್ದು ಎಷ್ಟು ಸರಿ…?

ತಮ್ಮ ಹೋರಾಟಕ್ಕೆ ಸ್ಪಂದಿಸಲಿಲ್ಲ, ಅಥವಾ ಕೈ ಜೋಡಿಸಲಿಲ್ಲ ಎಂದು ಸಾರಿಗೆ ವ್ಯವಸ್ಥೆಯನ್ನೇ ನಂಬಿ ಬೀದಿಗೆ ಬಂದ ರೈತಾಪಿ ಜನ, ಪ್ರಯಾಣಿಕರು ಹಾಗೂ ತುರ್ತು ಅನಿವಾರ್ಯತೆಗೆ ಕಟ್ಟುಬಿದ್ದ ಮಧ್ಯಮ ವರ್ಗ ಎಲ್ಲಿ ಹೋಗಬೇಕು? ಬಂದ ದಾರಿಗೆ ಸುಂಕವಿಲ್ಲದಂತೆ ಸಾವಿರಾರು ಹಣ ತೆತ್ತು ಆಟೋ, ಟ್ಯಾಕ್ಸಿ ಮಾಡಿಕೊಂಡು ಹೋಗಲಿಕ್ಕಾಗ್ತಾದ? ಹೊರ ಊರಿಗೆ ಹೋದವರು ಮರಳಿ ತಮ್ಮ ಊರಿಗೆ ಹಿಂದಿರುಗಲು ಇಂತಹ ವಿಕೃತಿ ಸರಿಯಾ?

ಸಾರಿಗೆ ನೌಕರರೆ ನೀವು ಸರ್ಕಾರದ ವಿರುದ್ಧ ತಿರುಗಿಬೀಳಿ, ಸಚಿವರಿಗೆ ಘೇರಾವ್ ಹಾಕಿ, ಆದರೆ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ಮಾಡಿ ನಷ್ಟು ಉಂಟು ಮಾಡುವ ಅಧಿಕಾರ ನಿಮಗೆ ಕೊಟ್ಟವರು ಯಾರು? ನೈತಿಕತೆಯಿಂದ ಸಾತ್ವಿಕವಾಗಿ ಹೋರಾಟ ಮಾಡಿ, ಸಾರ್ವಜನಿಕ ಪ್ರಯಾಣಿಕರ ಸಹಾನುಭೂತಿ ಗಳಿಸಿ, ಕಾನೂನನ್ನು ಕೈಗೆ ತೆಗೆದುಕೊಂಡು ನೀವೇ ಅಪರಾಧಿಗಳಾಗಬೇಡಿ.

ರೈತರ ಹೋರಾಟದ ನಿಟ್ಟುಸಿರಿನಲ್ಲಿ ಮಾನವೀಯತೆ ಮರೆತ್ರಾ ಸಾರಿಗೆ ನೌಕರರು..ಅನ್ನವಿಟ್ಟ ಸಂಸ್ಥೆ ವಾಹನಗಳಿಗೆ ಕಲ್ಲು ಹೊಡೆದು, ಜಖಂ ಮಾಡಿದ್ದು ತಪ್ಪಲ್ಲವೇ?

 

Spread the love
Leave A Reply

Your email address will not be published.

Flash News