“ಸಾರಿಗೆ ಮುಷ್ಕರದ ಹಿಂದೆ ಹಿತಾಸಕ್ತಿಗಳ ಕುಮ್ಮಕ್ಕಿತ್ತೆನ್ನುವುದು ನಿಜನಾ..? ! ಇದು, ಕೆಲವರನ್ನು ಕಾಡುತ್ತಿರುವ ಶಂಕೆ-ಪ್ರಶ್ನೆ..?!

0

ಬೆಂಗಳೂರು:ಸಾರಿಗೆ ಮುಷ್ಕರ ಮುಗಿದು ಅನೇಕ ದಿನಗಳೇ ಆಯ್ತು.. ನೌಕರರ ಮುಂದೆ ಸರ್ಕಾರ ಮಂಡಿಯೂರಿತೋ..?  ಅಥವಾ ಬೇಡಿಕೆ ಈಡೇರಿಕೆಯ ಭರವಸೆ ಪಡೆದು ನೌಕರರು ಗೆದ್ರೋ..? ಸರ್ಕಾರದ ಮುಂದೆ ನೌಕರರದೇ ಒಂದು  ಕೈ ಮೇಲಾದದ್ದು ಮಾತ್ರ ಸತ್ಯ..

ಆದ್ರೆ ಇದೆಲ್ಲವೂ ಮುಗಿದಾದ ಮೇಲೆ ಒಂದಷ್ಟು ಪ್ರಶ್ನೆಗಳು ಮುಷ್ಕರದ ಪೂರ್ವಾಪರಗಳ ಸುತ್ತ ಗಿರಕಿ ಹೊಡೆಯುತ್ತಲೇ ಇವೆಯಂತೆ…ಮುಷ್ಕರ ನಡೆದ ರೀತಿ…ಪಡೆದ ತಿರುವು…ಅದರ ಆಗುಹೋಗುಗಳನ್ನೆಲ್ಲಾ ಮರು ಅವಲೋಕಿಸುವ ಕೆಲಸ ನಿಗಮದಲ್ಲಿರುವ ನೌಕರ ಸಿಬ್ಬಂದಿಯಿಂದ್ಲೆ ಶುರುವಾಗಿದೆಯಂತೆ..ಸರ್ಕಾರದ ಮಟ್ಟದಲ್ಲಿಯೂ ಈ ಬಗ್ಗೆ ಪತ್ರವೊಂದನ್ನು ಬರೆಯುವ ಸಿದ್ಧತೆಗಳೂ ನಡೆಯುತ್ತಿವೆಯಂತೆ ಎನ್ನುವ ಮಾತು ಕೇಳಿಬಂದಿದೆ..ಅಂದ್ಹಾಗೆ ಅವರೆಲ್ಲರ  ಶಂಕೆ,  ಮುಷ್ಕರ ಸ್ವಯಂಪ್ರೇರಿತವಾಗಿ ನಡೆದದ್ದಾ..? ಅದಕ್ಕೆ ಹಿತಾಸಕ್ತಿಗಳ ಕುಮ್ಮಕ್ಕಿತ್ತಾ..? ಮುಷ್ಕರ ವೇಳೆ ಆಡಳಿತ ವರ್ಗ ನಡೆದುಕೊಂಡ ರೀತಿ ಸರಿನಾ..? ಸಮ್ಮತಿ ಇಲ್ಲದಿದ್ದರೂ ಮುಷ್ಕರ ನಡೆಸೊಕ್ಕೆ ಅವಕಾಶ ಮಾಡಿಕೊಟ್ಟಿದ್ದೆಷ್ಟು ಸರಿ..?  ಮುಷ್ಕರದ ಹೊರತಾಗ್ಯೂ ಸಿಬ್ಬಂದಿಯನ್ನು ಕೆಲಸಕ್ಕೆ ಬರುವಂತೆ ತಿಳಿಸಲಾಗ್ತಿದ್ದ ಹಿಂದಿನ ಸಂಪ್ರದಾಯವನ್ನು ಈ ಬಾರಿ ಕರೆಯಲಿಲ್ಲವೇಕೆ..? ಎನ್ನುವ ಪ್ರಶ್ನೆಗಳ ಸುತ್ತವೇ ಪ್ರದಕ್ಷಿಣೆ ಹಾಕುತ್ತಿವೆ.

ಇಂತದೊಂದಿಷ್ಟು ಅನುಮಾನಗಳಲ್ಲಿ  ಸತ್ಯಾಸತ್ಯತೆ ಎಷ್ಟಿದೆಯೋ ಗೊತ್ತಿಲ್ಲ.. ಆದ್ರೂ ಕೆಲವೊಂದು ಸನ್ನಿವೇಶಗಳು…ಕೆಲವರ ನಡುವಳಿಕೆ.. ಧೋರಣೆ.. ಮುಷ್ಕರದ ಮುನ್ನ ಹಾಗೂ ನಂತರದಲ್ಲಿನ ಶಂಕಾಸ್ಪದ ಸ್ವಭಾವಗಳು… ಹೀಗೂ ಆಗಿರ್ಲಿಕ್ಕೆ ಸಾಧ್ಯವಿರಬಹುದಾ ಎನ್ನುವ ಪ್ರಶ್ನೆ ಮೂಡಿಸಿರುವುದಂತೂ ಸತ್ಯ.

ಮುಷ್ಕರದ ಮಾಹಿತಿ ಇದ್ರೂ ನಿಯಂತ್ರಿಸಲಿಲ್ಲವೇ..? :ಸಾರಿಗೆ ಮುಷ್ಕರದಂಥ ಬೃಹತ್ ಹಾಗೂ ಗಂಭೀರ ಸ್ವರೂಪದ ಪ್ರತಿಭಟನೆ ಈ ಬಾರಿ ಆಡಳಿತ ಮಂಡಳಿ ಯ ಗಮನಕ್ಕೂ ಬಾರದೆ ನಡೆದಿದೆ..ಅದಕ್ಕೆ ಕಾರ್ಮಿಕ ಇಲಾಖೆಯಿಂದಲೂ ಮುಷ್ಕರಕ್ಕೆ ಬೇಕಾದ ಅನುಮತಿ ಪಡೆದಿರಲಿಲ್ಲ ಎನ್ನಲಾಗುತ್ತಿದೆ.ಮುಷ್ಕರದಿಂದ ಸಾರಿಗೆ ವ್ಯವಸ್ಥೆ ಸ್ಥಬ್ದವಾಗುತ್ತೆ.ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ..ಸಾರಿಗೆ ನಿಗಮಕ್ಕೆ ಕೋಟ್ಯಾಂತರ ನಷ್ಟವಾಗುತ್ತದೆ..ಅನುಮತಿ ಪಡೆಯದೆ ಮಾಡಿದ್ರೆ ಕಾನೂನಾತ್ಮಕವಾಗಿ ತಪ್ಪಿಗೆ ಸಿಲುಕುತ್ತೇವೆನ್ನೋ ಮಾಹಿತಿ ಇದ್ದರೂ ನೌಕರ ಮುಖಂಡರು ಅನುಮತಿ ಪಡೆಯದೆ ಹೋದದ್ದು ಏಕೆ ಎನ್ನುವ ಪ್ರಶ್ನೆ ಮೂಡುತ್ತೆ.

ಅನುಮತಿ ಪಡೆಯದಿದ್ದರೂ ಮುಷ್ಕರಕ್ಕೆ ಅವಕಾಶ ಕೊಟ್ರಾ..??:ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಅನುಮತಿಯನ್ನೇನೋ ಪಡೆಯಲಿಲ್ಲ..ಅದಕ್ಕೆ ಅವರು ದಡ್ಡರು..ಹುಂಭರಿರಬಹುದೆಂದೇ ಭಾವಿಸೋಣ,ಆದ್ರೆ ಮುಷ್ಕರದಲ್ಲಿ ಪಾಲ್ಗೊಳ್ಳುವವರ ವಿರುದ್ಧ ಏನೆಲ್ಲಾ ಶಿಸ್ತುಕ್ರಮ ಜಾರಿಯಾಗ್ತದೆಂದು ಎಚ್ಚರಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಬೇಕಿತ್ತಲ್ವಾ..ಮುಷ್ಕರದ ಬಗ್ಗೆ ಕೇಳಿದಾಗಲೆಲ್ಲಾ ಆಡಳಿತ ಮಂಡಳಿ ಇದ್ಯಾವುದರ ಬಗ್ಗೆಯೂ ಸ್ಪಷ್ಟತೆಯನ್ನೇ ನೀಡಲಿಲ್ಲ..ಏನ್ಹೇಳಬೇಕೆಂದು ತೋಚದೆ ಗೊಂದಲಕ್ಕೆ ಸಿಲುಕಿತ್ತಾ ಆಡಳಿತ ಮಂಡಳಿ.ಕಳೆದ ಬಾರಿಯ ಮುಷ್ಕರಗಳ ಸಂದರ್ಭದಲ್ಲೆಲ್ಲಾ ಕಡ್ಡಿ ತುಂಡಾದಂತೆ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿದ್ದ ಆಡಳಿತ ವ್ಯವಸ್ಥೆಗೆ ಈ ಬಾರಿ ಆ ಕ್ಲ್ಯಾರಿಟಿ ಇರಲಿಲ್ಲವೇಕೆ ಎನ್ನುವುದು ಕೂಡ ಅನೇಕರ ಪ್ರಶ್ನೆ,ಅನುಮತಿ ಪಡೆಯದೆ ಮುಷ್ಕರ ನಡೆಸೋದು ಕಾನೂನುಬಾಹೀರ.ಅದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಅವರನ್ನು ಎಚ್ಚರಿಸುವ ಕೆಲಸ ಮಾಡಬೇಕಿತ್ತು..ಅದನ್ನೆಲ್ಲಾ ಏಕೆ ಮಾಡಲಿಲ್ಲ..ಇದು ಮುಷ್ಕರ ನಡೆಯುವುದು ಆಡಳಿತ ವ್ಯವಸ್ಥೆಗೂ ಬೇಕಿತ್ತಾ ಎನ್ನುವ ಶಂಕೆಯನ್ನೂ ಮೂಡಿಸಿದೆ.

ಡಿಪೋದಿಂದ ಬಹುತೇಕ ಸಿಬ್ಬಂದಿಗೆ ಕರೆ ಮಾಡಲಿಲ್ಲವಂತೆ ನಿಜನಾ.? :ಡ್ಯೂಟಿಗೆ ಬಂದವರಿಗೂ ಬಸ್ಗಳನ್ನು ಕೊಡಲಿಲ್ಲವೆನ್ನೋದು ಸತ್ಯನಾ?:ಈ ಹಿಂದೆ ಮುಷ್ಕರಗಳು ನಡೆದಾಗಲೂ ಮುಷ್ಕರದ ಹಿಂದಿನ ದಿನವೇ ಎಲ್ಲರಿಗೂ ಕರೆ ಮಾಡಲಾಗುತ್ತಿತ್ತು.ಮುಷ್ಕರ ಇದ್ದರೂ ಸಿಬ್ಬಂದಿಯನ್ನು ಕಡ್ಡಾಯವಾಗಿ ಡ್ಯೂಟಿಗೆ ಬರಬೇಕೆಂದು ಆದೇಶಿಸಲಾಗ್ತಿತ್ತು.ಆದ್ರೆ ಈ ಬಾರಿ ಅಂಥದ್ದ್ಯಾವುದೇ ಪ್ರಯತ್ನ ನಡೆಯಲಿಲ್ಲ ಎನ್ನುವ ಮಾತುಗಳಿವೆ.ಏಕೆ ಮಾಡಲಿಲ್ಲ  ಎನ್ನುವುದು ಕೂಡ ಗುಮಾನಿ ಮೂಡಿಸುತ್ತೆ..ಕಳೆದ ಬಾರಿ ಮುಷ್ಕರಗಳು ನಡೆದಾಗ ಸಿಬ್ಬಂದಿ ಹಾಜರಾತಿ  ಶೇಕಡಾ 30-40ಕ್ಕಿಂತ ಕಡ್ಮೆ ಇರುತ್ತಲೇ ಇರಲಿಲ್ಲ.

ಆದ್ರೆ ಈ ಬಾರಿ ಡ್ಯೂಟಿಗೆ ಬನ್ನಿ ಎಂದು ಕರೆದವ್ರೇ ಇಲ್ಲ.ಹೆದರಿಕೆಯಿಂದ ಡಿಪೋಗಳಿಗೆ ಸಿಬ್ಬಂದಿ ಹೋದ್ರೂ ಬಸ್ ಗಳನ್ನು ಹೊರ ತೆಗೆಯದಂತೆ ಡಿಪೋ ಮ್ಯಾನೇಜರ್ಸ್ ಗಳು ಹೇಳಿದರೆನ್ನುವ ಆರೋಪ ಕೂಡ ಅನೇಕ ಸಿಬ್ಬಂದಿಯಿಂದ ಕೇಳಿಬಂದಿದೆ.ಹೀಗೆ ಮಾಡಿದ್ದು ತಪ್ಪಲ್ವೇ..ಸಾರಿಗೆ ಮುಖಂಡರೋರ್ವರು ಕರೆ ಮಾಡಿ ಬಸ್ ಗಳನ್ನು ಓಡಿಸೊಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ರೂ ಅದಕ್ಕೆ ಕೇರ್ ಮಾಡಲಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ…

ಏಕೆಂದ್ರೆ ಮುಷ್ಕರ ಶೇಕಡಾ 100 ರಷ್ಟು ಯಶಸ್ವಿಯಾಗುತ್ತದೆನ್ನುವ ಕನಸು ಮುಷ್ಕರಕ್ಕಿಂತ ಮುನ್ನವೇ ಅಧಿಕಾರಿಗಳಿಗೇನಾದ್ರೂ ಬಿದ್ದಿತ್ತೇ..ಕಳೆದ ಬಾರಿ  ಮುಷ್ಕರಗಳಿದ್ದಾಗ್ಯೂ ಪ್ರಯಾಣಿಕರಿಗೆ ತೊಂದರೆಯಾಗುತ್ತದೆಂದು ಬಸ್ ಗಳನ್ನು ಓಡಿಸಿದ್ದರಲ್ವೇ..ಆದ್ರೆ ಈ ಬಾರಿ ಡಿಪೋಗಳಿಂದ  ಒಂದೇ ಒಂದು ಬಸ್ ಆಪರೇಟ್ ಆಗದಂತೆ ಡಿಪೋ ಮ್ಯಾನೇಜರ್ಸ್ ನೋಡಿಕೊಂಡಿದ್ದೇಕೆ ಎನ್ನುವುದು ಕೂಡ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಕರೆ ಮಾಡಿದಿದ್ದರೆ ನೈಜತೆ ಪರಿಶೀಲಿಸಲು ಕಾಲ್ ರೆಕಾರ್ಡ್ ಚೆಕ್ ಮಾಡಬಹುದಾ..?ಕರೆ ಮಾಡಿದ್ದರೆ ಡಿಪೋಗಳಿಂದ ಬಸ್ ತೆಗೆಯುವಂತೆ ಅಧಿಕಾರಿಗಳು ಕರೆ ಮಾಡಿದ್ದಾರೆನ್ನುವುದೇ ಸತ್ಯವಾಗಿದ್ದರೆ ಎಷ್ಟು ಡಿಪೋ ಮ್ಯಾನೇಜರ್ಸ್ ಕರೆ ಮಾಡಿದ್ದಾರೆನ್ನುವುದು ಕೂಡ ತನಿಖೆಯಾಗಬೇಕಲ್ವೇ..ಬಹುಷಃ ಡಿಪೋ ಮ್ಯಾನೇಜರ್ಸ್ ಗಳ ಕಾಲ್ ಹಿಸ್ಟರಿ ಚೆಕ್ ಮಾಡಿದ್ರೆ ಅವರ ಬಂಡವಾಳ ಬಯಲಾಗ್ಬೋದಲ್ವಾ. .ಸರ್ಕಾರ ಇದನ್ನು ಪರಿಶೀಲಿಸುವ ಕೆಲಸ ಮಾಡಿ,ಡಿಪೋ ಮ್ಯಾನೇಜರ್ಸ್ ಗಳನ್ನು  ವಿಚಾರಣೆಗೊಳಪಡಿಸಿದ್ರೆ ಅವರಿಗೆ ಅಂತದ್ದೊಂದು ಆದೇಶ ಬಂದ ಹಿನ್ನಲೆ ತಿಳಿದೋಗಬಹುದು.

ಹೀಗೆ ಸಂಶಯಗಳನ್ನೆಲ್ಲಾ ಕ್ರೋಢೀಕರಿಸ್ತಾ ಹೋದ್ರೆ ಎಲ್ಲೋ ಒಂದ್ಕಡೆ ಇದೆಲ್ಲಾ ಒಂದು ಸಂಚಿನಿಂದ ನಡೆಯಿತಾ ಎನ್ನುವ  ಅನುಮಾನ  ದಟ್ಟವಾಗುತ್ತಾ ಹೋಗುತ್ತೆ..ಇದರ ಬಗ್ಗೆ ಕೂಲಂಕುಶ ತನಿಖೆ ಯಾಗಬೇಕಾದ ಅವಶ್ಯಕತೆ ಇದೆ..ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಾ…ಕಾದುನೋಡಬೇಕಿದೆ. ಮುಷ್ಕರ ಮುಗಿದ ಮೇಲೆ ಇಂತದೊಂದಿಷ್ಟುಶಂಕೆ ಸೃಷ್ಟಿಯಾಗೋ ಅದಕ್ಕೆ ಉತ್ತರ ಕಂಡುಕೊಳ್ಳುವ ಅವಶ್ಯಕತೆ ನಿಜಕ್ಕೂ ಇದೆಯೇ..? ಎನ್ನುವ ಪ್ರಶ್ನೆ ಮೂಡಬಹುದು..ಆದರೆ ಸತ್ಯ ಸಮಾಧಿಯಾಗಬಾರದಲ್ವಾ..ನೌಕರರು ಸತ್ಯ ತಿಳಿಯಲು ಬಯಸುವಾಗ ಅದರ ಬಗ್ಗೆಯೂ ತನಿಖೆ ನಡೆದೋಗಲಿ ಎನ್ನುವ ವಾದಕ್ಕೂ ಅರ್ಥವಿದೆ ಎನ್ನಿಸುತ್ತದಲ್ವಾ..?

Spread the love
Leave A Reply

Your email address will not be published.

Flash News