ಬಿಬಿಎಂಪಿಯಲ್ಲಿ ಸದ್ದು ಮಾಡಿದ ನೂರಾರು ಕೋಟಿ “ಬ್ಯಾಚ್ ಮಿಕ್ಸ್ ಪ್ಲ್ಯಾಂಟ್” ಹಗರಣ-10 IAS ಗಳ ವಿರುದ್ಧ ದೂರು ದಾಖಲು..

0

ಬೆಂಗಳೂರು:ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ  ನಡೆದಿರುವ ಮತ್ತೊಂದು ಬೃಹತ್ ಹಗರಣ. Hot Batch Mix Plant ಹೆಸರಿನಲ್ಲಿ ನಡೆದಿರುವ ಹಗರಣಕ್ಕೆ ನೇರ-ಪರೋಕ್ಷವಾಗಿ ಸಹಕರಿಸಿದ್ದಾರೆನ್ನುವ ಆರೋಪಕ್ಕೆ   10 ಮಂದಿ ಹಿರಿಯ IAS ಅಧಿಕಾರಿಗಳು ಸಿಲುಕಿದ್ದು ಅವರ  ವಿರುದ್ಧ ದೂರನ್ನು ಬಿಜೆಪಿ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್ ರಮೇಶ್  ದಾಖಲಿಸಿದ್ದಾರೆ.

ಪಾಲಿಕೆಯ ಬೃಹತ್ ಮಳೆನೀರುಗಾಲುವೆ ಇಲಾಖೆಯ ಮುಖ್ಯ ಅಭಿಯಂತರ B. S. ಪ್ರಹ್ಲಾದ್ , Traffic Engineering Cell ನ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್ ವಿರುದ್ಧ ACB, BMTF ಮತ್ತು ಲೋಕಾಯುಕ್ತಗಳಲ್ಲಿ ಭ್ರಷ್ಟಾಚಾರ, ವಂಚನೆ, ಸಾರ್ವಜನಿಕ ಹಣ ದುರ್ಬಳಕೆ ಮತ್ತು ಅಧಿಕಾರ ದುರ್ಬಳಕೆ ಪ್ರಕರಣಗಳ ದೂರನ್ನು ರಮೇಶ್ ದಾಖಲಿಸಿರುವುದು ವಿಶೇಷ.

ದೂರು ದಾಖಲಾಗಿರುವ ಐಎಎಸ್ ಗಳ ವಿವರ:ಮನೋಜ್ ಜೈನ್ – IAS ಪಾಲಿಕೆಯ ವಿಶೇಷ ಆಯುಕ್ತರು (ಯೋಜನೆ) ಮತ್ತು ತುಳಸಿ  ಮದ್ದಿನೇನಿ – IAS ವಿಶೇಷ ಆಯುಕ್ತರು (ಹಣಕಾಸು) ಸೇರಿದಂತೆ 08 ವಲಯಗಳ ವಲಯ ಆಯುಕ್ತರುಗಳು ಹಾಗೂ ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ 27 ವಿಭಾಗಗಳ ಕಾರ್ಯಪಾಲಕ ಅಭಿಯಂತರರು ಮತ್ತು ಗುತ್ತಿಗೆದಾರರ M. S. ವೆಂಕಟೇಶ್ ವಿರುದ್ಧ ದೂರುಗಳನ್ನು  ದಾಖಲಿಸಲಾಗಿದೆ.

ಪ್ರಕರಣದ ಹಿನ್ನಲೆ:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ 75 ಕಿ. ಮೀ. ಉದ್ದದ High Density ರಸ್ತೆಗಳು, 606 ಕಿ. ಮೀ. ಉದ್ದದ ಆರ್ಟೀರಿಯಲ್ ರಸ್ತೆಗಳು, 796 ಕಿ. ಮೀ. ಉದ್ದದ ಸಬ್ ಆರ್ಟೀರಿಯಲ್ ರಸ್ತೆಗಳು ಮತ್ತು 11,524 ಕಿ. ಮೀ. ಉದ್ದದ ವಾರ್ಡ್ ರಸ್ತೆಗಳು ಸೇರಿದಂತೆ ಒಟ್ಟು 12,999 ಕಿ. ಮೀ. ಉದ್ದದ ರಸ್ತೆಗಳಲ್ಲಿ ಪ್ರತೀ ವರ್ಷ ಸೃಷ್ಟಿಯಾಗುವ ಹತ್ತಾರು ಸಾವಿರ ರಸ್ತೆಗುಂಡಿಗಳ ನಿರ್ವಹಣೆ ಕಾರ್ಯಗಳಿಗೆಂದು Hot Batch Mix Plant ಅನ್ನು ನಿರ್ಮಿಸುವ ಉದ್ದೇಶದಿಂದ ಪಾಲಿಕೆ ಟೆಂಡರ್ ಆಹ್ವಾನಿಸಿತ್ತು.

ಪ್ರಸ್ತುತ ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿ ಕಣ್ಣೂರು ಗ್ರಾಮದ ಸರ್ವೇ ನಂ: 50 ರಲ್ಲಿರುವ 4 ½ ಎಕರೆ ವಿಸ್ತೀರ್ಣದ ಬಿಬಿಎಂಪಿ ಸ್ವತ್ತಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ತನ್ನ ಸ್ವಂತ ವೆಚ್ಛದಲ್ಲಿ Hot Batch Mix Plant ಅನ್ನು ಸ್ಥಾಪಿಸುವ ಉದ್ದೇಶ ಹೊಂದಿತ್ತು.ಇದಕ್ಕಾಗಿ 100 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಪಾಲಿಕೆಯ ಸ್ವತ್ತನ್ನು ಗುತ್ತಿಗೆದಾರ M. S. ವೆಂಕಟೇಶ್ ಹೆಸರಿಗೆ 05 ವರ್ಷಗಳಿಗೆ ಪಾಲಿಕೆ ಗುತ್ತಿಗೆಗೆ ನೀಡುವ ಮೂಲಕ ಅಕ್ರಮ ಎಸಗಿದೆ ಎನ್ನುವುದು ರಮೇಶ್ ಆರೋಪ.

ಗುತ್ತಿಗೆದಾರನಿಂದಾಗಿರುವ ಲೋಪ..?!: ಅಂದ್ಹಾಗೆ 5 ಕೋಟಿ ರೂಪಾಯಿಯ ಬಂಡವಾಳ, 02 Paver Machine ಗಳು ಮತ್ತು 03 Compactor ಗಳನ್ನು ಪಾಲಿಕೆಯೇ ತನ್ನ ಸ್ವಂತ ವೆಚ್ಛದಲ್ಲಿ ಒದಗಿಸಿದೆ.ಆದರೆ ,ಕೇವಲ ಡಾಂಬರು ಮಿಶ್ರಣ ಉತ್ಪಾದನೆ, ಗುತ್ತಿಗೆ ಕಾರ್ಮಿಕರನ್ನು ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವಷ್ಟೇ ಗುತ್ತಿಗೆದಾರನು ಮಾಡಬೇಕಿರುತ್ತದೆ. Production, Supply ಮತ್ತು Laying ಕಾರ್ಯಗಳನ್ನಷ್ಟೇ ಗುತ್ತಿಗೆದಾರನು ಮಾಡಬೇಕಿರುತ್ತದೆ. ಕೇವಲ ಅಗತ್ಯವಿರುವಷ್ಟು ಪ್ರಮಾಣದ ಡಾಂಬರು ಮಿಶ್ರಣವನ್ನು ತಯಾರಿಸಿ, ಅಗತ್ಯವಿರುವ ಸ್ಥಳಗಳಿಗೆ ಆ ಮಿಶ್ರಣವನ್ನು ಸಾಗಿಸಿದ ನಂತರ ಕಾರ್ಮಿಕರ ಮೂಲಕ ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವ ಕಾರ್ಯವನ್ನಷ್ಟೇ ಗುತ್ತಿಗೆದಾರನು ಟೆಂಡರ್ ನಿಯಮಗಳಿಗೆ ಅನುಸಾರವಾಗಿ ಮಾಡಬೇಕಿರುತ್ತದೆ.

ವಾರ್ಷಿಕ ನಿರ್ವಹಣೆಗೆ ₹. 7,35,00,000/- ಮೊತ್ತದ ಅಂದಾಜು ಮೊತ್ತಕ್ಕೆ ಕರೆಯಲಾಗಿದ್ದ ಈ  ಟೆಂಡರ್ ನ್ನು . ಪಾಲಿಕೆಯ ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಅಧೀನದಲ್ಲಿರುವ Traffic Engineering Cell ನ ವಿಭಾಗ  ಆಹ್ವಾನಿಸಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದರು. ಈ ಟೆಂಡರ್ ಪ್ರಕ್ರಿಯೆಯಲ್ಲಿ ನಿಗದಿತ ಮೊತ್ತಕ್ಕಿಂತ  ಶೇ. 48.39% ರಷ್ಟು ಕಡಿಮೆ ಮೊತ್ತವನ್ನು ನಮೂದಿಸಿದ್ದ M. S. ವೆಂಕಟೇಶ್ ಎಂಬ ಗುತ್ತಿಗೆದಾರನಿಗೆ ನಿಯಮ ಬಾಹಿರವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಗುತ್ತಿಗೆಯನ್ನು ನೀಡಲಾಗಿತ್ತು.

3,79,30,000/- ಗಳಿಗೆ ವಾರ್ಷಿಕ ನಿರ್ವಹಣೆ ಮಾಡುವುದಾಗಿ ನಮೂದಿಸಿದ್ದ ಗುತ್ತಿಗೆದಾರ M. S. ವೆಂಕಟೇಶ್. ನೊಂದಿಗೆ “ಗುತ್ತಿಗೆ ಕರಾರು ಪತ್ರ”ವನ್ನು ಮಾಡಿಕೊಂಡು ದಿನಾಂಕ  08/03/2019 ರಂದು ಆತನಿಗೆ “ಕಾರ್ಯಾದೇಶ ಪತ್ರ”ವನ್ನು ನೀಡಲಾಗಿತ್ತು.ಆದ್ರೆ ಇಷ್ಟೊಂದು ಕಡಿಮೆ ಮೊತ್ತದಲ್ಲಿ Plant ನ ನಿರ್ವಹಣೆ ಸಾಧ್ಯವೇ? ಎಂಬುದರ ಬಗ್ಗೆ   TEC  ಅಧಿಕಾರಿಗಳು ತಲೆ ಕೆಡಿಸಿಕೊಳ್ಳದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎನ್ನುವುದು ರಮೇಶ್ ಆರೋಪ.

ಗುತ್ತಿಗೆ ಕರಾರಿನಲ್ಲಿ ಏನೇನಿತ್ತು..2019 ರ ಡಿಸೆಂಬರ್ ತಿಂಗಳಿನಿಂದ Hot Batch Mix Plant ಅನ್ನು ಪ್ರಾರಂಭಿಸಬೇಕೆಂಬ ಷರತ್ತನ್ನು ಗುತ್ತಿಗೆ ಕರಾರು ಪತ್ರದಲ್ಲಿ ವಿಧಿಸಲಾಗಿತ್ತು.Defect Liability Period ಇರುವಂತಹ ರಸ್ತೆಗಳನ್ನು ಹೊರತುಪಡಿಸಿ, ಇನ್ನಿತರ ರಸ್ತೆಗಳಲ್ಲಿ ಬಿದ್ದಿರುವ ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವ ಕಾರ್ಯವನ್ನು ಈ ಗುತ್ತಿಗೆದಾರ ಮಾಡಬೇಕಿತ್ತು..ಗುತ್ತಿಗೆ ಕರಾರು ಪತ್ರದಲ್ಲಿರುವಂತೆ ಅಥವಾ ಟೆಂಡರ್ ನಿಯಮಗಳಂತೆ ಗುತ್ತಿಗೆದಾರ ಪ್ರತೀ ಗಂಟೆಗೆ 100 ರಿಂದ 120 ಟನ್ ಗಳಷ್ಟು ಪ್ರಮಾಣದ ಡಾಂಬರು ಮಿಶ್ರಣವನ್ನು ಉತ್ಪಾದಿಸಬೇಕಿತ್ತು.(ಅಂದರೆ ಪ್ರತೀ ಗಂಟೆಗೆ ಕನಿಷ್ಠ 07 ರಿಂದ 08 ಲೋಡ್ ಗಳಷ್ಟು ಡಾಂಬರು ಮಿಶ್ರಣವನ್ನು ಉತ್ಪಾದಿಸಬೇಕಿತ್ತು).

ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸಬೇಕಿರುವ ಘಟಕದಲ್ಲಿ ಕನಿಷ್ಠ 08 ಗಂಟೆಗಳಷ್ಟು ಕಾಲ ಕಾರ್ಯ ನಿರ್ವಹಿಸಿದರೂ ಸಹ ಪ್ರತೀ ನಿತ್ಯ ಸುಮಾರು 60 ಲೋಡ್ ಗಳಷ್ಟು ಡಾಂಬರು ಮಿಶ್ರಣವನ್ನು ಉತ್ಪಾದಿಸಿ, Indent ಗಳಿರುವ ಸ್ಥಳಗಳಿಗೆ ಪೂರೈಸಿರಬೇಕಿರುತ್ತದೆ.ಆದರೆ, ಗುತ್ತಿಗೆದಾರ M. S. ವೆಂಕಟೇಶ್ ಯಾವುದೇ ಕೆಲಸ ಮಾಡದೇ ಆರೇಳು ತಿಂಗಳುಗಳ ಕಾಲ ಸುಮ್ಮನೇ ಕಾಲ ತಳ್ಳಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಆರೇಳು ತಿಂಗಳ ಕಾಲ ಸುಮ್ಮನೇ ಕಾಲ ತಳ್ಳುತ್ತಿದ್ದ ಗುತ್ತಿಗೆದಾರ M. S. ವೆಂಕಟೇಶ್ ಈಗ ಡಾಂಬರು ಮಿಶ್ರಣವನ್ನು ಮಾತ್ರವೇ ಪೂರೈಸುತ್ತಿದ್ದಾನೆ.

ಈ ಕಾರ್ಯಕ್ಕೆ ಗುತ್ತಿಗೆದಾರ M. S. ವೆಂಕಟೇಶ್ ಎಂಬಾತನಿಗೆ ಕೇವಲ Production Cost ಮಾತ್ರವೇ ನೀಡಬೇಕಿರುತ್ತದೆ. ಆದರೆ, ನಮ್ಮ ಅಧಿಕಾರಿಗಳು ಆತನಿಗೆ Laying Cost ಅನ್ನೂ ಸಹ ನೀಡುತ್ತಿದ್ದಾರೆ. Laying ಮತ್ತು Rolling ಅನ್ನು ಮಾತ್ರ ಆಯಾ ವಾರ್ಡ್ ಗಳಲ್ಲಿ POW ಅಡಿಯಲ್ಲಿ Depot Collection ಹೆಸರಿನಲ್ಲಿ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಂದ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡುತ್ತಿದ್ದಾರೆ.•ವಾರ್ಡ್ ವ್ಯಾಪ್ತಿಯ ರಸ್ತೆಗಳಲ್ಲಿ ಸೃಷ್ಟಿಯಾಗುವ ರಸ್ತೆ ಗುಂಡಿಗಳನ್ನು ಮುಚ್ಚಲೆಂದೇ ಪ್ರತೀ ವರ್ಷದ ಪಾಲಿಕೆಯ ಆಯವ್ಯಯದಲ್ಲಿ POW ಗೆಂದು ಲೆಕ್ಕ ಶೀರ್ಷಿಕೆ P – 1771 ಅಡಿಯಲ್ಲಿ ಮೀಸಲಿಡುವ (ಹಳೆಯ ವಾರ್ಡ್ ಗಳಿಗೆ 02 ಕೋಟಿ ಮತ್ತು ಹೊಸ ವಾರ್ಡ್ ಗಳಿಗೆ 03 ಕೋಟಿ) ಅನುದಾನದ ಪೈಕಿ Depot Collection ಹೆಸರಿನಲ್ಲಿ ಪ್ರತಿಯೊಂದು ವಾರ್ಡ್ ಗೆ  ತಲಾ 10 ಲಕ್ಷ ರೂ. ಗಳನ್ನು ಮೀಸಲಿರಿಸಲಾಗುತ್ತಿದೆ.

ಅಂದರೆ, 198 ವಾರ್ಡ್ ಗಳ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಮುಚ್ಚಲು ಒಟ್ಟು ₹. 19,80,00,000/- (ಹತ್ತೊಂಬತ್ತು ಕೋಟಿ ಎಂಬತ್ತು ಲಕ್ಷ) ಗಳನ್ನು ಮೀಸಲಿಡಲಾಗುತ್ತಿದೆ. ಆದರೆ, ವಾರ್ಡ್ ಮಟ್ಟದಲ್ಲಿ ಅವುಗಳಿಗಾಗಿ ಮೀಸಲಿಟ್ಟ ಅನುದಾನವನ್ನು ಬಳಸಿ ಮುಚ್ಚಲಾಗುತ್ತಿರುವ ರಸ್ತೆ ಗುಂಡಿಗಳನ್ನೂ ಸಹ Hot Batch Mix Plant ನಿರ್ವಹಿಸುತ್ತಿರುವ ಗುತ್ತಿಗೆದಾರನೇ ಮುಚ್ಚುತ್ತಿದ್ದಾನೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಎಲ್ಲರೂ ನೋಡ ನೋಡುತ್ತಿರುವಂತೆಯೇ  ₹. 19,80,00,000/- ಗಳನ್ನು ಹಗಲು ದರೋಡೆ ಮಾಡಲಾಗುತ್ತಿದೆ.ಈ ಮೂಲಕ ಕೋಟ್ಯಾಂತರ ರೂಪಾಯಿಗಳನ್ನು ಅನಾಯಾಸವಾಗಿ ಹೊತ್ತೊಯ್ದು M. S. ವೆಂಕಟೇಶ್ ಎಂಬ ವಂಚಕನ ತಿಜೋರಿಯನ್ನು ಪಾಲಿಕೆಯ ಅಧಿಕಾರಿಗಳು ತುಂಬಿಸುತ್ತಿದ್ದಾರೆನ್ನುವುದು ರಮೇಶ್ ಆರೋಪ.

ಗುತ್ತಿಗೆದಾರನೊಂದಿಗೆ ಪಾಲಿಕೆ ಅಧಿಕಾರಿಗಳು  ಷಾಮೀಲು: ಟೆಂಡರ್ ಕರೆದು ಒಪ್ಪಂದದ ಕರಾರು ಪತ್ರ ಮಾಡಿಕೊಂಡು ನೀಡಿರುವ ಕಾರ್ಯಾದೇಶ ಪತ್ರದಲ್ಲಿ ಇರುವಂತೆ ಒಟ್ಟು 12,999 ಕಿ. ಮೀ. ಉದ್ದದ ರಸ್ತೆಗಳ ಪೈಕಿ, Defect Liability Period ಮತ್ತು Maintenance Period ಇರುವ ರಸ್ತೆಗಳನ್ನು, Proposal ಇರುವ ರಸ್ತೆಗಳನ್ನು, White Topping ಮತ್ತು Tender Sure  ರಸ್ತೆಗಳ ಪ್ರಮಾಣವನ್ನು ಕಳೆಯುವ ಕೆಲಸವನ್ನೇ ಅಧಿಕಾರಿಗಳು ಮಾಡಿಲ್ಲ. ಈ ಮೂಲಕ ಕನಿಷ್ಠ 3,000 ಕಿ. ಮೀ. ಉದ್ದದ ರಸ್ತೆಗಳ ನಿರ್ವಹಣೆ ಕಾರ್ಯವನ್ನು ಸಂಬಂಧವೇ ಇಲ್ಲದೆ M. S. ವೆಂಕಟೇಶ್ ಎಂಬ ಗುತ್ತಿಗೆದಾರನಿಗೆ ಲೂಟಿ ಮಾಡುವ ಸಲುವಾಗಿಯೇ ಸೇರಿಸಲಾಗಿದೆ .ಕರಾರು ಪತ್ರದಲ್ಲಿರುವ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವುದಕ್ಕೆ ಬಳಸಿಕೊಂಡಿರುವ Python Machine ಕಾರ್ಯಗಳಿಗೂ ಸಹ 2020 ರ ಆಗಸ್ಟ್ ತಿಂಗಳವರೆಗೆ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡಲಾಗಿದೆ.

Hot Batch Mix Plant ನಿಂದ ಗುತ್ತಿಗೆದಾರ ಸಾಗಿಸುವ ಡಾಂಬರು ಮಿಶ್ರಣಗಳನ್ನು ಹೊತ್ತೊಯ್ಯುವ ವಾಹನಗಳ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ Tacking System ಅನ್ನು ಜಾರಿಗೇ ತಂದಿಲ್ಲ. ಗುತ್ತಿಗೆದಾರನು ಘಟಕದಿಂದ ಸಾಗಿಸುವ ಡಾಂಬರು ಮಿಶ್ರಣದ ಪ್ರಮಾಣವನ್ನು ತೂಕ ಹಾಕಲು Weigh Bridge ವ್ಯವಸ್ಥೆಯೇ ಇಲ್ಲ. ಗುತ್ತಿಗೆದಾರ ಮತ್ತು ಅಧಿಕಾರಿಗಳು ಷಾಮೀಲಾಗಿ, ಘಟಕದಿಂದ ಪ್ರತಿ ನಿತ್ಯ 10 Load ಗಳಷ್ಟು ಡಾಂಬರು ಮಿಶ್ರಣವನ್ನು ಕಳುಹಿಸಿ 25 Load ಗಳಷ್ಟು ಡಾಂಬರು ಮಿಶ್ರಣವನ್ನು ಪೂರೈಸಲಾಗುತ್ತಿದೆ ಎಂದು Bill ಗಳನ್ನು ಸೃಷ್ಟಿಸಲಾಗುತ್ತಿದೆಯಂತೆ,.

ಆದರೆ ವಾಸ್ತವವಾಗಿ ಪೂರೈಸಲಾಗುತ್ತಿರುವ ಡಾಂಬರು ಮಿಶ್ರಣದ ಪ್ರಮಾಣದ ಮೂರು ಪಟ್ಟು ಹೆಚ್ಚು ಪ್ರಮಾಣವನ್ನು ನಮೂದಿಸಿ ಪಾಲಿಕೆ ಹಣವನ್ನು  ಗುತ್ತಿಗೆದಾರ M. S. ವೆಂಕಟೇಶ್ ಲೂಟಿ ಮಾಡುತ್ತಿದ್ದಾರೆ.ಇದರ ಹಿಂದೆ ಕಾಣದ ಕೈಗಳ ಮತ್ತು ಹಿರಿಯ ಅಧಿಕಾರಿಗಳ ಪ್ರಭಾವವಿದೆ. ಆತ ಪೂರೈಸುವ ವಾಸ್ತವದ ಪ್ರಮಾಣಕ್ಕಿಂತಲೂ ಐದಾರು ಪಟ್ಟು ಹೆಚ್ಚು ಪ್ರಮಾಣದಲ್ಲಿ ಡಾಂಬರು ಮಿಶ್ರಣವನ್ನು ಪೂರೈಸಿದ್ದಾನೆ ಎಂದು 27 ವಿಭಾಗಗಳ ಕಾರ್ಯಪಾಲಕ ಅಭಿಯಂತರರು ಸುಳ್ಳು ಲೆಕ್ಕಗಳನ್ನು ಬರೆಯುತ್ತಿದ್ದಾರೆ.

ಪಾಲಿಕೆಯ ಹಣವನ್ನು ಲೂಟಿ ಮಾಡಲೆಂದೇ ಮತ್ತೊಂದು ದೊಡ್ಡ ಮಟ್ಟದ ತಪ್ಪನ್ನು ಮಾಡಿ, M. S. ವೆಂಕಟೇಶ್ ಎಂಬ ಗುತ್ತಿಗೆದಾರನೊಂದಿಗೆ ಷಾಮೀಲಾಗಿರುವ ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಮುಖ್ಯ ಅಭಿಯಂತರ B. S. ಪ್ರಹ್ಲಾದ್ ಎಂಬ ಪರಮ ಭ್ರಷ್ಟ ಅಧಿಕಾರಿ. 2018-19 ರಲ್ಲಿ ಕರೆಯಲಾಗಿದ್ದ ಟೆಂಡರ್ ನಿಯಮಗಳಲ್ಲಿ ಗುತ್ತಿಗೆದಾರನೇ Production, Supply & Laying ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಅತ್ಯಂತ ಸ್ಪಷ್ಟವಾಗಿ ಹೇಳಲಾಗಿದೆ. Supply ಮತ್ತು Laying ಎಂದರೆ, ಕಾರ್ಮಿಕರನ್ನು ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕಿರುವ ಕಾರ್ಯವನ್ನು ಗುತ್ತಿಗೆದಾರನೇ ಮಾಡಬೇಕಿರುತ್ತದೆ.

ಹಾಗಿದ್ದಾಗ್ಯೂ ಸಹ ಗುತ್ತಿಗೆದಾರನೊಂದಿಗೆ ಸೇರಿಕೊಂಡು ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ದುರುದ್ದೇಶದಿಂದಲೇ 31/08/2020 ರಂದು ಪಾಲಿಕೆ ವ್ಯಾಪ್ತಿಯ 27 ವಿಭಾಗಗಳಲ್ಲಿನ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಕಾರ್ಮಿಕರನ್ನು ಪೂರೈಸುವ ಗುತ್ತಿಗೆದಾರರನ್ನು ನೇಮಿಸಿಕೊಳ್ಳಲು ಟೆಂಡರ್ ಅನ್ನು ಆಹ್ವಾನಿಸಲಾಗಿದೆ. ಈ ಎಲ್ಲ ಟೆಂಡರ್ ಪ್ರಕ್ರಿಯೆಯಲ್ಲಿ M. S. ವೆಂಕಟೇಶನ ಬೇನಾಮಿ ಗುತ್ತಿಗೆದಾರರೇ ಭಾಗವಹಿಸಿ ಯಶಸ್ವಿ ಬಿಡ್ ದಾರರಾಗುವಂತೆ ಅತ್ಯಂತ ವ್ಯವಸ್ಥಿತವಾಗಿ ಷಡ್ಯಂತ್ರವನ್ನು ರೂಪಿಸಲಾಗಿದೆ. ನಿಯಮಗಳ ಅನುಸಾರ ಸರ್ಕಾರದ ಯಾವುದೇ ಒಂದು ಯೋಜನೆಗೆ ಸಂಬಂಧಿಸಿದಂತೆ ಟೆಂಡರ್ ನಿಯಮಗಳನ್ನು ಸಡಿಲಿಸಲು ಅಥವಾ ವಿಭಜಿಸಲು ಸಾಧ್ಯವೇ ಇರುವುದಿಲ್ಲ.

ಗುತ್ತಿಗೆದಾರನು ಪ್ರತೀ ನಿತ್ಯ 60 ಲೋಡ್ ಗಳಷ್ಟು ಡಾಂಬರು ಮಿಶ್ರಣ ಪೂರೈಸಬೇಕೆಂಬ ಷರತ್ತು ಇದ್ದರೂ ಸಹ ಸರಾಸರಿ ಕೇವಲ 08 ಲೋಡ್ ಗಳಷ್ಟು ಮಿಶ್ರಣ ಪೂರೈಸಿದ್ದಾನೆ ಎಂದು ಉಲ್ಲೇಖಿಸಿ, ಸಂಪೂರ್ಣ ಗುತ್ತಿಗೆ ಮೊತ್ತವನ್ನು ಪಾವತಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ, ಆ ಮೊತ್ತವನ್ನು ಗುತ್ತಿಗೆದಾರನಿಂದ ವಾಪಸ್ಸು ಪಡೆಯುವ ಬಗ್ಗೆ ಕ್ರಮ ಕೈಗೊಳ್ಳಬೇಕು.

ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಮುಖ್ಯ ಅಭಿಯಂತರ B. S. ಪ್ರಹ್ಲಾದ್ ಮತ್ತು TEC ವಿಭಾಗದ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್ ಅವರು ಕಡತಗಳ ಮೂಲಕ ಸಲ್ಲಿಸಿರುವ ಎಲ್ಲ ಕಾನೂನುಬಾಹಿರ ಪ್ರಸ್ತಾವನೆಗಳನ್ನು ಪರಿಶೀಲಿಸದೆಯೇ, ಕಣ್ಣು ಮುಚ್ಚಿ ಅನುಮೋದನೆ ನೀಡಿರುವ ವಿಶೇಷ ಆಯುಕ್ತರು (ಯೋಜನೆ), ವಿಶೇಷ ಆಯುಕ್ತರು (ಹಣಕಾಸು) ಹಾಗೂ ಎಲ್ಲ 08 ವಲಯಗಳ ವಲಯ ಆಯುಕ್ತರುಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು. 100 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಅಮೂಲ್ಯ ಪಾಲಿಕೆ ಸ್ವತ್ತನ್ನು 05 ವರ್ಷಗಳ ಗುತ್ತಿಗೆಗೆ M. S. ವೆಂಕಟೇಶ್ ಎಂಬ ವಂಚಕ ಗುತ್ತಿಗೆದಾರನ ಹೆಸರಿಗೆ ಬರೆದುಕೊಟ್ಟಿರುವುದನ್ನು ಕೂಡಲೇ ರದ್ದುಪಡಿಸಿ, ಅಮೂಲ್ಯ ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆದುಕೊಳ್ಳಬೇಕೆಂದು ರಮೇಶ್ ಆಗ್ರಹಿಸಿದ್ದಾರೆ.

Hot Batch Mix Plant ಹೆಸರಿನಲ್ಲಿ ನಡೆದಿರುವ ಈ ಹಗರಣವನ್ನು ACB ತನಿಖೆಗೆ ವಹಿಸಬೇಕು.ಈ ದೂರನ್ನು ಮಾನ್ಯ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ದಾಖಲೆಗಳ ಸಹಿತ ದೂರು ನೀಡಲಾಗಿದೆ.10 ಮಂದಿ IAS ಅಧಿಕಾರಿಗಳು, ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಮುಖ್ಯ ಅಭಿಯಂತರ B. S. ಪ್ರಹ್ಲಾದ್ ಮತ್ತು TEC ವಿಭಾಗದ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್ ಸೇರಿದಂತೆ 29 ಎಂಜಿನಿಯರ್ ಗಳ ವಿರುದ್ಧ ACB, BMTF ಮತ್ತು ಲೋಕಾಯುಕ್ತದಲ್ಲಿ ದೂರುಗಳು ದಾಖಲಿಸಿರುವುದಷ್ಟೇ ಅಲ್ಲ, ಇವರೆಲ್ಲರ ವಿರುದ್ಧ ನಗರದ ACMM ನ್ಯಾಯಾಲಯದಲ್ಲಿ ಕ್ರಮಿನಲ್ ಪ್ರಕರಣವನ್ನು ರಮೇಶ್ ದಾಖಲಿಸಿದ್ದಾರೆ.

Spread the love
Leave A Reply

Your email address will not be published.

Flash News