ಹುಚ್ಚ ಮಂಜನ ಹಂತಕರ ಹೆಡೆಮುರಿಕಟ್ಟೊಕ್ಕೆ ತುಮಕೂರು ಪೊಲೀಸ್ರಿಗೆ ಮನಸಿಲ್ವೋ. ಹಿಡಿದ್ರಾಯ್ತೆನ್ನೋ ಅಸಡ್ಡೆನೋ ಅಥವಾ ದಿವ್ಯನಿರ್ಲಕ್ಷ್ಯವೋ..

0

ತುಮಕೂರು: ಅಂದು ನಡೆದ ಆ ಕೊಲೆಗೆ ಕಲ್ಪತರು ನಾಡೇ ಬೆಚ್ಚಿಬಿದ್ದಿತ್ತು…ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ಎನ್ನೋದು ಇದೆಯೇ..?ಪೊಲೀಸರೆನ್ನೋರು ಬದುಕಿದ್ದಾರೆಯಾ..ಎಂದೆಲ್ಲಾ ಜನತೆ ಮಾತ್ನಾಡಿಕೊಂಡಿತ್ತು.ಏಕೆಂದ್ರೆ ಅಂದು ಕೊಲೆಯಾಗಿದ್ದಾತ ರೌಡಿ ಕಮ್ ಪೊಲೀಸ್ ಇನ್ಪಾರ್ಮರ್..ಅವತ್ತೇ ಜನ ಕೆಲ ಗಂಟೆಗಳಲ್ಲೇ ಹಂತಕರ ಹೆಡೆಮುರಿ ಕಟ್ತಾರೆ ಪೊಲೀಸ್ರು ಎಂದುಕೊಂಡಿದ್ದರು..ಆದ್ರೆ ಆಗಿದ್ದೇ ಬೇರೆ..ಹತ್ತು ದಿನಗಳಾದ್ರೂ ವಿಕ್ಕಿ ಎನ್ನುವ ಚಪ್ಪರ್ ನನ್ನು ಕರ್ಕೊಂಡ್ ಬಂದು ಲಾಕ್ ಮಾಡಿಕೊಂಡಿರೋದನ್ನು ಬಿಟ್ಟರೆ ಪೊಲೀಸ್ರಿಂದ ಹೇಳಿಕೊಳ್ಳುವಂಥ ಕಾರ್ಯಾಚರಣೆಯೇ ನಡೆದಿಲ್ಲ..ಜನ ಕೂಡ ಪೊಲೀಸ್ರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು..ತುಮಕೂರು ನಗರವನ್ನು ಬೆಚ್ಚಿ ಬೀಳಿಸಿದ್ದ ರೌಡಿ ಶೀಟರ್ ಹುಚ್ಚ ಮಂಜ ಅಲಿಯಾಸ್ ಅಚ್ಚೆ ಮಂಜನ ಹತ್ಯೆ ತುಮಕೂರು ಪೊಲೀಸರಿಗೆ ಚಿದಂಬರ ರಹಸ್ಯವಾಗ್ಹೋಗಿದೆಯೇನೋ ಎನಿಸುತ್ತೆ.ಕೊಲೆ ನಡೆದು  ಹತ್ತು ದಿನಗಳಾದರೂ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಇದೇ ಹತ್ಯೆಯಲ್ಲಿ ಭಾಗಿಯಾಗಿದ್ದ  ವಿಕ್ಕಿ ಯನ್ನು ಬಂಧಿಸಿರುವ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಲು ಆಸಕ್ತಿ ತೋರುತ್ತಿಲ್ಲ.

ರೌಡಿಶೀಟರ್ ಹುಚ್ಚ ಮಂಜ ಅಲಿಯಾಸ್ ಅಚ್ಚೆ ಮಂಜ ಡಿಸೆಂಬರ್ 3 ರಂದು ನಗರದ ಬಟವಾಡಿಯಲ್ಲಿ ಕೊಲೆಯಾಗಿದ್ದ. ಆರೋಪಿಗಳನ್ನು ಬಂಧಿಸಲು  ಮೂರು ವಿಶೇಷ ತಂಡಗಳನ್ನೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಸಿಕೃಷ್ಣ ರಚಿಸಿದ್ದಾರೆ. ಆದರೂ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಈ ಮೂರು ತಂಡಗಳು ವಿಫಲವಾಗಿವೆ.ಈ ಹತ್ಯೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ವಿಕ್ಕಿಯನ್ನು ಪೊಲೀಸರು ಬಂಧಿಸಲು  ತೆರಳಿದಾಗ ಡ್ರ್ಯಾಗನ್ ನಿಂದ ಹಲ್ಲೆ ನಡೆಸಲು ಮುಂದಾಗಿದ್ದ. ಆಗ ಜಯನಗರ ಠಾಣೆಯ ಪಿ.ಎಸ್.ಐ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆದರೆ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ. ಇದು ಇಲಾಖಾ ವಲಯದಲ್ಲಿಯೇ ಭಾರೀ ಚರ್ಚೆಗೆ ಕಾರಣವಾಗಿದೆ.

ತುಮಕೂರು ನಗರ ವಿಭಾಗದ ಡಿ.ವೈ.ಎಸ್.ಪಿ, ನಗರ ಠಾಣೆಯ ಇನ್ಸ್‌ಸ್ಪೆಕ್ಟರ್, ಸಬ್ ಇನ್ಸ್‌ಸ್ಪೆಕ್ಟರ್ ಹಾಗೂ ನಗರ ಠಾಣೆಯ ಕ್ರೈಂ ಪೇದೆ ಮಂಜುನಾಥ್ ಅವರ ಜೊತೆ ಉತ್ತಮ ಒಡನಾಟ ಇದ್ದದ್ದೇ ಹುಚ್ಚ ಮಂಜನ ಜೀವಕ್ಕೆ ಎರವಾಯಿತು ಎನ್ನಲಾಗುತ್ತಿದೆ. ಹುಚ್ಚ ಮಂಜ ಈ ಅಧಿಕಾರಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದು, ಎದುರು ಗ್ಯಾಂಗ್ ನ ಹಾಗೂ ಇತರೆ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಅಧಿಕಾರಿಗಳಿಗೆ ನೀಡುತ್ತಿದ್ದ ಎನ್ನಲಾಗುತ್ತಿದೆ. ಮಂಜನ ಮಾಹಿತಿಯನ್ನು ಆಧರಿಸಿ ಈ ಅಧಿಕಾರಿಗಳು ಇತರೆ ರೌಡಿಶೀಟರ್ ಗಳಿಂದ ಹಣ ವಸೂಲಿಗೆ ಇಳಿದಿದ್ದರು ಎಂದು ಇಲಾಖೆಯ ಮೂಲಗಳೇ ಹೇಳುತ್ತಿವೆ.

ಹುಚ್ಚ ಮಂಜನ ಹತ್ಯೆ ನಡೆಯುವ ನಾಲ್ಕೈದು ದಿನಗಳ ಮುಂಚೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೆಎಕ್ಸ್ ವಿಕ್ಕಿ ಹಾಗೂ ಮತ್ತೊಬ್ಬನನ್ನ ತುಮಕೂರು ನಗರ ಠಾಣೆಯ ಕ್ರೈಂ ಪೇದೆ ಮಂಜುನಾಥ್ ಕರೆದು ಹಲ್ಲೆ ನಡೆಸಿದ್ದರು ಎಂದು ಹೆಸರು ಹೇಳಲಿಚ್ಚಿಸದ ಸಿಬ್ಬಂದಿ ಜಯಕಿರಣ ಪತ್ರಿಕೆಗೆ ತಿಳಿಸಿದರು.

ಹುಚ್ಚ ಮಂಜನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸದೇ ಇರೋದಕ್ಕೆ ಇದೇ ಅಧಿಕಾರಿಗಳು ಕಾರಣ ಎನ್ನಲಾಗುತ್ತಿದೆ. ಆತನನ್ನು ಬಂಧಿಸಿದರೆ ಈ ಅಧಿಕಾರಿಗಳ ಹೆಸರುಗಳು ಬಹಿರಂಗವಾಗುವ ಭಯವೂ ಈ ಅಧಿಕಾರಿಗಳನ್ನು ಕಾಡುತ್ತಿದೆಯಂತೆ. ಹುಚ್ಚ ಮಂಜನ ಹಾಗೂ ಪೊಲೀಸ್ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳದ ಬಗ್ಗೆ ಈಗಾಗಲೇ ಕಾಲಿಗೆ ಗುಂಡು ತಗುಲಿ ಬಂಧಿಸಲಾಗಿರುವ ಆರ್.ಎಕ್ಸ್ ವಿಕ್ಕಿ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗುತ್ತಿದೆ.  ಹುಚ್ಚಮಂಜನ ಹತ್ಯೆ ನಡೆದಿರುವುದು ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯೂ ನಗರ ಉಪವಿಭಾಗಕ್ಕೆ ಸೇರುತ್ತದೆ.

Spread the love
Leave A Reply

Your email address will not be published.

Flash News