“ಸೂಡಾ” ಅಕ್ರಮದಲ್ಲಿ ಸೈಟ್ ನುಂಗದವ್ರೇ ಪಾಪಿಗಳು…!! ಬಿಎಸ್ ವೈ-ಈಶ್ವರಪ್ಪಗೆ ಮುಜುಗರ ತಂದ ಬಿಜೆಪಿ ಲೀಡರ್ಸ್.. ದತ್ತಾತ್ರಿ-ಜ್ಞಾನೇಶ್ವರ್-ಶ್ರೀನಾಥ್ ಗೆ ಸಂಕಷ್ಟ..!

0

ಬೆಂಗಳೂರು:ಮಾತೆತ್ತಿದರೆ ತಮ್ಮದು ಶಿಸ್ತುಬದ್ಧ ಪಕ್ಷ-ನಮ್ಮದು ಸೈದ್ಧಾಂತಿಕ ಹಿನ್ನಲೆಯಲ್ಲಿ ಕಟ್ಟಲ್ಪಟ್ಟ ಪಕ್ಷ ಎಂದೆಲ್ಲಾ ಕಂಠಶೋಷಣೆ ಮಾಡಿಕೊಳ್ತಾರೆ ಬಿಜೆಪಿಗರು.ಆದ್ರೆ ಈಗ ಶಿವಮೊಗ್ಗದ ನೆಲದಲ್ಲೇ ನಡೆದಿರುವ ಬಹುದೊಡ್ಡ ನಿವೇಶನ ಹಗರಣದಲ್ಲಿ ಬಿಜೆಪಿಗರೇ ಶಾಮೀಲಾಗಿರುವಂತದ್ದು ಪಕ್ಷಕ್ಕಷ್ಟೇ ಅಲ್ಲ,ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ತೀವ್ರ ಕಸಿವಿಸಿಯನ್ನುಂಟುಮಾಡಿದೆ.

ಎಲ್ಲರಿಗು ತಿಳಿದಂತೆ ಶಿವಮೊಗ್ಗ ಬಿಜೆಪಿ ಮೇಲ್ನೋಟಕ್ಕೆ ಒಂದೇ ಎಂದುಕಂಡುಬಂದ್ರೂ ಅಲ್ಲಿ ಬಿಎಸ್ ವೈ ಹಾಗೂ ಈಶ್ವರಪ್ಪ ಬೆಂಬಲಿಗರ ಎರಡು ಬಣಗಳಿವೆ.ಆ ಎರಡೂ ಬಣಗಳ ನಡುವೆ ತೀವ್ರ ತಿಕ್ಕಾಟ-ಪೈಪೋಟಿ ಸದಾ ನಡೆದೇ ಇರುತ್ತೆ..ಸೂಡಾ ನಿವೇಶನ ಹಗರಣದಲ್ಲೂ ಈ ಎರಡು ಬಣಗಳವರು ಶಾಮೀಲಾಗಿದ್ದಾರೆನ್ನುವ ಮಾತುಗಳಿವೆ.ಹಾಗಾಗಿ ಇದು ಹಿರಿಯ ಮುಖಂಡರಿಬ್ಬರಿಗೂ ಮುಜುಗರ ತರಿಸುವಂಥ ವಿಚಾರವೇ ಸರಿ. 

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ(ಸೂಡಾ)ದಿಂದ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ನಡೆದ ಅಕ್ರಮದ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.ಇದರಲ್ಲಿ 1305 ನಿವೇಶನಗಳ ಹಂಚಿಕ ಪ್ರಕ್ರಿಯೆಯಲ್ಲಿ ಒಟ್ಟು 807 ಅಂದ್ರೆ ಶೇಕಡಾ 60 ರಷ್ಟು ನಿವೇಶನ ಗಳ ಹಂಚಿಕೆಯಲ್ಲಿ ಗೋಲ್ಮಾಲ್ ನಡೆದಿರುವುದು ಕೂಡ ಪಕ್ಕಾ ಆದಂತಾಗಿದೆ.ಹಿಂದಿನ ಸೂಡಾ ಅಧ್ಯಕ್ಷ,ಸದಸ್ಯರು,ಆಯುಕ್ತರು ಹಾಗೂ ಅಧಿಕಾರಿಗಳು ಸೇರಿದಂತೆ ಒಟ್ಟು 14 ಜನರ ಪಾಲ್ಗೊಳ್ಳು ವಿಕೆ-ಪಾಲುದಾರಿಕೆ ಎರಡೂ ತನಿಖೆಯಲ್ಲಿ ಸಾಬೀತಾಗಿರುವುದರಿಂದ ತಪ್ಪಿತಸ್ಥರ ವಿರುದ್ಧ 4 ತಿಂಗಳೊಳಗೆ ಕ್ರಮ ಆಗಲೇಬೇಕೆಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಶಿವಮೊಗ್ಗ ಹೊರವಲಯದ ಮಲ್ಲಿಗೇನಹಳ್ಳಿಯಲ್ಲಿ ಸೂಡಾ ಅಭಿವೃದ್ಧಿಪಡಿಸಿದ್ದ ವಾಜಪೇಯಿ ಬಡಾವಣೆಯಲ್ಲಿ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಸಂಪೂರ್ಣ ಅಕ್ರಮಗಳಿಂದ ಕೂಡಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ತನಿಖೆ ನಡೆಸಲು 2014ರ ಜುಲೈ 16 ರಂದು ಲೋಕಾಯುಕ್ತಕ್ಕೆ ಅಧಿಕಾರ ನೀಡಿತ್ತು.ಹತ್ತಿರತ್ತಿರ 5ವರೆ ವರ್ಷಗಳ ಧೀರ್ಘ ತನಿಖೆಯ ನಂತ್ರ ಲೋಕಾಯುಕ್ತರಾದ ನಿವೃತ್ತ ನ್ಯಾಯಮೂರ್ತಿ ವಿಶ್ಚನಾಥ ಶೆಟ್ಟಿ ಸ್ಪೋಟಕ ಮಾಹಿತಿಗಳನ್ನೊಳಗೊಂಡ ವರದಿಯನ್ನು ಸರ್ಕಾರದ ನಗರಾಭಿವೃದ್ಧಿ ಇಲಾಖೆ ಹಾಗೂ ಸೂಡಾಕ್ಕೆ ಸಲ್ಲಿಸಿದ್ದಾರೆ.

ಸೂಡಾದಿಂದ ಹಂಚಿಕೆಯಾದ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ. ಅರ್ಹರು, ಅಪಾತ್ರರು ನಿವೇಶನ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವರೂ ಸಹ ತನಿಖೆಗೆ ಆಸಕ್ತಿ ತೋರಿಸಿದರು. ನಂತರ ಸೂಡಾ ಸಮಿತಿ ಸಭೆಯಲ್ಲಿ ವಿಚಾರವಾಗಿ ಚರ್ಚೆ ನಡೆಸಿ ತನಿಖೆ ನಡೆಸುವ ತೀರ್ಮಾನಕ್ಕೆ ಬರಲಾಗಿತ್ತು.

ಹಂಚಿಕೆಯಾದ ಲೇಔಟ್ ನಿವೇಶನ ಹಂಚಿಕೆಯ ಬಗ್ಗೆ ಮೊದಲು ತನಿಖೆ ನಡೆಸುವ ಉದ್ದೇಶದಿಂದ ನಿವೃತ್ತ ನ್ಯಾಯಾಧೀಶ ರವೀಂದ್ರನಾಥ್ ನೇತೃತ್ವದಲ್ಲಿ ನಾಲ್ವರು ಸದಸ್ಯರ ತಂಡ ರಚಿಸಲಾಗಿತ್ತು.
ಫೆ.12 ರಂದು ಸಮಿತಿ ರಚನೆಗೊಂಡಿತ್ತು, 3 ತಿಂಗಳಲ್ಲಿ ವರದಿ ಕೊಡುವಂತೆಯೂ ಸೂಚಿಸಲಾಗಿತ್ತು. ಮಧ್ಯೆ ಚುನಾವಣೆ ಕಾರ್ಯದಲ್ಲಿ ಸಮಿತಿಯ ಇಬ್ಬರು ಸದಸ್ಯರು ತೊಡಗಿಕೊಂಡಿದ್ದರಿಂದ 15 ದಿನ ತಡವಾಗಿ ಸಮಿತಿ ವರದಿ ಪೂರ್ಣಗೊಂಡು ಸಲ್ಲಿಕೆಯಾಗಿದೆ.
ಸೂಡಾದಿಂದ ಒಟ್ಟು 1305 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಲೋಪ ನಡೆದಿರಲಿಲ್ಲ..ಆದ್ರೆ ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಅಂದ್ರೆ 24.14 ಲಕ್ಷ ಹಣ ನೀಡಲಾಗಿತ್ತು.ನಿವೇಶನ ಹಂಚಿಕೆಯಲ್ಲಿ ವ್ಯಾಪಕ ಗೋಲ್ಮಾಲ್ ನಡೆದಿರುವುದನ್ನೇ ಉಲ್ಲೇಖಿಸಿರುವ ಲೋಕಾಯುಕ್ತರು,1305 ನಿವೇಶನಗಳ ಪೈಕಿ ಕಾನೂನುಬಾಹಿರವಾಗಿ ಹಂಚಿಕೆಯಾಗಿರುವ 807 ನಿವೇಶನಗಳಲ್ಲಿ ಸಾಕಷ್ಟು ಅಸಮರ್ಪಕತೆ ಕಂಡುಬಂದಿರುವುದನ್ನು ಪತ್ತೆ ಹಚ್ಚಿದ್ದಾರೆ.

ಅಂದ್ಹಾಗೆ 1,163 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.ನಿವೇಶನ ಬಯಸಿ 6,556 ಅರ್ಜಿಗಳ್ನು ಹಾಕಿದ್ರು.ಭೂಮಿ ಕಳೆದುಕೊಂಡವರಿಗೆ ಇದರಲ್ಲಿ 359 ನಿವೇಶನ ಮೀಸಲಿಡಲಾಗಿತ್ತು.ನಿವೇಶನದ ಬದಲು ಪರಿಹಾರ ಪಡೆದುಕೊಂಡವರ ನಿವೇಶನಗಳನ್ನು ಒಟ್ಟು ಸೇರಿಸಿ ಒಟ್ಟಾರೆ ನಿವೇಶನಗಳ ಸಂಖ್ಯೆ 1305 ಆಯಿತು.ಅಂದ್ಹಾಗೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 19 ಪೊಲೀಸ್ ಅಧಿಕಾರಿಗಳಿಗೂ ನಿವೇಶನ ಹಂಚಿಕೆ ಮಾಡಲಾಗಿತ್ತು.

ಅದರಲ್ಲಿ ಪ್ರಮುಖವಾಗಿ ವಿವೇಚನಾ ಕೋಟಾದಡಿ ವಿತರಿಸಲಾದ 142 ನಿವೇಶ ನಗಳು,32 ಪತಿ ಪತ್ನಿ ಪ್ರಕರಣಗಳ ನಿವೇಶನಗಳು,ಈಗಾಗಲೇ ಮನೆ ಇರು ವ 50 ಜನರಿಗೆ ನೀಡಲಾದ ಪ್ರಕರಣಗಳು ಹಾಗೂ ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಜನರಿಗೆ ವಿತರಿಸಲಾದ 50 ಪ್ರಕರಣಗಳಲ್ಲಿ ಗೋಲ್ಮಾಲ್ ನಡೆದಿರುವು ದನ್ನು ಪತ್ತೆ ಮಾಡಿರುವ ಲೋಕಾಯುಕ್ತರು,ಯಾರಿಗೆಲ್ಲಾ ಅಕ್ರಮವಾಗಿ ನಿವೇಶನಗಳ ಹಂಚಿಕೆಯಾಗಿದೆ.ಅವರೆಲ್ಲರಿಂದಲೂ ನಿವೇಶನ ವಾಪಸ್ ಪಡೆಯಬೇಕು.ಅಷ್ಟೇ ಅಲ್ಲ,ಅಕ್ರಮದ ಲ್ಲಿ ಚುನಾಯಿತ ಪ್ರತಿನಿಧಿಗಳು ಭಾಗಿಯಾಗಿರುವುದರಿಂದ ಅಂಥವರನ್ನು ಯಾವುದೇ ಕಾರಣ ಕ್ಕೂ ಸೂಡಾ ಸೇರಿದಂತೆ ಯಾವುದೇ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಹಾಗೂ ಸದಸ್ಯ, ನಿರ್ದೇಶ ಕ ಸ್ಥಾನಕ್ಕೆ ಪರಿಗಣಿಸಬಾರದೆಂದು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದೆ.

ವರದಿಯಲ್ಲಿನ ಸಂಗತಿಗಳು ಬಿಜೆಪಿ ಪಕ್ಷವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ.ಲೋಕಾಯುಕ್ತ ಸಲಹೆ-ಶಿಫಾರಸ್ಸುಗಳು ಸರಿಯಾಗಿ ಅನುಷ್ಠಾನಗೊಂಡಿದ್ದೇ ಆದಲ್ಲಿ ಬೃಹತ್ ಮಿಖಗಳು ಖೆಡ್ಡಾಕ್ಕೆ ಬೀಳೋದ್ರಲ್ಲಿ ಅನುಮಾನವೇ ಇಲ್ಲ.. 

ಲೋಕಾಯುಕ್ತ ವರದಿಯಲ್ಲಿರುವ ಶಿಫಾರಸ್ಸುಗಳು..

**ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ನಿವೇಶನ ಪಡೆದ 9 ಮಂದಿ ತಪ್ಪು ಮಾಹಿತಿ ನೀಡಿದ 25 ಮಂದಿಗೆ ಹಂಚಿಕೆಯಾದ ನಿವೇಶನ ರದ್ದು ಮಾಡಬೇಕು.

**ರಾಜ್ಯ ಸರ್ಕಾರಿ ನೌಕರರಿಗೆ ಹಂಚಿಕೆಯಾದ 7,ಕೇಂದ್ರ ಸರ್ಕಾರಿ ನೌಕರರಿಗೆ ಹಂಚಿಕೆಯಾದ 8,ಆರಂಭಿಕ ಠೇವಣಿ ಪಾವತಿಸದ 93 ಮಂದಿಯ ನಿವೇಶನ ರದ್ದು ಮಾಡಬೇಕು.

**ವಾಸದ ಪ್ರಮಾಣ ಪತ್ರ ಸಲ್ಲಿಸದ 184 ಮಂದಿಗೆ ಹಂಚಿಕೆಯಾಗಿರುವ ನಿವೇಶನ ರದ್ದಾಗಬೇಕು.

ಜಾತಿ ಪ್ರಮಾಣ ಪತ್ರ ಸಲ್ಲಿಸದ 8,ಉದ್ಯೋಗ ಪ್ರಮಾಣ ಪತ್ರ ಸಲ್ಲಿಸದ 6,ಸುಳ್ಳು ವಿವರಣೆ ನೀಡಿ ನಿವೇಶನ ಪಡೆದ 7 ಜನರಿಗೆ ಹಂಚಿಕೆ ಮಾಡಲಾದ ನಿವೇಶನ ರದ್ದು ಮಾಡಬೇಕು.

**ಕುಟುಂಬ ಸದಸ್ಯರ ಹೆಸರೇಳಿ,ಕೇರಾಫ್ ವಿಳಾಸ ನೀಡಿ,ಕಚೇರಿ-ಅಂಗಡಿ ವಿಳಾಸ ನೀಡಿ, ದೋಷ ಪೂರಿತ ಪ್ರಮಾಣ ಪತ್ರ ಸಲ್ಲಿಸಿ,ಅಂಗವಿಕಲ ಕೋಟಾದಡಿ ನಿವೇಶನ ಪಡೆದ, ಕರ್ತವ್ಯದಲ್ಲಿದ್ದರೂ ಮಾಜಿಗಳೆಂದು ಬಿಂಬಿಸಿ ಸೈಟ್ ಪಡೆದ ಸೈನಿಕರಿಗೆ ಹಂಚಿಕೆಯಾದ ಸೈಟ್ ಗಳನ್ನು ರದ್ದು ಮಾಡಬೇಕು.

**ತಪ್ಪಿತಸ್ಥರನ್ನು ನಿಗಮ ಮಂಡಳಿಗಳ ಅಧ್ಯಕ್ಷ-ನಿರ್ದೇಶಕ-ಸದಸ್ಯತ್ವಕ್ಕೆ ಪರಿಗಣಿಸಬಾರದು.

**ಹಗರಣದಲ್ಲಿ ಸಿಲುಕಿರುವವರ ವಿರುದ್ಧ ನಾಲ್ಕು ತಿಂಗಳ ಒಳಗೆ ಕ್ರಮ ಕೈಗೊಳ್ಳಬೇಕು.  

Spread the love
Leave A Reply

Your email address will not be published.

Flash News