“ಬೇನಾಮಿ” ಹೆಸ್ರಲ್ಲಿ “ಸೂಡಾ” ಸೈಟ್ ಗಿಟ್ಟಿಸಿದ ಫಲಾನುಭವಿ ರಾಜಕಾರಣಿ-ಅಧಿಕಾರಿಗಳಿಗೆ ಶುರುವಾಯ್ತಾ ನಡುಕ..!!

0

ಶಿವಮೊಗ್ಗ:ಕಡಿಮೆ ಬೆಲೆಗೆ ಸೈಟ್ ಸಿಗ್ತವೆಂದು ಬೇನಾಮಿ ಹೆಸ್ರಲ್ಲೆಲ್ಲಾ ಸೈಟ್ ಮಾಡ್ಕೊಂಡವರಿಗೆ ಶುರುವಾಗಿದೆ ಢವ ಢವ..ಸೈಟ್ ಪಡೆದವ್ರ ಹೆಡೆಮುರಿಕಟ್ಟೊಕ್ಕೆ ಲೋಕಾಯುಕ್ತ ನಿರ್ಧರಿಸಿರುವ ಹಿನ್ನಲೆಯಲ್ಲಿ ಸೈಟ್ ಗಳನ್ನು ರಾತ್ರೋರಾತ್ರಿ ಹಿಂದಿರುಗಿಸುವ ಶತಪ್ರಯತ್ನಕ್ಕೆ ಮುಂದಾಗಿದ್ದಾರೆನ್ನುವ ಮಾಹಿತಿ ಸೂಡಾ ಕ್ಯಾಂಪಸ್ ನಿಂದ ಹೊರಬಿದ್ದಿದೆ.ಈ ನಡುವೆ ಬೇನಾಮಿ ಹೆಸ್ರಲ್ಲಿ ಪಡೆದ ಸೈಟ್ ಗಳನ್ನು ಮಾರಾಟ ಮಾಡಿದವರಿಂದ ಆ ನಿವೇಶನಗಳ ವಾರಸುದಾರರಿಗೆ ಸೂಡಾ ಸೈಟ್ ಗಳೇ ಬಿಸಿತುಪ್ಪವಾಗಿ ಪರಿಣಮಿಸಿದೆ.

ಹೌದು..ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದ ಸೈಟ್ ಹಂಚಿಕೆ ಹಗರಣ ದಿನೇ ದಿನೇ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಸೈಟ್ ಗಳನ್ನು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಜತೆ ಸೇರಿ ಕಳ್ಳೆಪುರಿಯಂತೆ ಹಂಚಿರುವ-ಹಂಚಿಕೊಂಡಿರುವ ಸಂಗತಿ ಹೊರಬೀಳುತ್ತಿದೆ.ಬಿಎಸ್ ಯಡಿಯೂರಪ್ಪ,ಕೆ.ಎಸ್.ಈಶ್ವರಪ್ಪ ಅವರ ಹೆಸರನ್ನು ಮಿಸ್ಯೂಸ್ ಮಾಡಿಕೊಂಡ ಅವರ ಸಾಕಷ್ಟು ವಿಚಾರಗಳು ಒಂದೊಂದಾಗೇ ತೆರೆದುಕೊಳ್ಳುತ್ತಿವೆ.ಈ ಹಗರಣ ಅನೇಕರ ಬುಡವನ್ನು ಕಾಯಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಶಿವಮೊಗ್ಗದ ಸೂಡಾ ನಿವೇಶನ ಹಗರಣ ಸಾಕಷ್ಟು ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಸುತ್ತಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ.ಪುಕ್ಕಟೆ ಸಿಗ್ತದೆ ಎಂದು ತನಗೊಂದು..ತಮ್ಮವರಿಗೊಂದು ಎನ್ನುವ ಗಾಧೆಯಂತೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೈಟ್ ಗಳನ್ನು ಬೇನಾಮಿಯಾಗಿ ಮಾಡ್ಕೊಂಡಿರುವುದು ಕೂಡ ಗೊತ್ತಾಗಿದೆ.ಇದಕ್ಕಾಗಿ ಮುಖ್ಯಮಂತ್ರಿ ಬಿಎಸ್ ವೈ ಹಾಗೂ ಸಚಿವ ಕೆಎಸ್ ಈಶ್ವರಪ್ಪ ಅವರ ಹೆಸ್ರನ್ನು ಬಳಸಿಕೊಂಡಿರುವುದು ಕೂಡ ತಿಳಿದುಬಂದಿದೆ.ಸುಳ್ಳು ದಾಖಲೆ ಹಾಗೂ  ಮಾಹಿತಿ ಕೊಟ್ಟು ಸೈಟ್ ಗಳನ್ನು ಮಾಡ್ಕೊಂಡು ರಿಜಿಸ್ಟರ್ ಕೂಡ ಮಾಡಿಸಿರುವುದನ್ನ ಲೋಕಾಯುಕ್ತ ಪತ್ತೆ ಮಾಡಿದ್ದಾರೆ.

ಸೂಡಾದ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಿಡಿತ ಸಾಧಿಸಿರುವ ಸಾಕಷ್ಟು ರಾಜಕೀಯ  ಮುಖಂಡರು ಪಕ್ಷಾತೀತವಾಗಿ ಬೇನಾಮಿ ಹೆಸರುಗಳಲ್ಲಿ ಸೈಟ್ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆನ್ನಲಾಗಿದೆ.ಕೆಲವರು ಆ ನಿವೇಶನಗಳನ್ನು ಮಾರಾಟ ಮಾಡಿದ್ದಾರಂತೆ.ಸೈಟ್ ಕೊಂಡವ್ರು ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಸೂಡಾದ ಮಾಜಿ ಅಧ್ಯಕ್ಷರಾಗಿದ್ದ ಜ್ಞಾನೇಶ್ವರ್ ಅವಧಿಯಲ್ಲಿ ನಿವೇಶನಗಳನ್ನು ಪಕ್ಷದ ಸಾಕಷ್ಟು ಮುಖಂಡರು  ತಮಗೆ ಬೇಕಾದವರಿಗೆ ಮಾಡಿಸಿಕೊಂಡಿರುವ ಅನುಮಾನಗಳಿವೆ.ದುರಂತ ಎಂದ್ರೆ,ಬಿಎಸ್ ವೈ ಹಾಗೂ ಈಶ್ವರಪ್ಪ  ಅವರ ಹೆಸರನ್ನು ಈ ಹಗರಣಕ್ಕೆ ಕೆಲವು ಮುಖಂಡರು ಬಳಸಿಕೊಂಡಿದ್ದಾರೆನ್ನುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ.ಇದರಲ್ಲಿ ಮಹಾನಗರ ಪಾಲಿಕೆಯ ಹಾಲಿ-ಮಾಜಿ ಸದಸ್ಯರು,ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವವರೂ ಸೇರಿದ್ದಾರೆನ್ನುವ ಮಾಹಿತಿಗಳಿವೆ.

ಕೇವಲ ಬಿಜೆಪಿಗರು ಮಾತ್ರವಲ್ಲ ಕಾಂಗ್ರೆಸ್ ಹಾಗು ಜೆಡಿಎಸ್ ನ ಸಾಕಷ್ಟು ಮುಖಂಡರು ಕೂಡ ಸೂಡಾ ಸೈಟ್ ಗಳನ್ನು ರಿಜಿಸ್ಟರ್ ಮಾಡಿಕೊಂಡಿರುವ ಮಾಹಿತಿಗಳಿವೆ.ಕೆಲವರು ಬೇನಾಮಿ ಹೆಸರುಗಳಲ್ಲಿದ್ದರೆ ಇನ್ನು ಕೆಲವನ್ನು ಮುಂದಾಗಬಹುದಾದ ಸಮಸ್ಯೆ ಅರಿತು ಮಾರಾಟ ಮಾಡಿದ್ದಾರಂತೆ.

ಸೈಟ್ ಗಳನ್ನು ಬೇನಾಮಿಯಾಗಿ ಮಾಡಿಸಿಕೊಂಡವರು ರಾಜಕಾರಣಿಗಳು ಮಾತ್ರವಲ್ಲ,ಅಧಿಕಾರಿಗಳು ಕೂಡ ಈ ಲೀಸ್ಟ್ ನಲ್ಲಿದ್ದಾರೆ.ಜಿಲ್ಲಾಪಂಚಾಯತ್ ನಲ್ಲಿ ಹಾಲಿ ಆಯಕಟ್ಟಿನ ಹುದ್ದೆಯಲ್ಲಿರುವ  ಅಧಿಕಾರಿಯೋರ್ವರು ತಮ್ಮ ಕುಟುಂಬ-ಪರಿಚಯಸ್ಥರು ಹಾಗೂ ಸಂಬಂಧಿಗಳ ಹೆಸರಲ್ಲಿ 10ಕ್ಕೂ ಹೆಚ್ಚು ಸೈಟ್ ಗಳನ್ನು ಮಾಡಿಸಿಕೊಂಡಿದ್ದಾರೆನ್ನುವ ಸುದ್ದಿಯಿದೆ.ಇದರ ಬಗ್ಗೆ ಮಾಹಿತಿ ಪಡೆದ ಆ ಅಧಿಕಾರಿಗೆ ಎದೆಯಲ್ಲಿ ಢವ ಢವ ಶುರುವಾಗಿದೆ.

ಕೇವಲ ಇವರೊಬ್ಬರು ಮಾತ್ರವಲ್ಲ,ದೊಡ್ಡ ಹುದ್ದೆಯಲ್ಲಿರುವ ಅನೇಕ  ಅಧಿಕಾರಿಗಳು ಕೂಡ ಸೂಡಾ ಸೈಟ್ ಸೌಭಾಗ್ಯ ಪಡೆದಿದ್ದಾರೆ.ಆದ್ರೆ ಅದೇ ಆಸೆಬುರುಕುತನವೇ ಇದೀಗ ಅವರ ಬುಡಕಾಯಿಸುವ ಸ್ಥಿತಿ ಸೃಷ್ಟಿಸಿದೆ.ಆದ್ರೆ ತಮ್ಮ ಅಕ್ರಮಕ್ಕೆ ಲೀಡರ್ಸ್ ಗಳ ಹೆಸ್ರಿಗೆ ಮಸಿ ಬಳಿದಿದ್ದಂತೂ ವಿಪರ್ಯಾಸ.. 

Spread the love
Leave A Reply

Your email address will not be published.

Flash News