“ಪ್ರೆಸ್ಟೀಜ್” ನಿಂದ ಸರ್ಕಾರದ ಬೊಕ್ಕಸಕ್ಕೆ ಮಹಾವಂಚನೆ: ನೈಜ ಬೆಲೆ ಮರೆಮಾಚಿ 70.69 ಲಕ್ಷ ವಂಚನೆ-ಸಿಎಜಿ ವರದಿಯಲ್ಲಿ ಅಕ್ರಮ ಉಲ್ಲೇಖ..   

0

ಬೆಂಗಳೂರು: ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯಾದ ಪ್ರಸ್ಟೀಜ್ ವಿರುದ್ಧ ಗಂಭೀರ ಆಪಾದನೆ ಕೇಳಿಬಂದಿದೆ. ಅಪಾರ್ಟ್ಮೆಂಟ್ ನಲ್ಲಿನ ಫ್ಲಾಟ್ ಗಳನ್ನು ವರ್ಗಾಯಿಸುವ ವೇಳೆ ನೈಜ ಹಾಗೂ ನಿರ್ದಿಷ್ಟ ದರವನ್ನು ಪಾವತಿಸದೆ ವಂಚಿಸಿರುವ ಆರೋಪ ಸಂಸ್ಥೆ ಮೇಲಿದೆ.

ಅಂದ್ಹಾಗೆ ಅದು ವಂಚಿಸಿರುವ ಮುದ್ರಾಂಕ ಸುಂಕ ಹಾಗು ನೊಂದಣಿ ಶುಲ್ಕ ಎಷ್ಟು ಗೊತ್ತಾ ಬರೋ ಬ್ಬರಿ 70.69 ಲಕ್ಷ..ಅಂದ್ಹಾಗೆ ಇಂತದ್ದೊಂದು ಆರೋಪ ಮಾಡ್ತಿರುವುದು ನಾವಲ್ಲ..ಸಿಎಜಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಇಂತದ್ದೊಂದು ವಿಷಯವನ್ನು ಉಲ್ಲೇಖಿಸಿದೆ.

ಪ್ರಸ್ಟೀಜ್ ಕಂಪೆನಿ ತನ್ನ ಟೆಕ್ ಪಾರ್ಕ್-3 ರಲ್ಲಿನ ವಾಣಿಜ್ಯ ಅಪಾರ್ಟ್ಮೆಂಟಗಳನ್ನು ವರ್ಗಾಯಿಸುವ ಹಾಗೂ ಮಾರಾಟ ಮಾಡುವ ವೇಳೆ ಶಿವಾಜಿನಗರದ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳು ನಿರ್ಧಿಷ್ಟ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು  ಸಂಸ್ಥೆಯವರಿಂದ ಪಡೆದುಕೊಳ್ಳದೆ ಕಡಿಮೆ ದರವನ್ನು ಪಾವತಿಸಿಕೊಂಡಿದ್ದರು.ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಿದ್ದ 70.69 ಲಕ್ಷ ಹಣ ಸೋರಿಕೆಯಾಗಿತ್ತೆನ್ನುವುದನ್ನು ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್ 2019 ಅಂತ್ಯಕ್ಕೆ ಸಿಎಜಿ ಮುದ್ರಾಂಕ ಸುಂಕ ಮತ್ತು ನೊಂದಣಿ ಶುಲ್ಕಕ್ಕೆ ಸಂಬಂಧಿಸಿದಂತೆ ಸಿಎಜಿ, ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಪ್ರೆಸ್ಟೀಜ್ ಸಂಸ್ಥೆಯ ಮಾಲೀಕ ಇರ್ಫಾನ್ ರಜಾಕ್
ಪ್ರೆಸ್ಟೀಜ್ ಸಂಸ್ಥೆಯ ಮಾಲೀಕ ಇರ್ಫಾನ್ ರಜಾಕ್
ಸಿಎಜಿ ವರದಿಯಲ್ಲಿ ಉಲ್ಲೇಖವಾಗಿರುವ "ಪ್ರಸ್ಟೀಜ್ "ಆದಾಯ ಸೋರಿಕೆ
ಸಿಎಜಿ ವರದಿಯಲ್ಲಿ ಉಲ್ಲೇಖವಾಗಿರುವ “ಪ್ರಸ್ಟೀಜ್ “ಆದಾಯ ಸೋರಿಕೆ

ಅದಷ್ಟೇ ಅಲ್ಲ,ಪ್ರೆಸ್ಟೀಜ್ ಯಾವುದೇ ಹೊಸ ಅಪಾರ್ಟ್ಮೆಂಟ್,ವಿಲ್ಲಾ,ಬಡಾವಣೆಗಳಿಗೆ ಸಂಬಂಧಿಸಿದಂತೆ ಆಸ್ತಿಗಳ ಮೌಲ್ಯವನ್ನು ನಿರ್ಧಿಷ್ಟ ಪಡಿಸುವ ವೇಳೆ ಕೇಂದ್ರ ಮೌಲ್ಯಮಾಪನ ಸಮಿತಿ(ಸಿವಿಸಿ)ಗೆ ವರದಿಯನ್ನು ರವಾನಿಸಬೇಕು..ಸಮಿತಿ ಫಿಕ್ಸ್ ಮಾಡುವ ದರದಲ್ಲೇ ಎಲ್ಲಾ ಮಾರಾಟ ಪ್ರಕ್ರಿಯೆ ನಡೆಸಬೇಕಿರುತ್ತೆ.ಆದ್ರೆ ಪ್ರಸ್ಟೀಜ್ ಕಂಪೆನಿ ಈ ಯಾವುದೇ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎನ್ನುವುದನ್ನು ಕೂಡ ಸಿಎಜಿ ಪತ್ತೆ ಮಾಡಿದೆ.

ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಪ್ರಸ್ಟೀಜ್ ತನ್ನ ಎರಡು ಪ್ರತ್ಯೇಕ ಪ್ರಾಜೆಕ್ಟ್ ಗಳಿಗೆ ಶಿವಾಜಿನಗರ ಉಪನೊಂದಣಾಧಿ ಕಾರಿಗಳು ಕ್ರಮವಾಗಿ  ಚದರ ಅಡಿ ಒಂದಕ್ಕೆ 6,200 ರೂ ಹಾಗೂ 6,000 ರೂ ನಿಗಧಿ ಪಡಿಸಿತ್ತು.ಅಲ್ಲದೇ ವರ್ತೂರು ಹೋಬಳಿಯಲ್ಲಿ ನಿರ್ಮಾಣ ಮಾಡಲಾದ 14 ಟೆಕ್ ಪಾರ್ಕ್ ಗಳ ಚದರ ಅಡಿ ದರವನ್ನು 5,900 ರೂ ಎಂದು ನಿಗಧಿಪಡಿಸಿತ್ತು.

ಆದ್ರೆ ಶಿವಾಜಿನಗರದ ಉಪನೊಂದಣಾಧಿಕಾರಿಗಳು ಪ್ರತಿ ಚದರ ಅಡಿಗೆ ಫಿಕ್ಸ್ ಮಾಡಿದ್ದು ಕೇವಲ 3,000 ರೂ ಮಾತ್ರ. ಪ್ರಸ್ಟೀಜ್ ಕಂಪೆನಿಯ ಮಾಲೀಕರೊಂದಿಗೆ ಸೇರಿಕೊಂಡು ಉಪನೊಂದಣಾಧಿಕಾರಿಗಳು ಕೇಂದ್ರ ಮೌಲ್ಯಮಾಪನ ಸಮಿತಿಗೆ ಯಾವ ದಾಖಲೆಗಳನ್ನೂ ಕಳುಹಿಸದೆ,ಕಂಪೆನಿಗೆ ಅನುಕೂಲ ಮಾಡಿಕೊಡುವ ಏಕೈಕ ಉದ್ದೇಶದಲ್ಲಿ ಯಾವುದೇ ಪ್ರಕ್ರಿಯೆ ನಡೆಸಿರಲೇ ಇಲ್ಲ  ಎನ್ನುವ ಅಂಶಗಳನ್ನು  ದಾಖಲಿಸಿದೆ.

ಒಟ್ಟಿನಲ್ಲಿ ಪ್ರಸ್ಟೀಜ್ ಎನ್ನುವಂಥ ನಿರ್ಮಾಣ ಕ್ಷೇತ್ರದ ದಿಗ್ಗಜ ಸಂಸ್ಥೆ ಮುದ್ರಾಂಕ ಸುಂಕ ಹಾಗೂ ನೊಂದಣಿ ಶುಲ್ಕದ ವಿಚಾರದಲ್ಲಿ ವಂಚನೆ ಎಸಗಿರುವುದು,ಅದಕ್ಕೆ ಶಿವಾಜಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳು ಕೈ ಜೋಡಿಸಿರುವುದು ಸಿಎಜಿ ವರದಿಯಲ್ಲೇ ಉಲ್ಲೇಖವಾಗಿದೆ.

ಸರ್ಕಾರ 70.69 ಲಕ್ಷ ಆದಾಯ ಸೋರಿಕೆ ಮಾಡಿರುವ ಪ್ರಸ್ಟೀಜ್ ಹಾಗೂ ಅದಕ್ಕೆ ಸಹಕರಿಸಿದ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ವಿರುದ್ಧ ಯಾವ್ ರೀತಿ ಕ್ರಮ ಕೈಗೊಳ್ತದೆ ಎನ್ನೋದನ್ನು ಕಾದುನೋಡಬೇಕಿದೆ.     

Spread the love
Leave A Reply

Your email address will not be published.

Flash News