ಅಮ್ಮ-ಮಗಳ ಸಾಹಿತ್ಯ ಜೋಡಿಯ ಕವನಸಂಕಲನಗಳು ಲೋಕಾರ್ಪಣೆ-ಮಗಳ “ಇಂಗ್ಲೀಷ್” ಕವನಗಳಿಗೆ “ಕನ್ನಡ” ಭಾವಾನುವಾದ ತಾಯಿ.

0
ಎಕೋಸ್ ಆಫ್ ಸೌಲ್ ಫುಲ್ ಪೋಯಮ್ಸ್ ಕವನದ ಕರ್ತೃ ಅಮನಾ
ಎಕೋಸ್ ಆಫ್ ಸೌಲ್ ಫುಲ್ ಪೋಯಮ್ಸ್ ಕವನದ ಕರ್ತೃ ಅಮನಾ
ಮಗಳ ಕವನಗಳನ್ನು “ಅಂತರಂಗದ ತರಂಗ”ಸಂಕಲವನಾಗಿ ಅನುವಾದಿಸಿದ ತಾಯಿ ಡಾ.ಟಿ.ಎಸ್ ಲತಾ
ಮಗಳ ಕವನಗಳನ್ನು “ಅಂತರಂಗದ ತರಂಗ”ಸಂಕಲವನಾಗಿ ಅನುವಾದಿಸಿದ ತಾಯಿ ಡಾ.ಟಿ.ಎಸ್ ಲತಾ

ಬೆಂಗಳೂರು:“ಅಮ್ಮ” ಸಾರ್ವಜನಿಕ ಸಂವಹನದ ಧೈತ್ಯ ಪ್ರತಿಭೆ –“ಮಗಳು” ಸಾಹಿತ್ಯಲೋಕದಲ್ಲಿ ಭರವಸೆ ಮೂಡಿಸಿರುವ ಚಿಗುರು..ತಾಯಿ-ಮಗಳ ಅದ್ಬುತ ಕಾಂಬಿನೇಷನ್ ಸಧ್ಯ ಟಾಕ್ ಆಫ್ ದಿ ಟೌನ್..ಯೆಸ್ ಕೆಎಸ್ ಆರ್ ಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಡಾ.ಲತಾ ಹಾಗೂ ಅವರ ಮಗಳ ಅಮನಾ ಜೋಡಿಯ ಸಾಹಿತ್ಯ ಕೃಷಿ ಹಾಗೂ ಸಾಧನೆ ನಿಜಕ್ಕೂ ಹೆಮ್ಮೆ ಮೂಡಿಸುತ್ತದೆ..

ನಾವು ಅನೇಕ ರೀತಿಯ ಸಾಧಕರನ್ನು ನೋಡಿದ್ದೇವೆ.. ಅಪ್ಪ-ಮಗ,ಅಮ್ಮ-ಮಗಳು,ಅಥವಾ ಅಪ್ಪ-ಮಗಳು ಇಲ್ವಾ ಅಮ್ಮ-ಮಗ..ಈ ರೀತಿ ಜೋಡಿಸಾಧಕರನ್ನು ಅನೇಕ ಕ್ಷೇತ್ರಗಳಲ್ಲಿ ಕಂಡಿದ್ದೇವೆ..ಆದ್ರೆ ಅಮ್ಮ ಲತಾ ಹಾಗೂ ಮಗಳು ಅಮನಾ ಜೋಡಿಯ ಸಾಧನೆ ತುಂಬಾ ಭಿನ್ನ ಹಾಗೂ ಅಪರೂಪ.ಬಹುತೇಕರಿಗೆ ರುಚಿಸಿದಂಥ ಸಂಕ್ರಮಣ ಘಟ್ಟದಲ್ಲಿರುವ ಸಾಹಿತ್ಯವನ್ನು ಇಷ್ಟಪಟ್ಟು ಆಯ್ದುಕೊಂಡು,ತೋಚಿದ್ದಕ್ಕೆಲ್ಲಾ ಬರಹದ ಮೂರ್ತರೂಪ ಕೊಟ್ಟು ಅದನ್ನೆಲ್ಲಾ ಸಂಗ್ರಹಿಸಿ ಅಂತಿಮವಾಗಿ ಕೃತಿಯ ರೂಪ ಕೊಟ್ಟ ಹೆಗ್ಗಳಿಕೆ ಅಮ್ಮ-ಮಗಳದ್ದು.ಆ ಜತನದ ಪರಿಶ್ರಮವೇ “ಎಕೋಸ್ ಆಫ್ ಸೌಲ್ ಫುಲ್ ಪೋಯಮ್ಸ್…(ECHOES OF SOULFULL POEMS)” ಹಾಗೂ ಅದರ ಕನ್ನಡ ಅವತರಣಿಕೆ “ಅಂತರಂಗದ ತರಂಗ” ತಾಯಿ-ಮಗಳ ಸಾಹಿತ್ಯ ಕೃಷಿಯ ಮತ್ತೊಂದು ವಿಶೇಷ ಏನಂದ್ರೆ ಮಗಳ ಇಂಗ್ಲೀಷ್ ಕವನಗಳಿಗೆ ತಾಯಿ ಕನ್ನಡದಲ್ಲಿ “ಅಂತರಂಗದ ತರಂಗ” ಶೀರ್ಷಿಕೆಯಲ್ಲಿ ಜೀವ ನೀಡಿದ್ದಾರೆ. ಒಂದೇ ವೇದಿಕೆಯಲ್ಲಿ ಎರಡೂ ಕವನಸಂಕಲನಗಳು ಲೋಕಾರ್ಪಣೆಗೊಂಡಿದ್ದು ಮತ್ತೊಂದು ವಿಶೇಷ.

ಎಕೋಸ್ ಆಫ್ ಸೌಲ್ ಫುಲ್ ಪೋಯಮ್ಸ್ ಕವನ ಸಂಕಲನ
ಎಕೋಸ್ ಆಫ್ ಸೌಲ್ ಫುಲ್ ಪೋಯಮ್ಸ್ ಕವನ ಸಂಕಲನ

ಕೊರೊನಾ ಲಾಕ್ ಡೌನ್ ಮಕ್ಕಳ  ಸೃಜನಶೀಲತೆ-ಕ್ರಿಯಾಶೀಲತೆ ಹಾಳು ಮಾಡಿದ್ದೇ ಹೆಚ್ಚು.ಆದ್ರೆ ಒಂದ್ ಕ್ಷಣನೂ ವೇಸ್ಟ್ ಮಾಡದ ಮಕ್ಕಳು ಸಾಧನೆಗೆ ಇದೇ ಸಮಯವನ್ನು ಮೆಟ್ಟಿಲುಗಳನ್ನಾಗಿಸಿಕೊಂಡಿದ್ದೂ ಉಂಟು.ಅಂಥ ಮಕ್ಕಳ ಪೈಕಿ ಅಮನಾ ಕೂಡ ಒಬ್ಬಳು. ಮನಸು ಹಾಗೂ ಯೋಚನಾಲಹರಿಯನ್ನು ಬೇರೆ ಚಟುವಟಿಕೆಗೆ ಹರಿಯಗೊಡದೆ ಅದನ್ನು ಸೃಜನಶೀಲ ಆಲೋಚನೆಗಳತ್ತ ಕೇಂದ್ರೀಕರಿಸಿದ್ದರ ಫಲವೇ ಕವನಗಳು.ಸೂಕ್ಷ್ಮ ಸಂವೇದನೆಯ ಮನಸಿಗೆ ಹೊಳೆದ ಹತ್ತಾರು ಯೋಚನೆಗಳನ್ನು ಕವನಗಳನ್ನಾಗಿಸಿದ ಅಮನಾ ಅವನ್ನೆಲ್ಲಾ ಕ್ರೋಢೀಕರಿಸಿ ತಾಯಿ ಲತಾ ಅವರ ಎದುರಿಗಿಟ್ಟಾಗ ಮಗಳ ಅದ್ಭುತ ಕಲ್ಪನಾಶಕ್ತಿ ದಿಗ್ಮೂಢಗೊಳಿಸಿತು.ಹರಿವ ತೊರೆಗೆ ಅಡ್ಡವಾಗದೆ ಆಕೆಯನ್ನು ಹುರಿದುಂಬಿಸಿದಾಗ ಮತ್ತಷ್ಟು ಕವನಗಳು ಹೊರಹೊಮ್ಮಲು ಕಾರಣವಾಯ್ತು..ಇದೇ ಸಮಯದಲ್ಲಿ ಮಗಳ ಇಂಗ್ಲೀಷ್ ಕವನಗಳು ಹಾಗೆಯೇ ಉಳಿದುಬಿಡಬಾರದು..ಅದು ಕನ್ನಡ ಮನಸುಗಳಿಗೂ ಹತ್ತಿರವಾಗಬೇಕು ಎನ್ನುವ ಆಲೋಚನೆಯಲ್ಲಿ ಮಗಳ ಅಷ್ಟೂ ಕವನಗಳನ್ನು ಕನ್ನಡೀಕರಿಸಿದ್ರು.ಮಗಳು ಇಂಗ್ಲೀಷ್ ನಲ್ಲಿ ಬರೆಯುತ್ತಾ ಹೋದ್ರೆ ಅದನ್ನೆಲ್ಲಾ ಕನ್ನಡಕ್ಕೆ ಅನುವಾದಗೊಳಿಸಿದ್ರು ತಾಯಿ ಲತಾ..

ಮಗಳು ಬರೆದ ಇಂಗ್ಲೀಷ್ ಕವನಗಳು ಹಾಗೂ ಅದನ್ನು ಕನ್ನಡೀಕರಿಸಿದ ತನ್ನ ಕವನಗಳನ್ನು ಸಂಕಲನವನ್ನಾಗಿ ಹೊರತಂದರೆ ಹೇಗೆ ಎನ್ನುವ ಆಲೋಚನೆ ಹೊಳೆದು ಅದನ್ನು ಕೆಲವರ ಬಳಿ ಚರ್ಚಿಸಿದ್ರು.ಉತ್ತಮ ಆಲೋಚನೆ ಮಾಡಿ ಎಂದು ಹಲವರು ಕೊಟ್ಟ ಸಲಹೆ ಮೇರೆಗೆ ಸಿದ್ಧವಾದದ್ದೇ ಮಗಳ “ಎಕೋಸ್ ಆಫ್ ಸೌಲ್ ಫುಲ್ ಪೋಯಮ್ಸ್…(ECHOES OF SOULFULL POEMS)” ಹಾಗೂ ಲತಾ ಅವರ ಕನ್ನಡ ಅವತರಣಿಕೆ “ಅಂತರಂಗದ ತರಂಗ”ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಮನಾಳ ಕವನಗಳು ಜಗತ್ತಿನ ಮನುಕುಲ ವನ್ನು ಕಾಡುತ್ತಿರುವ ಸಾಕಷ್ಟು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿವೆ.

ಒಂದು ಪುಟ್ಟ ಭಾವುಕ ಮನಸು ಜಗತ್ತಿನ ಹತ್ತಲವು ವಿದ್ಯಾಮಾನಗಳನ್ನು ಎಂಥಾ ಚಿಂತನಾಲಹರಿಯಲ್ಲಿ ನೋಡುತ್ತೆ,ಅವಲೋಕಿಸುತ್ತೆ,ಕೊನೆಗೆ ತನ್ನ ಚಿಕಿತ್ಸಕ ಮನಸ್ಥಿತಿ ಎಂಥಾ ಪರಿಹಾರ ಹೇಳಲು ಬಯಸುತ್ತೆ ಎನ್ನುವುದು ಪ್ರತಿಯೊಂದು ಕವನದಲ್ಲೂ ಸ್ಪಷ್ಟವಾಗಿ ಕಾಣುತ್ತೆ.ಅಂತಿಮವಾಗಿ, ಎಲ್ಲರೂ ಮಗುವಿನಂತಾದ್ರೆ ಪ್ರಪಂಚ ಎಷ್ಟು ಸುಂದರವಾಗಿರುತ್ತೆ ಎನ್ನುವ ಇಂಗಿತವನ್ನು ಸಾರುತ್ತದೆ.

“ಎಕೋಸ್ ಆಫ್ ಸೌಲ್ ಫುಲ್ ಪೋಯಮ್ಸ್” ಹಾಗೂ “ಅಂತರಂಗದ ತರಂಗ” ಕವನಸಂಕಲಗಳನ್ನು ಲೋಕಾರ್ಪಣೆ ಮಾಡಿದ ಸಚಿವ ಸುರೇಶ್ ಕುಮಾರ್,ಪತ್ರಕರ್ತ ಜೋಗಿ ಹಾಗೂ ಸಾಹಿತಿ ಪ್ರೊ.ದೊಡ್ಡರಂಗೇಗೌಡ
“ಎಕೋಸ್ ಆಫ್ ಸೌಲ್ ಫುಲ್ ಪೋಯಮ್ಸ್” ಹಾಗೂ “ಅಂತರಂಗದ ತರಂಗ” ಕವನಸಂಕಲಗಳನ್ನು ಲೋಕಾರ್ಪಣೆ ಮಾಡಿದ ಸಚಿವ ಸುರೇಶ್ ಕುಮಾರ್,ಪತ್ರಕರ್ತ ಜೋಗಿ ಹಾಗೂ ಸಾಹಿತಿ ಪ್ರೊ.ದೊಡ್ಡರಂಗೇಗೌಡ

ಮಗಳ ಭಾವಜಗತ್ತನ್ನು ಕನ್ನಡದಲ್ಲಿ ಮತ್ತಷ್ಟು ಪರಿಣಾಮಕಾರಿ ಹಾಗೂ ಅರ್ಥಗರ್ಭಿತವಾಗಿ ಬಿಂಬಿಸುವಲ್ಲಿ ತಾಯಿ ಲತಾ ಯಶಸ್ವಿಯಾಗಿದ್ದಾರೆನಿಸುತ್ತದೆ.ಮಗಳ ಮನಸನ್ನು ತಾಯಿಗಿಂತ ಇನ್ನ್ಯಾರು ಅರ್ಥೈಸಿಕೊಳ್ಳಲು ಸಾಧ್ಯವೇಳಿ ಎನ್ನುವುದಕ್ಕೆ ಈ ಕವನಸಂಕಲನಗಳು ಸಾಕ್ಷಿಯಾಗುತ್ತವೆ.ಮಗಳ ತೊದಲುಗಳನ್ನೆಲ್ಲಾ ತಿದ್ದಿ ತೀಡಿ ಅದನ್ನೆಲ್ಲಾ ಕನ್ನಡದಲ್ಲಿ ಒಪ್ಪ ಓರಣದಂತೆ ಜತನದಿಂದ ಕ್ರೋಢೀಕರಿಸಿ ಸಂಕಲನವನ್ನಾಗಿ ಹೊರ ತರುವ ಮೂಲಕ ಮಗಳ ಉದ್ದೇಶವನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಗೊಳಿಸಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್,ಸಾಹಿತಿ ದೊಡ್ಡರಂಗೇಗೌಡ,ಪತ್ರಕರ್ತ ಜೋಗಿ ಮಗಳು ಹಾಗೂ ತಾಯಿಯ ಜುಗಲ್ ಬಂದಿಯ ಕವನಸಂಕಲನಗಳನ್ನು ಬಿಡುಗೊಳಿಸಿ ಪ್ರೋತ್ಸಾಹದ ಮಾತುಗಳನ್ನಾಡಿ ಬೆನ್ನುತಟ್ಟಿದ್ದಾರೆ.ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಜಾಗತೀಕರಣದ ಪ್ರಭಾವ ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿರುವ,ಮಕ್ಕಳ ಮುಗ್ಧ ಹಾಗೂ ಕೋಮಲ ಮನಸನ್ನು ಕದಡುತ್ತಿರುವ ಅದರಿಂದ ಆಧುನಿಕತೆಯ ಸೋಂಕಿಗೆ ಸಿಲುಕಿ ರುಚಿ-ಅಭಿರುಚಿಗಳು ಹಾಳಾಗುತ್ತಿರುವ ಸಂದರ್ಭದಲ್ಲಿಯೂ ಅಮನಾಳಂಥ ಮಕ್ಕಳು ಸಾಹಿತ್ಯಾಸಕ್ತಿ ಮೂಡಿಸಿಕೊಂಡು ಕಾವ್ಯಕೃಷಿಯಲ್ಲಿ ತೊಡಗುತ್ತಾರೆಂದ್ರೆ ಇದಕ್ಕಿಂತ ಹೆಮ್ಮೆಯ ಸಂಗತಿ ಮತ್ತೊಂದಿದೆಯಾ..

ಬಾಲಸಾಹಿತ್ಯ ಹಾಗು ಸಾಹಿತಿಗಳು ಕಳೆದೋಗುತ್ತಿರುವ ಸನ್ನಿವೇಶ ದಲ್ಲಿ ಅಮನಾಳಂಥ ಕಿಶೋರ ಪ್ರತಿಭೆಗಳು ಮಾದರಿಯಾಗುತ್ತಾರೆ.ಮಗಳ ಸಾಹಿತ್ಯಾಸಕ್ತಿಯನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸುವಂಥ ಲತಾ ಅವರಂಥ ಪೋಷಕರು ಹೆಚ್ಚಾಗಬೇಕಿದೆ..ತಾಯಿ ಮಗಳ ಜೋಡಿ ಸಾಹಿತ್ಯದಲ್ಲಿ ಮತ್ತಷ್ಟು ಅತ್ಯದ್ಬುತ ಕಾವ್ಯಕೃಷಿಯ ಮೂಲಕ ಮೋಡಿ ಮಾಡಲಿ ಎಂದು ಕನ್ನಡ ಫ್ಲಾಶ್ ನ್ಯೂಸ್ ಆಶಿಸುತ್ತದೆ ಹಾಗೂ ಅಭಿನಂದಿಸುತ್ತದೆ.

Spread the love
Leave A Reply

Your email address will not be published.

Flash News