ರಾತ್ರೋರಾತ್ರಿ “ಹೀರೋ”ಗಳಾದ ಸಾರಿಗೆ “ನಾಯಕ”ರೇ, ಜೈಲ್ ಪಾಲಾದ ನೌಕರರ ಪರಿವೆ ನಿಮಗಿಲ್ಲವೇ..?

0

ಬೆಂಗಳೂರು:ಎಲ್ಲಿದ್ದೀರಪ್ಪಾ ಸಾರಿಗೆ ನಾಯಕರೇ..

ಈ ರೀತಿ ಪ್ರಶ್ನಿಸಲೇಬೇಕಿದೆ.ಸರ್ಕಾರಿ ನೌಕರರ ಮಾನ್ಯತೆಗೆ ನಾಯಕರೆನಿಸಿಕೊಂಡವರು ಬೀದಿಗಿಳಿದು ಹೋರಾಡೊಕ್ಕೆ ಕರೆ ಕೊಡ್ತಿದ್ದಂಗೆ ಹಿಂದೆ ಮುಂದೆ ನೋಡದೆ ನೂರಾರು ಕಿಲೋಮೀಟರ್ ದೂರದಿಂದ ಬೆಂಗಳೂರಿಗೆ ದೌಡಾಯಿಸಿ ಜೈಲು ಪಾಲಾಗಿರುವ ನೌಕರರು ಇವತ್ತು ಅಕ್ಷರಶಃ ಅಬ್ಬೇಪಾರಿಗಳಾಗಿದ್ದಾರೆ.ಅವರು ಸತ್ತಿದ್ದಾರೋ ಬದುಕಿದ್ದಾರೋ ಎಂದು ವಿಚಾರಿಸುವ ಗೋಜಿಗೆ ಆಡಳಿತ ಮಂಡಳಿಗಳೂ ಹೋಗಿಲ್ಲ.ಇನ್ನು,ಅವರ ಬಗ್ಗೆ ಕಾಳಜಿ ವಹಿಸ್ಬೇಕಿದ್ದ ನೌಕರ ಮುಖಂಡರೋ ಅದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ನಿರ್ಲಿಪ್ತರಾಗುಳಿದಿದ್ದಾರೆ.

ಸರ್ಕಾರಿ ನೌಕರ ಮಾನ್ಯತೆಯ ಪಟ್ಟು ಹಿಡಿದು ಸಾರಿಗೆ ಬಂದ್ ನಡೆಸಿದ ನಂತರದ ಪರಿಣಾಮಗಳು ನಿಜಕ್ಕೂ ಭೀಕರವಾಗಿವೆ.ನೌಕರರ ಬೇಡಿಕೆ ಈಡೇರಿಸುವ ಮಾತನ್ನಾಡಿರುವ ಸರ್ಕಾರ ಆಡಳಿತ ಮಂಡಳಿಗಳಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡವ್ರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಏನೆಲ್ಲಾ ಶಿಸ್ತುಕ್ರಮ ಕೈಗೊಳ್ಳೊಕ್ಕಾಗುತ್ತೋ,ಮುಲಾಜಿಲ್ಲದೆ ಜಾರಿಗೊಳಿಸುವಂತೆ ಆದೇಶಿಸಿದೆ ಎನ್ನುವ ಮಾತು ಕೇಳಿಬಂದಿವೆ.ಹಾಗಾಗಿನೇ ಮುಷ್ಕರದಲ್ಲಿ ನೌಕರರದ್ದೇ ಒಂದು ಕೈ ಮೇಲಾದ ನಂತರದಲ್ಲಿ ನೌಕರರ ಕಾಳಜಿ ಮಾಡೋದನ್ನೇ ಆಡಳಿತ ಮಂಡಳಿ ಮರೆತಂತಿದೆ.ತಮ್ಮ ನೌಕರರು ಜೈಲಲ್ಲಿ ಕೊಳೆಯುತ್ತಿದ್ದರೂ ಹೀರೋಯಿಸಂ ತೋರಿಸಿದ ಮುಖಂಡರಿದ್ದಾರಲ್ವಾ..ಅವರನ್ನೇ ನಂಬ್ಕೊಂಡು ಹೊರಗೆ ಬನ್ನಿ ಎಂಬ ಉಡಾಫೆಯ ಧೋರಣೆ ತಳೆದಂತೆ ವರ್ತಿಸ್ತಿದೆ.ಹಾಗಾಗಿನೇ ನೌಕರರು ಜೈಲು ಪಾಲಾದ್ರೂ ಅವರನ್ನು ಹೊರಗೆ ಕರೆತರುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ.

ಸದಾ ನೌಕರ ವಿರೋಧಿಯಾಗೇ ವರ್ತಿಸ್ತಾ ಬಂದಿರೋ ಆಡಳಿತ ಮಂಡಳಿಗಳಿಂದ ಇನ್ನೇನ್ ನಿರೀಕ್ಷಿಸಲಾಗುತ್ತೆ ಎಂದುಕೊಂಡು ಬೇಕಾದ್ರೆ ಸುಮ್ಮನಾಗಿಬಿಡೋಣ,ಆದ್ರೆ.ನೌಕರರ ಪರ ಇರುತ್ತೇವೆ ಎಂದು ಫೋಸ್ ಕೊಟ್ಟಂತ ಮುಖಂಡರು ಏನ್ ಮಾಡ್ತಿದ್ದಾರೆ ಎಂದು ನೊಂದ ನೌಕರರು ಪ್ರಶ್ನಿಸ್ತಿದ್ದಾರೆ.ರಾತ್ರೋರಾತ್ರಿ ಬಂದ ಹೀರೋ ಪಟ್ಟವನ್ನು  ಬ್ಯಾಲೆನ್ಸ್ ಮಾಡಲಿಕ್ಕಾಗದಂತ ವರ್ತಿಸ್ತಿರುವ ನೌಕರ ಮುಖಂಡರಿಗೆ ಸೊಸೈಟಿಗೆ ನುಗ್ಗಿ ಗಲಾಟೆ ಮಾಡಲು ಟೈಮ್ ಇದೆ..ಡಿಪೋಗಳ ಮುಂದೆ ಫೋಟೋ ಬ್ಯಾನರ್ ಗಳಿಗೆ ಹಾಲಿನ ಅಭಿಷೇಕ ಮಾಡಿಸಿಕೊಳ್ಳುವಷ್ಟು ಪುರುಸೊತ್ತಿರುತ್ತೆ.ಜೈಲಿನಲ್ಲಿ ಕೊಳೆಯುತ್ತಿರುವ ತಮ್ಮದೇ ನೌಕರರು ಬಿಡಿಸಿಕೊಂಡು ಬರೋದಕ್ಕೆ ಟೈಮ್ ಇಲ್ವೇ..ಎಂದು ಜೈಲ್ ನಲ್ಲಿ ಕೊಳೆಯುತ್ತಿರುವ ನೌಕರರ ಕುಟುಂಬ ಸದಸ್ಯರು ಆಕ್ರೋಶದಿಂದ ಪ್ರಶ್ನಿಸ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ 60ಕ್ಕೂ ಹೆಚ್ಚು ನೌಕರರು ಜೈಲು ಪಾಲಾಗಿದ್ದಾರೆ.ಕೆಲವರು ಪ್ರತ್ಯಕ್ಷವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರಾಗಿದ್ರೆ ಇನ್ನುಳಿದವರು ಪ್ರತಿಭಟನೆಯನ್ನು ದೂರದಲ್ಲಿ ನಿಂತು ನೋಡ್ತಿದ್ದವರು.ಅವರನ್ನೆಲ್ಲಾ ಜೀಪ್ ಗಳಲ್ಲಿ ತುಂಬಿಸಿಕೊಂಡು,ಸ್ಟೇಷನ್ ಗೆ ಕರೆದೊಯ್ದು FIR  ದಾಖಲಿಸಿ ನಂತರ,ಆಸ್ಪತ್ರೆಗೆ ಕರೆದೋಯ್ದು ಮೆಡಿಕಲ್ ಟೆಸ್ಟ್ ಮಾಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ತಳ್ಳಿದ್ದಾರೆ.ಸ್ವಂತದವರಿಂದ ದೂರವಿದ್ದು ಜೈಲ್ ಗಳಲ್ಲಿ ದಿನ ಕಳೆಯುವಂತಾಗಿದೆ.ಮುಷ್ಕರದ ಯಶಸ್ಸಿನಿಂದ ಉಬ್ಬಿ ಹೋಗಿರುವ  ಮುಖಂಡರು ಜೈಲ್ ಪಾಲಾಗಿರುವ ನೌಕರರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವ ಆರೋಪ ಎದುರಿಸುತ್ತಿದ್ದಾರೆ.

ಮಾಡದ ತಪ್ಪಿಗೆ ಜೈಲು ಪಾಲಾಗಿರುವ ನೌಕರ ಸಿಬ್ಬಂದಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಜತೆ ಸಭೆ ನಡೆಸಬೇಕಿರುವ ನೌಕರರು ಸರ್ಕಾರದ ಜತೆ ಮಾತುಕತೆ ಪ್ರಗತಿಯಲ್ಲಿದೆ.ಸರ್ಕಾರ ಭರವಸೆ ಕೂಡ ಕೊಟ್ಟಿದೆ.ಶೀಘ್ರವೇ ಬಿಡುಗಡೆಯಾಗಲಿದ್ದಾರೆ ಎಂಬ ಉಡಾಫೆಯ ಹೇಳಿಕೆ ಕೊಡ್ತಾ ಓಡಾಡುತ್ತಿದ್ದಾರೆ.ಬಿಡುಗಡೆಯಾಗುತ್ತಾರೆ..ನಿಜ ಸಾರ್..ಅದು ಯಾವಾಗ ಎನ್ನೋದು ಸ್ಪಷ್ಟವಾಗಬೇಕಲ್ಲ..ಅದನ್ನು ಮುಖಂಡರು ಸ್ಪಷ್ಟಪಡಿಸಲಿ ಎನ್ನುವುದು ಅನೇಕ ನೌಕರರ ವಾದ.

ಜೈಲ್ ನಿಂದ ಬೇಲ್ ಮೇಲೆ ಬಿಡುಗಡೆಯಾಗಿರುವ ನೌಕರರ ಪ್ರಕಾರ (ಜೈಲ್ ನಿಂದ ಬೇಲ್ ಮೇಲೆ ಬಿಡುಗಡೆಯಾದ ನೌಕರರು ನೀಡಿರುವ ಸಾಕ್ಷ್ಯ ಕನ್ನಡ ಫ್ಲಾಶ್ ನ್ಯೂಸ್ ಬಳಿಯಿದೆ) ನೌಕರರ 1 ಲಕ್ಷ ಹಣವನ್ನು ಕಟ್ಟಿ ಜಾಮೀನು ಪಡೆಯಲಾಗಿದೆ.ಜೈಲ್ ನಲ್ಲಿರುವ ಇತರೆ ನೌಕರ ಸಿಬ್ಬಂದಿ ಕುಟುಂಬದವರಲ್ಲಿ ಹಣ ಇಲ್ಲದಿರುವುದರಿಂದ ಅವರು ಪಡುತ್ತಿರುವ ಬಾಧೆ ಹೇಳತೀರದಷ್ಟಿದೆ.ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳೋದನ್ನು ಬಿಟ್ಟು ಹೀರೋಗಳಂತೆ ಫೋಸ್ ಕೊಟ್ಕಂಡು ಓಡಾಡೋದು ಎಷ್ಟು ಸರಿ..ಮೊದಲು ಜೈಲ್ ಪಾಲಾಗಿರುವ ನೌಕರರನ್ನು ಹೊರಗೆ ಕರೆ ತನ್ನಲಿ ಎಂದು ಸವಾಲೆಸೆದಿದ್ದಾರೆ.

ಜೈಲ್ ನಲ್ಲಿ ಕೊಳೆಯುತ್ತಿರುವುದು ಒಂದ್ ರೀತಿಯ ಸಮಸ್ಯೆಯಾದ್ರೆ ಜೈಲ್ ನಿಂದ ಹೊರ ಬಂದವರದು ಇನ್ನೊಂದ್ ರೀತಿಯ ಸಮಸ್ಯೆ.ಹೊರಗೆ ಬಂದ ತಮಗೆ ಡ್ಯೂಟಿ ಕೊಡುತ್ತಾರೋ..ಅಥವಾ ಸಸ್ಪೆಂಡ್ ನಲ್ಲಿಡುತ್ತಾರೋ..ಮೊದ್ಲೇ ದ್ವೇಷದ ಜ್ವಾಲೆಯಲ್ಲಿ ಕುದಿಯುತ್ತಿರುವ ಆಡಳಿತ ಮಂಡಳಿ ಪ್ರತೀಕಾರವಾಗಿ ಸಸ್ಪೆಂಡ್ ಅಸ್ತ್ರ ಪ್ರಯೋಗಿಸಿದ್ರೆ ಹೇಗೆ ಎನ್ನುವುದು ಜೈಲ್ ನಲ್ಲಿರುವ ಅನೇಕ ನೌಕರರ ಆತಂಕ..

ಮುಷ್ಕರವನ್ನು ಯಶಸ್ವಿಗೊಳಿಸಿ ಹೀರೋಗಳಾದೆವು ಎಂದು ಫೋಸ್ ಕೊಟ್ಕಂಡು ಅಡ್ಡಾಡುವ ನಾಯಕರು ಮೊದ್ಲು ಆ ಹೀರೋಗಿರಿ ಬಿಟ್ಟು ಮುಷ್ಕರ ಯಶಸ್ವಿಯಾಗೊಕ್ಕೆ ಕಾರಣವಾಗಿ ಇದೀಗ ಜೈಲ್ ನಲ್ಲಿ ಸಿಕ್ಕಾಕೊಂಡಿರುವ ನೌಕರರ ಬೆನ್ನಿಗೆ ನಿಲ್ಲುವ ಕೆಲಸ ಮಾಡಲಿ..ಇಲ್ಲವಾದಲ್ಲಿ ಎಷ್ಟೋ ಹೀರೋಗಳು ವಿಲನ್ ಗಳಾಗಿ ನೇಪಥ್ಯಕ್ಕೆ ಸರಿದ ಇತಿಹಾಸ ಇವರ ವಿಷಯದಲ್ಲೂ ಪುನರಾವರ್ತನೆಯಾದ್ರೂ ಆಶ್ಚರ್ಯವಿಲ್ಲ..ಬಿ..ಕೇರ್ ಫುಲ್..  

Spread the love
Leave A Reply

Your email address will not be published.

Flash News